ಶುಗರ್ ಇರುವವರು ಎಳನೀರು ಕುಡಿಯಬಹುದಾ? ಇದರಿಂದ ಸಮಸ್ಯೆ ಆಗುತ್ತಾ?

08-06-23 07:30 pm       Source: Vijayakarnataka   ಡಾಕ್ಟರ್ಸ್ ನೋಟ್

ನೈಸರ್ಗಿಕ ಸಿಹಿ ಅಂಶ ಹೊಂದಿರುವ ಎಳನೀರು ಎಲ್ಲರಿಗೂ ಇಷ್ಟವಾಗುತ್ತದೆ. ಅಲ್ಲದೆ, ಇದು ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು.

ಬೇಸಿಗೆ ಕಾಲದಲ್ಲಿ ದೇಹದ ದಾಹವನ್ನು ತಣಿಸಲು ನಿಸರ್ಗ ನಮಗೆ ತನ್ನ ಹಲವಾರು ಉತ್ಪನ್ನಗಳನ್ನು ವರದಾನ ವಾಗಿ ಕೊಡುತ್ತಿದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಅದು ಎಳನೀರು. ಬೇಸಿಗೆಯಲ್ಲಿ ದಿನಾ ಒಂದು ಎಳನೀರು ಕುಡಿಯುವುದರಿಂದ, ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂದು ಪರಿಗಣಿಸಲಾಗಿದೆ...

ಎಳನೀರಿನ ಬಗ್ಗೆ ಹೇಳುವುದಾದರೆ..

All you need to know about Tender Coconut Water: Health benefits

  • ನಮಗೆಲ್ಲಾ ಗೊತ್ತೇ ಇರುವ ಹಾಗೆ ಎಳನೀರಿನಲ್ಲಿ ಇತರ ಪಾನೀಯಗಳಂತೆ ಯಾವುದೇ ಬಗೆಯ ಕೃತಕ ಅಂಶ ಇರುವುದಿಲ್ಲ. ಇದೊಂದು ಅಪ್ಪಟ ನೈಸರ್ಗಿಕ ಉತ್ಪನ್ನ.
  • ನಿಸರ್ಗ ಮನುಷ್ಯನ ಆರೋಗ್ಯವೃದ್ಧಿಗೆ ನೀಡಿರುವ ಉಡುಗೋರೆ ಎಂದರೆ ತಪ್ಪಾಗಲಾರದು. ಭೂಮಿಯ ಅಂತರಾಳದ ಅಂತ ರ್ಜಲದ ಜಲವನ್ನು ಹೀರಿಕೊಂಡು ನಿಸರ್ಗದ ಮಡಿಲಲ್ಲಿ ಬೆಳೆಯುವ ತೆಂಗಿನ ಮರ ನಮಗಾಗಿ ನೀಡುವ ಒಂದು ಅತ್ಯದ್ಭುತ ರುಚಿಕರವಾದ ನೈಸರ್ಗಿಕ ದ್ರವಾಹಾರ ಪದಾರ್ಥ.

ಈ ನೈಸರ್ಗಿಕ ಪಾನೀಯದಲ್ಲಿ ಸಿಗುವ ಪ್ರಯೋಜನಗಳ ಬಗ್ಗೆ ನೋಡುವುದಾದರೆ..

Green Fresh And Healthy Commonly Cultivated Round Whole Tender Coconut at  Best Price in Basti | Yadav Traders

