ಮಧುಮೇಹ, ಕಿಡ್ನಿ ಸ್ಟೋನ್‌ ಹೀಗೆ ನಾನಾ ಸಮಸ್ಯೆಗಳನ್ನು ದೂರ ಮಾಡುತ್ತದೆ ಈ ತೊಂಡೆಕಾಯಿ

10-04-23 08:31 pm       Source: Vijayakarnataka   ಡಾಕ್ಟರ್ಸ್ ನೋಟ್

ತೊಂಡೆಕಾಯಿಯನ್ನು ಕತ್ತರಿಸುವಾಗ ಬರುವ ಅಂಟಾದ ದ್ರವ ಎನ್ನುವ ಒಂದೇ ಕಾರಣದಿಂದಾಗಿ, ಹೆಚ್ಚಿನವರು ಈ ತರಕಾರಿಯನ್ನು ಸೇವಿಸಲು ಇಷ್ಟ ಪಡುವುದಿಲ್ಲ.

ಮನುಷ್ಯನ ಬೆರಳಿನ ಗಾತ್ರದಷ್ಟೇ ಬೆಳವಣಿಗೆ ಹೊಂದಿರುವ ಇನ್ನೊಂದು ತರಕಾರಿ ಇದೆ ಎಂದರೆ ಅದು ತೊಂಡೆ ಕಾಯಿ! ಗಾತ್ರದಲ್ಲಿ ಸಣ್ಣಗೆ ಇದ್ದರೂ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ನಮ್ಮಲ್ಲಿ ಕೆಲವರು ಮಾತ್ರ ಈ ತರಕಾರಿಯ ಬಗ್ಗೆ ತುಂಬಾನೇ ನಿರ್ಲಕ್ಷ್ಯ ಮಾಡುತ್ತಾರೆ.

ಆದರೆ ನಿಮಗೆ ಗೊತ್ತಿರಲಿ, ಎಲ್ಲಾ ಬಗೆಯ ತರಕಾರಿಯಂತೆ, ತೊಂಡೆಕಾಯಿಯನ್ನು ಕೂಡ ಅಸಡ್ಡೆ ಭಾವನೆಯಿಂದ ನೋಡದೇ, ಆಗಾಗ ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ, ಈ ತರಕಾರಿ ಯನ್ನು ಸೇರಿಸಿಕೊಳ್ಳುವುದರಿಂದ ಆರೋಗ್ಯ ವೃದ್ಧಿಯಾವುದು ಮಾತ್ರವಲ್ಲದೆ, ಕೆಲವೊಂದು ದೀರ್ಘಕಾಲದ ಕಾಯಿಲೆಯಿಂದ ಕೂಡ ದೂರ ಇರ ಬಹುದು. ಬನ್ನಿ ಇಂದಿನ ಈ ಲೇಖನದಲ್ಲಿ ತೊಂಡೆಕಾಯಿ ಸೇವನೆಯಿಂದ ಏನೆಲ್ಲಾ ಅರೋಗ್ಯ ಪ್ರಯೋಜನಗಳನ್ನು ನಿರೀಕ್ಷೆ ಮಾಡ ಬಹುದು ಎನ್ನುವುದರ ಬಗ್ಗೆ ನೋಡೋಣ..

ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ

ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ

  • ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ  ಅಜೀರ್ಣ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳು ಕಂಡು ಬರುವವರು, ಮಿತ ವಾಗಿ ತಮ್ಮ ಆಹಾರ ಪದ್ಧತಿಯಲ್ಲಿ ತೊಂಡೆಕಾಯಿಯನ್ನು ಸೇರಿಸಿ ಕೊಂಡರೆ ಬಹಳ ಒಳ್ಳೆಯದು.
  • ಪ್ರಮುಖವಾಗಿ, ಈ ತರಕಾರಿಯಲ್ಲಿ ಕಂಡು ಬರುವ ಅಧಿಕ ಪ್ರಮಾಣದ ನೀರಿನಾಂಶ ಹಾಗೂ ನಾರಿನಾಂಶದ ಕಾರಣ ದಿಂದಾಗಿ ಮನುಷ್ಯನಲ್ಲಿ ಕಂಡು ಬರುವ ಜೀರ್ಣಕ್ರಿಯೆಗೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಗಳನ್ನು ಸುಲಭ ವಾಗಿ, ದೂರವಾಗುತ್ತದೆ.​

