ಎಚ್ಚರ: ಕೆಮಿಕಲ್ ಬಳಸಿ ಕಲ್ಲಂಗಡಿ ಹಣ್ಣು ಮಾರುತ್ತಾರೆ! ಇದನ್ನು ತಿಂದ್ರೆ ಕಾಯಿಲೆ ಬರಬಹುದು..

29-04-23 08:26 pm       Source: Vijayakarnataka   ಡಾಕ್ಟರ್ಸ್ ನೋಟ್

ಒಳಗೆ ನೋಡಲು ಕೆಂಪಗೆ ಕಾಣುವ ಎಲ್ಲಾ ಕಲ್ಲಂಗಡಿ ಹಣ್ಣು ತಾಜಾ ಆಗಿರುವುದಿಲ್ಲ. ಅದರಲ್ಲಿ ಕೆಮಿಕಲ್ ಇರಬಹುದು, ಎಚ್ಚರ!

ಈಗಿನ ಕಾಲದಲ್ಲಿ ನಾವು ತಿನ್ನುವ ಬಹುತೇಕ ಆಹಾರ ಪದಾರ್ಥಗಳು ಕಲಬೆರಕೆ ರಾಸಾಯನಿಕ ಅಂಶಗಳಿಂದ ಕೂಡಿರುತ್ತವೆ. ನಾವು ಆರೋಗ್ಯಕರ ಎಂದುಕೊಂಡಿರುವ ಬಹುತೇಕ ಹಣ್ಣು ತರಕಾರಿಗಳು ಕಾಳು ಕಡಿ ಎಲ್ಲವೂ ಸಹ ನಮ್ಮ ಆರೋಗ್ಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸಣ್ಣ ಪ್ರಮಾಣ ದಲ್ಲಾದರೂ ಮಾರಕವಾಗಿರುತ್ತವೆ.

ಈಗ ಬೇಸಿಗೆಕಾಲ. ನಮ್ಮ ದೇಹ ಹೆಚ್ಚು ತಂಪಾಗಿರಬೇಕು ಎಂದುಕೊಳ್ಳುತ್ತೇವೆ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ನೀರಿನ ಅಂಶ ಇರುವ ಹಣ್ಣು ತರಕಾರಿಗಳನ್ನು ತಿನ್ನಲು ಬಯಸುತ್ತೇವೆ. ಅಂದರೆ ಕಲ್ಲಂಗಡಿ ಹಣ್ಣು, ಸೌತೆಕಾಯಿ, ಕರ್ಬೂಜ ಹಣ್ಣು ಇತ್ಯಾದಿ. ಕಲ್ಲಂಗಡಿ ಹಣ್ಣು ಎಂದ ತಕ್ಷಣ ಒಂದು ವಿಷಯ ಜ್ಞಾಪಕಕ್ಕೆ ಬಂತು. ಏನೆಂದರೆ ಇದು ಸಹ ರಾಸಾಯನಿಕ ಅಂಶಗಳಿಂದ ಕಲುಷಿತವಾಗಿದೆ ಎಂಬ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಕೆಲವೊಂದು ಮೂಲಗಳ ಪ್ರಕಾರ ಕಲ್ಲಂಗಡಿ ಹಣ್ಣಿನ ಸಿಹಿ, ಬಣ್ಣ ಅದರ ಜೀವಿತಾವಧಿ ಎಲ್ಲವೂ ಸಹ ರಾಸಾಯನಿಕದ ಕಾರಣ ಎಂದು ಹೇಳ ಲಾಗುತ್ತದೆ.

ಹಾಗಾದರೆ ಯಾವುದು ಆ ರಾಸಾಯನಿಕ?

