ದೊಡ್ಡ-ದೊಡ್ಡ ಕಾಯಿಲೆಗಳಿಂದ ನಮ್ಮನ್ನು ಕಾಪಾಡುತ್ತೆ ಈ ನೇರಳೆ ಬದನೆಕಾಯಿ!

24-04-23 07:46 pm       Source: Vijayakarnataka   ಡಾಕ್ಟರ್ಸ್ ನೋಟ್

ದಪ್ಪ ನೇರಳೆ ಬದನೆಕಾಯಿ, ಬೆಲೆಯಲ್ಲಿ ದುಬಾರಿಯಾದರೂ ಕೂಡ, ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಕ್ಯಾನ್ಸರ್‌ನಂತಹ ಭಯಾನಕ ಕಾಯಿಲೆಯಿಂದ ನಮ್ಮನ್ನು ದೂರವಿರಿಸುತ್ತದೆ.

ಮನೆಯಲ್ಲಿ ಬದನೆಕಾಯಿ ಸಾಂಬರ್ ಮಾಡಿದ್ರೆ ಹೆಚ್ಚಿನವರು ಮುಖ ಊದಿಸಿಕೊಂಡು ಬಿಡುತ್ತಾರೆ! ಯಾಕೆಂದರೆ ಹೆಚ್ಚಿನವರಿಗೆ ಈ ತರಕಾರಿ ಎಂದರೆ ಅಷ್ಟಕಷ್ಟೆ! ಕೆಲವರು ಈ ತರಕಾರಿಯಿಂದ ಹಲ್ಲು ಕಪ್ಪಾಗುತ್ತವೆ ಎನ್ನುವ ಕಾರಣಕೊಟ್ಟರೆ, ಇನ್ನೂ ಕೆಲವರು, ಬದನೆಕಾಯಿ ಸೇವನೆಯಿಂದ ಮೈಯೆಲ್ಲಾ ತುರಿಕೆ ಶುರುವಾಗುತ್ತದೆ ಎಂದು ಜಾರಿಕೊಳ್ಳುತ್ತಾರೆ. ಆದರೆ ಬದನೆಕಾಯಿ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಈ ತರಕಾರಿಯ ಬಗ್ಗೆ ಪೌಷ್ಟಿಕಾಂಶ ತಜ್ಞರಾದ ಲವ್ನೀತ್ ಬಾತ್ರಾ ಅವರು ಹೇಳುವ ಪ್ರಕಾರ, ಬದನೆ ಕಾಯಿಯಲ್ಲಿ ಮನುಷ್ಯನ ಆರೋಗ್ಯಕ್ಕೆ ಸಹ ಕಾರಿಯಾಗುವಂತಹ ಹಲವಾರು ಬಗೆಯ ವಿಟಮಿನ್ಸ್‌ ಗಳು, ಖನಿಜಾಂಶಗಳು, ನಾರಿನಾಂಶಗಳು, ಪೊಟ್ಯಾಶಿಯಂ ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಕಂಡುಬರುತ್ತದೆ.

ಹೀಗಾಗಿ ವಾರಕ್ಕೊಮ್ಮೆಯಾದರೂ ಬದನೆಯನ್ನು ಆಹಾರದ ಮೂಲಕ ಸೇವಿಸುತ್ತಾ ಬರುವುದರಿಂದ, ಉತ್ತಮ ಆರೋಗ್ಯ ಲಾಭಗಳನ್ನು ತಮ್ಮ ದಾಗಿಸಿಕೊಳ್ಳಬಹುದು. ಅದರಲ್ಲೂ ನೇರಳೆ ಬದನೆಕಾಯಿ ಸೇವನೆಯಿಂದ ಮನುಷ್ಯನ ಅನೇಕ ಕಾಯಿಲೆಗಳು ದೂರ ಆಗುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಬದನೆಕಾಯಿ ಸೇವನೆಯಿಂದ, ಏನೆಲ್ಲಾ ಆರೋಗ್ಯ ಕಾರಿ ಪ್ರಯೋಜನಗಳನ್ನು ಪಡೆಯಬಹುದು ಎನ್ನುವುದನ್ನು ನೋಡೋಣ...

