ಡಾರ್ಕ್ ಚಾಕೊಲೇಟ್‌‌ ತಿಂದರೆ ಬಿಪಿ, ಹಾರ್ಟ್‌‌‪ ಪ್ರಾಬ್ಲಮ್, ಕೊಲೆಸ್ಟ್ರಾಲ್ ಸಮಸ್ಯೆ ದೂರವಾಗುತ್ತವೆ!

24-07-23 10:00 pm       Source: Vijayakarnataka   ಡಾಕ್ಟರ್ಸ್ ನೋಟ್

Dark chocolate health benefits: ಡಾರ್ಕ್ ಚಾಕೊಲೇಟ್‌ನ ಬಗ್ಗೆ ನಮಗೆಲ್ಲಾ ಗೊತ್ತೇ ಇಲ್ಲ. ಮಾನಸಿಕ ಒತ್ತಡ ನಿವಾರಣೆಯಿಂದ ಹಿಡಿದು ಬಿಪಿ, ಹೃದಯದ ಸಮಸ್ಯೆ.

ಚಾಕೊಲೇಟ್ ಅಂದಾಕ್ಷಣ, ಬಾಲ್ಯದ ಶಾಲಾ ದಿನಗಳು ನೆನಪಿಗೆ ಬರುತ್ತದೆ! ಮನೆಯಲ್ಲಿ ಅಪ್ಪನ ಹತ್ತಿರ ಕಾಡಿ ಬೇಡಿ, ಒಂದೆರಡು ರೂಪಾಯಿ ತಗೊಂಡು, ಶಾಲೆಯ ಅಕ್ಕಪಕ್ಕದಲ್ಲಿರುವ ಗೂಡಂಗಡಿಯಿಂದ ಕೈ ಮುಷ್ಟಿಯಲ್ಲಿ ಹಿಡಿಯುವಷ್ಟು ಚಾಕೋಲೆಟ್ ತಗೊಂಡು, ತಿನ್ನುತ್ತಿದ್ದ ದಿನಗಳು ಹಾಗೆಯೇ ಕಣ್ಣ-ಮುಂದೆ ಬಂದು ಹೋಗುತ್ತದೆ!

ಚಾಕೋಲೆಟ್ ರುಚಿಗೆ ಮಾರು ಹೋಗದವರು ಯಾರು ಇದ್ದಾರೆ ಹೇಳಿ? ಮಕ್ಕಳಿಂದ ಹಿಡಿದು, ಹಿರಿಯ ರವರೆಗೂ ಕೂಡ, ಚಾಕೊಲೇಟ್ ಅನ್ನು ಇಷ್ಟಪಟ್ಟು ತಿನ್ನುತ್ತಾರೆ! ಆದರೆ ಕೆಲವರು ಮಾತ್ರ ಚಾಕೋಲೆಟ್ ತಿಂದ್ರೆ ಹಲ್ಲು ನೋವು ಶುರುವಾಗುತ್ತದೆ ಎಂದು ಸಬೂಬು ಹೇಳಿ, ಚಾಕೋಲೆಟ್ ‪ನಿಂದ ದೂರವಿರಲು ಬಯಸುತ್ತಾರೆ!

ಅದು ಏನೇ ಇರಲಿ, ಇಂದಿನ ಈ ಲೇಖನದಲ್ಲಿ ಆಗಾಗ ಮಿತವಾಗಿ ಡಾರ್ಕ್‌ ಚಾಕೊಲೇಟ್ ಸೇವನೆ ಮಾಡುವು ದರಿಂದ, ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾತನಾಡಲು ಹೊರಟಿದ್ದೇವೆ! ಬನ್ನಿ ಹಾಗಾದ್ರೆ ಈ ಡಾರ್ಕ್‌ ಚಾಕ ಲೇಟ್‌‌ನಲ್ಲಿ ಅಂತಹ ಆರೋಗ್ಯಕಾರಿ ಗುಣಲಕ್ಷಣಗಳು, ಏನೆಲ್ಲಾ ಅಡಗಿದೆ ಎನ್ನುವುದನ್ನು ನೋಡುತ್ತಾ ಹೋಗೋಣ...

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ!

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ!

