ಹೆಲ್ತ್ ಟಿಪ್ಸ್: ದಿನಾ ಮೂರು-ನಾಲ್ಕು ಖರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನಿ!

28-04-23 07:43 pm       Source: Vijayakarnataka   ಡಾಕ್ಟರ್ಸ್ ನೋಟ್

ಖರ್ಜೂರ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಆದರೆ ಈ ಸೂಪರ್ ಫುಡ್ ಅನ್ನು ಹಾಗೆ ತಿನ್ನುವ ಹಾಗೆ ತಿನ್ನುವ ಬದಲು ನೀರಿನಲ್ಲಿ ನೆನೆಸಿಟ್ಟು ತಿಂದ್ರೆ, ತುಂಬಾನೇ ಲಾಭಕಾರಿ.

ನಮ್ಮ ಆಹಾರ ಪದ್ಧತಿಯಲ್ಲಿ ಕೇವಲ, ಪೌಷ್ಟಿಕಾಂಶ ಒಳಗೊಂಡಿರುವ ಹಣ್ಣು-ಹಂಪಲು, ಹಸಿರೆಲೆ ಸೊಪ್ಪು ತರಕಾರಿಗಳು ಇದ್ದರೆ ಮಾತ್ರ ಸಾಲದು, ಆಗಾಗ ಡ್ರೈ ಫ್ರೂಟ್ಸ್‌ಗಳ ಜೊತೆಗೆ ಪ್ರತಿ ದಿನ ಒಂದೆರಡು ಹಸಿ ಖರ್ಜೂರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಯಾಕೆಂದ್ರೆ ದೇಹಕ್ಕೆ ಬೇಕಾಗುವ, ವಿವಿಧ ಬಗೆಯ ಪೌಷ್ಠಿಕ ಸತ್ವಗಳು ಇವುಗಳಲ್ಲಿ ಸಿಗುವುದರಿಂದ, ಹಲವಾರು ಅರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಅದರಲ್ಲೂ ಮುಖ್ಯವಾಗಿ ಖರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು ಇಲ್ಲಾಂದ್ರೆ ಹಾಲಿನಲ್ಲಿ ನೆನೆಸಿಟ್ಟು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಆರೋಗ್ಯಕ್ಕೆ ಭರಪೂರ ಪ್ರಯೋಜನಗಳನ್ನು ಪಡೆಯ ಬಹುದು...

ಖರ್ಜೂರಗಳನ್ನು ನೀರಿನಲ್ಲಿ ನೆನೆಸಿಟ್ಟು ತಿಂದ್ರೆ ಸಿಗುವ ಪ್ರಯೋಜನಗಳು

10 Health Benefits of Dates (According to a Registered Dietitian)

  • ಖರ್ಜೂರ ತನ್ನಲ್ಲಿ ನೈಸರ್ಗಿಕ ಸಿಹಿ ಅಂಶಗಳನ್ನು ಹೊಂದಿರು ವುದರ ಜೊತೆಗೆ, ತನ್ನಲ್ಲಿ ಯಥೇಚ್ಛವಾಗಿ ಕ್ಯಾಲೋರಿ, ನಾರಿ ನಾಂಶ, ಕಬ್ಬಿ ಣಾಂಶ, ಪ್ರೋಟೀನ್, ವಿವಿಧ ಬಗೆಯ ವಿಟಮಿ ನ್ಸ್‌ಗಳು, ಖನಿಜಾಂಶಗಳು ಹೇರಳವಾಗಿರುವುದರಿಂದ, ಜೀರ್ಣ ಕ್ರಿಯೆ ಪ್ರಕ್ರಿಯೆಯನ್ನು ಅಚ್ಚು ಕಟ್ಟಾಗಿ ನಿರ್ವಹಿಸುತ್ತದೆ,
  • ರಕ್ತಹೀನತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ, ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ವನ್ನು ಹೆಚ್ಚಿಸುತ್ತದೆ ಹಾಗೂ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ, ಹೀಗೆ ಹಲ ವಾರು ರೀತಿಯಲ್ಲಿ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ನೆರವಾಗುತ್ತದೆ.​

ನೆನೆಸಿಟ್ಟ ಖರ್ಜೂರ ಸೇವನೆ ಮಾಡುವ ಸರಿಯಾದ ವಿಧಾನ

Dates help in increasing the sperm count benefits of eating soaked dates  with khazoor

