Heart Attack Symptoms: ಹಾರ್ಟ್ ಅಟ್ಯಾಕ್ ಕಾಣಿಸಿಕೊಳ್ಳುವ ಮೊದಲು ಹೀಗಾಗುತ್ತೆ! ಏನದು ಗೊತ್ತಾ?

11-04-23 07:40 pm       Source: Vijayakarnataka   ಡಾಕ್ಟರ್ಸ್ ನೋಟ್

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಆಗಿ ಪ್ರಾಣ ಬಿಡುತ್ತಿರುವವರ ಸಂಖ್ಯೆ ತುಂಬಾ ದೊಡ್ಡದಾಗಿ ಬಿಟ್ಟಿದೆ! ನಿಜಕ್ಕೂ ಇದು ಆತಂಕಕಾರಿ ವಿಷಯ. ಆದರೆ ಹೃದಯಘಾತ ಕಂಡು ಬರುವ ಮೊದಲು.

ಆರೋಗ್ಯದ ವಿಚಾರದಲ್ಲಿ ನಾವು ಮಾಡುವ ಒಂದು ಸಣ್ಣ ನಿರ್ಲಕ್ಷ, ಕೊನೆಗೆ ಪ್ರಾಣಕ್ಕೆ ಆಪತ್ತು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಕೂಡ ಆರೋಗ್ಯದಲ್ಲಿ ಕಂಡು ಬರುವ ಸಣ್ಣ-ಪುಟ್ಟ ರೋಗ ಲಕ್ಷಣ ವನ್ನು ನಾವು ಕಡೆಗಣಿಸಬಾರದು. ಯಾಕೆಂದರೆ ಅದು ದೇಹದ ಒಳಭಾಗದಲ್ಲಿ ಏನೋ ಸರಿ ಇಲ್ಲ ಎನ್ನುವ ಸಂಕೇತ ವಾಗಿದೆ.

ಹೀ..ಗಾಗಿ ಆರೋಗ್ಯದ ವಿಷ್ಯದಲ್ಲಿ ಆದಷ್ಟು ಎಚ್ಚರಿಕೆ ವಹಿಸಬೇಕು. ಬನ್ನಿ ಇಂದಿನ ಲೇಖನದಲ್ಲಿ ಹೃದಯಘಾತ ಆಗುವಂತಹ ಸಂದರ್ಭದಲ್ಲಿ ಒಬ್ಬ ವ್ಯಕ್ತಿಗೆ, ಸಾಮಾನ್ಯವಾಗಿ ಕಂಡು ಬರುವ ಪ್ರಮುಖ ರೋಗಲಕ್ಷಣಗಳ ಬಗ್ಗೆಈ ಲೇಖನದಲ್ಲಿ ನೀಡಿದ್ದೇವೆ ಮುಂದೆ ಓದಿ..

ಸೈಲೆಂಟ್ ಕಿಲ್ಲರ್!

What are some signs of a heart attack?: Sam Houston Heart and Vascular:  Heart Specialists and Vein Clinic

  • ಹೃದಯಾಘಾತವನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯುತ್ತಾರೆ. ಯಾಕೆಂದ್ರೆ ನಿನ್ನೆಯವರೆಗೆ ನಮ್ಮ ಕಣ್ಣ ಮುಂದೆ ಓಡಾಡಿ ಕೊಂಡಿರುವ ವ್ಯಕ್ತಿ, ಇಂದು ಹೃದಯಾ ಘಾತದ ಕಾರಣದಿಂದಾಗಿ ದೇವರ ಪಾದ ಸೇರುತ್ತಾನೆ!
  • ಸದ್ದಿಲ್ಲದೆ ದೇಹದ ಒಳಗೊಳಗೆ ಷಡ್ಯಂತ್ರ ಮಾಡಿ, ಒಬ್ಬ ವ್ಯಕ್ತಿ ಯನ್ನು ಮುಗಿಸಿ ಬಿಡುವ ಖತರ್ನಾಕ್ ಕಾಯಿಲೆ ಗಳಲ್ಲಿ ಹೃದ ಯಾಘಾತ ಕೂಡ ಒಂದು.
  • ಇನ್ನು ಈ ಕಾಯಿಲೆ ಎಷ್ಟು ಅಪಾಯಕಾರಿ ಎಂದರೆ, ಕೆಲವೊಮ್ಮೆ ಈ ಕಾಯಿಲೆಯ ರೋಗಲಕ್ಷಣಗಳನ್ನು ಕಂಡು ಹಿಡಿಯಲು ವೈದ್ಯರಿಗೂ ಕೂಡ ಸಾಧ್ಯವಾಗು ವುದಿಲ್ಲ

ಹೃದಯಾಘಾತಕ್ಕೆ ಪ್ರಮುಖ ಕಾರಣಗಳನ್ನು ಮೇಲ್ನೋಟಕ್ಕೆ ಹೇಳುವುದಾದರೆ

Sudden Cardiac Arrest vs Heart Attack | Cardiology | Henry Ford Health -  Detroit, MI

