ದೇಹಕ್ಕೆ ವಿಟಮಿನ್ B12 ಆಹಾರಗಳು ತುಂಬಾನೇ ಮುಖ್ಯ, ಯಾವುದೇ ಕಾರಣಕ್ಕೂ ಮಿಸ್ ಮಾಡಬಾರದು!

27-07-23 10:26 pm       Source: Vijayakarnataka   ಡಾಕ್ಟರ್ಸ್ ನೋಟ್

ವಿಟಮಿನ್ ಬಿ12ನಂತಹ ಪೋಷಕಾಂಶಗಳ ಕೊರತೆ ಉಂಟಾದರೆ, ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಆರೋಗ್ಯಕ್ಕೆ ಸಮಸೆಗಳು ಬರಬಾರದೆಂದರೆ, ದೇಹಕ್ಕೆ ಅಗತ್ಯವಾಗಿ ಬೇಕಾಗುವ, ವಿಟಮಿನ್ಸ್‌ಗಳು, ಖನಿಜಾಂಶಗಳು, ವಿವಿಧ ಬಗೆಯ ಪೋಷಕಾಂಶಗಳು, ನಾವು ಸೇವನೆ ಮಾಡುವ ಆಹಾರಗಳಿಂದ ಸಮೃದ್ಧವಾಗಿ ಸಿಗಬೇಕು. ಒಂದು ವೇಳೆ ಅಗತ್ಯವಾದ ಪೋಷಕಾಂಶಗಳಲ್ಲಿ ಯಾವುದೇ ಒಂದು ಅಂಶವು ಕಡಿಮೆಯಾದರೂ, ಕೂಡ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ! ಹೀಗಾಗಿ ನಮ್ಮ ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ, ವಿಟಮಿನ್ ಬಿ12 ಇರುವಂತಹ ಆಹಾರಗಳನ್ನು ಸೇವಿಸಬೇಕು.

ವಿಟಮಿನ್ ಬಿ12

ವಿಟಮಿನ್ ಬಿ12

  • ಆರೋಗ್ಯ ತಜ್ಞರ ಪ್ರಕಾರ, ವಿಟಮಿನ್ ಬಿ12 ಪೋಷ ಕಾಂಶವನ್ನು ಕೋಬಾಲಾಮೈನ್ ಎಂದೂ ಕರೆಯಲಾ ಗುತ್ತದೆ. ಇದು ಮೆದುಳಿನ ಹಾಗೂ ಮತ್ತು ನರವ್ಯವಸ್ಥೆಯ ಕಾರ್ಯ ನಿರ್ವಹ ಣೆಗೆ ಹಾಗೂ ಕೆಂಪು ರಕ್ತಕಣಗಳ ರಚನೆಗೆ, ಅತಿ ಅವಶ್ಯವಾದ ಪೋಷಕಾಂಶವಾಗಿದೆ ಎಂದು ಹೇಳಲಾಗುತ್ತದೆ.
  • ಒಂದು ವೇಳೆ, ಈ ಪ್ರಮುಖ, ಪೋಷಕಾಂಶ ದೇಹದಲ್ಲಿ ಕಡಿಮೆ ಆದರೆ, ನರಮಂಡಲಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.​

ವಿಟಮಿನ್ ಬಿ12 ಕೊರತೆ ಉಂಟಾದರೆ ಏನೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ?

ವಿಟಮಿನ್ ಬಿ12 ಕೊರತೆ ಉಂಟಾದರೆ ಏನೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ?

  • ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಮನುಷ್ಯನ ಆರೋಗ್ಯಕ್ಕೆ ಸರಿಯಾಗಿ ವಿಟಮಿನ್ ಬಿ12 ಪೋಷಕಾಂಶ ಗಳು ಲಭಿಸದೇ ಇದ್ದರೆ, ತನ್ನಿಂತಾನೆ ದೇಹದ ತೂಕ ಕಡಿಮೆ ಆಗುತ್ತದೆ, ಸ್ನಾಯುಗಳು ಶಿಥಿಲಗೊಳ್ಳತೊಡ ಗುತ್ತವೆ, ಆಗಾಗ ಬಾಯಿಯಲ್ಲಿ ಹುಣ್ಣುಗಳು ಕಾಣಿಸಿ ಕೊಳ್ಳುತ್ತವೆ, ಖಿನ್ನತೆ, ದೃಷ್ಟಿ ಮಂಜಾಗುವುದು, ತುಂಬಾನೇ ಸುಸ್ತು ಕಾಣಿಸಿಕೊಳ್ಳುವುದು.
  • ಹೀಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾದ್ರೆ ಈ ಆರೋಗ್ಯ ಸಮಸ್ಯೆಗಳು ಬರಬಾರದೆಂದರೆ, ವಿಟಮಿನ್ ಬಿ12 ಅಂಶ ಹೆಚ್ಚಿರುವ ಯಾವೆಲ್ಲಾ ಆಹಾರ-ಪದಾರ್ಥಗಳನ್ನು ಸೇವನೆ ಮಾಡಬೇಕು, ಎನ್ನುವುದರ ಮಾಹಿತಿ ಇಲ್ಲಿದೆ ನೋಡಿ..​