Is Watermelon A Fruit Or Vegetable? Here's Why - AZ Animals

  • ನಾವು ಫುಡ್ ಕಲರಿಂಗ್ ಕೇಳಿದ್ದೇವೆ. ಇದರಲ್ಲಿ ನೇರಳೆ ಬಣ್ಣದ ಡೈ ಉಪಯೋಗಿಸುತ್ತಾರೆ ಮತ್ತು ಇದರ ಹೆಸರು ಎರಿತ್ರೊಸಿನ್. FSSAI ಸಂಸ್ಥೆ ಕಲ್ಲಂಗಡಿ ಹಣ್ಣಿನಲ್ಲಿ ಇರುವ ಈ ರಾಸಾಯನಿಕ ವನ್ನು ಪತ್ತೆ ಹಚ್ಚುವ ಬಗ್ಗೆ ವಿವರವಾಗಿ ವಿಡಿಯೋ ಮಾಡಿದೆ.
  • ಅಲ್ಲಿ ಹೇಳುವ ಹಾಗೆ, ನೀವೇ ಕಲಂಗಡಿ ಹಣ್ಣಿನ ಕಲ ಬೆರಕೆ ಬಗ್ಗೆ ತಿಳಿದುಕೊಳ್ಳಬಹುದು. ಅದಕ್ಕಾಗಿ ಕಲ್ಲಂಗಡಿ ಹಣ್ಣನ್ನು ಮೊದಲು ಎರಡು ಹೋಳು ಮಾಡಬೇಕು.
  • ನಂತರ ಒಂದು ಹತ್ತಿಯ ಉಂಡೆಯನ್ನು ತೆಗೆದುಕೊಂಡು ಕಲ್ಲಂಗಡಿ ಹಣ್ಣಿನ ಕೆಂಪು ಬಣ್ಣದ ತಿರುಳಿಗೆ ಒತ್ತಬೇಕು. ಒಂದು ವೇಳೆ ಹತ್ತಿ ಕೆಂಪು ಬಣ್ಣಕ್ಕೆ ತಿರುಗಿದರೆ, ಅದರಲ್ಲಿ ರಾಸಾಯನಿಕ ಡೈ ಸೇರಿದೆ ಎಂದರ್ಥ.

ಈ ರಾಸಾಯನಿಕ ಸೇವನೆಯಿಂದ ಏನಾಗುತ್ತದೆ?

ಈ ರಾಸಾಯನಿಕ ಸೇವನೆಯಿಂದ ಏನಾಗುತ್ತದೆ?

  • ಏರಿತ್ರೋಸಿನ್ ಎಂಬ ರಾಸಾಯನಿಕ ಅಂಶ ದೇಹ ಸೇರಿದರೆ ಗರ್ಭಿಣಿ ಮಹಿಳೆಯರಲ್ಲಿ ಹುಟ್ಟುವ ಮಗುವಿನ ಮೇಲೆ ಪ್ರಭಾವ ಬೀರುತ್ತದೆ. ಅಂದರೆ ಮಗುವಿನ ಬಾಲ್ಯದ ನಡತೆಯ ಮೇಲೆ, ಥೈರಾಯ್ಡ್ ಕಾರ್ಯಾ ಚಟುವಟಿಕೆಯ ಮೇಲೆ ಪ್ರಭಾವ ಬೀರಿ ಮತ್ತಷ್ಟು ತೊಂದರೆ ಕಾಣುವಂತೆ ಮಾಡುತ್ತದೆ.
  • 2019ರ ಅಧ್ಯಯನ ಹೇಳುವ ಪ್ರಕಾರ ಈ ರೀತಿಯ ಫುಡ್ ಕಲರಿಂಗ್ ರಾಸಾಯನಿಕ ಅಂಶಗಳು ಒಂದು ವೇಳೆ ಹೆಚ್ಚಾಗಿ ದೇಹ ಸೇರಿದರೆ ಅದರಿಂದ ಗಂಭೀರವಾದ ಅಡ್ಡ ಪರಿಣಾಮಗಳು ಮತ್ತು ಆರೋಗ್ಯ ಸಂಸ್ಥೆಗೆ ಇದು ಮುಂದೆ ದೊಡ್ಡ ತಲೆ ನೋವಾಗುತ್ತದೆ.