  • ನಮಗೆಲ್ಲಾ ಗೊತ್ತೇ ಇರುವ ಹಾಗೆ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತಾ ಹೋದರೆ, ಮೊದಲಿಗೆ ಸಮಸ್ಯೆ ಬರುವುದೇ ಹೃದಯಕ್ಕೆ! ಹೌದು ಎಲ್ ಡಿ ಎಲ್ ಎಂಬ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೃದಯಕ್ಕೆ ಸಂಬಂಧ ಪಟ್ಟ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣ ವಾಗುತ್ತದೆ.
  • ಹೀಗಾಗಿ ಈ ಸಮಸ್ಯೆ ಹೆಚ್ಚಾಗಬಾರದೆಂದರೆ, ಆರೋಗ್ಯ ಕಾರಿ ಆಹಾರ ಪದ್ಧತಿ, ಹಾಗು ಪ್ರತಿ ದಿನ ಸಣ್ಣ ತುಂಡು ಡಾರ್ಕ್ ಚಾಕೊಲೇಟ್ ತಿನ್ನುವ ಅಭ್ಯಾಸ ಮಾಡಿ ಕೊಂಡರೆ, ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯಬಹುದು.
  • ಇದಕ್ಕೆ ಪ್ರಮುಖ ಕಾರಣ, ಆರೋಗ್ಯ ತಜ್ಞರು ಹೇಳುವ ಪ್ರಕಾರ ಚಾಕೋಲೆಟ್‌ನಲ್ಲಿ ಪ್ಲಾಂಟ್ ಸ್ಪಿರಾಲ್ ಹಾಗೂ ಕೋಕೋ ಫ್ಲ್ಯಾವೊನೋಲ್ ಅಂಶಗಳು ಯಥೇಚ್ಛವಾಗಿ ಕಂಡು ಬರುವುದರಿಂದ, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವ ಗುಣ ಲಕ್ಷಣ ಹೊಂದಿ ರುತ್ತವೆಯಂತೆ. ಹೀಗಾಗಿ ಡಾರ್ಕ್‌‌ ಚಾಕೋಲೆಟ್ ಅನ್ನು ಮಿತವಾಗಿ ತಿಂದರೆ, ಆರೋಗ್ಯಕ್ಕೆ ಒಳ್ಳೆಯದು.

ಹೃದಯದ ಕಾಯಿಲೆ ದೂರವಾಗುತ್ತದೆ

ಹೃದಯದ ಕಾಯಿಲೆ ದೂರವಾಗುತ್ತದೆ

  • ದೀರ್ಘ ಕಾಲದಿಂದ ಹೃದಯದ ಸಮಸ್ಯೆಯಿಂದ ಬಳುತ್ತಿ ರುವರು, ಪ್ರತಿದಿನ ಸಣ್ಣ ಪೀಸ್ ಡಾರ್ಕ್‌‌ ಚಾಕೋಲೆಟ್ ತಿನ್ನುವ ಅಭ್ಯಾಸ ಮಾಡಿಕೊಂಡರೆ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತದೆ.
  • ಈ ಬಗ್ಗೆ ಅಧ್ಯಯನಗಳು ಕೇಳುವ ಹಾಗೆ ಚಾಕೊಲೇಟ್ ರೆಡಿ ಮಾಡಲು ಬಳಸುವ ಕೋಕೋದಲ್ಲಿ ಕಂಡು ಬರುವ ಫ್ಲಾವನಾಲ್ ಸಂಯುಕ್ತಗಳು ಹೃದಯದ ಆರೋಗ್ಯ ವನ್ನು ಕಾಪಾಡಲು ನೆರವಾಗುತ್ತವೆ ಎಂದು ಅಭಿಪ್ರಾಯ ಪಡತ್ತಾರೆ.
  • ಫ್ಲಾವನಾಲ್‍‌ಗಳು, ಪ್ರಬಲ ಆಂಟಿ ಆಕ್ಸಿಡೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತದೆ. ನೆನಪಿಡಿ ಈಗಾಗಲೇ ಹೃದಯದ ಸಮಸ್ಯೆ ಇರುವವರು, ಈ ಸಲಹೆಯನ್ನು ಅನುಸರಿಸುವ ಮೊದಲು, ವೈದ್ಯರ ಸಲಹೆಗಳನ್ನು ಪಡೆದು ಕೊಂಡರೆ ಒಳ್ಳೆಯದು.

ವಯಸ್ಸಾಗುವ ಪ್ರಕ್ರಿಯೆಯು ದೂರವಾಗುತ್ತವೆ!

ವಯಸ್ಸಾಗುವ ಪ್ರಕ್ರಿಯೆಯು ದೂರವಾಗುತ್ತವೆ!

  • ಸಂಶೋಧಕರು ಹೇಳುವ ಹಾಗೆ, ಡಾರ್ಕ್ ಚಾಕೊಲೇಟ್ ಅನ್ನು ಮಿತವಾಗಿ ಸೇವನೆ ಮಾಡುವುದರಿಂದ ಸಣ್ಣ ವಯ ಸ್ಸಿನಲ್ಲಿ ಕಂಡು ಬರುವ ವಯಸ್ಸಾಗುವಿಕೆಯ ಲಕ್ಷಣ ಗಳಾದ ಸುಕ್ಕು, ನೆರಿಗೆಯಂತಹ ತ್ವಚೆಯ ಸಮಸ್ಯೆ ಗಳು ಬಹಳ ಬೇಗನೇ ದೂರವಾಗುತ್ತವೆ.
  • ಅಷ್ಟೇ ಅಲ್ಲದೆ ವಯಸ್ಸಾದಾಗ ಕಂಡು ಬರುವ ನೆನೆಪಿನ ಶಕ್ತಿ ಕಡಿಮೆ ಆಗುವ ಸಮಸ್ಯೆಗಳ ಅಪಾಯವು ಕೂಡ ದಿನಾ ಹೋದ ಹಾಗೆ ಕಡಿಮೆ ಆಗುತ್ತಾ ಬರುತ್ತದೆಯಂತೆ!