ಸಕ್ಕರೆಕಾಯಿಲೆ ಇರುವವರಿಗೆ

Diabetes - India

  • ಈಗಾಗಲೇ ಮಧುಮೇಹ ಕಾಯಿಲೆಯಿಂದ ಬಳಲುತ್ತಿ ರುವವರು, ತಮ್ಮ ಆಹಾರ ಪದ್ಧತಿಯಲ್ಲಿ ತೊಂಡೆ ಕಾಯಿಯನ್ನು ಬಳಸಿಕೊಳ್ಳಲೇಬೇಕು.
  • ಯಾಕೆಂದ್ರೆ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ ಯಾಗದಂತೆ ತಡೆಯುವ ಗುಣಲಕ್ಷಣಗಳು, ಈ ತರಕಾರಿಯಲ್ಲಿದೆ ಎಂದು ಸಾಬೀತಾಯಿತು.
  • ಈ ವಿಷಯದಲ್ಲಿ 2009ರಲ್ಲಿ ನಡೆದ ಒಂದು ವೈದ್ಯಕೀಯ ಸಂಶೋಧನೆಯಲ್ಲಿ ಕೂಡ, ಮಿತವಾಗಿ ತೊಂಡೆಕಾಯಿ ಸೇವನೆ ಮಾಡುವುದರಿಂದ, ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುವುದರ ಜೊತೆಗೆ, ಮಧುಮೇಹ ಕಾಯಿಲೆಯೂ ಕೂಡ ನಿಯಂತ್ರಣದಲ್ಲಿ ಇರುತ್ತದೆ ಎನ್ನುವ ವರದಿಯನ್ನು ಕೂಡ ನೀಡಲಾಗಿದೆ.

ಕ್ಯಾನ್ಸರ್ ವಿರುದ್ಧ ಹೋರಾಡುವ ಪವರ್ ಇದೆ!

ಕ್ಯಾನ್ಸರ್ ವಿರುದ್ಧ ಹೋರಾಡುವ ಪವರ್ ಇದೆ!

  • ಕ್ಯಾನ್ಸರ್ ಅನ್ನುವ ಈ ಖತರ್ನಾಕ್ ಕಾಯಿಲೆಯ ಹೆಸರು ಕೇಳಿದಾಗ ಭಯ ಶುರುವಾಗುತ್ತದೆ! ಈ ಕಾಯಿಲೆ ಕಾಣಿಸಿ ಕೊಂಡರೆ ಸಾವು ಖಚಿತ ಎನ್ನುವ, ಆತಂಕ ಹಾಗೆಯೇ ನಮ್ಮ ಮನಸ್ಸಿನಲ್ಲಿ ಬಂದು ಹೋಗುತ್ತದೆ. ಯಾಕೆಂದ್ರೆ ಈ ಕಾಯಿಲೆಗೆ ಇನ್ನು ಕೂಡ ಸರಿಯಾಗಿ ಚಿಕಿತ್ಸೆ ಕಂಡು ಹುಡುಕಲು ಸಾಧ್ಯವಾಗದೇ ಇರುವುದು.
  • ಇಂದಿನ ದಿನಗಳಲ್ಲಿ ಎಷ್ಟೇ ಆರೋಗ್ಯಕಾರಿ ಜೀವನಶೈಲಿ ಇರುವ ವ್ಯಕ್ತಿಯಲ್ಲೂ ಕೂಡ ಈ ಕಾಯಿಲೆ ಕಾಣಿಸಿ ಕೊಳ್ಳುತ್ತಿರುವುದು ನಿಜಕ್ಕೂ ಆತಂಕ ಮೂಡಿಸುತ್ತಿದೆ.
  • ಆದರೆ ಸರಿಯಾದ ಆಹಾರ ಪದ್ಧತಿ, ಆರೋಗ್ಯಕಾರಿ ಜೀವನ ಶೈಲಿಯನ್ನು ಅನುಸರಿಸುವುದರ ಜೊತೆಗೆ ಪ್ರಕೃತಿದತ್ತವಾದ ಸಿಗುವ ಕೆಲವೊಂದು ತರಕಾರಿಗಳನ್ನು ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳುವುದರಿಂದ, ಈ ಕಾಯಿಲೆಯ ಅಪಾಯದಿಂದ ದೂರವಿರಬಹುದು.
  • ಇದಕ್ಕೊಂದು ಒಳ್ಳೆಯ ಉದಾಹರಣೆಯೆಂದರೆ ತೊಂಡೆ ಕಾಯಿ. ಹೌದು ತೊಂಡೆಕಾಯಿ ಅಂತಹ ತರಕಾರಿಯನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ ಕ್ಯಾನ್ಸರ್ ರೋಗದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.​

