ಈ ಮೂರು ಖತರ್ನಾಕ್‌ ಕಾಯಿಲೆಯನ್ನು ದೂರ ಮಾಡುತ್ತೆ, ಈ ಪುಟ್ಟ ಅಗಸೆ ಬೀಜಗಳು!

25-04-23 08:13 pm       Source: Vijayakarnataka   ಡಾಕ್ಟರ್ಸ್ ನೋಟ್

ದಿನಕ್ಕೆ ಕೇವಲ ಒಂದು ಚಮಚ ಅಗಸೆ ಬೀಜ ಸೇವನೆ ಮಾಡಿದರೆ, ಅದರಿಂದ ಹೃದಯದ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ, ಮಧುಮೇಹ ಕಾಯಿಲೆಯನ್ನು.

ಅಗಸೆ ಬೀಜಗಳನ್ನು ಪ್ರಾಚೀನ ಕಾಲದಿಂದಲೂ ಕೂಡ ಆಯುರ್ವೇದ ಔಷಧಿಗಳ ರೂಪದಲ್ಲಿ ಬಳಸುತ್ತಾ ಬರಲಾಗುತ್ತಿದೆ. ತನ್ನಲ್ಲಿ ಅಧಿಕ ಪ್ರಮಾಣ ದಲ್ಲಿ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಈ ಅಗಸೆ ಬೀಜಗಳು ನೋಡಲು ಪುಟ್ಟದಾಗಿದ್ದರೂ ಕೂಡ, ನಮ್ಮ ಆರೋಗ್ಯಕ್ಕೆ ಊಹೆಗೂ ನಿಲುಕ ದಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ.

ಈ ಪುಟ್ಟ ಬೀಜಗಳಲ್ಲಿ ಒಮೆಗಾ 3, ಫ್ಯಾಟಿ ಆಮ್ಲಗಳು, ಪ್ರೋಟೀನ್, ಕರಗುವ ನಾರಿನಾಂಶ ಹೀಗೆ ನಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗುವ ಪೌಷ್ಟಿಕ ಸತ್ವಗಳು ಈ ಪುಟ್ಟ ಬೀಜಗಳಲ್ಲಿ ಕಂಡು ಬರುತ್ತದೆ. ಬನ್ನಿ ಇಂದಿನ ಲೇಖನದಲ್ಲಿ, ಈ ಪುಟ್ಟ ಅಗಸೆ ಬೀಜಗಳ ಸಹಾಯದಿಂದ, ದೀರ್ಘಕಾಲದ ವರೆಗೆ ಕಾಡುವ ಕಾಯಿಲೆಗಳಾದ ಮಧುಮೇಹ, ರಕ್ತದೊತ್ತಡ ಹಾಗೂ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಹೇಗೆಲ್ಲಾ ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಮುಂದೆ ಓದಿ...

ಸಕ್ಕರೆ ಕಾಯಿಲೆಗೆ ರಾಮಬಾಣ

Diabetes: Causes, Symptoms, Risk Factors and Treatment

  • ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವುದು, ಗುಣಮುಖ ವಾಗದ ಕಾಯಿಲೆ. ಈ ಕಾಯಿಲೆ ಕಾಣಿಸಿ ಕೊಂಡ ಬಳಿಕ, ಕಟ್ಟು ನಿಟ್ಟಿನ ಆಹಾರ ಪಥ್ಯ, ಆರೋಗ್ಯ ಕಾರಿ ಜೀವನಶೈಲಿ ಹಾಗೂ ವೈದ್ಯರು ನೀಡುವ ಔಷಧಿಗಳ ನ್ನು ಸರಿಯಾಗಿ ತೆಗೆದುಕೊಂಡರೆ ಮಾತ್ರ, ಈ ಕಾಯಿಲೆ ಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
  • ಪ್ರಮುಖವಾಗಿ ಈ ಸಂದರ್ಭದಲ್ಲಿ ಮಧುಮೇಹ ಇರುವ ವರು, ತಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರುಪೇರು ಆಗ ದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವ ಆಹಾರಗಳನ್ನು ಸೇವನೆ ಮಾಡಬೇಕು. ಇದಕ್ಕೊಂದು ಒಳ್ಳೆಯ ಉದಾ ಹರಣೆ ಎಂದರೆ ಅಗಸೆ ಬೀಜಗಳು.
  • ಹೌದು ಈ ಪುಟ್ಟ ಬೀಜಗಳಲ್ಲಿ ಅಗಾಧ ಪ್ರಮಾಣದಲ್ಲಿ ನಾರಿನಾಂಶ ಕಂಡು ಬರುವುದರಿಂದ, ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆಯಾಗದಂತೆ ತಡೆದು, ಮಧುಮೇಹ ವನ್ನು ಹತೋಟಿಗೆ ತರುವಲ್ಲಿ ಸಹಾಯ ಮಾಡುತ್ತದೆ. ಸ್ವಲ್ಪ ಅಗಸೆ ಬೀಜಗಳನ್ನು ಹುರಿದು, ಸಂಜೆಯ ಸಮಯ ದಲ್ಲಿ ಸ್ನ್ಯಾಕ್ಸ್ ತರಹ ಇದನ್ನು ಸೇವಿಸಬಹುದು.

