ಟೊಮೆಟೊ ಸಕ್ಕರೆ ಕಾಯಿಲೆ ಇದ್ದವರಿಗೆ ಒಳ್ಳೆಯದಾ? ತಜ್ಞರ ಪ್ರಕಾರ ಹೌದಂತೆ!

09-05-23 07:17 pm       Source: Vijayakarnataka   ಡಾಕ್ಟರ್ಸ್ ನೋಟ್

ಟೊಮೆಟೊ ಹಣ್ಣನ್ನು ಮಿತವಾಗಿ, ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ, ಮಧುಮೇಹ ಕಾಯಿಲೆಯನ್ನು ನಿಯಂತ್ರ ಣದಲ್ಲಿ.

ಸಕಲ ಭಾಗ್ಯಕ್ಕಿಂತ ಆರೋಗ್ಯ ಭಾಗ್ಯ ಮನುಷ್ಯನಿಗೆ ತುಂಬಾ ದೊಡ್ಡ ಸಂಪತ್ತು. ನಮ್ಮ ಅರೋಗ್ಯ ಚೆನ್ನಾಗಿದ್ದರೆ, ಏನೂ ಬೇಕಾದರೂ ಸಾಧಿಸ ಬಹುದು. ಆದರೆ ಈ ವಿಚಾರದಲ್ಲಿ ಸ್ವಲ್ಪ ಅಜಾರೂಕತೆ ತೋರಿಸಿದರೂ ಕೂಡ, ಅನಾರೋಗ್ಯಕಾರಿ ಕಾಯಿಲೆಗಳು ಬಹಳ ಬೇಗನೇ ನಮ್ಮನ್ನು ಆವರಿಸಿ ಕೊಂಡು ಬಿಡುತ್ತದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ, ಇಂದಿನ ದಿನಗಳಲ್ಲಿ ಜನರು ಇದ್ದಕ್ಕಿದ್ದಂತೆ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಸಮಸ್ಯೆಗೆ ಗುರಿಯಾಗುತ್ತಿರುವುದು.

ಈ ಸಕ್ಕರೆಕಾಯಿಲೆ ಅಥವಾ ಮಧುಮೇಹ ಕಾಣಿಸಿಕೊಂಡ ನಂತರದಲ್ಲಿ ಜೀವನದಲ್ಲಿ ಎಲ್ಲವೂ ಬದಲಾಗಿ ಬಿಡುತ್ತದೆ. ಅತಿಯಾದ ಸಿಹಿ ಪದಾರ್ಥ ಗಳನ್ನು ತಿನ್ನುವಂತಿಲ್ಲ, ಇಷ್ಟವಾಗದ ಆಹಾರಗಳನ್ನು ಕೂಡ ಇಷ್ಟಪಟ್ಟು ತಿನ್ನಬೇಕು, ಬೆಳಗ್ಗೆ-ಸಂಜೆ ವ್ಯಾಯಾಮ, ಇಲ್ಲಾಂದ್ರೆ ವಾಕಿಂಗ್ ಮಾಡ ಲೇಬೇಕು. ವೈದ್ಯರು ನೀಡಿದ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದನ್ನು ಅಭ್ಯಾಸವಾಗಬೇಕು.

ಹೀಗೆ ಹಲವಾರು ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಬೇಕು. ಬನ್ನಿ ಇಂದಿನ ಲೇಖನದಲ್ಲಿ ಸಕ್ಕರೆಕಾಯಿಲೆ ಇರುವವರು, ಟೊಮೆಟೊ ಹಣ್ಣನ್ನು ಅಡುಗೆಯಲ್ಲಿ ಬಳಸಿಕೊಳ್ಳುವುದರಿಂದ, ಏನೆಲ್ಲಾ ಅರೋಗ್ಯ ಪ್ರಯೋಜನಗಳನ್ನು ನಿರೀಕ್ಷೆ ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ನೋಡೋಣ..

ಟೊಮೆಟೊ ಮಧುಮೇಹ ಕಾಯಿಲೆ ಇದ್ದವರಿಗೆ ಒಳ್ಳೆಯದಾ?

