ವಿಟಮಿನ್ ಡಿ ಫುಡ್‌ಗಳನ್ನು ಸೇವಿಸಿ ಇಲ್ಲವಾದರೆ ರೋಗಗಳಿಗೆ ತುತ್ತಾಗುತ್ತೀರಿ

26-07-23 10:20 pm       Source: Vijayakarnataka   ಡಾಕ್ಟರ್ಸ್ ನೋಟ್

Vitamin D Foods in Monsoon: ಮಾನ್ಸೂನ್‌ನಲ್ಲಿ ದೇಹಕ್ಕೆ ವಿಟಮಿನ್‌ ಡಿ ನೀಡಲು ಇಂತಹ ಆಹಾರಗಳನ್ನು ಯಥೇಚ್ಚವಾಗಿ ತಿನ್ನಿ.

ವಿಟಮಿನ್‌ ಡಿ ದೇಹಕ್ಕೆ ಬಹಳ ಅಗತ್ಯವಾಗಿದೆ. ಈಗ ಮಳೆಗಾಲ ಶುರುವಾಗಿರುವ ಕಾರಣ ಸೂರ್ಯನಿಂದ ನೈಸರ್ಗಿಕವಾಗಿ ಪಡೆಯುತ್ತಿದ್ದ ವಿಟಮಿನ್‌ ಡಿ ಅನ್ನು ನೀವು ಆಹಾರಗಳಿಂದ ಪಡೆಯಲು ಪ್ರಯತ್ನಿಸಬೇಕು.

ವಿಟಮಿನ್‌ ಡಿ ದೇಹಕ್ಕೆ ಬಹಳ ಅಗತ್ಯವಾಗಿದೆ. ಈಗ ಮಳೆಗಾಲ ಶುರುವಾಗಿರುವ ಕಾರಣ ಸೂರ್ಯನಿಂದ ನೈಸರ್ಗಿಕವಾಗಿ ಪಡೆಯುತ್ತಿದ್ದ ವಿಟಮಿನ್‌ ಡಿ ಅನ್ನು ನೀವು ಆಹಾರಗಳಿಂದ ಪಡೆಯಲು ಪ್ರಯತ್ನಿಸಬೇಕು.

ಮಶ್ರೂಮ್‌

सबसे ज़्यादा मशरूम पैदा करने वाले राज्य top 5 mushroom producing state

ಮಶ್ರೂಮ್‌ ಅಥವಾ ಅಣಬೆ ಸ್ವಾಭಾವಿಕವಾಗಿ ಅಧಿಕ ಪ್ರಮಾಣದ ಪೋಷಕಾಂಶಗಳನ್ನು ಹೊಂದಿದೆ. ಇದರಲ್ಲಿ ಯಥೇಚ್ಚವಾಗಿ ವಿಟಮಿನ್ ಡಿ ಇದೆ. ಆಗಾಗ್ಗೆ ನೀವು ಅಣಬೆಯಿಂದ ತಯಾರಿಸಿದ ಖಾದ್ಯಗಳನ್ನು ಸೇವಿಸುವುದರಿಂದ ಮೂಳೆಗಳು, ಹಲ್ಲುಗಳು ಬಲಿಷ್ಟವಾಗುತ್ತದೆ.

ಅಣಬೆಗಳು ಫೈಬರ್, ತಾಮ್ರ, ರಂಜಕ, ಪೊಟ್ಯಾಸಿಯಮ್, ಸೆಲೆನಿಯಮ್, ಸತು, ರೈಬೋಫ್ಲಾವಿನ್, ನಿಯಾಸಿನ್, ಕೋಲೀನ್, ಕಬ್ಬಿಣ, ಥಯಾಮಿನ್, ಫೋಲೇಟ್ ಮತ್ತು ಕಾರ್ಬೋಹೈಡ್ರೇಟ್ಗಳು ಸೇರಿದಂತೆ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುತ್ತದೆ.

​​ಹಾಲು

Know how to make skimmed milk for your weight loss journey | HealthShots

ವಿಟಮಿನ್‌ ಡಿ ಸಮೃದ್ಧವಾಗಿರುವ ಆಹಾರ ಪದಾರ್ಥಗಳಲ್ಲಿ ಹಾಲು ಕೂಡ ಒಂದಾಗಿದೆ. ಇದರಲ್ಲಿ ಕ್ಯಾಲ್ಸಿಯಂನ ಅತ್ಯುತ್ತಮ ಮೂಲವನ್ನು ಹೊಂದಿರುತ್ತದೆ.

