ದಾಳಿಂಬೆ ಹಣ್ಣು ಎಂತೆಂತಹ ಕಾಯಿಲೆಗಳನ್ನು ದೂರ ಮಾಡುತ್ತೆ ನೋಡಿ

10-06-23 07:34 pm       Source: Vijayakarnataka   ಡಾಕ್ಟರ್ಸ್ ನೋಟ್

ದಾಳಿಂಬೆ ಹಣ್ಣಿನಲ್ಲಿ ಸಿಗುವಂತಹ ವಿವಿಧ ಬಗೆಯ ಪೌಷ್ಟಿಕಾಂಶಗಳು, ವಿಟಮಿನ್ಸ್‌ಗಳು, ಖನಿಜಾಂಶಗಳು, ಮನುಷ್ಯನ ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.

ದಾಳಿಂಬೆ ಹಣ್ಣು ವರ್ಷ ಪೂರ್ತಿ ಅಂದರೆ, ಎಲ್ಲಾ ಸೀಸನ್‌ನಲ್ಲೂ ಮಾರುಕಟ್ಟೆಗಳಲ್ಲಿ ಸಿಗುವಂತಹ ಹಣ್ಣು ಎಂದರೆ ತಪ್ಪಾಗಲಾರದು. ಮಾರುಕಟ್ಟೆ ಯಲ್ಲಿ ಸಿಗುವ ಇತರ ಬಗೆಯ ಹಣ್ಣುಗಳೊಂದಿಗೆ ಈ ಹಣ್ಣಿನ ಭರಾಟೆ ಕೂಡ ಜೋರಾಗಿಯೇ ಇರುತ್ತದೆ. ಆದರೆ ಹೆಚ್ಚಿನವರು ಮಾತ್ರ ಈ ಹಣ್ಣಿನ ಕಡೆ, ತಿರುಗಿ ಕೂಡ ನೋಡಲ್ಲ! ಕಾರಣ ಇಷ್ಟೇ, ಈ ಹಣ್ಣಿನ ಬೆಲೆ, ಇತರ ಹಣ್ಣುಗಳ ಕಡೆಗೆ ನೋಡಿದರೆ ಯಾವಾಗಲೂ ಹೆಚ್ಚುಇರುತ್ತದೆ.

ಆದರೆ ನಿಮಗೆ ಗೊತ್ತಿರಲಿ, ಈ ಹಣ್ಣಿನ ಬೆಲೆ ಹೆಚ್ಚಾದರೂ ಪರವಾಗಿಲ್ಲ, ದಾಳಿಂಬೆ ಹಣ್ಣುಗಳನ್ನು ತಿನ್ನಲು ಹಿಂದೇಟು ಹಾಕಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಯಾಕೆಂದ್ರೆ ಈ ಹಣ್ಣಿನಲ್ಲಿ ಪಾಲಿಫಿನಾಲ್ ಎಂಬ ಪ್ರಬಲ ಆಂಟಿ ಆಕ್ಸಿಡೆಂಟ್ ಅಂಶಗಳು ಯಥೇಚ್ಛವಾಗಿ ಕಂಡು ಬರುವುದರ ಜೊತೆಗೆ, ಹಲವಾರು ಬಗೆಯ ಪೋಷಕಾಂಶಗಳು, ವಿಟಮಿನ್ಸ್‌ಗಳು, ಖನಿಜಾಂಶಗಳು, ಫೋಲಿಕ್ ಆಮ್ಲಗಳು, ಈ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ಇವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ, ಹಲವಾರು ಕಾಯಿಲೆ ಗಳನ್ನು ನಮ್ಮಿಂದ ದೂರವಿರಿಸುತ್ತದೆ...

