ಬೇಸಿಗೆ ಬಿಸಿಲಿಗೆ ಬಾಯಾರಿಕೆ ನೀಗಿಸಿ, ನಿರ್ಜಲೀಕರಣ ಸಮಸ್ಯೆ ದೂರ ಮಾಡುವ ಪಾನೀಯಗಳು

02-05-23 07:56 pm       Source: Vijayakarnataka   ಡಾಕ್ಟರ್ಸ್ ನೋಟ್

ಬೇಸಿಗೆ ಬಂತೆಂದರೆ ಆಗ ಎಲ್ಲರೂ ನೀರಿನ ಜತೆಗೆ ಹಲವಾರು ರೀತಿಯ ಜ್ಯೂಸ್‌ಗಳನ್ನು ಸೇವನೆ ಮಾಡಲು ಬಯಸುವರು. ಈ ಸಮಯದಲ್ಲಿ ಕೆಲ ವೊಂದು ನೀರಿನಾಂಶ ಇರುವ.

ಬೇಸಿಗೆಕಾಲ ಅಂದ ಮೇಲೆ ಕೇಳಬೇಕಾ? ಈ ಸಮಯದಲ್ಲಿ ಕಂಡು ಬರುವ ವಿಪರೀತ ಉರಿ ಬಿಸಿಲಿನ ಕಾರಣದಿಂದಾಗಿ ಎಂತಹ ಸದೃಢ ಆರೋಗ್ಯವಂತ ವ್ಯಕ್ತಿಯನ್ನೂ ಕೂಡ ಹೈರಾಣಾಗಿಸಿ ಬಿಡುತ್ತದೆ. ಇಂತಹ ಸಮಯದಲ್ಲಿ ದೇಹವನ್ನು ಎಷ್ಟು ಪ್ರಮಾಣದಲ್ಲಿ ತಂಪು ಮಾಡಿ ಕೊಂಡರು ಕೂಡ ಸಾಲದು ಎನಿಸಿಬಿಡುತ್ತದೆ! ಯಾಕೆಂದ್ರೆ ಉರಿಬಿಸಿಲಿನ ಝಳ ಆ ಪ್ರಮಾಣದಲ್ಲಿ ಇರುತ್ತದೆ.

ಈ ಉರಿ ಬಿಸಿಲಿನ ಬೇಗೆಗೆ ತಾಳಲಾರದೆ ಮೈಯಿಂದ ಬೆವರು, ನೀರಿ ನಂತೆ ಹರಿದು ಹೋಗುತ್ತಾ ಇರುತ್ತದೆ! ಇದರಿಂದ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ಬೇಕಾಗುವ ಸೋಡಿಯಂ ಮತ್ತು ಪೊಟ್ಯಾಸಿಯಂನಂತಹ ಅಗತ್ಯ ಪೋಷಕಾಂಶಗಳ ಸವಕಳಿಗೆ ಕಾರಣವಾಗುವುದರ ಜೊತೆಗೆ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಂಡು ಬರಲು ಕಾರಣವಾಗಿ ಬಿಡುತ್ತದೆ...

ಈಗ ಮಳೆ ಕೂಡ ಬರುತ್ತಿರುವುದರಿಂದ, ಆರೋಗ್ಯದ ಬಗ್ಗೆ ಕಾಳಜಿ ಇರಲಿ..

ಈಗ ಮಳೆ ಕೂಡ ಬರುತ್ತಿರುವುದರಿಂದ, ಆರೋಗ್ಯದ ಬಗ್ಗೆ ಕಾಳಜಿ ಇರಲಿ..