5 reasons why tomatoes is good for your skin | Pulse Nigeria

  • ಕೆಲವೊಂದು ಸಿಗುವ ಹಣ್ಣು-ತರಕಾರಿಗಳಲ್ಲಿ ನೈಸರ್ಗಿಕ ವಾಗಿ ಸಿಗುವ ಸಕ್ಕರೆ ಪ್ರಮಾಣ ಹೆಚ್ಚಾಗಿಯೇ ಇರುತ್ತದೆ. ಇವುಗಳನ್ನು ತಿಂದ ನಂತರದಲ್ಲಿ ನಮ್ಮ ದೇಹದ ರಕ್ತದ ಲ್ಲಿನ ಸಕ್ಕರೆ ಪ್ರಮಾಣ, ಏರುಪೇರು ಉಂಟಾಗಿ ಬಿಡುತ್ತದೆ! ಅಲ್ಲದೆ ಕೆಲವೊಮ್ಮೆ ಶುಗರ್ ಕೂಡ ಕಂಟ್ರೋಲ್ ತಪ್ಪಿ ಹೋಗುತ್ತದೆ.
  • ಹೀಗಾಗಿ ಸಕ್ಕರೆಕಾಯಿಲೆ ಇರುವವರು ಯಾವುದೇ ಕಾರಣ ಕ್ಕೂ ಕೂಡ ಸ್ವಯಂ ವೈದ್ಯರಾಗಲು ಹೋಗದೇ, ವೈದ್ಯರು ಸೂಚಿಸಿ ರುವ ಆಹಾರ ಪದಾರ್ಥಗಳನ್ನೇ ಸೇವಿಸಬೇಕು.
  • ಇಂತಹ ಸಂದರ್ಭ ದಲ್ಲಿ ಟೊಮೆಟೊ ತಿನ್ನಬೇಕಾ ಅಥವಾ ಬೇಡವಾ ಎಂಬ ಆಲೋಚನೆ ಕೂಡ ಮಧು ಮೇಹ ಇರುವ ವರಿಗೆ ಬರಬಹುದು.
  • ನೈಸರ್ಗಿಕವಾಗಿ ಸಿಗುವ ಹುಳಿ-ಸಿಹಿ ಮಿಶ್ರಿತ ಟೊಮೆಟೊ ವನ್ನು, ಸಕ್ಕರೆ ಕಾಯಿಲೆ ಇದ್ದವರು ಮಿತವಾಗಿ ಬಳಸುವು ದರಿಂದ ಆರೋಗ್ಯಕರ ಲಾಭಗಳು ಹೆಚ್ಚು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಟೊ​ಮೆಟೊ ಹಣ್ಣು ಎಲ್ಲಾ ಸಮಸ್ಯೆಗೂ ಒಳ್ಳೆಯದು!

초여름 입맛 돋우는 토마토 활용 레시피 - 브라보 마이 라이프

  • ನೈಸರ್ಗಿಕವಾಗಿ ಸಿಗುವ ಒಂದೊಂದು ಬಗೆಯ ತರಕಾರಿ ಗಳು, ಮನುಷ್ಯನ ಆರೋಗ್ಯಕ್ಕೆ ಒಂದೊಂದು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
  • ಇದೇ ಸಾಲಿಗೆ ಟೊಮೆಟೊ ಹಣ್ಣುಗಳು ಕೂಡ ಸೇರುತ್ತದೆ. ಟೊಮೆಟೊ ಹಣ್ಣಿಗೆ ಕೆಂಪು ಬಣ್ಣ ಬರಲು ಕಾರಣವಾ ಗಿರುವ ಲೈಕೋಪೀನ್ ಎಂಬ ಕ್ಯಾರೋಟಿ ನಾಯ್ಡ್ ಅಂಶವು, ಮನುಷ್ಯನ ಆರೋಗ್ಯಕ್ಕೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ತಂದು ಕೊಡುತ್ತದೆ.
  • ಉದಾಹರಣೆಗೆ ಹೇಳುವುದಾದರೆ, ರಕ್ತದಲ್ಲಿ ಕೆಟ್ಟ ಕೊಲೆ ಸ್ಟ್ರಾಲ್ ಅಂಶ ಕಡಿಮೆ ಮಾಡಿ, ಹೃದಯ ಸ್ತಂಭನದಿಂದ ರಕ್ಷಿಸುತ್ತದೆ. ಮಧುಮೇಹ ರೋಗ ಇದ್ದವರಿಗೆ, ರಕ್ತದಲ್ಲಿ ಸಕ್ಕರೆಮಟ್ಟ ಏರಿಕೆ ಆಗದಂತೆ ತಡೆಯುತ್ತದೆ, ಕ್ಯಾನ್ಸರ್‌ ನಂತಹ ಮಾರಕ ಕಾಯಿಲೆ ಬರದೇ ಇರುವಂತೆ ತಡೆ ಯುತ್ತದೆ, ಅಷ್ಟೇ ಅಲ್ಲದೆ ದೇಹದ ಮೂಳೆ, ಕಣ್ಣುಗಳಿಗೆ ಮತ್ತು ತ್ವಚೆಗೂ ಟೊಮೆಟೊ ಒಳ್ಳೆಯದು ಎಂದು ಸಾಬೀತಾಗಿದೆ.​

