ಬೇಸಿಗೆಯಲ್ಲಿ ಜನ ಹುಡುಕಿ ಹುಡುಕಿ ರಾಗಿ ಅಂಬಲಿಯನ್ನೇ ಏಕೆ ಕುಡಿಯುತ್ತಾರೆ ಗೊತ್ತಾ?

31-03-23 08:09 pm       Source: Vijayakarnataka   ಡಾಕ್ಟರ್ಸ್ ನೋಟ್

ಹೆಚ್ಚಿದ ಬಿಸಿಲಿನ ಝಳ, ಬಿಸಿಯಾದ ತಾಪಮಾನ ನಮ್ಮ ದೇಹದಿಂದ ನಮ್ಮ ಆರೋಗ್ಯವನ್ನು ಕಸಿಯುತ್ತದೆ. ಈ ಸಂದರ್ಭದಲ್ಲಿ ಸಾಧ್ಯವಾದಷ್ಟು ಈ ತರಹದ ಪಾನೀಯಗಳನ್ನು ಸೇವಿಸಬೇಕು.

ವರ್ಷಗಳು ಉರುಳಿದಂತೆ ಬಿಸಿಲು ಜಾಸ್ತಿಯಾಗುತ್ತಿದೆ ಮತ್ತು ವಿಪರೀತ ಶಕೆ ನಮ್ಮನ್ನು ಕಾಡುತ್ತಿದೆ. ನಮ್ಮ ದೇಹ ದಲ್ಲಿರುವ ನೀರಿನ ಅಂಶ ಸಂಪೂರ್ಣ ವಾಗಿ ಎಲ್ಲಿ ಹೊರಟು ಹೋಗುತ್ತದೆಯೋ ಎನ್ನುವ ಭಯ ಶುರು ವಾಗುತ್ತದೆ. ಅಷ್ಟು ಪ್ರಮಾಣದಲ್ಲಿ ಈಗ ಎಲ್ಲಾ ಕಡೆ ಬಿಸಿಲು ಜಳಪಿಸುತ್ತಿದೆ.

ಈ ಸಂದರ್ಭದಲ್ಲಿ ನಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳುವ ರೀತಿ ನಾವು ಆಲೋಚನೆ ಮಾಡುತ್ತೇವೆ. ಆರೋಗ್ಯ ಕರವಾದ ಮತ್ತು ನೈಸರ್ಗಿಕ ವಾದ ಕೆಲವೊಂದು ಪಾನೀಯಗಳು ನಮ್ಮ ದೇಹದ ನಿರ್ಜಲೀಕರಣ ಸಮಸ್ಯೆಯನ್ನು ಹೋಗಲಾಡಿಸಿ ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳನ್ನು ಒದಗಿಸಿ ಬೇಸಿಗೆ ದಿನಗಳಲ್ಲಿ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡುತ್ತವೆ. ಅಂತಹ ಆರೋಗ್ಯಕರ ಡ್ರಿಂಕ್ ಗಳಲ್ಲಿ ರಾಗಿ ಅಂಬಲಿ ಕೂಡ ಒಂದು. ಜನರು ರಾಗಿ ಅಂಬಲಿಯನ್ನು ಏಕೆ ಹೆಚ್ಚು ಇಷ್ಟ ಪಡುತ್ತಾರೆ ಎಂಬುದನ್ನು ನೋಡೋಣ ಬನ್ನಿ.

ರಾಗಿ ಅಂಬಲಿ ದೇಹಕ್ಕೆ ತಂಪು!

Ragi (Nachni) for Babies - Health Benefits & Recipes

  • ದಕ್ಷಿಣ ಭಾರತದ ಅದರಲ್ಲೂ ವಿಶೇಷವಾಗಿ ದಕ್ಷಿಣ ಕರ್ನಾಟಕ ದಲ್ಲಿ ಹೆಚ್ಚಾಗಿ ಬೆಳೆಯುವ ರಾಗಿ ಬಹುತೇಕ ಮನೆಗಳ ದಿನನಿತ್ಯದ ಆಹಾರ. ರಾಗಿ ರೊಟ್ಟಿ, ರಾಗಿ ಮುದ್ದೆ, ರಾಗಿ ಉಪ್ಪಿಟ್ಟು, ರಾಗಿ ಹಲ್ವಾ ಹೀಗೆ ಇನ್ನು ಹಲ ವಾರು ಆರೋಗ್ಯಕರ ಆಹಾರ ಖಾದ್ಯಗಳನ್ನು ಇದರಿಂದ ತಯಾರಿಸಿ ಸೇವಿಸಬಹುದು.
  • ಇದಕ್ಕೆಲ್ಲಾ ಪ್ರಮುಖ ಕಾರಣ ಎಂದರೆ ರಾಗಿ ತನ್ನ ತಂಪಾದ ಗುಣಲಕ್ಷಣಗಳನ್ನು ದೇಹದಲ್ಲಿ ಪ್ರದರ್ಶಿ ಸುತ್ತದೆ. ಹಾಗಾಗಿ ಜನರು ಮಜ್ಜಿಗೆ ಜೊತೆಗೆ ರಾಗಿ ಹಿಟ್ಟು ಮಿಕ್ಸ್ ಮಾಡಿ ಸೇವಿಸುವುದು ಉಂಟು.​

