ನಿಮಗೆ ಗೊತ್ತಿರಲಿ, ರಾತ್ರಿ ಮಲಗುವ ಮುನ್ನ, ಈ 4 ಬಗೆಯ ಹಣ್ಣುಗಳನ್ನು ತಿನ್ನಬಾರದಂತೆ!

14-04-23 09:33 pm       Source: Vijayakarnataka   ಡಾಕ್ಟರ್ಸ್ ನೋಟ್

ರಾತ್ರಿ ಊಟವಾದ ಬಳಿಕ, ಹಣ್ಣು ತಿನ್ನುವ ಅಭ್ಯಾಸ ಹೆಚ್ಚಿನವರು, ಇಟ್ಟುಕೊಂಡಿರುತ್ತಾರೆ. ಏಕೆಂದರೆ ಇದು ಜೀರ್ಣ ಕ್ರಿಯೆಗೆ ಸಹಕಾರಿ ಹಾಗೂ.

ನೈಸರ್ಗಿಕವಾಗಿ ಸಿಗುವ ಪ್ರತಿಯೊಂದು ಹಣ್ಣು-ಹಂಪಲುಗಳು ಕೂಡ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಇದಕ್ಕೆ ಕಾರಣ ಇಷ್ಟೇ, ಇಂತಹ ನೈಸರ್ಗಿಕ ದತ್ತವಾಗಿ ಸಿಗುವ ಹಣ್ಣುಗಳಲ್ಲಿ ನೈಸರ್ಗಿಕ ಸಕ್ಕರೆ ಅಂಶ, ಅನೇಕ ಬಗೆಯ ವಿಟಮಿನ್ಸ್‌ಗಳು, ಖನಿಜಾಂಶಗಳು ಹಾಗೂ ಅಧಿಕ ಪ್ರಮಾಣದ ಪೌಷ್ಟಿಕ ಸತ್ವಗಳು ಆರೋಗ್ಯ ವೃದ್ಧಿಸಲು ನೆರವಾಗುತ್ತದೆ.

ಆದರೆ ಇಷ್ಟೆಲ್ಲಾ ಆರೋಕಾರಿ ಪ್ರಯೋಜನಗಳನ್ನು ಒಳಗೊಂಡಿರುವ, ಕೆಲವೊಂದು ಹಣ್ಣು ಗಳನ್ನು ರಾತ್ರಿ ಊಟದ ನಂತರ ತಿನ್ನಬಾರದು ಎಂದು ಹೇಳುತ್ತಾರೆ! ಹಾಗಾದ್ರೆ ಯಾವ ಬಗೆಯ ಹಣ್ಣುಗಳನ್ನು ನಾವು ರಾತ್ರಿ ಸಮಯದಲ್ಲಿ ತಿನ್ನಬಾರದು? ತಿಂದ್ರೆ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಕಂಡು ಬರಲು ಶುರುವಾಗುತ್ತದೆ? ಎನ್ನುವ ಬಗ್ಗೆ ಮಾಹಿತಿ ಯನ್ನು ಮುಂದೆ ನೀಡಿದ್ದೇವೆ, ಓದುತ್ತಾ ಸಾಗಿ...

ಸೇಬು ಹಣ್ಣು ತಿನ್ನಬಾರದಂತೆ!

Apple Fruit Images - Free Download on Freepik

  • ಸೇಬು ಹಣ್ಣಿನಲ್ಲಿ ಸಿಗುವಂತಹ ಹಲವಾರು ರೀತಿಯ, ಪೌಷ್ಟಿಕ ಸತ್ವಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆ ಯದು ಹಾಗೂ ಇದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
  • ಇದೇ ಕಾರಣಕ್ಕೆ ವೈದ್ಯರು ಕೂಡ ಪ್ರತಿದಿನ ಸೇಬು ಹಣ್ಣು ತಿನ್ನುವ ಅಭ್ಯಾಸ ಮಾಡಿಕೊಳ್ಳಿ ಎಂದು ಸಲಹೆ ನೀಡು ತ್ತಾರೆ.
  • ಪ್ರಮುಖವಾಗಿ ಈ ಹಣ್ಣಿನಲ್ಲಿ ಕಂಡು ಬರುವ ವಿವಿಧ ಬಗೆಯ ವಿಟಮಿನ್ಸ್ ಗಳು, ಖನಿಜಾಂಶಗಳು, ನಾರಿನಾಂಶ ಹಾಗೂ ಪೆಕ್ಟಿನ್ ಎನ್ನುವ ಸಂಯುಕ್ತ ಅಂಶ ಆರೋಗ್ಯ ವೃದ್ಧಿಸಲು ನೆರವಾಗುತ್ತದೆ. ​