  • ಸುಮಾರು 250 ಎಂಎಲ್‌ನಷ್ಟು ಎಳನೀರಿನಲ್ಲಿ ಕೇವಲ ಶೇಕಡಾ 42ರಷ್ಟು ಮಾತ್ರ ಕ್ಯಾಲೊರಿಗಳು ಮಾತ್ರ ಕಂಡು ಬರುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
  • ಹೀಗಾಗಿ ಈ ದ್ರವಾಹಾರವನ್ನು ದಿನಾ ಸೇವನೆ ಮಾಡುವು ದರಿಂದ, ದೇಹದ ತೂಕ ಇಳಿಸುವವರಿಗೆ ನೆರವಾಗುತ್ತದೆ.
  • ಪ್ರಮುಖವಾಗಿ ಎಳನೀರಿನಲ್ಲಿ ವಿಟಮಿನ್ ಸಿ , ಮೆಗ್ನೀಷಿ ಯಂ ಹಾಗೂ ಪೊಟ್ಯಾಷಿಯಂ ಅಂಶಗಳು ಹೆಚ್ಚಾಗಿದ್ದು, ಇವುಗಳು ರಕ್ತದ ಒತ್ತಡದ ಮಟ್ಟಗಳನ್ನು ಸಮತೋಲ ನಕ್ಕೆ ತಂದು ಅಧಿಕರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುವಲ್ಲಿ ನೆರವಾಗುತ್ತದೆ. ಇದರಿಂದ ರಕ್ತ ಸಂಚಾರ ಸರಿ ಯಾಗಿ ನಡೆದು, ಹೃದಯದ ಆರೋಗ್ಯ ಕೂಡ ಚೆನ್ನಾಗಿ ರುತ್ತದೆ.
  • ಇನ್ನು ಥಯಾಮಿನ್‌, ರಿಬೋಫ್ಲಾವಿನ್, ನಿಯಾಸಿನ್‌ ಎನ್ನುವ ಮೂರು ಆರೋಗ್ಯಕಾರಿ ಅಂಶಗಳು ಎಳನೀರಿ ನಲ್ಲಿ ಯಥೇಚ್ಛವಾಗಿ ಸಿಗುವುದರಿಂದ ಇವುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
  • ಪ್ರತಿದಿನ ಒಂದು ಎಳನೀರು ಕುಡಿಯುವುದರಿಂದ, ರಕ್ತ ದಲ್ಲಿ ಶೇಖರಣೆಗೊಂಡಿರುವ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಪರೋಕ್ಷವಾಗಿ ಹೃದಯದ ಆರೋಗ್ಯಕ್ಕೂ ಕೂಡ ನಡೆರವಾಗುತ್ತದೆ.

ಹಾಗಾದ್ರೆ ಮಧುಮೇಹ ಇದ್ದವರು ಎಳನೀರು ಕುಡಿಯಬಹುದಾ?

Diabetes | Patients with diabetes should have dinner by 6pm, says research  - Telegraph India

  • ಎಳನೀರು ಸೇವನೆ ಮಾಡುವುದರಿಂದ, ನಮ್ಮ ದೇಹಕ್ಕೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎನ್ನು ವುದನ್ನು ಮೇಲಿನ ವಿವರದಲ್ಲಿ ತಿಳಿಸಿದ್ದೇವೆ.
  • ಆದರೆ ಈಗ ಪ್ರಶ್ನೆ ಇರುವುದು, ಮಧುಮೇಹ ಇದ್ದ ವರು ಎಳನೀರು ಸೇವನೆ ಮಾಡಬಹುದಾ ಎಂದು! ಆದರೆ ನಿಮಗೆ ಗೊತ್ತಿರಲಿ ರುಚಿಕರವಾದ ಸಿಹಿ ಎಳನೀರಿನಲ್ಲಿ, ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಪೌಷ್ಟಿಕ ಸತ್ವಗಳ ಜೊತೆಗೆ, ನೈಸರ್ಗಿ ಕವಾಗಿ ಸಿಗುವ ಸಕ್ಕರೆ ಅಂಶಗಳು ಕೂಡ ಇದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.​

ಈ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆ?

ಈ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆ?