ಅಧಿಕ ರಕ್ತದೊತ್ತಡ ಕಾಯಿಲೆ ಇರುವವರಿಗೆ

Newsroom - Understanding your blood pressure numbers

  • ಅಧಿಕ ರಕ್ತದೊತ್ತಡ ಕಾಯಿಲೆ ಎನ್ನುವುದು, ಇಂದಿನ ದಿನಗಳಲ್ಲಿ ಹೆಚ್ಚಿನವರಿಗೆ ಕಾಡುವ ದೊಡ್ಡ ಸಮಸ್ಯೆ ಎಂದು ಹೇಳಬಹುದು.
  • ಅತಿಯಾದ ಒತ್ತಡದ ಜೀವನ ಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಕೆಟ್ಟ ಜೀವನಶೈಲಿಯಿಂದಾಗಿ, ಈ ಕಾಯಿಲೆ ಇಂದಿನ ದಿನಗ ಳಲ್ಲಿ ಹೆಚ್ಚಿನವರ ಜೀವ ಹಿಂಡುತ್ತಿದೆ.
  • ಈ ಕಾಯಿಲೆಯಿಂದ ಬಳಲುತ್ತಿರುವವರು, ಪ್ರತಿದಿನ ವೈದ್ಯರು ನೀಡಿರುವ ಔಷಧಿಗಳ ಜೊತೆಗೆ ಕೆಲವೊಂದು ಆರೋಗ್ಯಕಾರಿ ಆಹಾರ ಪದ್ಧತಿಯನ್ನು ಹಾಗೂ ಜೀವನ ಶೈಲಿಯಲ್ಲಿ ಪರಿವರ್ತನೆ ಮಾಡಿ ಕೊಂಡರೆ ಈ ಕಾಯಿಲೆ ಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ದೊಡ್ಡ ವಿಚಾರವೇನಲ್ಲ!
  • ಈ ನಿಟ್ಟಿನಲ್ಲಿ ನೋಡುವುದಾದರೆ ದಾಳಿಂಬೆ ಹಣ್ಣು, ತುಂಬಾನೇ ಸಹಾಯಕ್ಕೆ ನಿಲ್ಲುತ್ತದೆ. ಇದಕ್ಕೆ ಪ್ರಮುಖ ಕಾರಣ ಈ ಹಣ್ಣಿನಲ್ಲಿ ಪೊಟಾಶಿಯಂ ಅಂಶ ಯಥೇಚ್ಛ ವಾಗಿ ಕಂಡು ಬರುತ್ತದೆ.
  • ಹೀಗಾಗಿ ಈ ಕಾಯಿಲೆ ಇರುವವರು, ದಾಳಿಂಬೆ ಹಣ್ಣಿನ ಬೀಜಗಳನ್ನು ಸೇವನೆ ಮಾಡುವುದರ ಜೊತೆಗೆ, ಇದರ ಜ್ಯೂಸ್ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.

ಹೃದಯದ ಆರೋಗ್ಯಕ್ಕೆ

ಹೃದಯದ ಆರೋಗ್ಯಕ್ಕೆ

  • ಮೊದಲೇ ಹೇಳಿದ ಹಾಗೆ ದಾಳಿಂಬೆ ಹಣ್ಣಿನಲ್ಲಿ ಪಾಲಿಫಿ ನಾಲ್ ಎಂಬ ಪ್ರಬಲ ಆಂಟಿಆಕ್ಸಿಡೆಂಟ್ ಅಂಶ ಹೇರಳ ವಾಗಿ ಕಂಡು ಬರುವುದರಿಂದ, ಸಾಕಷ್ಟು ಕಾಯಿಲೆಗಳಿಗೆ ಇದು ಔಷಧಿಯಾಗಿ ಕೆಲಸ ಮಾಡುತ್ತದೆ. ಪ್ರಮುಖವಾಗಿ, ಹೃದಯದ ಆರೋಗ್ಯಕ್ಕೆ ಇದರಿಂದ ತುಂಬಾನೇ ಲಾಭ ವಿದೆ.
  • ಹೀಗಾಗಿ ಈಗಾಗಲೇ ಹೃದಯದ ಸಮಸ್ಯೆಯಿಂದ ಬಳುತ್ತಿ ರುವವರು, ದಾಳಿಂಬೆ ಬೀಜಗಳನ್ನು ಮಿತವಾಗಿ ಸೇವನೆ ಮಾಡುವುದರೊಂದಿಗೆ ದಾಳಿಂಬೆ ಜ್ಯೂಸ್ ಅನ್ನು ಪ್ರತಿನಿ ತ್ಯವೂ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ರಕ್ತದೊ ತ್ತಡ ಕಡಿಮೆ ಆಗುವುದು, ಹೃದಯಕ್ಕೆ ಮಾರಕವಾಗಿರುವ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಂಶ ನಿಯಂತ್ರಣಕ್ಕೆ ಬರುವುದು ಹಾಗೂ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟ ದಂತೆ ನೋಡಿಕೊಳ್ಳುತ್ತದೆ. ಇದರಿಂದ ರಕ್ತ ಸಂಚಾರ ಸರಿಯಾಗಿ ನಡೆದು, ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆ ಗಳೆಲ್ಲಾ ದೂರವಾಗುವುದು.

ಪುರುಷರ ಆ ಸಮಸ್ಯೆಗಳಿಗೆ...

ಪುರುಷರ ಆ ಸಮಸ್ಯೆಗಳಿಗೆ...