  • ರಾತ್ರಿ ಮಲಗುವ ಮುನ್ನ, ಐದಾರು ಖರ್ಜೂರಗಳನ್ನು ಒಂದು ಸಣ್ಣ ನೀರಿನ ಪಾತ್ರೆಯಲ್ಲಿ ನೆನೆಯಲು ಹಾಕಿ
  • ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ, ಸೇವನೆ ಮಾಡಿ
  • ಇಲ್ಲಾಂದ್ರೆ ಸಂಜೆಯ ಸಮಯದಲ್ಲಿ ಸ್ನ್ಯಾಕ್ಸ್‌ ರೀತಿಯಲ್ಲಿ, ಕೂಡ ಒಂದೆರಡು ನೆನೆಸಿಟ್ಟ ಖರ್ಜೂರ ಗಳನ್ನು ಸೇವನೆ ಮಾಡ ಬಹುದು.
  • ಇನ್ನು ಪದೇ ಪದೇ ಸಿಹಿ-ತಿಂಡಿ ತಿನ್ನಬೇಕು ಎನಿಸಿದರೆ, ನೆಸಿದ ಖರ್ಜೂರವನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ
  • ಒಂದು ಬಾರಿಗೆ ಎರಡರಿಂದ-ಮೂರು ಖರ್ಜೂರವನ್ನು ತಿನ್ನ ಬಹುದು! ಹೀಗೆ ದಿನಕ್ಕೆ ಎರಡು ಮೂರು ಬಾರಿ ಸೇವನೆ ಮಾಡುವ ಅಭ್ಯಾಸ ಮಾಡಿ ಕೊಳ್ಳಿ. ದೇಹದ ತೂಕ ಹೆಚ್ಚಿಸಿಕೊಳ್ಳುವವರಿಗೆ ಇದೊಂದು ಸೂಪರ್ ಫುಡ್ ಎನ್ನುವುದರಲ್ಲಿ ಎರಡು ಮಾತಿಲ್ಲ!

ಮೂಳೆಗೆ ಸಂಬಂಧಪಟ್ಟ ಸಮಸ್ಯೆ ಇರುವವರಿಗೆ

ಮೂಳೆಗೆ ಸಂಬಂಧಪಟ್ಟ ಸಮಸ್ಯೆ ಇರುವವರಿಗೆ

  • ನೈಸರ್ಗಿಕ ಸಿಹಿ ಅಂಶಗಳನ್ನು ಹೊಂದಿರುವ ಖರ್ಜೂರದಲ್ಲಿ ಗ್ಲೂಕೋಸ್, ಫ್ರಕ್ಟೋಸ್ ಹಾಗೂ ಸುಕ್ರೋಸ್‌ನಂತಹ ನೈಸರ್ಗಿಕ ಸಕ್ಕರೆ ಅಂಶಗಳು ಹೇರಳವಾಗಿ ಕಂಡು ಬರುವುದರಿಂದ, ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವುದು.
  • ಇನ್ನು ಇಂದಿನ ದಿನಗಳಲ್ಲಿ ಮೂಳೆಗೆ ಸಂಬಂಧಪಟ್ಟ ಸಮಸ್ಯೆ ಗಳಾದ, ಸಂಧಿ ನೋವು, ಕೀಲು ನೋವಿ ನಂತಹ ಸಮಸ್ಯೆಗಳು ಸಣ್ಣ ವಯಸ್ಸಿ ನಲ್ಲಿಯೇ ಹೆಚ್ಚಿನವರಿಗೆ ಕಂಡು ಬರುತ್ತಿದೆ.
  • ಮೂಳೆಯಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆ ಇರುವುದೇ ಈ ಸಮಸ್ಯೆಗೆ ಕಾರಣ. ಹೀಗಾಗಿ ಈ ಸಮಸ್ಯೆ ಇರುವವರು ಖರ್ಜೂರ ವನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಯಾಕೆಂದ್ರೆ ಇದರಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿ ಸಿಗುವು ದರಿಂದ ಮೂಳೆಗಳ ಆರೋಗ್ಯವನ್ನು ವೃದ್ಧಿಸುವುದು​

ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು

ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು

ತಿದಿನ ನೀರಿನಲ್ಲಿ ಮೂರು-ನಾಲ್ಕು ನೆನೆಸಿಟ್ಟ ಖರ್ಜೂರವನ್ನು ಸೇವಿಸುವ ಅಭ್ಯಾಸ ಮಾಡಿ ಕೊಂಡರೆ, ಮಲಬದ್ಧತೆ, ಕರುಳಿಗೆ ಸಂಬಂ ಧಿಸಿದ ಕಾಯಿಲೆಗಳು, ಹೃದಯದ ತೊಂದರೆಗಳು, ಲೈಂಗಿಕ ಸಮಸ್ಯೆಗಳು, ಅತಿಸಾರ, ರಕ್ತಹೀನತೆ ಇಂತಹ ಹಲವು ಕಾಯಿಲೆಗಳು ನಮ್ಮಿಂದ ದೂರವಾಗುವುದು.

