ಬೆಳಗ್ಗೆಗಿಂತ ರಾತ್ರಿ ಹೊತ್ತು ಮಾವಿನ ಹಣ್ಣಿನ ಜ್ಯೂಸ್ ಕುಡಿದರೆ ಸೂಪರ್!

15-04-23 08:26 pm       Source: Vijayakarnataka   ಡಾಕ್ಟರ್ಸ್ ನೋಟ್

ನೀವು ಸಹ ಇನ್ನು ಮುಂದೆ ದಿನ ಮಾವಿನ ಹಣ್ಣಿನ ಜ್ಯೂಸ್ ಕುಡಿಯಿರಿ. ಬೆಳಗ್ಗೆಗಿಂತ ರಾತ್ರಿ ಕುಡಿದರೆ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು ತುಂಬಾ ಹೆಚ್ಚು!

ಮಾವಿನ ಹಣ್ಣಿನ ಜ್ಯೂಸ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ತನ್ನಲ್ಲಿ ನೈಸರ್ಗಿಕ ಸಹಿ ಅಂಶ ಒಳಗೊಂಡಿ ರುವ, ಈ ಹಣ್ಣನ್ನು ಜ್ಯೂಸ್ ಮಾಡಿ ಕೊಂಡು ಕುಡಿದರಂತೂ ಆಹಾ.. ನೆನೆಸಿಕೊಂಡಾಗಲೇ ಬಾಯಲ್ಲಿ ನೀರೂರಲು ಶುರುವಾಗುತ್ತದೆ! ಈಗಂತೂ ಬೇಸಿಗೆ ಆಗಿರುವುದರಿಂದ ಮಾವಿನ ಹಣ್ಣು ಎಲ್ಲಾ ಕಡೆಗಳಲ್ಲೂ ಸಿಗುತ್ತದೆ. ಹೆಚ್ಚಾಗಿ ಈ ಹಣ್ಣನ್ನು ಹಾಗೆಯೇ ತಿನ್ನುವ ಬದಲು, ಇದರಿಂದ ಜ್ಯೂಸ್‌ ರೆಡಿ ಮಾಡಿಕೊಂಡು ಕುಡಿಯಲು ಹೆಚ್ಚಿನವರು ಇಷ್ಟಪಡುತ್ತಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಹಣ್ಣು ಬಾಯಿಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ದೇಹದ ಆರೋಗ್ಯವನ್ನು ವೃದ್ಧಿಸಿ, ನಮ್ಮ ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ. ನೈಸರ್ಗಿಕ ಸ್ವರೂಪದ ಮಾವಿನಹಣ್ಣಿನ ಕರಾಮತ್ತು ಹಾಗಿದೆ. ಅದು ಎಲ್ಲರಿಗೂ ಗೊತ್ತು.

ಇನ್ನು ಮಾವಿನ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ, ದೇಹದ ಸೌಂದರ್ಯ ಹೆಚ್ಚಾಗುವುದು ಮಾತ್ರವಲ್ಲದೆ ಇನ್ನು ಅನೇಕ ಆಯಾಮಗಳಲ್ಲಿ ಜನರಿಗೆ ಸಹಾಯಕ್ಕೆ ಬರುತ್ತದೆ. ಈಗ ಮಾವಿನ ಹಣ್ಣಿನ ಸೀಸನ್ ಆಗಿರುವುದರಿಂದ ನೀವು ಮಾವಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅದರಲ್ಲೂ ಬೇಸಿಗೆ ದಿನಗಳಲ್ಲಿ ರಾತ್ರಿ ಹೊತ್ತು ಮಾವಿನ ಹಣ್ಣಿನ ಜ್ಯೂಸ್ ಕುಡಿದರೆ, ಏನೆಲ್ಲಾ ಆರೋಗ್ಯ ಲಾಭಗಳು ಸಿಗುತ್ತದೆ ಎಂಬುದನ್ನು ಇಲ್ಲಿ ತಿಳಿಸಿ ಕೊಡಲಾಗಿದೆ, ಮುಂದೆ ಓದಿ..

ಕಣ್ಣುಗಳಿಗೆ ಒಳ್ಳೆಯದು

Fatiga visual digital | CooperVision Spain

  • ರುಚಿಕರವಾದ ಮಾವಿನ ಹಣ್ಣು ಕಣ್ಣುಗಳ ಆರೋಗ್ಯ ವನ್ನು ಅಭಿವೃದ್ಧಿಪಡಿಸುತ್ತದೆ ಎಂದರೆ ನಂಬುತ್ತೀರಾ?
  • ಇದರಲ್ಲಿ ವಿಟಮಿನ್ ಎ ಇರುವುದರಿಂದ ರಾತ್ರಿ ಕುರು ಡುತನ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಮತ್ತು ಕೆಲವರಿಗೆ ತುಂಬಾ ದಿನಗಳಿಂದ ಇರುವ ಕಣ್ಣುಗಳು ಒಣ ಗುವ ಸಮಸ್ಯೆಯನ್ನು ಸಹ ಇಲ್ಲವಾಗಿಸುತ್ತದೆ. ಕಣ್ಣುಗಳ ಉತ್ತಮ ಆರೋಗ್ಯಕ್ಕೆ ಮಾವಿನ ಹಣ್ಣಿನ ಜ್ಯೂಸ್ ಹೇಳಿ ಮಾಡಿಸಿದಂತಿದೆ!