  • ಇಂದಿನ ದಿನಗಳಲ್ಲಿ ಬಹುತೇಕ ಪುರುಷರು ನಪುಂಸಕತ್ವ ಅಥವಾ ನಿಮಿರುವಿಕೆಯ ಅಪಸಾಮಾನ್ಯ ಸಮಸ್ಯೆ ಯಿಂದ ಬಳಲುತ್ತಿದ್ದಾರೆ.
  • ಆದರೆ ಈ ಸಮಸ್ಯೆಯ ಬಗ್ಗೆ ಯಾರಲ್ಲೂ ಹೇಳಿಕೊಳ್ಳಲು ಆಗದೇ ತಮ್ಮಲ್ಲಿಯೇ ನೋವನ್ನು ಅನುಭವಿಸುತ್ತಿದ್ದಾರೆ. ಈಗಾಗಿ ಈ ಸಮಸ್ಯೆ ಇರುವ ಪುರುಷರು, ಪ್ರತಿದಿನ ಒಂದು ಲೋಟ ದಾಳಿಂಬೆ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ಅಥವಾ ಒಂದು ಕಪ್ ತಾಜಾ ದಾಳಿಂಬೆ ಹಣ್ಣಿನ ಬೀಜಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟು ಕೊಂಡರೆ, ಈ ಸಮಸ್ಯೆ ಕ್ರಮೇಣವಾಗಿ ದೂರವಾಗುತ್ತದೆ. ​

ಕ್ಯಾನ್ಸರ್ ಕಾಯಿಲೆಗಳನ್ನು ತಡೆಯುತ್ತದೆಯಂತೆ...

ಕ್ಯಾನ್ಸರ್ ಕಾಯಿಲೆಗಳನ್ನು ತಡೆಯುತ್ತದೆಯಂತೆ...

  • ದಾಳಿಂಬೆ ಹಣ್ಣಿನ ಬೀಜಗಳನ್ನು ಸೇವನೆ ಮಾಡುವುದ ರಿಂದ ಅಥವಾ ಈ ಹಣ್ಣಿನ ಜ್ಯೂಸ್ ಮಾಡಿ ಕುಡಿಯುವು ದರಿಂದ, ಕ್ಯಾನ್ಸರ್‌‌ನಂತಹ ಕಾಯಿಲೆಯ ವಿರುದ್ಧ ಹೋರಾಡಲು ನೆರವಾಗುವುದು.
  • ಇದಕ್ಕೆ ಪ್ರಮುಖ ಕಾರಣ ಈ ಹಣ್ಣಿನಲ್ಲಿ ಸಿಗುವಂತಹ ಪಾಲಿಫಿನಾಲ್ ಎಂಬ ಪ್ರಬಲ ಆಂಟಿ ಆಕ್ಸಿಡೆಂಟ್ ಅಂಶ ದೇಹದಲ್ಲಿರುವ ಕ್ಯಾನ್ಸರ್ ಫ್ರೀರ್ಯಾಡಿಕಲ್ಸ್ ವಿರುದ್ಧ ಹೋರಾಡಿ, ಕ್ಯಾನ್ಸರ್ ಗಡ್ಡೆಗಳ ಬೆಳವಣಿಗೆಯನ್ನು ತಡೆ ಯುವುದು ಹಾಗೂ ಕ್ಯಾನ್ಸರ್ ಹರಡದಂತೆ ನೆರವಾಗು ವುದು.
  • ಅಧ್ಯಾಯನದ ವರದಿಯ ಪ್ರಕಾರ ದಾಳಿಂಬೆ ಯಿಂದ ಪ್ರಾಸ್ಟ್ರೇಟ್ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಅನ್ನು ತಡೆಯ ಬಹುದು ಎಂದು ಹೇಳಲಾಗುತ್ತದೆ.

ಇತರ ಪ್ರಯೋಜನಗಳು

What are the health benefits of pomegranate? - Quora

ಯಾರು ಈಗಾಗಲೇ ಮೂಳೆಗಳಿಗೆ ಸಂಬಂಧಿತ ಸಮಸ್ಯೆಗಳಾದ ಸಂಧಿವಾತ , ಕೀಲು ನೋವಿನ ಸಮಸ್ಯೆ, ಮೂಳೆಗಳ ಸೆಳೆತ ಇತ್ಯಾದಿ ಸಮಸ್ಯೆಗಳನ್ನು ಅನುಭವಿಸುತ್ತಾರೆಯೋ, ಅಂತಹವರು ಪ್ರತಿ ದಿನ ದಾಳಿಂಬೆ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಅಥವಾ ಇದರಿಂದ ಮಾಡಿದ ಜ್ಯೂಸ್ ಅನ್ನು ನಿಯಮಿತವಾಗಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಸಮಸ್ಯೆಗೆ ಪರಿಹಾರ ಕಾಣಬಹುದು.

people who suffering from these diseases they must add pomegranate in their diet.