  • ಬಹುತೇಕ ಹೃದಯಾಘಾತ ಪ್ರಕರಣಗಳು ರಕ್ತನಾಳ ಗಳಲ್ಲಿ ಸಮರ್ಪಕವಾದ ರಕ್ತಪೂರೈಕೆ ಆಗದೆ ಇದ್ದರೆ ಅಥವಾ ಹೃದಯಕ್ಕೆ ಸರಿಯಾಗಿ ರಕ್ತ ಸಂಚಾರ ಆಗದೇ ಬ್ಲಾಕ್ ಆದರೆ, ಹೃದಯಘಾತ ಆಗುವ ಸಾಧ್ಯತೆ ಹೆಚ್ಚಿರುತ್ತದೆ
  • ಇದರ ಜೊತೆಗೆ ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಕೊಬ್ಬಿನ ಅಂಶ ಸೇರ್ಪಡೆ ಆಗುತ್ತಾ ಹೋದಂತೆ ರಕ್ತಸಂಚಾರ ದಲ್ಲಿ ಏರುಪೇರು ಉಂಟಾಗುತ್ತದೆ.
  • ಇದು ಹೃದಯದ ಮಾಂಸಖಂಡಗಳ ಮೇಲೆ ಅತಿಯಾದ ಒತ್ತಡವನ್ನು ಉಂಟು ಮಾಡುತ್ತದೆ. ಇದರಿಂದ ಕೂಡ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಆರೋಗ್ಯ ತಜ್ಞರ ಪ್ರಕಾರ

World Heart Day: Doctors clear myths related to heart attack in women -  Times of India

ಈ ಬಗ್ಗೆ ಆರೋಗ್ಯ ತಜ್ಞರು, ಹೇಳುವ ಪ್ರಕಾರ ಹೃದಯಾಘಾತ ಕಂಡು ಬರುವ ಮೊದಲು ವ್ಯಕ್ತಿಗೆ, ಸಾಮಾನ್ಯವಾಗಿ, ಎರಡು-ಮೂರು ರೀತಿಯ ರೋಗಲಕ್ಷಣಗಳು ಕಂಡು ಬರುತ್ತವೆಯಂತೆ! ಅಂತಹ ರೋಗಲಕ್ಷಣಗಳು ಯಾವುದು ಎನ್ನುವುದರ ಬಗ್ಗೆ ನೋಡೋಣ ಬನ್ನಿ ..

ಉಸಿರಾಟದ ಸಮಸ್ಯೆ ಹಾಗೂ ಎದೆಯಲ್ಲಿ ಬಿಗಿತ

What Are Heart Attack Symptoms in Women Like? - Scripps Health

  • ಚೆನ್ನಾಗಿ ಓಡಾಡಿ ಕೊಂಡಿದ್ದ ವ್ಯಕ್ತಿಗೆ ಸಡನ್ ಆಗಿ ಇದ್ದಕ್ಕಿ ದ್ದಂತೆ ಉಸಿರಾಟದಲ್ಲಿ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ.
  • ಎದೆಯ ಭಾಗದಲ್ಲಿ, ಸೂಜಿಯಲ್ಲಿ ಚುಚ್ಚಿದಂತೆ ಭಾಸ ವಾಗುವುದು. ಈ ಸಮಯದಲ್ಲಿ ಉಸಿರಾಡಲು ಕಷ್ಟವಾಗು ವುದರ ಜೊತೆಗೆ ಎದೆಯಲ್ಲಿ ಬಿಗಿತ ಕಂಡು ಬರುವುದು.
  • ಇದೆಲ್ಲಾ ಲಕ್ಷಣಗಳು ಹೃದಯಘಾತ ಆಗುವ ಮೊದಲು ಕಂಡು ಬರುವ ಸೂಚನೆಗಳು ಎಂದು ಆರೋಗ್ಯ ತಜ್ಞರು ಎಚ್ಚರಿಕೆಯನ್ನು ನೀಡುತ್ತಾರೆ. ​

ಈ ಲಕ್ಷಣಗಳು ಕಂಡು ಬರುತ್ತದೆ ನೋಡಿ

ಈ ಲಕ್ಷಣಗಳು ಕಂಡು ಬರುತ್ತದೆ ನೋಡಿ

  • ಭುಜದ ಭಾಗದಲ್ಲಿ, ಕುತ್ತಿಗೆ ಹಾಗೂ ಕೈಗಳ ತೋಳುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳು ವುದು, ಕೆಲವೊಮ್ಮೆ ದವಡೆ ಹಲ್ಲುಗಳಲ್ಲಿ ಕೂಡ ವಿಪರೀತ ನೋವು ಕಾಣಿಸಿ ಕೊಳ್ಳುವುದು,
  • ಇದ್ದಕ್ಕಿದ್ದಂತೆ ಎದೆಯ ಭಾಗದಲ್ಲಿ ಕಿವುಚಿದಂತೆ ಅನುಭವ ಉಂಟಾಗುವುದು, ಪ್ರಮುಖವಾಗಿ ಎಡಗಡೆ ಎದೆಯ ಭಾಗದಲ್ಲಿ ವಿಪರೀತ ನೋವು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ! ಯಾಕೆಂದ್ರೆ ಇವೆ ಲ್ಲವೂ ಹೃದಯಾಘಾತದ ಎನ್ನುವ ಸೈಲೆಂಟ್ ಕಿಲ್ಲರ್‌ನ ಇನ್ನೊಂದು ಮುಖ!​

ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ

ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ

  • ಎಸಿ ರೂಮ್ ನಲ್ಲಿ ಅಥವಾ ಫ್ಯಾನ್ ಕೆಳಗಡೆ ಕೂತಿದ್ದರೂ ಕೂಡ, ಮೈಯಲ್ಲಾ ತಣ್ಣಗಿದ್ದು, ನಿಧಾನಕ್ಕೆ ಬೆವರಲು ಶುರುವಾಗುತ್ತದೆ.
  • ಅಷ್ಟೇ ಅಲ್ಲದೆ ಎದ್ದು ನಿಲ್ಲುವಾಗ ತಲೆ ತಿರುಗುವುದು, ವಾಕರಿಕೆ ಬಂದಂತೆ ಆಗುವುದು ಇಂತಹ ಸಣ್ಣಪುಟ್ಟ ರೋಗ ಲಕ್ಷಣಗಳು ಕೂಡ ಹೃದಯಘಾತದ ಪ್ರಮುಖ ಲಕ್ಷಣಗಳು ಎನ್ನುವುದನ್ನು ಮರೆಯಬಾರದು.
  • ಇಂತಹ ಸಂದರ್ಭದಲ್ಲಿ ವೈದ್ಯರು ಇಸಿಜಿ ಮಾಡಿ ಹೃದಯದ ಕಾರ್ಯ ಚಟುವಟಿಕೆಯನ್ನು ಕಂಡು ಹಿಡಿಯುತ್ತಾರೆ.​​

ಕೊನೆಯ ಮಾತು

Heart Disease News, Articles and Research

  • ಹೃದಯದ ಆರೋಗ್ಯದಲ್ಲಿ ಸಮಸ್ಯೆಗಳು ಬರಬಾರ ದೆಂದರೆ, ಮೊದಲಿಗೆ ಸರಿಯಾದ ಆಹಾರ,ವ್ಯಾಯಾಮ ಅಥವಾ ಯೋಗಾಭ್ಯಾಸಗಳನ್ನು ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.
  • ಹೃದಯವನ್ನು ಆರೋಗ್ಯವಾಗಿಡಲು ಪೊಟ್ಯಾಶಿಯಂ ಅಂಶ, ಅಧಿಕ ಪ್ರಮಾಣದಲ್ಲಿ ಸಿಗುವ ಆಹಾರ-ಪದಾರ್ಥ ಗಳನ್ನು ಸೇವಿಸಬೇಕು. ಉದಾಹರಣೆಗೆ ಬಾಳೆಹಣ್ಣು, ಸೌತೆಕಾಯಿ, ಸಿಹಿ ಗೆಣಸು, ಕುಂಬಳಕಾಯಿ ಬೀಜಗಳು ಇತ್ಯಾದಿ.
  • ಉಪ್ಪು ಹಾಗೂ ಅಧಿಕ ಪ್ರಮಾಣದಲ್ಲಿ ಉಪ್ಪಿನಾಂಶ ಇರುವ ಆಹಾರ ಪದಾರ್ಥಗಳಿಂದ ದೂರವಿರಿ. ಸಂಸ್ಕರಿಸಿದ ಅಥವಾ ಕ್ಯಾನ್‌ನಲ್ಲಿ ಶೇಖರಿಸಿದ ಆಹಾರ ಪದಾರ್ಥಗಳ ಬದಲು, ತಾಜಾ ಆಹಾರ ಪದಾರ್ಥಗಳನ್ನು ನೈಸರ್ಗಿಕವಾಗಿ ಸಿಗುವ ಹಣ್ಣುಗಳನ್ನು ಹೆಚ್ಚು ಸೇವನೆ ಮಾಡಿ
  • ಬಹುಮುಖ್ಯವಾಗಿ ಬೇಕರಿ ಸಿಹಿ ಪದಾರ್ಥಗಳಿಂದ ದೂರ ವಿರಿ. ಯಾಕೆಂದ್ರೆ ಈ ಸಿಹಿ ತಿಂಡಿಗಳಲ್ಲಿ ಕೃತಕ ಸಿಹಿ ಪದಾರ್ಥಗಳನ್ನು ಬಳಸುವುದರಿಂದ, ಇವು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಕೊಬ್ಬಿನಾಂಶ ಏರಿಕೆ ಯಾಗುವಂತೆ ಮಾಡುತ್ತದೆ. ಕೊನೆಗೆ ಇದರಿಂದ ಕೂಡ ಹೃದಯಕ್ಕೆ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ!

these few common symptoms before heart attack that you should be aware.