ದಿನಾ ಒಂದು ಪೀಸ್ ಮಾವಿನಹಣ್ಣು ತಿಂದ್ರೂ ಸಾಕು, ಇಷ್ಟೆಲ್ಲಾ ಲಾಭಗಳಿವೆ..

12-04-23 07:11 pm       Source: Vijayakarnataka   ಡಾಕ್ಟರ್ಸ್ ನೋಟ್

ಬೇಸಿಗೆ ಶುರುವಾದಾಗ ಹಣ್ಣುಗಳ ರಾಜ ಮಾವಿನ ಹಣ್ಣುಗಳ ಕಾರುಬಾರು ಜೋರಾಗಿರುತ್ತದೆ. ಬೇಸಿಗೆಯಲ್ಲಿ ಸಿಗುವ ಈ ಹಣ್ಣುಗಳು ಯಾಕಿಷ್ಟು ಫೇಮಸ್.

ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನ ಹಣ್ಣು ಮಾರ್ಕೆಟ್‌ಗೆ ಎಂಟ್ರೀ ಕೊಟ್ಟಾಗಿದೆ! ನಮಗೆಲ್ಲಾ ಗೊತ್ತೇ ಇರುವ ಹಾಗೆ, ಯುಗಾದಿ ಹಬ್ಬ ಕಳೆದ ಬಳಿಕ ಮಾವಿನ ಹಣ್ಣುಗಳ ಮಾರಾಟ ಎಲ್ಲಾ ಕಡೆಗಳಲ್ಲಿಯೂ ಶುರುವಾಗುತ್ತದೆ. ತಳ್ಳುವ ಗಾಡಿಗಳಿಂದ ಹಿಡಿದು, ಸೂಪರ್ ಮಾರ್ಕೆಟ್‌ ಗಳವರೆಗೂ, ಈ ಹಣ್ಣುಗಳ ಮಾರಾಟ ಬಲು ಜೋರಾಗಿ ನಡೆಯುತ್ತಿದೆ.

ತನ್ನಲ್ಲಿ ಅಪ್ರತಿಮ ರುಚಿಯನ್ನು ಹೊಂದಿರುವ, ಈ ಹಣ್ಣನ್ನು ಮನೆಯಲ್ಲಿ ಹಿರಿಯರಿಂದ ಹಿಡಿದು, ಸಣ್ಣ ಮಕ್ಕ ಳವರೆಗೂ ಕೂಡ ಇಷ್ಟವಾಗುತ್ತದೆ. ಹಾಗಂತ ಈ ಹಣ್ಣು ಕೇವಲ ರುಚಿ ಮಾತ್ರವಲ್ಲ,ತನ್ನಲ್ಲಿ ಅಗಾಧ ಪ್ರಮಾಣ ದಲ್ಲಿ ಆರೋಗ್ಯಕಾರಿ ಪ್ರಯೋಜನಗಳನ್ನು ಕೂಡ ಒಳಗೊಂಡಿದೆ... ಅವು ಯಾವುದು ಎನ್ನುವುದನ್ನು ಮುಂದೆ ಓದುತ್ತಾ ಸಾಗಿ...

ಮಾವಿನ ಹಣ್ಣಿನಲ್ಲಿ ಸಿಗುವ ಪ್ರಯೋಜನಗಳ ಬಗ್ಗೆ ಹೇಳುವುದಾದರೆ....

Here's why you get pimples after eating mangoes | HealthShots

  • ಇನ್ನು ಈ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ವಿಟಮಿನ್ಸ್‌ಗಳಾದ ವಿಟಮಿನ್ ಇ, ವಿಟಮಿನ್ ಸಿ, ವಿಟಮಿನ್ ಕೆ ಹಾಗೂ ವಿಟಮಿನ್ ಎ ಅಂಶ ಯಥೇಚ್ಛವಾಗಿ ಕಂಡು ಬರುತ್ತದೆ.
  • ಅಷ್ಟೇ ಅಲ್ಲದೆ, ಈ ಹಣ್ಣಿನಲ್ಲಿ ಪೌಷ್ಟಿಕ ಸತ್ವಗಳು ಒಳಗೊಂಡಿರುವ ಹಲವಾರು ಬಗೆಯ ಖನಿಜಾಂಶ ಗಳು ಕೂಡ ಕಂಡು ಬರುತ್ತದೆ.
  • ಉದಾಹರಣೆಗೆ ಹೇಳುವುದಾದರೆ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ ಹಾಗೂ ಫಾಸ್ಫರಸ್ ಅಂಶಗಳು, ಈ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಸಿಗು ವುದರಿಂದ, ಮಾರು ಕಟ್ಟೆಯಲ್ಲಿ ಸಿಗುವ ಮಾವಿನ ಹಣ್ಣನ್ನು ಮನೆಗೆ ತಂದು ಸೇವನೆ ಮಾಡಬಹುದು.

ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆ ಮಾಡುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆ ಮಾಡುತ್ತದೆ

  • ​ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಹೆಚ್ಚಾಗುತ್ತಾ ಹೋದರೆ, ರಕ್ತ ಸಂಚಾರದಲ್ಲಿ ಏರುಪೇರು ಉಂಟಾಗು ವುದರ ಜೊತೆಗೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಗಳು ಕಂಡು ಬರುವ, ಸಾಧ್ಯತೆ ಇರುತ್ತದೆ.
  • ಹೀಗಾಗಿ ಈ ಸಮಸ್ಯೆಯಿಂದ ದೂರವಿರಬೇಕು ಎಂದರೆ ಆರೋಗ್ಯಕಾರಿ ಆಹಾರ ಪದಾರ್ಥಗಳು, ನೈಸರ್ಗಿಕ ವಾಗಿ ಸಿಗುವ ಹಣ್ಣು-ತರಕಾರಿಗಳನ್ನು ಆಹಾರ ಪದ್ಧತಿಯಲ್ಲಿ ಅನುಸರಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
  • ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ, ಬೇಸಿಗೆ ಕಾಲದಲ್ಲಿ ಸಿಗುವ ಮಾವಿನಹಣ್ಣನ್ನು ಮಿತವಾಗಿ ಸೇವನೆ ಮಾಡುವುದು.
  • ಇದಕ್ಕೆ ಪ್ರಮುಖ ಕಾರಣ, ಈ ಹಣ್ಣಿನಲ್ಲಿ ಸಿಗುವ ಉತ್ತಮ ಪ್ರಮಾಣದ ವಿಟಮಿನ್ ಸಿ, ಕರಗುವ ನಾರು ಮತ್ತು ಪೆಕ್ಟಿನ್ ಅಂಶ ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುವಂತೆ ನೋಡಿ ಕೊಳ್ಳುತ್ತದೆ. ​

ತೂಕ ಇಳಿಸಿಕೊಳ್ಳಲು ಬಯಸುವವರು...

Remarkable Weight Loss – Study Finds New Benefits of a Plant-Based Diet

  • ಇಂದಿನ ದಿನಗಳಲ್ಲಿ ಹೆಚ್ಚಿನವರಿಗೆ ದೇಹದ ತೂಕ, ಇಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಇದಕ್ಕಾಗಿ ಆರೋಗ್ಯಕಾರಿ ಜೀವನ ಶೈಲಿ ಹಾಗೂ ಸರಿಯಾದ ಆಹಾರ ಪದ್ಧತಿಗಳನ್ನು ಅನುಸರಿಸುವು ದರಿಂದ, ದೇಹದ ತೂಕ ಹೆಚ್ಚಾಗದಂತೆ ನೋಡಿ ಕೊಳ್ಳಬಹುದು.
  • ಇನ್ನು ದೇಹದ ತೂಕವನ್ನು ಇಳಿಸಿಕೊಳ್ಳಲು ಬಯಸು ವವರು, ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಮಾವಿನ ಹಣ್ಣನ್ನು ಕೂಡ ಸೇರಿಸಿಕೊಳ್ಳುವುದರಿಂದ ಒಳ್ಳೆಯ ಫಲಿತಾಂಶವನ್ನು ಕಾಣಬಹುದು.
  • ಇದಕ್ಕೆ ಪ್ರಮುಖ ಕಾರಣ, ಈ ಹಣ್ಣಿನಲ್ಲಿ ನೀರಿನಾಂಶ ಅಧಿಕ ಪ್ರಮಾಣದಲ್ಲಿ ಸಿಗುವುದರ ಜೊತೆಗೆ ಕಡಿಮೆ ಪ್ರಮಾಣದ ಕ್ಯಾಲೋರಿ ಅಂಶಗಳು ಕಂಡು ಬರುತ್ತದೆ.
  • ಇವೆಲ್ಲದರ ಜೊತೆಗೆ ಈ ಹಣ್ಣಿನಲ್ಲಿ ನಾರಿನಾಂಶದ ಪ್ರಮಾಣ ಕೂಡ ಯಥೇಚ್ಛವಾಗಿ ಸಿಗುವುದರಿಂದ, ಜೀರ್ಣಕ್ರಿಯೆ ಪ್ರಕ್ರಿಯೆ ಅಚ್ಚುಕಟ್ಟಾಗಿ ನೆರವೇರುತ್ತದೆ
  • ಹಾಗೂ ದೀರ್ಘಕಾಲದವರೆಗೆ ಹೊಟ್ಟೆ ಹಸಿವು ಆಗಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ದೇಹದ ಹೆಚ್ಚುವರಿ ತೂಕವನ್ನು ಇಳಿಸಿಕೊಳ್ಳಲು ಸಹಾಯವಾಗುತ್ತದೆ.

