ಎರಡೂ ಕಿಡ್ನಿಗಳಿಗೆ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳುವ ತರಕಾರಿಗಳಿವು!

06-06-23 07:47 pm       Source: Vijayakarnataka   ಡಾಕ್ಟರ್ಸ್ ನೋಟ್

ದೇಹದಲ್ಲಿ ವಿಷಕಾರಿ ಅಂಶಗಳನ್ನು ತೆಗೆದು ಹಾಕುವ ಕೆಲಸವನ್ನು ಕಿಡ್ನಿಗಳು ಮಾಡುತ್ತವೆ. ಹೀಗಾಗಿ ಕಿಡ್ನಿಗಳಿಗೆ ಸಮಸ್ಯೆಗಳು ಬರದೇ ಇರುವ ಹಾಗೆ, ಕೆಲವೊಂದು ಆರೋಗ್ಯಕಾರಿ ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.

ನಮ್ಮ ದೇಹದ ಕಿಡ್ನಿಗಳು ಅಥವಾ ಮೂತ್ರಪಿಂಡಗಳು ಇನ್ನಿತರ ಪ್ರಮುಖ ಅಂಗಾಂಗಗಳ ಸಾಲಿಗೆ ಸೇರುತ್ತವೆ. ದಿನದ 24 ಗಂಟೆಯೂ ತಮ್ಮ ಪಾಡಿಗೆ, ತಾವು ಕಾರ್ಯ ನಿರ್ವಹಿಸುವ ಕಿಡ್ನಿಗಳು, ರಕ್ತವನ್ನು ಶೋಧಿಸಿ, ದೇಹ ದಿಂದ ವಿಷಕಾರಿ ಅಂಶಗಳನ್ನು ಹೊರಹಾಕುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತವೆ.

ಆದರೆ ಒಂದು ವೇಳೆ ಕಿಡ್ನಿಗಳ ಆರೋಗ್ಯದಲ್ಲಿ ಸಮಸ್ಯೆಗಳು ಕಂಡು ಬಂದು, ಇವು ಸರಿಯಾಗಿ ಕಾರ್ಯ ನಿರ್ವ ಹಣೆ ಮಾಡದೇ ಹೋದರೆ, ದೇಹದಲ್ಲಿ ವಿಷಕಾರಿ ಅಂಶಗಳು ಹೆಚ್ಚಾಗಿ, ಇತರ ಆರೋಗ್ಯ ಸಮಸ್ಯೆಗಳು ಕಂಡು ಬರುವ ಜೊತೆಗೆ, ಕಿಡ್ನಿಗಳಲ್ಲಿಯೂ ಕೂಡ ಸಮಸ್ಯೆ ಕಾಣಿಸಿಕೊಳ್ಳುತ್ತವೆ...

ಹಾಗಾದ್ರೆ ಇದಕ್ಕೆ ಪರಿಹಾರವೇನು?

Facts about kidneys and how they work | Kidney Care UK

  • ಹೀಗಾಗಿ ಇವೆಲ್ಲಾ ಸಮಸ್ಯೆಗಳಿಂದ ದೂರ ಇರಬೇಕು ಎಂದರೆ, ಮೊದಲು ನಮ್ಮ ದೈನಂದಿನ ಆಹಾರ ಪದ್ಧತಿ ಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಕಿಡ್ನಿ ಗಳ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು.
  • ತಜ್ಞರು ಹೇಳುವ ಪ್ರಕಾರ ಕೆಲವೊಂದು ತರಕಾರಿಗಳು ಸಹಾಯ ಮಾಡುತ್ತವೆ. ಹಾಗಾದ್ರೆ ಬನ್ನಿ ಅಂತಹ ತರಕಾರಿಗಳು ಯಾವುದು ಎನ್ನುವುದನ್ನು ಎಂಬು ದನ್ನು ನೋಡೋಣ...​