ಅಧಿಕರಕ್ತದೊತ್ತಡದ ಸಮಸ್ಯೆ ನಿಯಂತ್ರಣಕ್ಕೆ ಬರುವುದು

Understanding your blood pressure numbers | UnitedHealthcare

  • ರಕ್ತದೊತ್ತಡ ಒಂದು ಸೈಲೆಂಟ್ ಕಿಲ್ಲರ್ ಕಾಯಿಲೆ. ದೀರ್ಘಕಾಲದವರೆಗೆ ಮಾಡುವ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಕಾಣಿಸಿಕೊಂಡು, ಪ್ರಾಣಕ್ಕೆ ಅಪಾಯ ಉಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ!
  • ಆರೋಗ್ಯ ತಜ್ಞರು ಹೇಳುವ ಹಾಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೆ ಹೆಚ್ಚು ಮಾಡಿಕೊಂಡಿ ರುವವರಿಗೆ, ಹೃದಯದ ಆಪತ್ತು ಕಟ್ಟಿಟ್ಟ ಬುತ್ತಿ! ಹೀಗಾಗಿ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದರೆ, ಡಾರ್ಕ್ ಚಾಕೊಲೇಟ್ ಅನ್ನು ಮಿತವಾಗಿ ಸೇವನೆ ಮಾಡಬೇಕು.
  • ಇದರಿಂದ ದೇಹದ ರಕ್ತಸಂಚಾರ ಉತ್ತಮಗೊಳ್ಳುವುದು ಮಾತ್ರ ವಲಲ್ಲದೆ ಇದರಿಂದ ರಕ್ತದೊತ್ತದ ಸಮಸ್ಯೆ ಕೂಡ ನಿಯಂ ತ್ರಣಕ್ಕೆ ಬರುವುದು.
  • ಇದಕ್ಕೆ ಪ್ರಮುಖ ಕಾರಣ ಇದರಲ್ಲಿ ಫ್ಲೇವನಾಯ್ಡ್ ಎಂಬ ಶಕ್ತಿಯುತ ಆಂಟಿ ಆಕ್ಸಿಡೆಂಟುಗಳು ಅಂಶಗಳ ಪ್ರಮಾಣ ಹೆಚ್ಚಾಗಿ ಸಿಗುವುದರಿಂದ, ರಕ್ತದ ಒತ್ತಡ ನಿಯಂತ್ರಣಕ್ಕೆ ಚಾಕೊಲೇಟ್‌ನಲ್ಲಿ ಹೆಚ್ಚಾಗಿ ಸಿಗುವುದರಿಂದ, ರಕ್ತದ ಒತ್ತಡ ನಿಯಂತ್ರಣಕ್ಕೆ ಹಾಗೂ ಹೃದಯದ ಆರೋಗ್ಯ ವನ್ನು ಕಾಪಾ ಡುವುದಕ್ಕೆ ನೆರವಿಗೆ ಬರುತ್ತದೆ.

ದಿನಕ್ಕೆ ಎಷ್ಟು ಚಾಕೊಲೇಟ್ ಸೇವಿಸಬೇಕು?

Is dark chocolate good for you? Health benefits of dark chocolate explained  | GoodTo

  • ಅತಿಯಾದರೆ ಅಮೃತವು ವಿಷವಾಗುತ್ತವೆ ಎನ್ನುವ ಮಾತಿದೆ. ಅಂತೆಯೇ ಡಾರ್ಕ್ ಚಾಕೊಲೇಟ್‌ ಕೂಡ ಈ ಮಾತಿಗೆ ಹೊರತಾಗಿಲ್ಲ! ಚಾಕೊಲೇಟ್ ಇಷ್ಟ ಎಂದು ಅತಿಯಾಗಿ ಸೇವನೆ ಮಾಡುವ ಹಾಗಿಲ್ಲ! ಇದನ್ನು ಕೂಡ ಮಿತವಾಗಿ ಸೇವನೆ ಮಾಡಬೇಕು.
  • ದಿನಕ್ಕೆ ಒಬ್ಬ ವ್ಯಕ್ತಿಯು 30 ರಿಂದ 60 ಗ್ರಾಂಕ್ಕಿಂತ ಹೆಚ್ಚು ಚಾಕೊಲೇಟ್‌ ತಿನ್ನಬಾರದು ಎಂದು ಆರೋಗ್ಯ ತಜ್ಞರು ಹೇಳು ತ್ತಾರೆ. ಯಾಕೆಂದ್ರೆ ಚಾಕೊಲೇಟ್ ನಲ್ಲಿ ಹೆಚ್ಚಿನ ಕ್ಯಾಲೋರಿ ಅಂಶಗಳು ಕಂಡು ಬರುವುದರಿಂದ, ಅತಿ ಯಾಗಿ ತಿಂದರೆ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆಯಂತೆ!

Know the health benefits of dark chocolate and how much you should eat.