  • ಹೇಳಿಕೇಳಿ ಮಳೆಗಾಲದಂತೆ, ಬೇಸಿಗೆ ಕೂಡ ಸಾಂಕ್ರಾಮಿಕ ರೋಗಗಳ ಕಾಲ ಎಂದೇ ಹೆಸರು ಪಡೆದು ಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ಇಡೀ ವಾತಾವರಣ ಧೂಳು ಹಾಗೂ ಆಗಾಗ ಮಳೆ ಕೂಡ ಸುರಿಯುವುತ್ತಿರುವುದರಿಂದ, ಕೆಲವೊಮ್ಮೆ ವಾತಾ ವರಣ ಕೂಡ ಶುಷ್ಕತೆಯಿಂದ ಕೂಡಿರುವುದರಿಂದ, ರೋಗಾ ಣುಗಳು ಕ್ರಿಯಾಶೀಲವಾಗಿ ಬಿಡುತ್ತವೆ.
  • ಇದೇ ಕಾರಣದಿಂದಾಗಿ ಹಲವಾರು ಕಾಯಿಲೆಗಳು ಬೇಗನೆ ಒಬ್ಬ ರಿಂದ ಒಬ್ಬರಿಗೆ ಹರಡಲು ಕಾರಣವಾಗಿ ಬಿಡುತ್ತದೆ. ಹೀಗಾಗಿ ಬೇಸಿಗೆಕಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರಿಕೆ ಅತ್ಯಗತ್ಯ ಎಂದು ತಜ್ಞ ವೈದ್ಯರು ಸಲಹೆ ನೀಡಿದರು.
  • ಬನ್ನಿ ಇಂದಿನ ಲೇಖನದಲ್ಲಿ ಬೇಸಿಗೆಯಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳಿಂದ ದೂರವಿರಬೇಕೆಂದರೆ, ಯಾವ ಬಗೆಯ ಪಾನೀಯಗಳನ್ನು ಸೇವಿಸಬೇಕಾಗುತ್ತದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ....​

ನೀರಿನಾಂಶ ಹೆಚ್ಚಿರುವ ಪಾನೀಯಗಳನ್ನು ಹೆಚ್ಚು ಸೇವಿಸಿ

Is 100% Fruit Juice Good for You? – Cleveland Clinic

  • ಮೊದಲೇ ಹೇಳಿದ ಹಾಗೆ, ಬಿಸಿನ ಝಳಕ್ಕೆ ಬೆವರಿನ ರೂಪದಲ್ಲಿ ದೇಹದ ನೀರು ಹೊರ ಹೋಗುವುದರಿಂದ ದೇಹದಲ್ಲಿ ತೇವಾಂಶ ಕಡಿಮೆಯಾಗಿ, ನಿರ್ಜಲೀಕರಣ ಸಮಸ್ಯೆ ಎದುರಾಗುತ್ತದೆ.
  • ಹೀಗಾಗಿ ಇಂತಹ ಸಮಯದಲ್ಲಿ ದ್ರವಾಹಾರ ಸೇವನೆ ಹೆಚ್ಚಿರಲಿ. ಪ್ರತಿ ಒಂದೆರಡು ಲೀಟರ್ ನೀರು ಕುಡಿಯುವ ಜೊತೆಗೆ, ನೀರಿನಾಂಶ ಇರುವ ಹಣ್ಣು-ಹಂಪಲುಗಳು, ಹಣ್ಣಿನ ಜ್ಯೂಸ್, ಎಳನೀರು, ನಿಂಬೆ ಪಾನೀಯ, ಒಂದು ವೇಳೆ ಮಧುಮೇಹ ಕಾಯಿಲೆ ಇದ್ದವರು, ಮಜ್ಜಿಗೆ, ಕೆಂಪಕ್ಕಿ ಗಂಜಿಯಂತಹ ದ್ರವಾಹಾರ ಸೇವನೆ ಮೂಲಕ ದೇಹದಲ್ಲಿ ನೀರಿನಾಂಶವನ್ನು ಹೆಚ್ಚಿಸಿಕೊಳ್ಳಬೇಕು.​

ಕೋಕಂ ಹಣ್ಣಿನ ಶರಬತ್

kokum juice skin and health, ಕೋಕಂ ಶರಬತ್ತಿನ ಪ್ರಯೋಜನಗಳು ತಿಳಿದರೆ, ದಿನಾ ಒಂದೊಂದು  ಗ್ಲಾಸ್ ಕುಡಿಯುವಿರಿ - surprising health benefits of drinking kokum juice  every day - Vijaya Karnataka

  • ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಕೋಕಂ ಹಣ್ಣಿನ ಶರಬತ್ ಕುಡಿಯುವ ಅಭ್ಯಾಸ ಮಾಡಿ ಕೊಳ್ಳಿ. ಯಾಕೆಂದ್ರೆ ಈ ಪಾನೀಯ ದೇಹದ ನಿರ್ಜಲೀಕರಣ ಸಮಸ್ಯೆಯನ್ನು ದೂರ ಮಾಡಿ, ಹಲ ವಾರು ಕಾಯಿಲೆಗಳನ್ನು ನಮ್ಮಿಂದ ದೂರವಿರಿ ಸುತ್ತದೆ.
  • ಪ್ರಮುಖವಾಗಿ ಈ ಹಣ್ಣಿನ ಬಗ್ಗೆ ಹೇಳುವುದಾದರೆ, ತನ್ನಲ್ಲಿ ಅಪಾರ ಪ್ರಮಾಣದಲ್ಲಿ ವಿಟಮಿನ್ ಸಿ ಹಾಗೂ ನಾರಿನಾಂಶ ಒಳಗೊಂಡಿದೆ. ಅಷ್ಟೇ ಅಲ್ಲದೆ ಯಾವುದೇ ಬಗೆಯ ಕೊಲೆ ಸ್ಟ್ರಾಲ್ ಅಂಶಗಳು ಹಾಗೂ ಸ್ಯಾಚು ರೇಟೆಡ್ ಕೊಬ್ಬಿನ ಅಂಶಗಳು ಇರುವುದಿಲ್ಲ.
  • ಹೀಗಾಗಿ ಬೇಸಿಗೆಯಲ್ಲಿ ಈ ಹಣ್ಣಿನ ಪಾನೀಯ ಕುಡಿಯು ವುದರಿಂದ, ಬೇಸಿಗೆಯಲ್ಲಿ ಕಾಡುವ ಜೀರ್ಣಾಂಗ ವ್ಯವ ಸ್ಥೆಗೆ ಸಂಬಂಧ ಪಟ್ಟ ಸಮಸ್ಯೆಗಳಾದ ಅಜೀರ್ಣ, ಮಲ ಬದ್ಧತೆ, ಗ್ಯಾಸ್ಟ್ರಿಕ್, ಆಸಿಡಿಟಿ, ಇತ್ಯಾದಿ ಸಮಸ್ಯೆಗಳು ದೂರವಾಗುತ್ತದೆ, ಜೊತೆಗೆ ದೇಹದ ತೂಕ ಇಳಿಸಲು ಕೂಡ ನೆರವಾಗುತ್ತದೆ​

ಕರ್ಬೂಜ ಹಣ್ಣಿನ ಜ್ಯೂಸ್

Health Benefits of Muskmelon: Nutritional Value & Side Effects

  • ಬೇಸಿಗೆಯ ಸಮಯದಲ್ಲಿ ಮಾರ್ಕೆಟ್‌ನಲ್ಲಿ ಹೆಚ್ಚಾಗಿ ಕಂಡು ಬರುವ ಹಣ್ಣುಗಳೆಂದರೆ ಕಲ್ಲಂಗಡಿ ಹಣ್ಣು, ಮಾವಿನಹಣ್ಣು ಹಾಗೂ ಈ ಕರ್ಬೂಜ ಹಣ್ಣುಗಳು!
  • ಅದರಲ್ಲೂ ಕಲ್ಲಂಗಡಿ ಹಾಗೂ ಕರ್ಬೂಜ ಹಣ್ಣುಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರಿನಾಂಶ ಹೊಂದಿರುವು ದರಿಂದ ಬೇಸಿಗೆಯ ಕಾಲದಲ್ಲಿ ದೇಹಕ್ಕೆ ತಂಪನ್ನು ಒದಗಿ ಸುವುದರ ಜೊತೆಗೆ, ನಮ್ಮನ್ನು ಹಲವಾರು ಆರೋಗ್ಯ ಸಮಸ್ಯೆಗಳಿಂದ ದೂರವಿರಿಸುತ್ತದೆ.
  • ಹೀಗಾಗಿ ಇಂತಹ ಆರೋಗ್ಯಭರಿತ ಹಣ್ಣನ್ನು ಬೇಸಿಗೆ ಯಲ್ಲಿ ಜ್ಯೂಸ್‌, ಮಿಲ್ಕ್‌ ಶೇಖ್‌ನಂತಹ ಪಾನೀಯಗಳನ್ನು ಮಾಡಿ ಕೊಂಡು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಇದರಿಂದ ದೇಹದ ತೂಕ ಇಳಿಕೆ, ಅಜೀರ್ಣತೆ, ಮಲಬದ್ಧತೆಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದು.​