ಹೃದಯಕ್ಕೆ ಒಳ್ಳೆಯದು

ಹೃದಯಕ್ಕೆ ಒಳ್ಳೆಯದು

  • ಮಾವಿನ ಹಣ್ಣಿನಲ್ಲಿ ಇರುವಂತಹ ಹಲವಾರು ಪೌಷ್ಟಿಕ ಸತ್ವ ಗಳಲ್ಲಿ ಪೊಟ್ಯಾಶಿಯಂ ಕೂಡ ಒಂದು. ಯಾರು ತಮ್ಮ ಆಹಾರ ಪದ್ಧತಿಯಲ್ಲಿ ಪೊಟ್ಯಾಶಿಯಂ ಅಂಶ ವನ್ನು ಒಳಗೊಂಡಿರುತ್ತಾರೆ ಅಂತಹವರಿಗೆ ದೇಹದಲ್ಲಿ ಸೋಡಿಯಂ ಹೆಚ್ಚಾಗುವುದಿಲ್ಲ.
  • ಹಾಗಾಗಿ ಹೃದಯದ ಕಾಯಿಲೆಗಳಿಂದ ದೂರ ಉಳಿಯ ಬಹುದು. ಆರೋಗ್ಯಕರವಾದ ಹೃದಯಕ್ಕೆ ಪೊಟಾ ಸಿಯಂ ಹೊಂದಿರುವ ಮಾವಿನ ಹಣ್ಣು ಜ್ಯೂಸ್ ಬಹಳ ಒಳ್ಳೆಯದು.​

ನಿದ್ರಾಹೀನತೆ ಸಮಸ್ಯೆ ಇರುವುದಿಲ್ಲ

World Sleep Day: 5 ways sleeping more may boost weight loss | HealthShots

  • ಪೊಟ್ಯಾಶಿಯಂ ತನ್ನಲ್ಲಿ ಸೇರೋಟೋನಿನ್ ಎಂಬ ಅಂಶ ಗಳನ್ನು ಹೊಂದಿರುತ್ತದೆ. ಇದರಿಂದ ದೇಹದಲ್ಲಿ ಮೇಲ ಟೋನಿನ್ ಉತ್ಪತ್ತಿ ಹೆಚ್ಚಾಗುತ್ತದೆ.
  • ರಾತ್ರಿಯ ಸಮಯದಲ್ಲಿ ಒಳ್ಳೆಯ ನಿದ್ರೆ ಬರಲು ಇವೆರಡು ಸಹ ಕಾರಣ. ನೀವು ರಾತ್ರಿ ಬಹಳ ಬೇಗನೆ ನಿದ್ರೆ ಮಾಡ ಬೇಕು ಎಂದರೆ ವಿಟಮಿನ್ ಬಿ6 ಒಳಗೊಂಡಿರುವ ಮಾವಿನ ಹಣ್ಣಿನ ಜ್ಯೂಸ್ ನಿತ್ಯ ಸೇವಿಸಿ. ಇದು ಕಣ್ಣು ಗಳಿಗೆ ಬೇಗನೆ ನಿದ್ರೆ ಮಂಪರು ಕವಿಯುವಂತೆ ಮಾಡುತ್ತದೆ.

ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ

ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ

  • ಮಾವಿನ ಹಣ್ಣಿನ ಜ್ಯೂಸ್ ಸೇವಿಸುವುದರಿಂದ ದೇಹಕ್ಕೆ ಉತ್ತಮ ಪ್ರಮಾಣದಲ್ಲಿ ಅಮೈನೋ ಆಮ್ಲಗಳು ಲಭ್ಯವಾಗುತ್ತವೆ.
  • ಇವು ಮೆದುಳಿನ ಜೀವಕೋಶಗಳ ಕಾರ್ಯ ಚಟುವಟಿಕೆ ಯನ್ನು ಹೆಚ್ಚಿಸುತ್ತವೆ ಜೊತೆಗೆ ನೆನಪಿನ ಶಕ್ತಿಯನ್ನು ವೃದ್ಧಿಸುತ್ತವೆ.​

ರಕ್ತದ ಒತ್ತಡ ನಿಯಂತ್ರಣವಾಗುತ್ತದೆ

What Is Considered High Blood Pressure?

  • ಮಾವಿನಹಣ್ಣಿನ ಜ್ಯೂಸು ಸೇವಿಸುವುದರಿಂದ ದೇಹಕ್ಕೆ ಬೀಟಾ ಕ್ಯಾರೋಟಿನ್ ಮತ್ತು ನಾರಿನ ಪ್ರಮಾಣ ಸಿಗುತ್ತದೆ.
  • ಇದು ರಕ್ತದ ಒತ್ತಡವನ್ನು ಸುಲಭವಾಗಿ ನಿಯಂತ್ರಣ ಮಾಡುತ್ತದೆ. ಜೊತೆಗೆ ಮೆಗ್ನೀಷಿಯಂ ಹಾಗೂ ಪೊಟ್ಯಾಶಿ ಯಂ ಹೆಚ್ಚಾಗಿ ಇರುವುದರಿಂದರಕ್ತದ ಒತ್ತಡ ನಿಯಂತ್ರ ಣಕ್ಕೆ ಬರುತ್ತದೆ.
  • ಪ್ರತಿ ದಿನ ಮಾವಿನ ಹಣ್ಣಿನ ಜ್ಯೂಸ್ ಸೇವಿಸುವುದರಿಂದ ಪಲ್ಸ್ ರೇಟ್ ನಿಯಂತ್ರಣಕ್ಕೆ ಬರುತ್ತದೆ.​

have mango juice in night to get these health benefits.