ಹೊಟ್ಟೆಯ ಬೊಜ್ಜು ಕರಗಿಸುವ ಸಹಿ-ಸಿಹಿ ಹಣ್ಣುಗಳು!

20-04-23 08:03 pm       Source: Vijayakarnataka   ಡಾಕ್ಟರ್ಸ್ ನೋಟ್

ಪ್ರತಿದಿನ ವ್ಯಾಯಾಮ, ಕಟ್ಟುನಿಟ್ಟಾದ ಆಹಾರಪದ್ಧತಿ, ಡಯಟ್ ಮಾಡಿದರೂ ಕೂಡ, ಹೊಟ್ಟೆಯ ಸುತ್ತಲಿನ ಬೊಜ್ಜು ಕಡಿಮೆ ಆಗಿಲ್ಲವೆಂದರೆ, ಬೇಸಿಗೆಯಲ್ಲಿ ಸಿಗುವ ಇಂತಹ ರುಚಿಕರವಾದ ಹಣ್ಣು.

ವಯಸ್ಸು 30 ರಿಂದ 35 ಕಳೆಯುತ್ತಿದ್ದಂತೆ, ಹೆಚ್ಚಿನವರಿಗೆ ಹೊಟ್ಟೆ ನಿಧಾನವಾಗಿ ಮುಂದಕ್ಕೆ ಬರಲು ಪ್ರಾರಂಭ ವಾಗುತ್ತದೆ. ಯಾಕೆಂದ್ರೆ ದೇಹದಲ್ಲಿ ಅದಾಗಲೇ ಬೊಜ್ಜು ಶೇಖರಣೆಯಾಗಿ ಬಿಟ್ಟಿರುತ್ತದೆ! ಇದಕ್ಕೆಲ್ಲಾ ಪ್ರಮುಖ ಕಾರಣ, ಇಂದಿನ ಜನರು ಅನುಸರಿಸುತ್ತಿರುವ ಜೀವನಶೈಲಿ, ಆಹಾರ ಪದ್ಧತಿಯಿಂದಾಗಿ ಹೆಚ್ಚಿನವರಿಗೆ ದೇಹದ ತೂಕ ಹೆಚ್ಚಾಗುವುದರ ಜೊತೆಗೆ ಬೊಜ್ಜಿನ ಸಮಸ್ಯೆಯೂ ಕೂಡ ಕಾಣಿಸಿಕೊಳ್ಳಲು ಶುರುವಾಗಿ ಬಿಟ್ಟಿದೆ.

ನಿಮಗೆ ಗೊತ್ತಿರಲಿ, ಹೊಟ್ಟೆಯಲ್ಲಿ ಕಂಡುಬರುವ ಬೊಜ್ಜು ಆರೋಗ್ಯಕ್ಕೆ ತುಂಬಾ ಹಾನಿಕರ! ಒಂದು ವೇಳೆ ಇದನ್ನು ನಾವು ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಮುಂದಿನ ದಿನಗಳಲ್ಲಿ ದೀರ್ಘಕಾಲದ ಕಾಯಿಲೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ ಹೋಗುವುದು, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಾಣಿಸಿಕೊಳ್ಳುವುದು, ಹೀಗೆ ನಾನಾ ರೀತಿಯ ಕಾಯಿಲೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಹೀಗಾಗಿ ಈ ಎಲ್ಲಾ ಸಮಸ್ಯೆಗಳಿಂದ ದೂರವಿ ರಬೇಕಾದರೆ, ಹೊಟ್ಟೆ ಭಾಗದ ಕೊಬ್ಬು ಹಾಗೂ ದೇಹದ ತೂಕ ಇಳಿಸಲು ಸಹಾಯ ಮಾಡುವಂತಹ ಕೆಲವೊಂದು ಕಡಿಮೆ ಕ್ಯಾಲೋರಿ ಅಂಶವಿರುವ ಹಣ್ಣುಗಳ ಬಗ್ಗೆ ಈ ಲೇಖನ ದಲ್ಲಿ ನೀಡಿದ್ದೇವೆ, ಮುಂದೆ ಓದಿ...