ಕೇಸರಿ ಬಣ್ಣದ ಕ್ಯಾರೆಟ್

5 benefits of carrots that make it the perfect winter superfood |  HealthShots

  • ಮಾರ್ಕೆಟ್‌ನಲ್ಲಿ ಎಲ್ಲಾ ತರಕಾರಿಗಳ ಮಧ್ಯದಲ್ಲಿ ಎಲ್ಲ ರನ್ನೂ ಆಕರ್ಷಿಸುವ ಕೇಸರಿ ಬಣ್ಣದ ಕ್ಯಾರೆಟ್ ಅಂದರೆ ಎಲ್ಲರಿಗೂ ಇಷ್ಟವಾಗುತ್ತದೆ.
  • ತನ್ನಲ್ಲಿ ನೈಸರ್ಗಿಕ ಸಿಹಿ ಅಂಶ ಹೊಂದಿರುವ ಕ್ಯಾರೆ ಟ್‌ನಲ್ಲಿ ವಿಟಮಿನ್ ಎ ಹಾಗೂ ಬೀಟಾ-ಕ್ಯಾರೋಟಿನ್ ಅಂಶದ ಪ್ರಮಾಣ, ಅಧಿಕ ಪ್ರಮಾಣ ದಲ್ಲಿ ಕಂಡು ಬರುವುದರಿಂದ, ಈ ತರಕಾರಿಯನ್ನು ಮಿತವಾಗಿ ಸೇವನೆ ಮಾಡಿದರೆ, ಕಿಡ್ನಿಗಳ ಅರೋಗ್ಯವನ್ನು ಕಾಪಾಡಿ ಕೊಳ್ಳಬಹುದು.
  • ಇದಕ್ಕೆ ಪ್ರಮುಖ ಕಾರಣ, ಕ್ಯಾರೆಟ್‌ನಲ್ಲಿ ಕಂಡು ಬರುವ ಆರೋಗ್ಯಕಾರಿ ಅಂಶಗಳು, ದೇಹದಲ್ಲಿ ಕಂಡು ಬರುವ ಅತಿಯಾದ ಸೋಡಿಯಂ ಅಂಶವನ್ನು ಹೊರ ಹಾಕುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿ ಸುತ್ತದೆ. ಇದರಿಂದ ಕಿಡ್ನಿಗಳು ತಮ್ಮ ಪಾಡಿಗೆ ತಾವು ಕಾರ್ಯ ನಿರ್ವಹಿಸಲು ನೆರವಾಗುತ್ತವೆ.

ಈರುಳ್ಳಿ

Onion | Crops | Plantix

  • ಅಡುಗೆಯ ರುಚಿ ಹೆಚ್ಚಿಸುವ ಈರುಳ್ಳಿಯನ್ನು ಕತ್ತರಿ ಸುವಾಗ ಕಣ್ಣಲ್ಲಿ ನೀರು ತರಿಸಿದರೂ ಕೂಡ, ಇದರಲ್ಲಿ ಅಡಗಿರುವ ಕೆಲವು ಔಷಧೀಯ ಅಂಶಗಳು ಊಹೆಗೂ ನಿಲುಕದು!
  • ಪ್ರಮುಖವಾಗಿ ಇದರಲ್ಲಿ ಕಂಡು ಬರುವ ಸಲ್ಫರ್‌ ಮತ್ತು ಅ್ಯಮಿನೊ ಆಮ್ಲಗಳು, ದೇಹದಲ್ಲಿ ನೈಸರ್ಗಿಕ ಡಿಟಾಕ್ಸ್‌ನಂತೆ ಕಾರ್ಯ ನಿರ್ವಹಿಸಿ, ರಕ್ತದಲ್ಲಿರುವ ಕಲುಷಿತ ಅಂಶಗಳನ್ನು ಹೊರಹಾಕುತ್ತದೆ.
  • ಇಷ್ಟು ಮಾತ್ರವಲ್ಲದೆ, ಇದರಲ್ಲಿ ಕಂಡು ಬರುವ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇನ್ಫಾಮೇಟರಿ ಎನ್ನುವ ಆರೋ ಗ್ಯಕಾರಿ ಅಂಶಗಳು, ಮನುಷ್ಯನ ರಕ್ತ ಸಂಚಾ ರದಲ್ಲಿ ಏರು ಪೇರಾಗದಂತೆ ನೋಡಿಕೊಂಡು, ಹೃದ ಯದ ಆರೋಗ್ಯ ವನ್ನು ಉತ್ತಮವಾಗಿ ನಿರ್ವಹಣೆ ಮಾಡುವುದರ ಜೊತೆಗೆ ಕಿಡ್ನಿಗಳ ಆರೋಗ್ಯವನ್ನು ಕೂಡ ಅಚ್ಚುಕಟ್ಟಾಗಿ ನಿರ್ವಹಿ ಸುತ್ತದೆ.
  • ಎಲ್ಲಾಕ್ಕಿಂತ ಮುಖ್ಯವಾಗಿ ಈರುಳ್ಳಿಯಲ್ಲಿ ಕಂಡು ಬರುವ ಕ್ರಿಯೇಟಿನೈನ್ ಎಂಬ ನೈಸರ್ಗಿಕ ಅಂಶವು ರಕ್ತದೊತ್ತಡ ವನ್ನು ನಿಯಂತ್ರಣ ಮಾಡಿ, ಕಿಡ್ನಿಗಳಿಗೆ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ.

