ಕೆಮ್ಮು, ಕಫ, ಶೀತದ ಸಮಸ್ಯೆ ಇರುವವರು ರಾತ್ರಿ ಹೊತ್ತು ಬಾಳೆಹಣ್ಣು ತಿನ್ನಬಾರದು!

29-03-23 07:37 pm       Source: Vijayakarnataka   ಡಾಕ್ಟರ್ಸ್ ನೋಟ್

ಬಾಳೆಹಣ್ಣು ಆರೋಗ್ಯಕ್ಕೆ ಎಷ್ಟೊಂದು ಒಳ್ಳೆಯದು ಎನ್ನುವ ವಿಷ್ಯ ನಮಗೆಲ್ಲಾ ಗೊತ್ತೇ ಇದೆ. ಆದರೆ ರಾತ್ರಿ ಹೊತ್ತು ತಿನ್ನಬಹುದಾ? ಎನ್ನುವ ಗೊಂದಲ ಹಲವರಿಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಬೇಸಿಗೆಗಾಲ ಚಳಿಗಾಲ ಅಥವಾ ಮಳೆಗಾಲವೇ ಇರಲಿ ವರ್ಷ ಪೂರ್ತಿ, ಕೈಗೆಟಕುವ ಬೆಲೆಯಲ್ಲಿ ಸಿಗುವ ಹಣ್ಣು ಎಂದರೆ ಅದು ಬಾಳೆಹಣ್ಣು. ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಈ ಹಣ್ಣು, ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುವ ಜೊತೆಗೆ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೋಷಕಾಂಶಗಳನ್ನು ಹೆಚ್ಚುವರಿಯಾಗಿ ಕೊಡುತ್ತದೆ.

ವೈದ್ಯರೂ ಕೂಡ ತಮ್ಮ ರೋಗಿಗಳಿಗೆ, ಊಟದ ಬಳಿಕ ಒಂದು ಎರಡು ಬಾಳೆಹಣ್ಣನ್ನು ತಿನ್ನು ವಂತೆ ಸಲಹೆ ನೀಡುತ್ತಾರೆ. ಯಾಕೆಂದ್ರೆ ಈ ಹಣ್ಣಿನಲ್ಲಿ ಕಂಡು ಬರುವ ನಾರಿನಾಂಶ ಜೀರ್ಣಕ್ರಿಯೆ ಪ್ರಕ್ರಿಯೆಯು ಸರಾಗವಾಗಿ ನಡೆಯುತ್ತದೆ, ಇದರಿಂದ ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.

ನೋಡಿ ಇಷ್ಟೆಲ್ಲಾ ಆರೋಗ್ಯಕಾರಿ ಅಂಶಗಳನ್ನು ಒಂಗೊಂಡಿರುವ ಈ ಬಾಳೆ ಹಣ್ಣನ್ನು ರಾತ್ರಿ ಸಮಯದಲ್ಲಿ ತಿನ್ನಬಹುದೇ? ಇದರಿಂದ ಆರೋಗ್ಯ ಸಮಸ್ಯೆ ಆಗುತ್ತದೆಯಾ ಎನ್ನುವ ಗೊಂದ ಹೆಚ್ಚಿನವರಿಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ...

ರಾತ್ರಿ ಬಾಳೆಹಣ್ಣು ತಿನ್ನಬಹುದಾ?

Bananas for Weight Loss and Weight Gain- HealthifyMe

  • ಊಟವಾದ ಬಳಿಕ ಬಾಳೆಹಣ್ಣನ್ನು ತಿನ್ನುವುದರಲ್ಲಿ ಏನೂ ಸಮಸ್ಯೆ ಇಲ್ಲ. ಆದರೆ ಈ ವಿಚಾರ ನಿಮಗೆ ಗೊತ್ತಿರ ಬೇಕು,
  • ಅದೇನೆಂದರೆ ರಾತ್ರಿಯ ಊಟ ಆದ ಬಳಿಕ, ಅಂದರೆ ಮಲಗುವ ಒಂದು ಗಂಟೆಗೆ ಮೊದಲು ಒಂದು ಮಧ್ಯಮ ಗಾತ್ರದ ಬಾಳೆಹಣ್ಣನ್ನು ತಿಂದರೆ ತುಂಬಾ ಒಳ್ಳೆಯದು.
  • ಯಾಕೆಂದ್ರೆ ಇದರಿಂದ ಸೇವಿಸಿದ ಆಹಾರ ಸರಿಯಾಗಿ ಜೀರ್ಣ ವಾಗಲು ನೆರವಾಗುತ್ತದೆ, ಅಲ್ಲದೇ ಅಜೀರ್ಣ ಮಲಬದ್ಧತೆ ಯಂತಹ ಸಮಸ್ಯೆಗಳು ಕೂಡ ದೂರವಾಗು ತ್ತದೆ, ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಊಟವಾದ ಕೂಡಲೇ ಬಾಳೆಹಣ್ಣನ್ನು ಸೇವಿಸಬೇಡಿ!