ಬಾಳೆಹಣ್ಣು

National Banana Day (April 19th, 2023) | Days Of The Year

  • ಬಡವರ ಹಣ್ಣು ಎಂದು ಕರೆಯಲಾಗುವ ಬಾಳೆಹಣ್ಣು ವರ್ಷ ಪೂರ್ತಿ ಸಿಗುವ ಹಾಗೂ ಕಡಿಮೆ ಬೆಲೆಯಲ್ಲಿ ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ಸಿಗುತ್ತದೆ.
  • ಪ್ರಮುಖವಾಗಿ ಈ ಹಣ್ಣಿನಲ್ಲಿ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಕೂಡ ಕಂಡು ಬರುತ್ತದೆ. ವಿಶೇಷ ವಾಗಿ ಈ ಹಣ್ಣಿನಲ್ಲಿ ಪೊಟ್ಯಾಶಿಯಂ, ಕ್ಯಾಲ್ಸಿಯಂ, ನಾರಿನಾಂಶ, ಆಂಟಿಆಕ್ಸಿಡೆಂಟ್ ಅಂಶ, ಹಲವು ಬಗೆಯ ವಿಟಮಿನ್ಸ್ ಗಳು ಹಾಗೂ ಖನಿಜಾಂಶಳು ಹೇರಳವಾಗಿ ಕಂಡು ಬರುತ್ತದೆ.
  • ಇನ್ನು ದೇಹಕ್ಕೆ ಶಕ್ತಿಯನ್ನು ಒದಗಿಸುವ ಕಾರ್ಬೋ ಹೈಡ್ರೇಟ್ ಅಂಶಗಳು ಕಂಡುಬರುವುದರ ಜೊತೆಗೆ ಕ್ಯಾಲೋರಿ ಅಂಶಗಳು ತುಂಬಾನೇ ಕಡಿಮೆ ಪ್ರಮಾಣ ದಲ್ಲಿ ಸಿಗುತ್ತದೆ. ಹೀಗಾಗಿ ಪ್ರತಿದಿನ ಊಟದ ಬಳಿಕ, ಒಂದೊಂದು ಬಾಳೆಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ, ದೇಹದ ಬೊಜ್ಜು ಇಳಿಸಲು ಸಹಾಯ ವಾಗುತ್ತದೆ. ​

ಅವಕಾಡೊ ಅಥವಾ ಬೆಣ್ಣೆಹಣ್ಣು

Avocado Benefits: 15 Reasons to Eat This Great Fruit

  • ಅವಕಾಡೊ ಅಥವಾ ಬೆಣ್ಣೆಹಣ್ಣು ತನ್ನ ಹೆಸರಿಗೆ ತಕ್ಕಂತೆ ಇದು ಬೆಣ್ಣೆಯಂತೆಯೇ ಇದೆ! ಬೆಲೆಯಲ್ಲಿ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಆರೋಗ್ಯಕ್ಕೆ ತುಂಬಾ ನೇ ಒಳ್ಳೆಯದು.
  • ಪ್ರಮುಖವಾಗಿ ದೇಹದಲ್ಲಿ ಕಂಡು ಬರುವ ಮೊಂಡು ತನದ ಹೊಟ್ಟೆ ಬೊಜ್ಜಿನ ಪ್ರಮಾಣವನ್ನು ಕಡಿಮೆ ಮಾಡಿ ಕೊಳ್ಳಲು ಬಯಸುವವರು ಈ ಹಣ್ಣನ್ನು ತಮ್ಮ ದೈನಂ ದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಬಹಳ ಒಳ್ಳೆಯದು.
  • ಸಂಶೋಧಕರು ಹೇಳುವ ಪ್ರಕಾರ, ದೇಹದ ತೂಕವನ್ನು ಇಳಸಿ, ಬೊಜ್ಜನ್ನು ಕರಗಿಸಿಕೊಳ್ಳಲು ಬಯಸುವವರು, ಪ್ರತಿದಿನ ಒಂದೊಂದು ಅವಕ್ಯಾಡೊ ಹಣ್ಣನ್ನು ಸೇವನೆ ಮಾಡುವ ಅಭ್ಯಾಸ ಮಾಡಿ ಕೊಳ್ಳಬೇಕಂತೆ.
  • ಇದರಿಂದ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ, ದೇಹದ ತೂಕ ಹಾಗೂ ಬೊಜ್ಜಿನ ಅಂಶವನ್ನು ಬಹಳ ಚೆನ್ನಾಗಿ ನಿರ್ವ ಹಣೆ ಮಾಡಿಕೊಳ್ಳಬಹುದು. ​