ಆದರೆ ಈ ಹಣ್ಣನ್ನು ತಿನ್ನುವ ವಿಷ್ಯದಲ್ಲಿ ಎಡವಟ್ಟು ಮಾಡಬಾರದು!

Why Should We Eating Apples? 15 Healthy Benefits | BistroMD

  • ಹೀಗಾಗಿ ಇಷ್ಟೆಲ್ಲಾ ಆರೋಗ್ಯಕಾರಿ ಗುಣ ಲಕ್ಷಣಗಳನ್ನು ಹೊಂದಿರುವ ಸೇಬುಹಣ್ಣನ್ನು ತಿನ್ನುವ ವಿಷ್ಯದಲ್ಲಿ ಎಡವಟ್ಟು ಮಾಡಬಾರದು!
  • ಪ್ರಮುಖವಾಗಿ ದಿನದಲ್ಲಿ ಯಾವ ಸಮಯದಲ್ಲೂ ಕೂಡ ಈ ಹಣ್ಣನ್ನು ತಿನ್ನಬಹುದು, ಆದರೆ ರಾತ್ರಿ ಸಮಯದಲ್ಲಿ, ಮಾತ್ರ ಸೇಬು ಹಣ್ಣು ತಿನ್ನಬಾರದು ಎಂದು ವೈದ್ಯರು ಸಲಹೆ ಕೊಡುತ್ತಾರೆ.
  • ಇದಕ್ಕೆ ಪ್ರಮುಖ ಕಾರಣ, ರಾತ್ರಿ ಸಮಯದಲ್ಲಿ ಅಂದರೆ, ಮಲಗುವ ಮುನ್ನಸೇಬುಹಣ್ಣು ಸೇವನೆ ಮಾಡುವು ದರಿಂದ, ನಮ್ಮ ಜೀರ್ಣಾಂಗ ವ್ಯವಸ್ಥೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿ ಸಲು ಸಾಧ್ಯವಾಗುವುದಿಲ್ಲ!
  • ಅಷ್ಟೇ ಅಲ್ಲದೆ, ನಾವು ತಿನ್ನುವ ಆಹಾರದಲ್ಲಿ ಅದಾಗಲೇ ನಮಗೆ ಸಾಕಷ್ಟು ನಾರಿನಾಂಶದ ಪ್ರಮಾಣ ಸಿಕ್ಕಿರುತ್ತದೆ. ಮೊದಲೇ ಹೇಳಿದ ಹಾಗೆ ಈ ಹಣ್ಣಿನಲ್ಲಿಯೂ ನಾರಿ ನಾಂಶ ಸಿಗುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆಯಂತೆ!

ಕಿತ್ತಳೆ ಹಾಗೂ ದ್ರಾಕ್ಷಿ ಹಣ್ಣು

Bunch Of Different Types Of Fresh Grapes Stock Photo - Download Image Now -  Grape, Bunch, Vineyard - iStock

  • ವಿಟಮಿನ್ ಸಿ ಮತ್ತು ನಾರಿನ ಪ್ರಮಾಣ ಹೆಚ್ಚಾಗಿರುವ ಹಣ್ಣುಗಳನ್ನು ರಾತ್ರಿ ಮಲಗುವ ಮುನ್ನ ಸೇವನೆ ಮಾಡ ಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ.
  • ಯಾಕೆಂದ್ರೆ ಇಂತಹ ಹಣ್ಣುಗಳ ಸೇವನೆಯಿಂದ, ನಿದ್ರೆ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ಗ್ಯಾಸ್ಟ್ರಿಕ್ ಹಾಗೂ ಆಸಿಡಿಟಿ ಸಮಸ್ಯೆ ಕಂಡು ಬರುವ ಸಾಧ್ಯತೆ ಕೂಡ ಹೆಚ್ಚಿರುತ್ತದೆಯಂತೆ!