You Can Eat Banana Peels, but That Doesn't Mean You Should

  • ತಡರಾತ್ರಿ ಹಾಗೂ ಮಲಗುವ ಸಮಯದಲ್ಲಿ ಬಾಳೆ ಹಣ್ಣನ್ನು ತಿನ್ನಲೇಬಾರದು! ಯಾಕೆಂದರೆ ಬಾಳೆ ಹಣ್ಣನ್ನು ತಿಂದ ಕೂಡಲೇ ಹೊಟ್ಟೆ ತುಂಬಿದಂತಹ ಅನುಭವ ಆಗುತ್ತದೆ. ಇದರಿಂದ ಜೀರ್ಣ ಕ್ರಿಯೆಯಲ್ಲಿ ಯೂ ಕೂಡ ಏರುಪೇರಾಗುತ್ತದೆ.
  • ಹೀಗಾಗಿ ಮಧ್ಯ ರಾತ್ರಿಯ ನಂತರ ಬಾಳೆಹಣ್ಣು ತಿನ್ನುವ ಅಭ್ಯಾಸ ಮಾಡಬೇಡಿ, ಇಲ್ಲಾಂದ್ರೆ ಹೊಟ್ಟೆಯ ಸಮಸ್ಯೆ ಗಳು ಎದುರಾಗುವ ಸಾಧ್ಯತೆ ಕಂಡು ಬರುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಕೆಮ್ಮು ಹಾಗೂ ಶೀತದ ಸಮಸ್ಯೆ ಇರುವಂತಹ ಜನರು

Easy Dry Cough Treatment Methods That You Can Try At Home | MFine

  • ಕೆಮ್ಮು ಮತ್ತು ಶೀತದ ಸಮಸ್ಯೆ ಇರುವ ಜನರು ರಾತ್ರಿ ವೇಳೆ ಬಾಳೆಹಣ್ಣನ್ನು ಸೇವನೆ ಮಾಡ ಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
  • ಅಷ್ಟೇ ನೀರಿನಾಂಶ ಹಾಗೂ ಸಿಟ್ರಸ್ ಜಾತಿಗೆ ಸೇರಿರುವ ಹಣ್ಣುಗಳನ್ನು ರಾತ್ರಿ ತಿನ್ನಬಾರದು. ಯಾಕೆಂದ್ರೆ ಇಂತಹ ಹಣ್ಣುಗಳನ್ನು ರಾತ್ರಿ ವೇಳೆ ಸೇವನೆ ಮಾಡುವುದರಿಂದ ಸೊಂಕು ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆಯಂತೆ.​

ಎದೆಯಲ್ಲಿ ಕಫದ ಸಮಸ್ಯೆ ಇದ್ದರೆ ಈ ಹಣ್ಣನ್ನು ತಿನ್ನಲೇಬೇಡಿ

ಎದೆಯಲ್ಲಿ ಕಫದ ಸಮಸ್ಯೆ ಇದ್ದರೆ ಈ ಹಣ್ಣನ್ನು ತಿನ್ನಲೇಬೇಡಿ

  • ಈ ವಿಷ್ಯ ನಿಮಗೆ ಗೊತ್ತಿರಲಿ ಕೆಮ್ಮು, ಶೀತದ ಸಮಸ್ಯೆ ಜಾಸ್ತಿಯಾಗಿ ಎದೆಯಲ್ಲಿ ಕಫದ ಸಮಸ್ಯೆ ಆಗಿಬಿಟ್ಟರೆ, ಯಾವುದೇ ಕಾರಣಕ್ಕೂ ಕೂಡ ಬಾಳೆಹಣ್ಣು ತಿನ್ನಬಾರದು.
  • ಈ ಬಗ್ಗೆ ವೈದ್ಯರು ಹೇಳುವ ಪ್ರಕಾರ ಕಫದ ಸಮಸ್ಯೆ ಇರುವವರು ರಾತ್ರಿ ಜಾಸ್ತಿ ಬಾಳೆಹಣ್ಣನ್ನು ತಿಂದರೆ, ಮುಂದಿನ ದಿನಗಳಲ್ಲಿ ಎದೆಯಲ್ಲಿ ಕಫ ಗಟ್ಟಿಯಾಗಿ, ಆ ಬಳಿಕ  ಉಸಿರಾಟದ ಸಮಸ್ಯೆ ಕಂಡು ಬರುವ ಅಪಾಯ ಇರುತ್ತದೆ ಎಂದು ಎಚ್ಚರಿಕೆಯನ್ನು ನೀಡುತ್ತಾರೆ.