ಹಲಸಿನ ಹಣ್ಣು

Jackfruit - Health Benefits, Nutrition And Side Effects - Blog - HealthifyMe

  • ಹಲಸಿನ ಹಣ್ಣನ್ನು ನೆನೆಸಿಕೊಂಡಾಗಲೇ ಬಾಯಲ್ಲಿ ನೀರೂ ರುತ್ತದೆ! ಇದಕ್ಕೆ ಪ್ರಮುಖ ಕಾರಣ, ಈ ಹಣ್ಣಿನ ರುಚಿ ಹಾಗೂ ಸುವಾಸನೆ.
  • ಬೇಸಿಗೆಯಲ್ಲಿ ಹೇರಳವಾಗಿ ಕಂಡುಬರುವ ಈ ಹಣ್ಣಿನಲ್ಲಿ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ರೀತಿಯ ಪೌಷ್ಟಿಕ ಸತ್ವ ಗಳು, ಕಂಡುಬರುತ್ತದೆ.
  • ಇನ್ನು ಇತರ ಹಣ್ಣಿನಂತೆ, ಈ ಹಣ್ಣಿನಲ್ಲಿಯೂ ಕೂಡ ಅಷ್ಟೇ, ಹಲವಾರು ರೀತಿಯ ವಿಟಮಿನ್ಸ್‪ಗಳು, ಖನಿಜಾಂಶ ಗಳು, ಕಾರ್ಬೋಹೈಡ್ರೇಟ್ ಅಂಶಗಳು, ಎಲೆಕ್ಟ್ರೋಲೈಟ್ ಅಂಶಗಳು, ನಾರಿನಾಂಶ, ಪೊಟ್ಯಾಶಿಯಂ, ಮೆಗ್ನೀಷಿಯಂ ಮ್ಯಾಂಗನೀಸ್ ಹಾಗೂ ಪ್ರೋಟೀನ್ ಅಂಶಗಳು ಸಮೃದ್ಧ ಪ್ರಮಾಣದಲ್ಲಿ ಕಂಡು ಬರುವುದರ ಜೊತೆಗೆ ಕ್ಯಾಲೋರಿ ಅಂಶಗಳು ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ.
  • ಪ್ರಮುಖವಾಗಿ ಈ ಹಣ್ಣಿನಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿ ಅಂಶಗಳು ಸಿಗುವುದರ ಜೊತೆಗೆ ಕೊಬ್ಬಿ ನಾಂಶ ಮುಕ್ತವಾಗಿ ರುತ್ತದೆ. ಹೀಗಾಗಿ  ದೇಹದ ಬೊಜ್ಜಿನ ಸಮಸ್ಯೆ ಇರುವವರಿಗೆ, ಈ ಹಣ್ಣು ಬಹಳ ಒಳ್ಳೆಯದು.​

ಮಾವಿನಹಣ್ಣು

Can mangoes protect heart and gut health?