ಹೂಕೋಸು

Cauliflower: health benefits and how to cook it

  • ಗಜ ಗಾತ್ರದ ತರಕಾರಿಗಳ ಪಟ್ಟಿಯಲ್ಲಿ ಹೂಕೋಸು ಕೂಡ ಬಂದು ನಿಲ್ಲುತ್ತದೆ. ಈ ತರಕಾರಿಯಲ್ಲೂ ಕೂಡ ಅಷ್ಟೇ, ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು, ಕೂಡ ಇದರಲ್ಲಿ ಕಂಡು ಬರುತ್ತದೆ.
  • ಪ್ರಮುಖವಾಗಿ ಈ ತರಕಾರಿಯಲ್ಲಿ ವಿಟಮಿನ್ ಸಿ ಅಂಶ, ವಿಟಮಿನ್ ಕೆ ಅಂಶ, ಪಾಸ್ಪರಸ್, ನಾರಿನಾಂಶ, ಪೋಲಿಕ್ ಆಮ್ಲ, ಪೊಟ್ಯಾಶಿಯಂ ಇತ್ಯಾದಿ ಆರೋಗ್ಯ ಕಾರಿ ಅಂಶಗಳು ಯಥೇಚ್ಛವಾಗಿ ಕಂಡು ಬರುತ್ತದೆ.
  • ಎಲ್ಲಾಕ್ಕಿಂತ ಮುಖ್ಯವಾಗಿ ಈ ತರಕಾರಿಯಲ್ಲಿ ಕಡಿಮೆ ಪ್ರಮಾಣ ಸೋಡಿಯಂ ಅಂಶ ಕಂಡು ಬರುವುದ ರಿಂದ ದೇಹ ದಲ್ಲಿ ನೀರಿನಂಶದ ಸಮತೋಲನ ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ. ಇದರಿಂದ ಕಿಡ್ನಿಗಳ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತವೆ.

ಎಲೆಕೋಸು

Growing Cabbage: Planting, Growing, and Harvesting Cabbages | The Old  Farmer's Almanac

  • ಹೂಕೋಸಿನಂತೆ ಎಲೆಕೋಸಿನಲ್ಲೀ ಕೂಡ ಅಷ್ಟೇ, ಈ ತರಕಾರಿಯಲ್ಲಿ ಕೂಡ ವಿಟಮಿನ್ ಸಿ ಅಂಶ ಹೆಚ್ಚಾಗಿ ರುವ ಕಾರಣ ಇದೊಂದು ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡಿ, ಕಿಡ್ನಿಗಳ ಅರೋಗ್ಯ ವನ್ನು ಕಾಪಾಡುತ್ತದೆ.
  • ಇದರ ಜೊತೆಗೆ ಈ ತರಕಾರಿಯಲ್ಲಿ ನಾರಿನಾಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕಿಡ್ನಿಗಳ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ನೋಡಿಕೊಳ್ಳುತ್ತದೆ​

ತೊಂ​ಡೆಕಾಯಿ

  • ಕೈಬೆರಳಿನಷ್ಟೇ ಉದ್ದಕ್ಕೆ ಇರುವ ತೊಂಡೆಕಾಯಿಯಲ್ಲಿ ಅಧಿಕ ಪ್ರಮಾಣದ ನೀರಿನಾಂಶ, ಒಳಗೊಂಡಿರುವ ಆರೋಗ್ಯಕಾರಿ ತರಕಾರಿ.
  • ಆದರೆ ನಮ್ಮಲ್ಲಿ ಹೆಚ್ಚಿನವರು ಈ ತರಕಾರಿಯನ್ನು ಕತ್ತರಿ ಸುವಾಗ ಕಂಡು ಬರುವ ಅಂಟಾದ ದ್ರವದ ಕಾರಣ, ಹೆಚ್ಚಾಗಿ ಈ ತರಕಾರಿಯಿಂದ ದೂರ ನಿಲ್ಲು ತ್ತಾರೆ.
  • ಆದರೆ ನಿಮಗೆ ತೊಂಡೆಕಾಯಿಲೆಯಲ್ಲಿ ಅಧಿಕ ಪ್ರಮಾ ಣದಲ್ಲಿ ನಾರಿನಾಂಶ ಹಾಗೂ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಅಂಶ ಹೇರಳವಾಗಿ ಕಂಡು ಬರುವುದ ರಿಂದ, ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಅಚ್ಚು ಕಟ್ಟಾಗಿ ನಿರ್ವಹಣೆ ಮಾಡಿ, ಕಿಡ್ನಿಯಲ್ಲಿ ಕಲ್ಲು ಜಮೆ ಆಗ ದಂತೆ ತಡೆಯುತ್ತದೆ.​

these natural vegetables that keep your kidney healthy.