ಕಲ್ಲಂಗಡಿ ಜ್ಯೂಸ್

How to Make Our Easy Watermelon Juice Recipe | Taste of Home

  • ಬೇಸಿಗೆ ಕಾಲದಲ್ಲಿ ಆದಷ್ಟು ನೀರಿನಾಂಶ ಅಧಿಕವಾಗಿ ಇರುವ ಹಣ್ಣುಗಳ ಸೇವನೆಯ ಮಾಡಿದರೆ, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇಂತಹ ಒಂದು ಹಣ್ಣೆಂದರೆ ಅದು ಕಲ್ಲಂಗಡಿ ಹಣ್ಣು.
  • ಈ ಹಣ್ಣಿನಲ್ಲಿ ಶೇ.92ರಷ್ಟು ನೀರಿನಾಂಶವಿದ್ದು, ಇದು ದೇಹವನ್ನು ಹೈಡ್ರೇಟ್ ಆಗಿಡುವುದು. ಪ್ರಮುಖವಾಗಿ ಬೇಸಿಗೆಯಲ್ಲಿ ದೇಹದಲ್ಲಿನ ನೀರಿನಾಂಶ ಕಾಪಾಡಿ ಕೊಳ್ಳುವ ಸಹಿತ, ಹಲವಾರು ಕಾಯಿಲೆಗಳನ್ನು ನಮ್ಮಿಂದ ದೂರವಿರಿಸುವುದು .

ನಿಂಬೆ ಪಾನೀಯ

6 Lemon Juice Health Benefits | Saber Healthcare

  • ನಮಗೆಲ್ಲಾ ಗೊತ್ತೇ ಇರುವ ಹಾಗೆ ಉರಿ ಬಿಸಿಲಿನ ಕಾರಣ ದಿಂದಾಗಿ, ದೇಹದಿಂದ ಅತಿಯಾದ ಬೆವರು ಹೊರ ಹೋಗುವುದರಿಂದ ಹಾಗೂ ಪದೇ ಪದೇ ಮೂತ್ರ ವಿಸರ್ಜನೆ ಕಾರಣದಿಂದಾಗಿ, ದೇಹದಲ್ಲಿ ನೀರಿನಾಂಶ ಕಡಿಮೆ ಆಗುತ್ತಾ ಹೋಗು ತ್ತದೆ.
  • ಕೊನೆಗೆ ಇದೇ ಕಾರಣದಿಂದಾಗಿ, ದೇಹದಲ್ಲಿ ನಿರ್ಜಲೀ ಕರಣ ಸಮಸ್ಯೆ ಎದುರಾಗುತ್ತದೆ.
  • ಹೀಗಾಗಿ, ಬೇಸಿಗೆಯ ಸಮಯದಲ್ಲಿ ಬೇಸಿಗೆಯಲ್ಲಿ ಅತಿಯಾಗಿ ಕಾಡುವಂತಹ ಬಾಯಾರಿಕೆಯನ್ನು ನೀಗಿಸಿ, ದೇಹದಲ್ಲಿ ನೀರಿ ನಾಂಶದ ಸಮತೋಲನ ಕಾಯ್ದು ಕೊಳ್ಳಲು ನೆರವಾಗುವಂತಹ ನಿಂಬೆ ಹಣ್ಣಿನ ಪಾನೀಯ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ಆರೋಗ್ಯಕ್ಕೆ ಒಳ್ಳೆಯದು

these water rich fruits juices control the dehydration and keep you healthy in summer.