ಆರೋಗ್ಯ ತಜ್ಞರು ಹೇಳುವ ಪ್ರಕಾರ

How To Pick The Best Bunch of Bananas | Kitchn

  • ಪ್ರತಿದಿನ ರಾತ್ರಿ ಊಟದ ಬಳಿಕ, ಅಂದರೆ ಮಲಗುವ ಒಂದು ಗಂಟೆಯ ಮುನ್ನ ಮಧ್ಯಮ ಗಾತ್ರದ ಒಂದು ಬಾಳೆಹಣ್ಣು ತಿಂದು, ವಾಕಿಂಗ್ ಮಾಡುವ ಅಭ್ಯಾಸ ಇಟ್ಟುಕೊಳ್ಳಿ ಎಂದು ಆರೋಗ್ಯ ತಜ್ಞರಾದ ಲವ್ನೀತ್ ಬಾತ್ರಾ ಅವರು ಸಲಹೆ ನೀಡುತ್ತಾರೆ.
  • ಪ್ರಮುಖವಾಗಿ ಈ ಹಣ್ಣಿನಲ್ಲಿ ನಾರಿನಾಂಶ, ಕಬ್ಬಿಣಾಂಶ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ವಿಟ ಮಿನ್ಸ್ ಗಳಾದ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಫಾಸ್ಫರಸ್, ಸೆಲನಿಯಂ, ನಯಾಸಿನ್, ಪೋಲೆಟ್, ಇತ್ಯಾದಿ ಅಂಶಗಳು ಹೇರಳವಾಗಿ ಸಿಗುವುದರಿಂದ, ಪ್ರತಿ ದಿನ ಊಟದ ಬಳಿಕ ಒಂದು ಬಾಳೆಹಣ್ಣನ್ನು ಸೇವನೆ ಮಾಡಿದರೆ ಬಹಳ ಒಳ್ಳೆಯದು.

ಕೊನೆಯ ಮಾತು

11 Science-Backed Benefits of Bananas

  • ರಾತ್ರಿ ಮಲಗುವ ಕನಿಷ್ಟ ಒಂದು ಗಂಟೆ ಮುನ್ನ ಒಂದೆರಡು ಬಾಳೆಹಣ್ಣನ್ನು ತಿನ್ನುವುದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ತಡರಾತ್ರಿ ಹಾಗೂ ಮಲಗುವ ಸಮಯದಲ್ಲಿ ಸೇವಿಸಬೇಡಿ.
  • ರಕ್ತದೊತ್ತಡದಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಅಂತಹವರು ಕೂಡ ಪ್ರತಿದಿನ ಒಂದೊಂದು ಬಾಳೆಹಣ್ಣು ತಿನ್ನುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಯಾಕೆಂದ್ರೆ ಇದರಲ್ಲಿ ಪೊಟ್ಯಾಶಿಯಂ ಅಂಶ ಯಥೇಚ್ಛ ವಾಗಿ ಕಂಡುಬರುತ್ತದೆ
  • ಇನ್ನು ನೈಸರ್ಗಿಕ ಸಿಹಿ ಅಂಶ ಇರುವ ಬಾಳೆಹಣ್ಣುಗಳು ಮಧುಮೇಹಿಳ ಆರೋಗ್ಯಕ್ಕೂ ಒಳ್ಳೆಯದು.
  • ಹಾಗಂತ ಈ ಕಾಯಿಲೆ ಇರುವವರು ಅತಿಯಾಗಿ ಈ ಹಣ್ಣನ್ನು ಸೇವನೆ ಮಾಡಬಾರದು. ದಿನಕ್ಕೊಂದು ಬಾಳೆಹಣ್ಣನ್ನು ಸೇವನೆ ಮಾಡಿದರೆ ಸಾಕು. ಏಲಕ್ಕಿಬಾಳೆ, ನೇಂದ್ರಬಾಳೆ, ಇವೆಲ್ಲಾ ಮಧಮೇಹಿಗಳ ಆರೋಗ್ಯಕ್ಕೆ ಒಳ್ಳೆಯದು.

is it safe to have banana during night these things you must know.