ಹೂಕೋಸು-ಬ್ರೊಕೋಲಿ: ಈ ತರಕಾರಿಗಳು ಹೃದಯದ ಸಮಸ್ಯೆ ಬರದೇ ಇರುವ ಹಾಗೆ ನೋಡಿ ಕೊಳ್ಳುತ್ತವೆ!

31-05-23 08:04 pm       Source: Vijayakarnataka   ಡಾಕ್ಟರ್ಸ್ ನೋಟ್

ಒಂದೊಂದು ತರಕಾರಿಗಳಲ್ಲಿ ಒಂದೊಂದು ಬಗೆಯ ಆರೋಗ್ಯ ಪ್ರಯೋಜನವನ್ನು ನೀಡುವ ಗುಣವಿದೆ. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಬ್ರೊಕೋಲಿ ಮತ್ತು ಹೂಕೋಸು. ಹೀಗಾಗಿ ಯಾವುದನ್ನು ಕೂಡ ಕಡೆಗಣಿಸದಿರಿ.

ನೈಸರ್ಗಿಕವಾಗಿ ಸಿಗುವ ವಿವಿಧ ಬಗೆಯ ಹಸಿರೆಲೆ ಸೊಪ್ಪು ತರಕಾರಿಗಳ, ವಿವಿಧ ಬಗೆಯ ಹಣ್ಣುಗಳು ನೋಡಲು ಒಂದೇ ಗಾತ್ರವನ್ನು ಹೊಂದಿರುವುದಿಲ್ಲ. ಕೆಲವು ತರಕಾರಿಗಳು ದಪ್ಪಗೆ ಇದ್ದರೆ ಇನ್ನು ಕೆಲವು ತುಂಬಾ ಸಣ್ಣಗೆ ಇರುತ್ತವೆ. ಇದರ ಜೊತೆಗೆ ಅವುಗಳ ಗುಣಲಕ್ಷಣಗಳು, ಬಣ್ಣಗಳು, ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಪೌಷ್ಟಿಕ ಸತ್ವಗಳು ಹೀಗೆ ಎಲ್ಲದರಲ್ಲಿಯೂ ಕೂಡ ವ್ಯತ್ಯಾಸ ಕಂಡುಬರುತ್ತದೆ.

ಉದಾಹರಣೆಗೆ ಕೇಸರಿ ಬಣ್ಣದಲ್ಲಿ ಕಂಗೊಳಿಸುವ ಕ್ಯಾರೆಟ್ ತಿಂದರೆ ಚರ್ಮಕ್ಕೆ ಹಾಗೂ ಕಣ್ಣಿಗೆ ಒಳ್ಳೆಯದು ಎಂದು ಹೇಳುತ್ತಾರೆ, ಬೀಟ್ರೂಟ್ ಸೇವನೆ ಮಾಡಿದರೆ ರಕ್ತಹೀನತೆ ಸಮಸ್ಯೆ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿಯಲ್ಲಿ ಬೀನ್ಸ್ ಸೇವನೆ ಮಾಡುವುದರಿಂದ ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ ಎಂಬ ಮಾತಿದೆ. ಈಗ ಹೂಕೋಸು ಹಾಗೂ ಬ್ರೊಕೋಲಿಯ ಸರದಿ!

ಬ್ರೊಕೋಲಿ ಮತ್ತು ಹೂಕೋಸು

Growing your own - vegetables / RHS Gardening

  • ಗಜ ಗಾತ್ರ ಹೊಂದಿರುವ ತರಕಾರಿಗಳ ಪಟ್ಟಿಯಲ್ಲಿ ಬ್ರೊಕೋಲಿ ಮತ್ತು ಹೂಕೋಸುಗಳು ಕೂಡ ಸೇರುತ್ತವೆ.
  • ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಹಾಗೆ, ಹಸಿರೆಲೆ ತರಕಾರಿಗಳು ಹೆಚ್ಚು ದಪ್ಪಗೆ, ಇದ್ದಷ್ಟು ಅವುಗಳಿಂದ ಸಿಗುವ ಆರೋಗ್ಯ ಪ್ರಯೋಜನಗಳು ಹಾಗೂ ಪೌಷ್ಟಿಕ ಸತ್ವಗಳು ಕೂಡ ಅಷ್ಟೇ ಹೆಚ್ಚಾಗಿರುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
  • ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ, ಬ್ರೊಕೋಲಿ ಮತ್ತು ಹೂಕೋಸು. ಇವೆರಡೂ ಕೂಡ, ತಮ್ಮಲ್ಲಿ ಕಡಿಮೆ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಅಂಶಗಳನ್ನು ಒಳಗೊಂಡಿರುವ ಜೊತೆಗೆ ವಿಟಮಿನ್ ಸಿ, ವಿಟಮಿನ್ ಎ ಮತ್ತು ವಿಟಮಿನ್ ಕೆ ಅಂಶಗಳು ಸಾಕಷ್ಟು ಪ್ರಮಾಣದಲ್ಲಿ ಒಳಗೊಂಡಿದರೆ.
  • ಇವೆಲ್ಲಾ ಅಂಶಗಳು ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗುವಂತೆ ಮಾಡಿ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರವಾಗಲು ನೆರವಾಗುತ್ತದೆ.