ರಾಗಿ ಅಂಬಲಿ ಬಹಳ ಪ್ರಸಿದ್ಧಿ

What Is The Best Time To Drink Water? Let's Know From The Expert

ರಾಗಿ ಅಂಬಲಿ ಕೂಡ ದೇಹಕ್ಕೆ ತಂಪು ಎಂದು ಹೇಳುವ ಕಾರಣ ಕ್ಕಾಗಿ ಮನೆಯಲ್ಲಿ ಮಕ್ಕಳಿಗೆ ಹಾಗೂ ವಯಸ್ಸಾದವರಿಗೆ ಇದನ್ನು ಮಾಡಿಕೊಡುತ್ತಾರೆ. ನಾವು ಸಹ ರಾಗಿ ಅಂಬಲಿ ಕುಡಿಯ ಬಹುದು. ಬೇಸಿಗೆ ಕಾಲಕ್ಕೆ ಇದು ಹೇಳಿ ಮಾಡಿಸಿದ ತಂಪು ಪಾನೀಯವಾಗಿದೆ.​

ಇದನ್ನು ತಯಾರು ಮಾಡಲು ಬಳಸುವ ಪದಾರ್ಥಗಳು

ಇದನ್ನು ತಯಾರು ಮಾಡಲು ಬಳಸುವ ಪದಾರ್ಥಗಳು

  • ರಾಗಿ ಹಿಟ್ಟು
  • ಒಂದು ಟೀ ಚಮಚ ಜೀರಿಗೆ ಪುಡಿ
  • ​ಮಜ್ಜಿಗೆ​
  • ರುಚಿಗೆ ತಕ್ಕಷ್ಟು ಉಪ್ಪು

ರಾಗಿ ಅಂಬಲಿ ತಯಾರಿಸುವ ವಿಧಾನ

ರಾಗಿ ಅಂಬಲಿ ತಯಾರಿಸುವ ವಿಧಾನ

  • ಮೊದಲಿಗೆ ಒಲೆಯ ಮೇಲೆ ಒಂದು ಲೋಟ ನೀರನ್ನು ಕುದಿಯಲು ಇಡಿ ಮತ್ತು ಇದಕ್ಕೆ ರಾಗಿ ಹಿಟ್ಟು ಸೇರಿಸಿ ಪೇಸ್ಟ್ ತರಹ ತಯಾರಿಸಿಕೊಳ್ಳಿ.
  • ಇದಕ್ಕೆ ಒಂದು ಲೀಟರ್ ನೀರು ಹಾಕಿ ಮತ್ತಷ್ಟು ಕುದಿಸಿ
  • ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಜೀರಿಗೆ ಪುಡಿಯನ್ನು ಸಹ ಹಾಕಿ.
  • ಗಂಟುಗಳು ಇಲ್ಲದ ಹಾಗೆ ಇದನ್ನು ಚೆನ್ನಾಗಿ ತಿರುವಿ ಏಳರಿಂದ ಎಂಟು ನಿಮಿಷಗಳ ಕಾಲ ಹಾಗೆ ಬೇಯಿಸಿ.
  • ಆನಂತರ ಸ್ಟವ್ ಆರಿಸಿ ತಣ್ಣಗೆ ಮಾಡಿ ಕುಡಿಯಿರಿ. ಬೇಕೆಂದರೆ ರೆಫ್ರಿಜರೇಟರ್ ನಲ್ಲಿ ಕೂಡ ಇರಿಸಿಕೊಂಡು ಬೇಕಾದಾಗ ಕುಡಿಯಬಹುದು.
  • ಇದಕ್ಕೆ ಮಜ್ಜಿಗೆ ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಕುಡಿದರೆ ಆರೋಗ್ಯಕ್ಕೆ ಇನ್ನೂ ಉತ್ತಮ.