ಕಲ್ಲಂಗಡಿ ಹಣ್ಣನ್ನು ಬೇಗ ಹಣ್ಣಾಗುವಂತೆ ಮಾಡುವ ಟೆಕ್ನಿಕ್

How to Pick a Ripe Watermelon | Gardener's Path

  • ತುಂಬಾ ಜನರು ಮಾರಾಟ ಮಾಡಬೇಕೆಂದು ಕಲ್ಲಂಗಡಿ ಕಾಯಿಗಳಿಗೆ ಕಾರ್ಬೈಡ್ ಎಂಬ ರಾಸಾಯನಿಕ ಸಿಂಪಡಿಸು ತ್ತಾರೆ. ಕೇವಲ ಕಲ್ಲಂಗಡಿ ಹಣ್ಣು ಮಾತ್ರವಲ್ಲ ಬೇರೆ ಬೇರೆ ಹಣ್ಣುಗಳಿಗೂ ಇದೇ ರೀತಿ ಮಾಡುತ್ತಾರೆ.
  • ನೀವು ಕಲ್ಲಂಗಡಿ ಹಣ್ಣನ್ನು ಮುಟ್ಟಿದಾಗ ನಿಮ್ಮ ಕೈಗೆ ಬಿಳಿ ಬಣ್ಣದ ಪೌಡರ್ ಅಂಟಿಕೊಂಡರೆ ಅದು ರಾಸಾಯನಿಕ ದಿಂದ ಹಣ್ಣಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.​

ಕಾರ್ಬೈಡ್ ಸೇವಿಸುವ ಅಡ್ಡ ಪರಿಣಾಮಗಳು

ಕಾರ್ಬೈಡ್ ಸೇವಿಸುವ ಅಡ್ಡ ಪರಿಣಾಮಗಳು

ಇದನ್ನು ವಿಪರೀತ ವಿಷಕಾರಿ ಎಂದು ಗುರುತಿಸಲಾಗುತ್ತದೆ. ಮನುಷ್ಯರ ದೇಹಕ್ಕೆ ಇದು ಹೆಚ್ಚಿನ ಪ್ರಮಾಣದಲ್ಲಿ ಒಂದು ವೇಳೆ ಸೇರಿದರೆ, ಇದರಿಂದ ತಲೆನೋವು, ಚರ್ಮದ ಮೇಲೆ ದದ್ದುಗಳು ಜೊತೆಗೆ ಶ್ವಾಸಕೋಶದ ತೊಂದರೆ ಕೂಡ ಎದುರಾಗುತ್ತದೆ. ಕೆಲ ವರಿಗೆ ಪಾರ್ಶ್ವವಾಯು ಮತ್ತು ಕೋಮ ಕೂಡ ಎದುರಾಗ ಬಹುದು.

ಸೀಸನಲ್ ಹಣ್ಣುಗಳ ವಿಚಾರದಲ್ಲಿ ಎಚ್ಚರವಾಗಿರಿ

How to Grow and Care for Watermelon

  • ಹಣ್ಣುಗಳು ಮತ್ತು ತರಕಾರಿಗಳು ಯಾವ ಕಾಲದಲ್ಲಿ ಹೆಚ್ಚಾಗಿ ಸಿಗುತ್ತವೆ ಎಂಬುದನ್ನು ಮೊದಲು ತಿಳಿದು ಕೊಳ್ಳಿ. ಸಮಯವಲ್ಲದ ಸಮಯದಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳು ರಾಸಾಯನಿಕ ಕಲಬೆರಕೆಯಿಂದ ಬಂದಿರುತ್ತವೆ.
  • ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಉತ್ಪತ್ತಿ ಮಾಡುವ ಸಲುವಾಗಿ ಮಾರಾಟಗಾರರು ಈ ರೀತಿ ಕೆಮಿಕಲ್ ಉಪಯೋಗಿಸಿ ಹಣ್ಣು ಮಾಡಿ ತಂದು ಮಾರುತ್ತಾರೆ.
  • ಇದರಿಂದ ಮನೆಯಲ್ಲಿರುವ ಮಹಿಳೆಯರು, ಮಕ್ಕಳು ಮತ್ತು ವಯಸ್ಸಾದವರಿಗೆ ಆರೋಗ್ಯಕ್ಕೆ ಮುಂದಿನ ದಿನಗಳಲ್ಲಿ ತೀವ್ರ ತರದ ತೊಂದರೆ ಎದುರಾಗುವು ದಂತೂ ಸತ್ಯ!​

your favourite watermelon is with carbide chemical be aware.