  • ಮಾವಿನಹಣ್ಣು ಎಂದರೆ ಹೇಳಬೇಕಾ? ಎಲ್ಲರಿಗೂ ಈ ಹಣ್ಣು ಎಂದ್ರೆ ಪಂಚ ಪ್ರಾಣ! ತನ್ನಲ್ಲಿ ನೈಸರ್ಗಿಕ ಸಿಹಿ ಅಂಶವನ್ನು ಹೊಂದಿರುವ ಈ ಹಣ್ಣಿನಲ್ಲಿ, ಕಡಿಮೆ ಪ್ರಮಾಣದ ಕ್ಯಾಲೋರಿ ಅಂಶಗಳು ಹಾಗೂ ಅಧಿಕ ಪ್ರಮಾಣದಲ್ಲಿ ನಾರಿನಾಂಶ ಕಂಡು ಬರುತ್ತದೆ.
  • ಹೀಗಾಗಿ ದೇಹದ ತೂಕ ಇಳಿಸಿಕೊಳ್ಳಲು ಬಯಸುವವರು, ಮಿತ ವಾಗಿ ಸಣ್ಣ-ತುಂಡು ಮಾವಿನ ಹಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ, ಒಳ್ಳೆಯ ಫಲಿತಾಂಶವನ್ನು ಕಾಣಬಹುದಾಗಿದೆ.

ಕಲ್ಲಂಗಡಿ ಹಣ್ಣು

Is Watermelon A Fruit Or Vegetable? Here's Why - AZ Animals

  • ಬೇಸಿಗೆ ಕಾಲದಲ್ಲಿ ನೀರಿನಾಂಶ ಅಧಿಕವಾಗಿ ಹಣ್ಣುಗಳ ಪಟ್ಟಿಯಲ್ಲಿ ಕಲ್ಲಂಗಡಿ ಹಣ್ಣುಗಳು ಪ್ರಮುಖ ಸ್ಥಾನದಲ್ಲಿ ಬಂದು ನಿಲ್ಲುತ್ತದೆ.
  • ತನ್ನಲ್ಲಿ ಶೇ.92ರಷ್ಟು ನೀರಿನಾಂಶ ಹೊಂದಿರುವ, ಈ ಹಣ್ಣು ದೇಹವನ್ನು ಹೈಡ್ರೇಟ್ ಆಗಿಡುವುದು ಮಾತ್ರ ವಲ್ಲದೆ, ಹಲವಾರು ಕಾಯಿಲೆಗಳಿಂದ ನಮ್ಮನ್ನು ದೂರ ವಿರಿಸುತ್ತದೆ.
  • ಪ್ರಮುಖವಾಗಿ 100 ಗ್ರಾಂ ಕಲ್ಲಂಗಡಿ ಹಣ್ಣಿನಲ್ಲಿ ಕೇವಲ 30 ಕ್ಯಾಲೋರಿ ಅಂಶಗಳು ಮಾತ್ರ ಕಂಡು ಬರುತ್ತದೆ ಯಂತೆ! ಇದು ನಮ್ಮ ದೇಹವನ್ನು ಹೈಡ್ರೇಟ್ ಆಗಿಡು ವುದು ಮಾತ್ರವಲ್ಲದೆ, ಹಸಿವನ್ನು ಕೂಡ ಕಡಿಮೆ ಮಾಡು ವುದು.
  • ಇನ್ನು ಈ ಹಣ್ಣಿನ ಬಗ್ಗೆ ಆರೋಗ್ಯ ತಜ್ಞರು, ಹೇಳುವ ಪ್ರಕಾರ, ಈ ಹಣ್ಣಿನಲ್ಲಿ ನೈಸರ್ಗಿಕ ಸಂಯುಕ್ತ ಅಂಶವಾಗಿ ರುವ ಅರ್ಜಿನೈನ್ ಎನ್ನುವ ಅಮಿನೋ ಆಮ್ಲ ಕಂಡು ಬರುವುದರಿಂದ, ಇದು ಹೊಟ್ಟೆಯ ಭಾಗದಲ್ಲಿನ ಕೊಬ್ಬ ನ್ನು ಶೇ.60ರಷ್ಟು ಕಡಿಮೆ ಮಾಡುವುದು ಮಾತ್ರವಲ್ಲದೆ, ತೂಕ ಇಳಿಸಲು ಕೂಡ ಸಹಾಯ ಮಾಡುವುದು.

this natural summer season fruits that help you to burn your belly fat.