ಸೋಂಪು ಕಾಳುಗಳ ಪಾನೀಯ

ಸೋಂಪು ಕಾಳುಗಳ ಪಾನೀಯ

  • ರಾಗಿ ಅಂಬಲಿಯ ತರಹ ದೇಹಕ್ಕೆ ತಂಪು ನೀಡುವ ಇತರ ಪಾನೀಯ ಎಂದರೆ ಸೋಂಪು ಕಾಳುಗಳ ಶರಬತ್ತು.
  • ​ಸೋಂಪು ಕಾಳುಗಳು ನೈಸರ್ಗಿಕವಾಗಿ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ಹಾಕುತ್ತವೆ. ಅಷ್ಟೇ ಅಲ್ಲದೆ ನಮ್ಮ ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸುತ್ತವೆ.

ಸೋಂಪು ಕಾಳುಗಳ ಶರಬತ್ ತಯಾರು ಮಾಡಲು ಬೇಕಾಗಿರುವ ಸಾಮಗ್ರಿಗಳು

Health Benefits Of Jeera Water For Your Daily Life | Femina.in

  • 5 ಟೇಬಲ್ ಚಮಚ ಚೆನ್ನಾಗಿ ಹುರಿದು ಪುಡಿ ಮಾಡಿದ ಸೋಂಪು ಕಾಳುಗಳು
  • ಎರಡು ಟೇಬಲ್ ಚಮಚ ಜೇನುತುಪ್ಪ ಅಥವಾ ಬೆಲ್ಲ
  • ನಿಂಬೆಹಣ್ಣಿನ ರಸ
  • ಚಿಟಿಕೆ ಉಪ್ಪು

ತಯಾರು ಮಾಡುವ ವಿಧಾನ

What is Jaggery? Types of Jaggery and its Benefits

  • ಮೊದಲಿಗೆ ನಾಲ್ಕು ಲೋಟ ನೀರು ತೆಗೆದುಕೊಂಡು ಅದಕ್ಕೆ ಸೋಂಪು ಕಾಳುಗಳ ಪೌಡರ್, ಉಪ್ಪು ಮತ್ತು ಬೆಲ್ಲದ ಪುಡಿ ಸೇರಿಸಿ. ಇದನ್ನು ಇಡೀ ರಾತ್ರಿ ನೀರಿನಲ್ಲಿ ಹಾಗೆ ನೆನೆ ಹಾಕಿ. ಬೇಕೆಂದರೆ ರೆಫ್ರಿಜರೇಟರ್ ನಲ್ಲಿ ಕೂಡ ಇರಿಸಬಹುದು.
  • ಇದು ಚೆನ್ನಾಗಿ ನೆನೆದ ನಂತರದಲ್ಲಿ ಇದನ್ನು ಸೋಸಿ ಕೊಂಡು, ಸ್ವಲ್ಪ ನೀರು ಮತ್ತು ನಿಂಬೆಹಣ್ಣಿನ ರಸ ಸೇರಿಸಿ ಸವಿಯಬಹುದು. ಇದರಿಂದ ದೇಹ ಸಾಕಷ್ಟು ತಂಪಾಗುತ್ತದೆ.

ಸತ್ತು ಶರಬತ್

ಸತ್ತು ಶರಬತ್

ಇದು ಸಹ ಬೇಸಿಗೆ ದಿನಗಳಲ್ಲಿ ನಮ್ಮ ದೇಹವನ್ನು ತಂಪಾಗಿ ಇರಿಸುವ ಆರೋಗ್ಯಕರವಾದ ನೈಸರ್ಗಿಕ ಪಾನಿಯವಾಗಿದೆ. ಇದನ್ನು ಕುಡಿದರೆ ದೇಹ ತಂಪಾಗುವುದು ಮಾತ್ರವಲ್ಲ, ಬದಲಿಗೆ ಹೊಟ್ಟೆ ಕೂಡ ತುಂಬುತ್ತದೆ.

ಇದಕ್ಕೆ ಬೇಕಾಗಿರುವ ಸಾಮಗ್ರಿಗಳು

11 Amazing Benefits of Honey For Weight Loss, Hair and Skin - NDTV Food

  • ಎರಡು ಟೇಬಲ್ ಚಮಚ ಸತ್ತು
  • ಒಂದು ಟೇಬಲ್ ಚಮಚ ಹುರಿದ ಓಟ್ಸ್ ಪೌಡರ್
  • ಕಾಲು ಲೀಟರ್ ಮನೆಯಲ್ಲಿ ತಯಾರು ಮಾಡಿದ ಬಾದಾಮಿ ಹಾಲು
  • ಎರಡು ಟೇಬಲ್ ಚಮಚ ಜೇನುತುಪ್ಪ ಅಥವಾ ಬೆಲ್ಲ
  • ಒಂದು ಟೇಬಲ್ ಚಮಚ ನೆನೆ ಹಾಕಿದ ಚಿಯಾ ಬೀಜಗಳು
  • ಎರಡು ಟೇಬಲ್ ಚಮಚ ಹಸಿ ಕೋಕೋ

you should drink ragi ambali to tackle body heat in this summer.