ರಕ್ತದಲ್ಲಿ ಸಕ್ಕರೆಮಟ್ಟ ನಿಯಂತ್ರಣದಲ್ಲಿ ಇರುವವರು, ಖಾಲಿ ಹೊಟ್ಟೆಗೆ ಒಂದು ಲೋಟ ಎಳನೀರು ಆಗುವಷ್ಟನ್ನು ಮಾತ್ರ ಕುಡಿಯಬಹುದು. ಇಲ್ಲಾಂದ್ರೆ ಬೆಳಗ್ಗಿನ ವ್ಯಾಯಾಮದ ಬಳಿಕ, ಎಳನೀರು ಕುಡಿದರೆ ಬಹಳ ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಎಳನೀರಿನ ಆಯ್ಕೆಯ ವಿಚಾರದಲ್ಲಿ

TENDER COCONUT - Maa Tara Fruits Company

  • ನಾವು ನೀವು ಗಮನಿಸಿರುವ ಹಾಗೆ, ರಸ್ತೆ ಬದಿಯಲ್ಲಿ ಎಲ್ಲಾ ಎಳನೀರು ಮಾರುವವನ ಹತ್ತಿರ, ಕೇವಲ ಹಸಿರು ಬಣ್ಣದ ಎಳನೀರು ಮಾತ್ರ ಹೆಚ್ಚಾಗಿ ಕಂಡು ಬರುತ್ತದೆ.
  • ಅಪರೂಪಕ್ಕೆ ಒಮ್ಮೆ ಕೆಂಬಣ್ಣದ ಎಳನೀರು ಕಾಣಲು ಸಿಗು ತ್ತದೆ. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ ಕೆಂಬ ಣ್ಣದ ಎಳನೀರು ಮಧುಮೇಹ ರೋಗಿಗಳಿವೆ ಒಳ್ಳೆಯದು ಎಂದು ಸಲಹೆ ನೀಡುತ್ತಾರೆ.

ಕೊನೆಯ ಮಾತು

President Orders Swift Action for Meeting Diabetic Patients' Needs |  Financial Tribune

  • ಈಗಾಗಲೇ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಸಿಗದಿ ದ್ದವರು, ಎಳನೀರಿನಿಂದ ದೂರವಿದ್ದರೆ ಒಳ್ಳೆಯದು. ಯಾಕೆಂದ್ರೆ ಇದರಲ್ಲಿ ನೈಸರ್ಗಿಕ ಸಿಹಿ ಅಂಶ ಇರುವುದ ರಿಂದ, ಮಧುಮೇಹ ಕಾಯಿಲೆ ನಿಯಂತ್ರಣ ಮೀರಿ ಹೋಗುವ ಸಾಧ್ಯತೆ ಇರುತ್ತದೆ.
  • ಮಧುಮೇಹ ಇರುವ ರೋಗಿಗಳು ಕಡ್ಡಾಯವಾಗಿ ಪ್ರತಿ ದಿನ ಮುಂಜಾನೆ ಎದ್ದ ಬಳಿಕ ವ್ಯಾಯಾಮ ಮಾಡಿ, ಆ ಬಳಿಕ ಒಂದು ಲೋಟ ಆಗುವಷ್ಟು ಎಳನೀರು ಕುಡಿಯ ಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
  • ಮಧುಮೇಹಿಗಳು ಪ್ರತಿದಿನ ವ್ಯಾಯಾಮ ಅಥವಾ ಯೋಗಾಭ್ಯಾಸವನ್ನು ಸರಿಯಾಗಿ ಅನುಸರಿಸದೇ ಇದ್ದರೆ, ರಕ್ತದಲ್ಲಿ ಸಕ್ಕರೆಯಂಶದಲ್ಲಿ ಏರುಪೇರು ಆಗುತ್ತಲೇ ಇರುತ್ತದೆ.
  • ಈ ಸಮಯದಲ್ಲಿ ಎಳನೀರು ಸೇವನೆ ಮಾಡಿದರೆ, ರಕ್ತ ದಲ್ಲಿ ಸಕ್ಕರೆಮಟ್ಟ ಹೆಚ್ಚಾಗಿ ಮಧುಮೇಹ ನಿಯಂತ್ರ ಣಕ್ಕೆ ಬಾರದೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆಯನ್ನು ನೀಡುತ್ತಾರೆ.

is drinking tender coconut water safe for diabetics patients these things you must know.