ಲೈಂಗಿಕ ಸಮಸ್ಯೆಗಳಿಗೆ ಒಳ್ಳೆಯದು

ಲೈಂಗಿಕ ಸಮಸ್ಯೆಗಳಿಗೆ ಒಳ್ಳೆಯದು

  • ಇಂದಿನ ದಿನಗಳಲ್ಲಿ ಲೈಂಗಿಕ ಸಮಸ್ಯೆಗಳು ಪುರುಷರು ಹಾಗೂ ಮಹಿಳೆಯರು ಇಬ್ಬರಲ್ಲಿಯೂ ಕೂಡ ಕಂಡು ಬರುತ್ತಿದೆ.
  • ಅದರಲ್ಲೂ ಮದುವೆಯಾದ ಬಳಿಕ, ಇದೇ ಸಮಸ್ಯೆಗ ಳಿಂದಾಗಿ, ಹೆಚ್ಚಿನವರ ಸಾಂಸಾರಿಕ ಜೀವನವೇ ಹಾಳಾ ಗುತ್ತಿದೆ. ಈ ಸಮಸ್ಯೆಯ ಬಗ್ಗೆ ತಮ್ಮ ಸ್ನೇಹಿತರ ನಡುವೆ ಚರ್ಚೆ ಮಾಡಲು ಅಥವಾ ವೈದ್ಯರ ಬಳಿಗೆ ಹೋಗಲು ಹಿಂಜರಿಯುವವರೇ ಹೆಚ್ಚು.
  • ಈ ಸಮಸ್ಯೆ ಎದುರಿಸುವವರು, ಪ್ರತಿದಿನ ಮಾವಿನ ಹಣ್ಣು ಸೇವನೆ ಮಾಡಿದರೆ ಒಳ್ಳೆಯದು. ಯಾಕೆಂದ್ರೆ ಈ ಹಣ್ಣಿನಲ್ಲಿ ಕಾಮೋತ್ತೇಜಕ ಗುಣಗಳು ಕಂಡು ಬರುವು ದರಿಂದ, ವಿಶೇಷವಾಗಿ ಪುರುಷರಲ್ಲಿ ಪುರುಷತ್ವವನ್ನು ಹೆಚ್ಚಿಸುತ್ತದೆ.

ಕಣ್ಣುಗಳಿಗೆ ಒಳ್ಳೆಯದು

ಚಳಿಗಾಲದಲ್ಲಿ ಕಣ್ಣುಗಳ ಬಗ್ಗೆ ಇರಲಿ ಎಚ್ಚರ! | Health News in Kannada

  • ಮೊದಲೇ ಹೇಳಿದ ಹಾಗೆ ಮಾವಿನಹಣ್ಣಿನಲ್ಲಿ ವಿಟಮಿನ್ ಎ ಅಂಶ ಅಧಿಕ ಪ್ರಮಾಣದಲ್ಲಿದೆ, ಇದು ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ನೆರವಾಗುತ್ತದೆ.
  • ಪ್ರಮುಖವಾಗಿ ರಾತ್ರಿ ಕುರುಡುತನ ಹಾಗೂ ಕಣ್ಣು ಗಳನ್ನು ಒಣಗಿಸುವಿಕೆ ಸಮಸ್ಯೆಯನ್ನು ಕೂಡ ತಡೆಯುತ್ತದೆ.

healthy reasons why should you add mango in your diet during summer season.