ಮಧುಮೇಹಿಗಳು ತಪ್ಪದೇ ಸವಿಯಬೇಕಾದ ವಿಟಮಿನ್ ಕೆ ಸಮೃದ್ಧವಾಗಿರುವ ತರಕಾರಿಗಳು

07-06-23 07:46 pm       Source: Vijayakarnataka   ಡಾಕ್ಟರ್ಸ್ ನೋಟ್

ಆರೋಗ್ಯ ತಜ್ಞರು ಹೇಳುವ ಪ್ರಕಾರ ಮಧುಮೇಹ ಕಾಯಿಲೆ ಇರುವವರು, ವಿಟಮಿನ್ ಕೆ ಅಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುವ ತರಕಾರಿಗಳನ್ನು ಕಡ್ಡಾಯವಾಗಿ ಸೇವಿಸಬೇಕು.

ಮಧುಮೇಹ ಅಥವಾ ಸಕ್ಕರೆಕಾಯಿಲೆ ಎನ್ನುವುದು ಎನ್ನುವುದು ದೀರ್ಘಕಾಲದ ಆರೋಗ್ಯ ಸಮಸ್ಯೆ. ಮನುಷ್ಯನಿಗೆ ಒಮ್ಮೆ ಕಾಣಿಸಿಕೊಂಡರೆ ಮತ್ತೆ, ಆತನನ್ನು ಈ ಕಾಯಿಲೆ ಬಿಟ್ಟು ಹೋಗುವುದಿಲ್ಲ!

ಹೀಗಾಗಿ ಕಾಯಿಲೆ ಕಾಣಿಸಿಕೊಳ್ಳುವ ಮುನ್ನವೇ ಅನಾರೋಗ್ಯಕಾರಿ ಆಹಾರ ಪದ್ಧತಿ, ಮಾನಸಿಕ ಒತ್ತಡದಿಂದ ದೂರವಿದ್ದು, ಆರೋಗ್ಯಕಾರಿ ಜೀವನ ಶೈಲಿ ಅಂದರೆ ಪ್ರತಿದಿನ ಆರೋಗ್ಯಕಾರಿ ಆಹಾರ ಪದ್ಧತಿ, ವ್ಯಾಯಾಮ, ನಡಿಗೆ, ಧ್ಯಾನ ಅಥವಾ ಯೋಗಾಭ್ಯಾಸಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಈ ಕಾಯಿಲೆಯಿಂದ ದೂರವಿರಬಹುದು.

ಬನ್ನಿ ಇಂದಿನ ಈ ಲೇಖನದಲ್ಲಿ ಈಗಾಗಲೇ ಈ ಕಾಯಿಲೆ ಅಂಟಿಸಿ ಕೊಂಡವರು ಯಾವೆಲ್ಲಾ ಬಗೆಯ ವಿಟಮಿನ್ ಕೆ ಅಂಶ ಹೆಚ್ಚಿರುವ ತರಕಾರಿಗಳನ್ನು ಸೇವನೆ ಮಾಡಬೇಕು ಎನ್ನುವುದನ್ನು ನೋಡೋಣ...