ಸಪೋಟ ಹಣ್ಣು

7 health benefits of chikoo and why you must eat it | HealthShots

  • ಸಪೋಟ ಹಣ್ಣು ಎಂದರೆ ಕೇಳಬೇಕಾ? ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ನೈಸರ್ಗಿಕ ಸಕ್ಕರೆ ಅಂಶವನ್ನು ಒಳ ಗೊಂಡಿದೆ. ಇದೇ ಕಾರಣಕ್ಕೆ ಈ ಹಣ್ಣನ್ನು ರಾತ್ರಿ ಹೊತ್ತು ತಿನ್ನಬಾರದು ಎಂದು ಹೇಳುವುದು!
  • ಇನ್ನು ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಈ ಹಣ್ಣಿನಲ್ಲಿ ಸಕ್ಕರೆ ಪ್ರಮಾಣದಂಶ ಅತಿಯಾಗಿ ಕಂಡು ಬರುವುದರಿಂದ, ರಾತ್ರಿ ಸಮಯದಲ್ಲಿ ಈ ಹಣ್ಣನ್ನು ಸೇವನೆ ಮಾಡಬಾರದು ಎಂದು ಸಲಹೆ ನೀಡುತ್ತಾರೆ.
  • ಯಾಕೆಂದ್ರೆ ರಾತ್ರಿ ಮಲಗುವಾಗ ಸಪೋಟ ಹಣ್ಣು ಸೇವಿಸಿದರೆ, ರಕ್ತದಲ್ಲಿ ಸಕ್ಕರೆಮಟ್ಟ ಏರಿಕೆ ಕಾಣುವ ಸಾಧ್ಯತೆ ಹೆಚ್ಚಿರುತ್ತದೆಯಂತೆ...

ಕೊನೆಯ ಮಾತು

Fruits – Virgara Fruit & Veg

  • ಬೆಳಗ್ಗೆ ತಿಂಡಿ ತಿಂದು ಒಂದೆರಡು ಗಂಟೆಗಳು ಬಿಟ್ಟ ಬಳಿಕ, ನಿಮಗಿಷ್ಟವಾದ ಯಾವುದೇ ಹಣ್ಣುಗಳನ್ನು ತಿನ್ನಬಹುದು. ಅಲ್ಲದೆ ಮಧ್ಯಾಹ್ನ ಊಟವಾದ ಬಳಿಕ ಕೂಡ, ಹಣ್ಣುಗಳನ್ನು ಸೇವನೆ ಮಾಡುವುದರಲ್ಲಿ ತಪ್ಪಿಲ್ಲ.
  • ಇನ್ನು ತಜ್ಞರು ಹೇಳುವ ಪ್ರಕಾರ ಸಂಜೆಯ ಸ್ನಾಕ್ಸ್ ಸಮ ಯದಲ್ಲಿ ಅಂದರೆ ಮಧ್ಯಾಹ್ನ ಮೂರು ಗಂಟೆ ಯಿಂದ ಸಂಜೆ ಐದು ಗಂಟೆಯ ನಡುವೆ ಹಣ್ಣುಗಳನ್ನು ತಿನ್ನ ಬಹುದು.
  • ಇದರಿಂದ ಜೀರ್ಣಕ್ರಿಯೆ ಕೂಡ ಸರಿಯಾಗಿ ನಡೆಯುತ್ತದೆ ಜೊತೆಗೆ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು.
  • ಆದರೆ ರಾತ್ರಿ ಸಮಯದಲ್ಲಿ, ಅಂದರೆ ಮಲಗುವ ಮುನ್ನ, ಮೇಲೆ ತಿಳಿಸಿರುವ ಕೆಲವೊಂದು ಹಣ್ಣುಗಳಿಂದ ದೂರ ವಿದ್ದರೆ ಒಳ್ಳೆಯದು.
  • ಯಾಕೆಂದ್ರೆ ಇಂತಹ ಹಣ್ಣುಗಳನ್ನು ಸೇವನೆ ಮಾಡುವುದ ರಿಂದ ಹೊಟ್ಟೆಯ ಆರೋಗ್ಯಕ್ಕೆ, ಜೀರ್ಣಾಂಗ ವ್ಯವಸ್ಥೆಗೆ, ನಿದ್ರೆಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.​

these four types of fruits should not be consumed at night.