ಕಿಡ್ನಿಗಳಲ್ಲಿ ಕಲ್ಲುಗಳು ಸಮಸ್ಯೆ ಬರದೇ ಇರಲು...

Signs and symptoms of poor kidney health | HealthShots

  • ದೇಹದ ಪ್ರಮುಖ ಅಂಗಾಂಗಳಾದ ಕಿಡ್ನಿಗಳಲ್ಲಿ ನಮ್ಮ ದೇಹದಿಂದ ಹೊರ ಹೋಗಬೇಕಾದ ವಿಷಕಾರಿ ಅಂಶಗಳು ಸಂಸ್ಕರಣೆಯಾಗಿ ಮೂತ್ರದ ಮೂಲಕ ಹೊರಗೆ ಹೋಗುತ್ತವೆ.
  • ಆದರೆ ಇವುಗಳ ಶ್ರಮ ರಹಿತ ಕಾರ್ಯ ಚಟುವಟಿಕೆಗೆ, ಸಮಸ್ಯೆ ಗಳು ಕಂಡು ಬರುವುದು ಕಿಡ್ನಿಗಳಲ್ಲಿ ಕಲ್ಲುಗಳು ಉಂಟಾದಾಗ. ಹೀಗಾಗಿ ಕಿಡ್ನಿಗಳು ಆರೋಗ್ಯವಾಗಿ ಇರ ಬೇಕೆಂದರೆ, ಆಹಾರ ಪದ್ಧತಿ ಯಲ್ಲಿ ಕೆಲವೊಂದು ಬದಲಾವಣೆ ತಂದುಕೊಳ್ಳ ಬೇಕಾಗುತ್ತದೆ. ಹೀಗಾಗಿ ದೈನಂದಿನ ಆಹಾರ ಪದ್ಧತಿಯಲ್ಲಿ ಮಿತವಾಗಿ, ತೊಂಡೆಕಾಯಿಯನ್ನು ಕೂಡ ಸೇರಿಸಿಕೊಂಡರೆ ಬಹಳ ಒಳ್ಳೆಯದು
  • ಇದಕ್ಕೆ ಮುಖ್ಯ ಕಾರಣ, ಈ ತರಕಾರಿಯಲ್ಲಿ ಕಂಡು ಬರುವ ಕ್ಯಾಲ್ಸಿಯಂ ಅಂಶ, ಕಿಡ್ನಿಯಲ್ಲಿ ಕಲ್ಲು ಜಮೆ ಆಗದಂತೆ ತಡೆಯುವುದು ಮಾತ್ರವಲ್ಲದೆ, ಕಿಡ್ನಿಗಳ ಆರೋಗ್ಯವನ್ನು ಕೂಡ ವೃದ್ಧಿಸುವುದು ​

amazing health benefits of ivy gourd that you must know.