ಬ್ರೊಕೊಲಿ

Vitamin K-Rich Foods With Benefits, Recipes & Deficiencies

  • ಬ್ರೊಕೊಲಿಯಲ್ಲಿ ಹಲವಾರು ರೀತಿಯ ಪೋಷಕಾಂಶ ಗಳಿಂದ ಕೂಡಿದ ತರಕಾರಿ. ಇದನ್ನು ಕನ್ನದಲ್ಲಿ ಕೋಸು ಗಡ್ಡೆ ಎಂದೂ ಕೂಡ ಕರೆಯಲಾಗುತ್ತದೆ.
  • ಪ್ರಮುಖವಾಗಿ ಈ ತರಕಾರಿಗಳಲ್ಲಿ ಕಬ್ಬಿಣಾಂಶ, ನಾರಿ ನಾಂಶ, ಪ್ರೋಟೀನ್, ಕ್ಯಾಲ್ಸಿಯಂ, ಸೆಲೆನಿಯಮ್ ಮತ್ತು ಮೆಗ್ನೀಸಿಯಂ ಅಧಿಕ ಪ್ರಮಾಣದಲ್ಲಿ ಕಂಡು ಬರುವ ಜೊತೆಗೆ, ವಿಟಮಿನ್ ಕೆ ಅಂಶ ಕೂಡ ಯಥೇಚ್ಛವಾಗಿ ಸಿಗುತ್ತದೆ.
  • ಪ್ರಮುಖವಾಗಿ ಆರೋಗ್ಯಕರವಾದ ಈ ವಿಟಮಿನ್ ಕೆ ಅಂಶಗಳು, ಮಧುಮೇಹ ರೋಗಿಗಳಲ್ಲಿ ರಕ್ತನಾಳಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ದೂರ ಮಾಡಿ, ಹೃದ ಯದ ಆರೋಗ್ಯವನ್ನು ಕಾಪಾಡುತ್ತದೆ ಜೊತೆಗೆ ರಕ್ತದಲ್ಲಿ ಸಕ್ಕರೆ ಮಟ್ಟ ಏರುಪೇರು ಆಗದಂತೆ ನೋಡಿಕೊಳ್ಳುತ್ತದೆ.

ಕೇಲ್ ಎಲೆ

Vitamin K Rich Foods: Foods rich in Vitamin K that you must add to your diet

  • ಕೇಲ್ ಎಲೆಯಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ, ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಕೂಡ ಕಂಡು ಬರುತ್ತದೆ. ಪ್ರಮುಖವಾಗಿ ಬೇಯಿಸಿದ ಕೇಲ್ ಎಲೆಯಲ್ಲಿ ಸಮೃದ್ಧ ಪ್ರಮಾಣದಲ್ಲಿ ವಿಟಮಿನ್ ಕೆ ಅಂಶ ಕಂಡು ಬರುತ್ತದೆ.
  • ಇಷ್ಟೇ ಅಲ್ಲದೆ ಈ ಕೇಲ್ ಎಲೆಯಲ್ಲಿ ಅಧಿಕ ಪ್ರಮಾಣದ ನಾರಿನಾಂಶ, ನೀರಿ ನಾಂಶ ಹಾಗೂ ಪ್ರೋಟೀನ್‍ ಅಂಶ ಗಳು ಯಥೇಚ್ಛವಾಗಿ ಕಂಡು ಬರುವುದರಿಂದ ಜೀರ್ಣ ಕ್ರಿಯೆ ಪ್ರಕ್ರಿಯೆ ಯನ್ನು ಸುಧಾರಿಸುತ್ತದೆ.
  • ಹೀಗಾಗಿ ಈಗಾಗಲೇ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಕೇಲ್ ಎಲೆಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೆರವಾ ಗುವುದರ ಜೊತೆಗೆ, ದೇಹದ ತೂಕ ಕೂಡ ಏರಿಕೆ ಆಗದಂತೆ ತಡೆಯಬಹುದಾಗಿದೆ.​

ಲೆಟಿಸ್

Lettuce | Description, Varieties, & Facts | Britannica

  • ಹಸಿರು ಎಲೆತರಕಾರಿಗಳ ಜಾತಿಗೆ ಸೇರಿರುವ ಲೆಟಿಸ್ ಸೊಪ್ಪು, ಮನುಷ್ಯನ ದೇಹಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಬಗೆಯ ಪೌಷ್ಟಿಕಾಂಶಗಳು ಇವುಗಳಲ್ಲಿ ಸಿಗುತ್ತವೆ.
  • ಪ್ರಮುಖವಾಗಿ ಈ ಸೊಪ್ಪಿನಲ್ಲಿ ಯಥೇಚ್ಛವಾಗಿ ನೀರಿ ನಾಂಶ ಕಂಡು ಬರುವುದರ ಜೊತೆಗೆ ವಿಟಮಿನ್ ಕೆ ಕೂಡ ಹೇರಳವಾಗಿ ಸಿಗುತ್ತದೆ.
  • ಅಷ್ಟೇ ಅಲ್ಲದೆ ಈ ತರಕಾರಿಯಲ್ಲಿ ಗ್ಲೈಸಮಿಕ್ ಸೂಚ್ಯಂಕ ತುಂಬಾನೇ ಕಡಿಮೆ ಪ್ರಮಾಣದಲ್ಲಿ ಕಂಡು ಬರುವುದರಿಂದ, ರಕ್ತದಲ್ಲಿ ಸಕ್ಕರೆಮಟ್ಟ ಏರಿಕೆಯಾಗ ದಂತೆ ತಡೆಯುತ್ತದೆ.​