ಹೃದಯ ಆರೋಗ್ಯಕ್ಕೆ

ಹೃದಯ ಆರೋಗ್ಯಕ್ಕೆ

  • ಬ್ರೊಕೋಲಿ ಮತ್ತು ಹೂಕೋಸು ಇವೆರಡೂ ತರಕಾರಿ ಗಳು ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಸಲಹೆ ನೀಡುತ್ತಾರೆ.
  • ಇದಕ್ಕೆ ಪ್ರಮುಖ ಕಾರಣ, ಇವುಗಳಲ್ಲಿ ಕಂಡು ಬರುವ ಕಡಿಮೆ ಪ್ರಮಾಣದ ಕ್ಯಾಲೋರಿ ಅಂಶಗಳು, ಈಗಾಗಲೇ ಹೇಳಿದ ಹಾಗೆ ಅಪಾರ ಪ್ರಮಾಣದಲ್ಲಿ ವಿಟಮಿನ್ಸ್ ಅಂಶ ಗಳು, ಖನಿಜಾಂಶಗಳು, ಪೊಟ್ಯಾಶಿಯಂ, ಮ್ಯಾಂಗನೀಸ್ ಇತ್ಯಾದಿ.
  • ಹೀಗೆ ಇವೆಲ್ಲಾವೂ ಕೂಡ ನಮ್ಮ ಹೃದಯಕ್ಕೆ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಅಂಶಗಳು ಆಗಿರುವುದರಿಂದ, ದೈನಂದಿನ ಆಹಾರ ಪದ್ಧತಿಯಲ್ಲಿ ಇವುಗಳನ್ನು ಸೇರಿಸಿ ಕೊಂಡರೆ ಬಹಳ ಒಳ್ಳೆಯದು.​

ಆಹಾರ ಪದ್ಧತಿಗಳು...

ಆಹಾರ ಪದ್ಧತಿಗಳು...

  • ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರೆ, ಉತ್ತಮವಾದ ಜೀವನಶೈಲಿಯ ಜೊತೆಗೆ ಪೊಟ್ಯಾಶಿಯಂ ಅಂಶ ಹೆಚ್ಚಿರುವ ಆಹಾರಗಳನ್ನು ಮಿತವಾಗಿ ಸೇವನೆ ಮಾಡಬೇಕು.
  • ಉದಾಹರಣೆಗೆ ಬ್ರೊಕೋಲಿ, ಹೂಕೋಸು, ಸಿಹಿಗೆಣಸು, ಬಟಾಣಿ, ಕುಂಬಳಕಾಯಿ, ಸೌತೆಕಾಯಿ, ಅಣಬೆಗಳು, ಹಣ್ಣು ಗಳಾದ ಬಾಳೆಹಣ್ಣು, ಕಿತ್ತಳೆ, ಒಣಒಣದ್ರಾಕ್ಷಿ, ಒಣಖರ್ಜೂರ ಇವುಗಳ ನ್ನೆಲ್ಲಾ ಆಹಾರಕ್ರಮದಲ್ಲಿ ಬಳಸಿಕೊಳ್ಳಬೇಕು.
  • ಇಂತಹ ಆಹಾರಗಳು ರಕ್ತನಾಳಗಳಲ್ಲಿ ರಕ್ತದ ಸಂಚಾರ ಸರಾಗ ವಾಗಿ ನಡೆಯಲು ನೆರವಾಗುವುದು ಮಾತ್ರವಲ್ಲದೆ, ಹೃದಯಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗಿ, ಹೃದಯದ ಸಮಸ್ಯೆಗಳು ದೂರವಾಗುವಂತೆ ನೋಡಿಕೊಳ್ಳುತ್ತವೆ.​

ಹೂಕೋಸಿನ ಬಗ್ಗೆ ಹೇಳುವುದಾದರೆ

Cauliflower: Health Benefits & Nutrition Facts | Live Science

  • ನೋಡಲು ದಪ್ಪವಾಗಿ ಕಾಣುವ ಈ ತರಕಾರಿಯಲ್ಲಿ ಅಗಾಧ ಪ್ರಮಾಣದ ನಾರಿನಾಂಶ ಕಂಡು ಬರುವ ಜೊತೆಗೆ ಪೊಟ್ಯಾಶಿ ಯಂ ಅಂಶಗಳು ಕೂಡ ಯಥೇಚ್ಛವಾಗಿ ಕಂಡು ಬರುತ್ತದೆ.
  • ಪ್ರಮುಖವಾಗಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕೊಬ್ಬಿ ನಾಂಶ ಈ ತರಕಾರಿಯಲ್ಲಿರುವುದರಿಂದ, ಹೃದಯದ ಆರೋಗ್ಯಕ್ಕೆ ಹೇಳಿ ಮಾಡಿಸಿದ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ!​

ಇನ್ನು ಬ್ರೊಕೋಲಿ ಬಗ್ಗೆ ಹೇಳುವುದಾದರೆ...

Elderly women should eat their greens to reduce their risk of stroke |  Daily Mail Online

  • ಬ್ರೊಕೋಲಿ ಅಥವಾ ಕೋಸುಗಡ್ಡೆ ಬೆಲೆಯಲ್ಲಿ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು.
  • ಪ್ರಮುಖವಾಗಿ ಇದರಲ್ಲಿ ವಿವಿಧ ಬಗೆಯ ವಿಟಮಿನ್ಸ್ ಗಳು, ಪೊಟ್ಯಾಶಿಯಂ ಮತ್ತು ಮೆಗ್ನೀಷಿಯಂ ತರಹದ ಖನಿಜಾಂಶಗಳು ಸಿಗುವುದರಿಂದ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಅತ್ಯುತ್ತಮವಾಗಿ ನಿರ್ವಹಿಸಿ, ಹೃದಯಕ್ಕೆ ಸಮಸ್ಯೆಗಳು ಬರದೇ ಇರುವ ಹಾಗೆ ನೋಡಿ ಕೊಳ್ಳುತ್ತದೆ.

broccoli and cauliflower these two vegetables may reduce the risk of heart disease.