ಸೋಯಾ ಮತ್ತು ಬಾದಾಮಿಯಂತಹ ಬಲವರ್ಧಿತ ಸಸ್ಯ-ಆಧಾರಿತ ಹಾಲುಗಳು ಅದೇ ಪ್ರಮಾಣದ ವಿಟಮಿನ್ ಡಿ ಅನ್ನು ಒದಗಿಸುತ್ತದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಹಾಗಾಗಿ ಬಿಸಿ ಬಿಸಿ ಹಾಲನ್ನು ಈ ಮಳೆಗಾಲದಲ್ಲಿ ಸೇವಿಸಿ. ನಿಯಮಿತವಾಗಿ ಅರಿಶಿಣ ಹಾಗು ಶುಂಠಿ ಬೆರಸಿದ ಹಾಲನ್ನು ಕುಡಿಯಿರಿ. ಇದು ಮಾನ್ಸೂನ್‌ನ ಅನೇಕ ರೋಗಲಕ್ಷಣಗಳಿಂದ ಪಾರು ಮಾಡುತ್ತದೆ.

ಕಿತ್ತಳೆ ಜ್ಯೂಸ್‌

ಕಿತ್ತಳೆ ಜ್ಯೂಸ್‌

ನಿಮಗೆ ಆರೋಗ್ಯಕರವಾದ ಜ್ಯೂಸ್‌ಗಳನ್ನು ಕುಡಿಯಲು ಮನಸ್ಸಿದ್ದರೆ ಬಹುಶಃ ಈ ಕಿತ್ತಳೆ ಜ್ಯೂಸ್‌ಗಳು ಬೆಸ್ಟ್ ಎನ್ನಬಹುದು. ಒಂದು ವೇಳೆ ನೀವು ಮಧುಮೇಹ ಹೊಂದಿದ್ದರೆ, ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಸೇವನೆಯನ್ನು ಮಿತಗೊಳಿಸಬಹುದು. ಇದರ ಬದಲಾಗಿ ವಿಟಮಿನ್ ಡಿ ಅನ್ನು ಇನ್ನೊಂದು ಮೂಲದಿಂದ ಪಡೆಯುವುದು ಉತ್ತಮ.

ಮೊಸರು

How to make fresh curd at home

ಮಾನ್ಸೂನ್‌ನಲ್ಲಿ ಮೊಸರನ್ನು ಸಾಕಷ್ಟು ಜನರು ಸೇವಿಸುವುದಿಲ್ಲ. ಆದರೆ ನೀವು ಆರೋಗ್ಯವಂತರಾಗಿದ್ದರೆ ಮಾನ್ಸೂನ್‌ನಲ್ಲಿ ಮೊಸರನ್ನು ಸೇವಿಸಿ. ಸ್ಮೂಥಿ, ಲಸ್ಸಿಗಳನ್ನು ಆಗಾಗ್ಗೆ ಕುಡಿಯಿರಿ. ಇದರಲ್ಲಿ ಯಥೇಚ್ಚವಾಗಿ ವಿಟಮಿನ್‌ ಡಿ ಇದೆ.

ಕರುಳಿನ ಉತ್ತಮ ಪ್ರೋಬಯಾಟಿಕ್‌ಗಳ ಅತ್ಯುತ್ತಮ ಮೂಲವಾಗಿದೆ ಮತ್ತು ಬಲವರ್ಧಿತ ವೈವಿಧ್ಯತೆಯನ್ನು ತಲುಪುತ್ತದೆ.

ಮೊಟ್ಟೆಗಳು​

Classic Hard-boiled Eggs - YMCA of Central Florida

ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿರುವ ಮೊಟ್ಟೆಗಳು ವಿಟಮಿನ್‌ ಡಿ ಅನ್ನು ಸಮೃದ್ಧವಾಗಿ ಹೊಂದಿದೆ. ಇದು ದೇಹಕ್ಕೆ ಅತ್ಯುತ್ತಮವಾದ ಮೂಲವಾಗಿದೆ. ಮೊಟ್ಟೆಯ ಹಳದಿ ಲೋಳೆಯು ಕೊಬ್ಬನ್ನು ಹೊಂದಿರುತ್ತದೆ. ಇದು ನಿಮ್ಮ ದೇಹವು ಡಿ ನಂತಹ ಕೊಬ್ಬು ಕರಗುವ ವಿಟಮಿನ್‌ಗಳನ್ನು ಹೀರಿಕೊಳ್ಳುವ ಅಗತ್ಯವಿದೆ.

ಮೊಟ್ಟೆಗಳು ಅಧಿಕ ಕೊಲೆಸ್ಟ್ರಾಲ್‌, ರಕ್ತದ ಕೊಲೆಸ್ಟ್ರಾಲ್‌ ಗಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಒಳ್ಳೆಯ ಕೊಲೆಸ್ಟ್ರಾಲ್‌ ಹೆಚ್ಚಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

you should eat vitamin d foods in monsoon.