ಹೃದಯಕ್ಕೆ ಒಳ್ಳೆಯದು

ಹೃದಯಕ್ಕೆ ಒಳ್ಳೆಯದು

  • ಮೊದಲೇ ಹೇಳಿದ ಹಾಗೆ, ಈ ಪುಟ್ಟ ಅಗಸೆ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧ ಪ್ರಮಾಣದಲ್ಲಿ ಕಂಡು ಬರುವುದರಿಂದ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳ ಲು ಸಹಾಯ ಮಾಡುತ್ತವೆ.
  • ಪ್ರಮುಖವಾಗಿ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ವನ್ನು ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಅಂಶ ವನ್ನು ಹೆಚ್ಚು ಮಾಡುತ್ತದೆ.
  • ಇದರಿಂದ ಹೃದಯಕ್ಕೆ ರಕ್ತ ಸಂಚಾರ ಸರಿಯಾಗಿ ನಡೆ ಯುವುದರಿಂದ, ರಕ್ತದೊತ್ತಡದ ಸಮಸ್ಯೆಗಳು, ನಿಯಂತ್ರ ಣಕ್ಕೆ ಬರುವುದರ ಜೊತೆಗೆ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ನಿಧಾನಕ್ಕೆ ದೂರವಾಗುತ್ತವೆ.

ಕ್ಯಾನ್ಸರ್ ಕಾಯಿಲೆಯನ್ನು ದೂರ ಮಾಡುತ್ತದೆ

ಕ್ಯಾನ್ಸರ್ ಕಾಯಿಲೆಯನ್ನು ದೂರ ಮಾಡುತ್ತದೆ

  • ಈಗಾಗಲೇ ಹೇಳಿದ ಹಾಗೆ, ಈ ಪುಟ್ಟ ಅಗಸೆ ಬೀಜಗಳಲ್ಲಿ ಶಕ್ತಿಯು ತವಾದ ಆಂಟಿಆಕ್ಸಿಡೆಂಟ್ ಅಂಶಗಳು ಹೇರಳ ವಾಗಿ ಕಂಡು ಬರುವುದರಿಂದ, ದೇಹದಲ್ಲಿ ಈಸ್ಟ್ರೋಜನ್ ಗುಣಲಕ್ಷಣಗಳನ್ನು ಹೆಚ್ಚು ಮಾಡಿ, ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುವ ಜೀವಕೋ ಶಗಳನ್ನು ನಿವಾರಣೆ ಮಾಡು ತ್ತದೆ.
  • ವಿಶೇಷವಾಗಿ ಸ್ತನ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡಲು ಈ ಅಗಸೆ ಬೀಜಗಳು ಸಹಾಯ ಮಾಡುತ್ತವೆ ಎಂದು ಅಧ್ಯಯನಗಳು ಕಂಡುಕೊಂಡಿವೆ.​

ಹಲವಾರು ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ!