ಪಾಲಕ್‌‌ ಸೊಪ್ಪು

Time for Spinach - The Produce Box

  • ಪಾಲಕ್‌‌ ಸೊಪ್ಪಿನ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ತನ್ನಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಹಾಗೂ ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿರುವ ಸೊಪ್ಪು.
  • ಪ್ರಮುಖವಾಗಿ ಈ ಸೊಪ್ಪಿನ ಕಬ್ಬಿಣಾಂಶ, ಪೊಟಾ ಶಿಯಂ, ಮೆಗ್ನಿಶಿಯಂ, ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಹಾಗೂ ವಿಟಮಿನ್ ಕೆ ಹೇರಳವಾಗಿ ಕಂಡು ಬರುವುದ ರಿಂದ, ಮಧುಮೇಹ ಇದ್ದವರಿಗೆ, ಈ ಹಸಿರೆಲೆ ಸೊಪ್ಪು ಬಹಳ ಒಳ್ಳೆಯದು ಎಂದು ಸಾಬೀತಾಗಿದೆ.

ಮೆಂತೆಸೊ​ಪ್ಪು

ಮೆಂತೆ ಸೊಪ್ಪಿನ ಸೇವನೆಯಿಂದ ಸಿಗಲಿದೆ ಆರೋಗ್ಯಕರ ಅಂಶ

  • ತನ್ನಲ್ಲಿ ಕಹಿ ಗುಣವನ್ನು ಒಳಗೊಂಡಿರುವಮೆಂತೆ ಸೊಪ್ಪಿನಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಕೂಡ ಕಂಡು ಬರುತ್ತದೆ.
  • ಹೀಗಾಗಿ ನಮ್ಮ ದೈನಂದಿನ ಆಹಾರ ಪದಾರ್ಥಗಳಲ್ಲಿ ಈ ಸೊಪ್ಪನ್ನು ಬಳಸಿಕೊಳ್ಳುವು ದರಿಂದ, ಆರೋಗ್ಯಕ್ಕೆ ಬೇಕಾಗುವ ಹಲವಾರು ರೀತಿಯ ಪ್ರಯೋಜನಗಳು ಸಿಗುತ್ತಾ ಹೋಗುತ್ತದೆ.
  • ಪ್ರಮುಖವಾಗಿ ಈ ಸೊಪ್ಪಿನಲ್ಲಿ ಕರಗುವ ನಾರಿನಾಂಶ, ಬೀಟಾ ಕೆರೋಟಿನ್ ಹಾಗೂ ವಿಟಮಿನ್ ಸಿ, ವಿಟಮಿನ್ ಎ ಮತ್ತು ವಿಟಮಿನ್ ಕೆ ಅಂಶಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ.
  • ಮಧುಮೇಹ ರೋಗಿಗಳ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ ಆಗದಂತೆ ಸಹಾಯ ಮಾಡಿ, ಮಧುಮೇಹ ಕಾಯಿಲೆ ಯನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ.
  • ಅಷ್ಟೇ ಅಲ್ಲದೆ ಮೊದಲೇ ಹೇಳಿದಂತೆ ಈ ಸೊಪ್ಪಿನಲ್ಲಿ ವಿಟ ಮಿನ್ ಕೆ ಅಂಶ ಕೂಡ ಇರುವ ಕಾರಣ, ದೇಹದ ಮೂಳೆಗಳ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ.​

diabetes patient must add these vitamin k rich vegetables to control blood sugar level.