ಲೈಕೋಪಿನ್ ಹಾಗೂ ವಿಟಮಿನ್ ಸಿ ಅಂಶ

Diabetes: 8 lesser-known reasons behind your blood sugar spikes | Health -  Hindustan Times

  • ಮೊದಲೇ ಹೇಳಿದ ಹಾಗೆ ಟೊಮೆಟೊ ಹಣ್ಣುಗಳಲ್ಲಿ ಲೈಕೋಪಿನ್ ಎಂಬ ಆಂಟಿ ಆಕ್ಸಿಡೆಂಟ್ ಜೊತೆಗೆ ಬೀಟಾ ಕ್ಯಾರೋಟಿನ್ ಅಂಶ ಕೂಡ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ.
  • ಇದರ ಜೊತೆಗೆ ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ವಿಟ ಮಿನ್ ಸಿ ಅಂಶವನ್ನು ಒಳಗೊಂಡಿರುವುದರಿಂದ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ದೂರವಿರಿ ಸುತ್ತದೆ.
  • ಪ್ರಮುಖವಾಗಿ ಮಧುಮೇಹ ಇರುವವರಲ್ಲಿ ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆಯಾಗದಂತೆ ತಡೆಯುವ ಎಲ್ಲಾ ಗುಣಲಕ್ಷ ಣಗಳು ಕೂಡ, ಟೊಮೆಟೊ ಹಣ್ಣುಗಳಲ್ಲಿ ಕಂಡು ಬರುತ್ತದೆ.​

ಟೊಮೆಟೊ ಹಣ್ಣಿನಲ್ಲಿ ಸಿಗುವ ವಿಟಮಿನ್ ಸಿ ಹಾಗೂ ನಾರಿನಾಂಶ

Diabetes: Causes, Symptoms, Risk Factors and Treatment

  • ಟೊಮೆಟೊ ಹಣ್ಣುಗಳಲ್ಲಿ ವಿಟಮಿನ್ ಸಿ ಹಾಗೂ ನಾರಿ ನಾಂಶದ ಪ್ರಮಾಣ ಹೇರಳವಾಗಿ ಕಂಡು ಬರುವುದ ರಿಂದ, ದೀರ್ಘಕಾಲ ಹೊಟ್ಟೆ ಹಸಿವು ಆಗದಂತೆ ನೋಡಿ ಕೊಳ್ಳುತ್ತದೆ. ಅಷ್ಟೇ ಅಲ್ಲದೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಸಡನ್ ಆಗಿ ಏರುಪೇರಾಗದಂತೆ ತಡೆಯುತ್ತದೆ.
  • ಇನ್ನು ತನ್ನಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳು ಹಾಗೂ ಗ್ಲೈಸೆಮಿಕ್ ಸೂಚ್ಯಂಕ ಇದರಲ್ಲಿ ತುಂಬಾನೇ ಕಡಿಮೆ ಪ್ರಮಾಣದಲ್ಲಿ ಕಂಡುಬರುವು ದರಿಂದ ರಕ್ತದಲ್ಲಿ ಯಾವುದೇ ಕಾರಣಕ್ಕೂ ಸಕ್ಕರೆ ಅಂಶ ಏರಿಕೆ ಕಾಣುವುದಿಲ್ಲ ಜೊತೆಗೆ ಸಕ್ಕರೆಕಾಯಿಲೆ ನಿಯಂತ್ರಣ ತಪ್ಪುವುದಿಲ್ಲ.

is eating raw tomato good for diabetes patients these things you must know.