Does Flaxseed Go Bad? Tips For Storing & Using This Valuable Super Food -  Clean Green Simple

  • ಅಗಸೆ ಬೀಜಗಳಲ್ಲಿ ವಿಟಮಿನ್ ಸಿ ಪ್ರಮಾಣ ಯಥೇಚ್ಚ ವಾಗಿ ಕಂಡು ಬರುತ್ತದೆ. ಇದು ಮನುಷ್ಯನಲ್ಲಿ ಕಂಡು ಬರುವ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಂದ ಹಿಡಿದು, ದೀರ್ಘಕಾಲದ ಕಾಯಿಲೆಗಳಿಂದ ರಕ್ಷಣೆ ಮಾಡಿ, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚು ಮಾಡುತ್ತದೆ.
  • ಇನ್ನು ಪ್ರಮುಖವಾಗಿ ಈ ಬೀಜದಲ್ಲಿ ಉನ್ನತ ಮಟ್ಟದ ಒಮೆಗಾ -3 ಕೊಬ್ಬಿನಾಮ್ಲ, ಕರಗುವ ನಾರಿನಾಂಶ, ಶಕ್ತಿಯುತವಾದ ಆಂಟಿಆಕ್ಸಿಡೆಂಟ್ ಅಂಶ, ಪ್ರೋಟೀನ್, ಮ್ಯಾಂಗನೀಸ್, ಕ್ಯಾಲ್ಸಿಯಂ, ಇತ್ಯಾದಿ ಕೆಲವೊಂದು ಪೋಷಕಾಂಶಗಳು ಹಾಗೂ ಖನಿಜಾಂಶಗಳು ಕೂಡ ಅಗಾಧ ಪ್ರಮಾಣದಲ್ಲಿ ಸಿಗುವುದರಿಂದ, ಮನುಷ್ಯನ ಆರೋಗ್ಯ ವೃದ್ಧಿಸುವಲ್ಲಿ ಪರೋಕ್ಷವಾಗಿ ನೆರವಿಗೆ ಬರುತ್ತದೆ.​

ಅಗಸೆ ಬೀಜಗಳ ಸೇವನೆ ಹೇಗೆ?

Bad Side Effects of Flaxseed | livestrong

  • ನೀರಿನಲ್ಲಿ ನೆನೆಹಾಕಿ ಸಹ ತಿನ್ನಬಹುದು. ಇದನ್ನು ಕುಟ್ಟಿ ಪುಡಿ ಮಾಡಿಕೊಂಡು, ನೀರಿನಲ್ಲಿ ಬೆರೆಸಿ ಕುಡಿಯ ಬಹುದು ಅಥವಾ ಎಣ್ಣೆಯ ರೂಪದಲ್ಲಿ ಸೇವಿಸಿದರೆ ಹೆಚ್ಚು ಲಾಭ ಪಡೆಯಬಹುದು.
  • ಆದರೆ ಇದನ್ನು ಮಿತವಾಗಿ ಸೇವಿಸಿದರೆ ಒಳ್ಳೆಯದು. ಇಲ್ಲಾಂದ್ರೆ ಸ್ವಲ್ಪ ಅಗಸೆ ಬೀಜಗಳನ್ನು ಹುರಿದು, ಸ್ನ್ಯಾಕ್ಸ್ ರೀತಿಯೂ ಕೂಡ ಸೇವನೆ ಮಾಡಬಹುದು.
  • ಆಯುರ್ವೇದ ಅಂಗಡಿಯಲ್ಲಿ ಈ ಬೀಜಗಳು ವಿವಿಧ ರೂಪದಲ್ಲಿ ಲಭ್ಯವಿದೆ, ಇದನ್ನು ಯಾವ ರೀತಿಯಿಂ ದಲೂ ಬಳಕೆ ಮಾಡಬಹುದು.
  • ಉದಾಹರಣೆಗೆ ಎಣ್ಣೆ, ಹುಡಿ, ಕ್ಯಾಪ್ಸೂಲ್ ಮತ್ತು ಹಿಟ್ಟಿನ ರೂಪದಲ್ಲಿ ಇದು ಸಿಗುವುದರಿಂದ, ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಒಳ್ಳೆಯದು.

know how this fibre-rich flaxseeds help you to manage diabetes and other long term diseases prevention.