ಕ್ಯಾನ್ಸರ್ ಸಮಸ್ಯೆ ನಿಯಂತ್ರಣವಾಗುತ್ತದೆ

ಕ್ಯಾನ್ಸರ್ ಸಮಸ್ಯೆ ನಿಯಂತ್ರಣವಾಗುತ್ತದೆ

  • ಹೌದು ಬದನೆಕಾಯಿಯಲ್ಲಿರುವ ಕರಗುವ ನಾರಿನಾಂಶ ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳು ಕ್ಯಾನ್ಸರ್‌ನಂತಹ ಭಯಾನಕ ಕಾಯಿಲೆಯಿಂದ ದೂರವಿಡಲು ನೆರವಾ ಗುತ್ತವೆ.
  • ಅದರಲ್ಲೂ ಪ್ರಮುಖವಾಗಿ ಕರಗುವ ನಾರಿನಾಂಶ ಜೀರ್ಣಾಂಗಗಳಲ್ಲಿ, ದೇಹದಲ್ಲಿರುವ ವಿಷಕಾರಿ ಅಂಶ ಗಳನ್ನು ಪರಿಪೂರ್ಣ ವಾಗಿ ದೇಹದಿಂದ ಹೊರಹೋಗ ಲು ನೆರವಾಗುವ ಮೂಲಕ, ಜೀರ್ಣಾಂಗಗಳನ್ನು ಸ್ವಚ್ಛ ವಾಗಿರಿಸಲು ನೆರವಾಗುತ್ತದೆ. ಇದರಿಂದ ಕರುಳಿನ ಕ್ಯಾನ್ಸ ರ್‌ನ ಸಾಧ್ಯತೆಯನ್ನು ತಪ್ಪಿಸುತ್ತದೆ
  • ಇನ್ನು ಈ ತರಕಾರಿಯಲ್ಲಿ ಪಾಲಿಫಿನಾಲ್ ಅನ್ನುವ ನೈಸ ರ್ಗಿಕ ಅಂಶ ಹೇರಳವಾಗಿ ಕಂಡು ಬರುತ್ತದೆ. ಇವು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಪಡೆದಿದೆ ಎಂದು ಹೇಳುತ್ತಾರೆ.
  • ಇವೆಲ್ಲದರ ಜೊತೆಗೆ ಆಂಟಿ ಆಕ್ಸಿ ಡೆಂಟ್ ಅಂಶಗಳು, ಕೂಡ ಯಥೇಚ್ಛವಾಗಿ ಈ ತರಕಾರಿಯಲ್ಲಿ ಸಿಗುವು ದರಿಂದ, ಇವು ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡಿ, ಕ್ಯಾನ್ಸರ್ ಕಾಯಿಲೆಯ ಜೀವ ಕೋಶಗಳನ್ನು ದೇಹದಿಂದ ನಿವಾರಣೆ ಮಾಡುತ್ತದೆ.

ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಿಸುತ್ತದೆ

ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಿಸುತ್ತದೆ

  • ಜನರ ಉತ್ತಮ ಆರೋಗ್ಯ ನಿರ್ವಹಣೆಯಲ್ಲಿ, ನೈಸರ್ಗಿಕ ವಾಗಿ ಸಿಗುವ ಹಲವಾರು ಬಗೆಯ ತರಕಾರಿಗಳು ಮಹತ್ತರ ಪಾತ್ರವಹಿಸುತ್ತವೆ. ಇದಕ್ಕೆ ಒಂದು ಒಳ್ಳೆಯ ಉದಾಹ ರಣೆಗೆ ಎಂದರೆ, ನೇರಳೆ ಬದನೆಕಾಯಿ.
  • ಇದಕ್ಕೆ ಪ್ರಮುಖ ಕಾರಣ, ಈ ತರಕಾರಿಯಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ಹಾಗೂ ಹಲವಾರು ಬಗೆಯ ವಿಟಮಿನ್ಸ್‌ಗಳು, ಸಂಧಿವಾತ, ಗ್ಯಾಸ್ಟ್ರಿಕ್, ಬೇಸಿಗೆಯಲ್ಲಿ ಕಂಡು ಬರುವ ಚರ್ಮದ ಸೋಂಕುಗಳು, ಹೀಗೆ ಅನೇಕ ಬಗೆಯ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರ ಮಾಡಲು ನೆರವಾಗುತ್ತದೆ ಎಂದು ಆಹಾರ ತಜ್ಞ ರಾದ ಲವ್ನೀತ್ ಬತ್ರಾ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು

Air Pollution and Cardiovascular Disease Basics | US EPA

  • ಹೃದಯದ ಆರೋಗ್ಯವನ್ನು ಕಾಪಾಡುವ ಹಲವಾರು ತರಕಾರಿಗಳಲ್ಲಿ ನೇರಳೆ ಬದನೆಕಾಯಿ ಕೂಡ ಒಂದು.
  • ಇದಕ್ಕೆ ಪ್ರಮುಖ ಕಾರಣ, ಈಗಾಗಲೇ ಹೇಳಿದ ಹಾಗೆ, ಈ ತರಕಾರಿಯಲ್ಲಿ ಕಂಡು ಬರುವ ಕರಗುವ ನಾರಿನಾಂಶ, ಪೊಟ್ಯಾಶಿಯಂ, ವಿಟಮಿನ್ ಬಿ 6, ಪೈಟೋನ್ಯೂಟ್ರಿ ಯೆಂಟ್‌ ಗಳಾದ ಫ್ಲೇವನಾಯ್ಡುಗಳು ಈ ತರಕಾರಿಯಲ್ಲಿ ಯಥೇಚ್ಚವಾಗಿ ಕಂಡು ಬರುವುದರಿಂದ, ದೇಹದಲ್ಲಿ ರಕ್ತ ಸಂಚಾರ ಅಚ್ಚು ಕಟ್ಟಾಗಿ ಕೆಲಸ ನಿರ್ವಹಿಸಲು, ಪರೋ ಕ್ಷವಾಗಿ ನೆರವಾಗುತ್ತದೆ.
  • ಇದರಿಂದ ಹೃದಯದ ಆರೋಗ್ಯ ಕೂಡ ಚೆನ್ನಾಗಿ ರುತ್ತದೆ. ಹೀಗಾಗಿ ಹೃದಯದ ಆರೋಗ್ಯಕ್ಕೆ, ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ದಪ್ಪ ನೇರಳೆ ಬದ ನೆಕಾಯಿಯನ್ನು ಸೇರಿಸಿಕೊಳ್ಳಲು ಮರೆಯದಿರಿ.

ಸಕ್ಕರೆಕಾಯಿಲೆ ಇರುವವರಿಗೆ ಒಳ್ಳೆಯದು

How Baking Soda Affects People with Type 2 Diabetes

  • ಆರೋಗ್ಯ ತಜ್ಞರು ಹೇಳುವ, ಪ್ರಕಾರ ಬದನೆಕಾಯಿಗಳಲ್ಲಿ ಕಾರ್ಬೋ ಹೈಡ್ರೇಟ್ ಅಂಶಗಳು, ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ. ಹೀಗಾಗಿ ಮಧುಮೇಹ ಕಾಯಿಲೆ ಯಿಂದ ಬಳಲುತ್ತಿರು ವವರು, ಈ ತರಕಾರಿಯನ್ನು ಮಿತ ಪ್ರಮಾಣದಲ್ಲಿ ಸೇವಿಸ ಬಹುದು.
  • ಇದರ ಜೊತೆಗೆ ಕರಗುವ ನಾರಿನಾಂಶ ಕೂಡ ನೇರಳೆ ಬದನೆಕಾಯಿಯಲ್ಲಿ ಹೇರಳವಾಗಿ ಸಿಗುವುದರಿಂದ, ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆಯಾಗದಂತೆ ತಡೆದು, ಮಧುಮೇಹ ಕಾಯಿಲೆ ಮಿತಿಮೀರಿ ಹೋಗದಂತೆ ತಡೆ ಯುತ್ತದೆ.

ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ

ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ

  • ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಸೇರಿಕೊಂಡರೆ, ಮುಂದಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವೈದ್ಯರು ಕೂಡ ಎಚ್ಚರಿಕೆಯನ್ನು ನೀಡುತ್ತಾರೆ.
  • ಹೀಗಾಗಿ ನಮ್ಮ ಆಹಾರ ಪದ್ಧತಿಯಲ್ಲಿ, ಆರೋಗ್ಯಕಾರಿ ಆಹಾರ ಪದ್ಧತಿಯನ್ನುಅನುಸರಿಸುವುದರ ಜೊತೆಗೆ, ವಾರದಲ್ಲಿ ಒಂದೆರಡು ಬಾರಿಯಾದರೂ, ಬದನೆಕಾಯಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.
  • ಇದಕ್ಕೆ ಪ್ರಮುಖ ಕಾರಣ, ಬದನೆಯಲ್ಲಿ ಕಂಡು ಬರುವ ಕ್ಲೋರೋಜೆನಿಕ್ ಎಂಬ ನೈಸರ್ಗಿಕ ಪೋಷಕಾಂಶ ಹೇರಳವಾಗಿ ಕಂಡು ಬರುತ್ತದೆ. ಇದು ಪ್ರಬಲ ಆಂಟಿ ಆಕ್ಸಿಡೆಂಟ್ ಆಗಿದ್ದು, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳನ್ನು ತಗ್ಗಿಸಲು ನೆರವಾಗುತ್ತದೆ.

surprising health benefits of purple eggplants that you must know.