ಇನ್ನಷ್ಟು ಪ್ರಯೋಜನಗಳನ್ನು ನೋಡುವುದಾದರೆ..

7 Health Benefits of Dates

  • ಮಲಬದ್ಧತೆ ಸಮಸ್ಯೆ ಇದ್ದವರು, ಬೆಳಗ್ಗೆ ಖಾಲಿ ಹೊಟ್ಟೆಗೆ ಎರಡು -ಮೂರು ನೆನೆಸಿದ ಖರ್ಜೂರ ಗಳನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ, ಈ ಸಮಸ್ಯೆಯನ್ನು ನಿವಾರಣೆ ಮಾಡ ಬಹುದು.
  • ರಕ್ತದಲ್ಲಿ ಕಂಡು ಬರುವ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.
  • ಇನ್ನು ಖರ್ಜೂರದಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿ ಯಮ್ ಮೊದಲಾದ ಖನಿಜಾಂಶಗಳು ಕಂಡು ಬರುವುದರಿಂದ, ರಕ್ತದೊತ್ತಡವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿ ಸುತ್ತದೆ
  • ಲೈಂಗಿಕ ಸಮಸ್ಯೆಯನ್ನು ಎದುರಿಸುತ್ತಿರುವ ಪುರುಷರು ಮತ್ತು ಮಹಿಳೆಯರು, ಪ್ರತಿದಿನ ರಾತ್ರಿ ಮಲ ಗುವ ಮುನ್ನ ಒಂದು ಲೋಟ ಉಗುರು ಬೆಚ್ಚಗಿನ ಹಾಲಿನಲ್ಲಿ ಸುಮಾರು ಐದಾರು ಖರ್ಜೂರಗಳನ್ನು ಇಡೀ ರಾತ್ರಿ ನೆನೆಸಿಟ್ಟು, ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು ಮತ್ತು ಖರ್ಜೂರಗಳನ್ನು ಜೊತೆಗೆ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಸಮಸ್ಯೆಗೆ ಪರಿಹಾರ ಕಾಣಬಹುದು.
  • ಸುಸ್ತು ಆಯಾಸ ಅಥವಾ ವೀಕ್‌ನೆಸ್‌‌ನಂತಹ ಸಮಸ್ಯೆಯನ್ನು ಎದುರಿಸುವವರು ಕೂಡ ನೆನೆಸಿದ ಖರ್ಜೂರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ಖರ್ಜೂರವನ್ನು ಹಾಲಿನಲ್ಲಿಯೂ ಕೂಡ ನೆನೆಸಿಟ್ಟು ಸೇವನೆ ಮಾಡಬಹುದು!

ಖರ್ಜೂರವನ್ನು ಹಾಲಿನಲ್ಲಿಯೂ ಕೂಡ ನೆನೆಸಿಟ್ಟು ಸೇವನೆ ಮಾಡಬಹುದು!

ಹೀಗೆ ಮಾಡಿ: ಎರಡು ಲೋಟ ಆಗುವಷ್ಟು ಹಾಲನ್ನು ಬಿಸಿಯಾಗಲು ಬಿಡಿ. ಇನ್ನು ಇದಕ್ಕೆ ಐದಾರು ಬೀಜಗಳನ್ನು ನಿವಾರಣೆ ಮಾಡಿದ ಖರ್ಜೂ ರಗಳನ್ನು ಹಾಕಿ ಸುಮಾರು 10 ನಿಮಿಷಗಳ ಕಾಲ ಹಾಲನ್ನು ಚೆನ್ನಾಗಿ ಕುದಿಸಿ, ಬಳಿಕ ಬಿಸಿಬಿಸಿ ಇರುವಾಗಲೇ ಉಪಹಾರದ ನಂತರ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ಗಳು ಸಿಗುತ್ತದೆ.

as per the experts know the health benefits of eating soaked dry dates in morning.