ಮೀನು

Fish Curry Recipe | Salonys CookBook

ಸಾಲ್ಮನ್, ಟ್ರೌಟ್, ಟ್ಯೂನಾ ಮೀನುಗಳಲ್ಲಿಒಮೆಗಾ 3 ಕೊಬ್ಬಿ ನಾಮ್ಲಗಳ ಜೊತೆಗೆ, ವಿಟಮಿನ್ ಬಿ12 ಕೂಡ ಸಾಕಷ್ಟು ಪ್ರಮಾ ಣದಲ್ಲಿ ಲಭ್ಯವಿದೆ. ಹೀಗಾಗಿ ನಾನ್‌ವೆಜ್ ಸೇವನೆ ಮಾಡುವವರು, ಮಿತವಾಗಿ ಇಂತಹ ಮೀನುಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ವಿಟಮಿನ್ ಬಿ12 ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಚಿಕನ್-ಮಟನ್ ಸೇವನೆ ಮಾಡಿ!

Order Combo Pack - Chicken Curry Cut 500g (skin off) + Mutton Curry Cut  500g at TenderCuts

ಹೌದು, ನಾನ್‌ವೆಜ್ ಇಷ್ಟಪಡುವವರು, ಕೋಳಿ ಕುರಿ ಮಾಂಸ, ಮೀನು ಹಾಗೂ ದಿನಕ್ಕೊಂದು ಬೇಯಿಸಿದ ಮೊಟ್ಟೆಯನ್ನು ಸೇವನೆ ಮಾಡುವುದರಿಂದ ವಿಟಮಿನ್ ಬಿ12, ಕೊರತೆಯನ್ನು ನೀಗಿಸಿಕೊಳ್ಳಬಹುದು.

ವೆಜಿಟೇರಿಯನ್‌ ಇದ್ದವರಿಗೆ

Soaked Almonds Are Great For Your Health! Start Adding Them To Your Diet  Now | HerZindagi

  • ವಿಟಮಿನ್ ಬಿ12, ಕೇವಲ ಪ್ರಾಣಿಜನ್ಯ ಆಹಾರಗಳಲ್ಲಿ ಮಾತ್ರವಲ್ಲ, ಬದಲಿಗೆ ಹಲವಾರು ಬಗೆಯ ಸಸ್ಯಜನ್ಯ ಆಹಾರಗ ಳಲ್ಲಿಯೂ ಕೂಡ ಲಭ್ಯವಿದೆ.
  • ಉದಾಹರಣೆಗೆ ಹಾಲು ಹಾಗೂ ಹಾಲಿನ ಉಪ ಉತ್ಪನ್ನ ವಾದ ಮೊಸರು, ಚೀಸ್‌, ಒಣಫಲಗಳಾದ, ಬಾದಾಮಿ, ಗೋಡಂಬಿ ಗಳಲ್ಲಿಯೂ ಕೂಡ ವಿಟಮಿನ್ ಬಿ12 ಅಂಶ ಹೆಚ್ಚಾಗಿ ಕಂಡು ಬರುವುದರಿಂದ, ಇವುಗಳನ್ನೆಲ್ಲಾ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಒಳ್ಳೆಯದು.​

ಸಿಂಪಿ, ಸಿಗಡಿ, ಮಸ್ಸೆಲ್ಸ್

Malaysian Butter Prawn Recipe With Curry Leaves

ವಿಟಮಿನ್ ಬಿ12 ನ ಮತ್ತೊಂದು ಆರೋಗ್ಯಕರ ಮೂಲವೆಂದರೆ ಸಿಗಡಿ, ಸಿಂಪಿ, ಮಸ್ಸೆಲ್ಸ್ ನಂತಹ ಚಿಪ್ಪು ಮೀನುಗಳು ಎಂದು ಹೇಳಬಹುದು. ಹೀಗಾಗಿ ನಾನ್‌ವೆಜ್ ತಿನ್ನುವವರು, ಇವುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ವಿಟಮಿನ್ ಬಿ12 ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ, ಅಲ್ಲದೆ ನರಮಂಡಲಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತದೆ.

ಡೈರಿ ಉತ್ಪನ್ನಗಳು

ಡೈರಿ ಉತ್ಪನ್ನಗಳು

ಡೈರಿ ಉತ್ಪನ್ನಗಳಾದ ಹಾಲು, ಮೊಸರು ಮತ್ತು ಚೀಸ್‌ನಲ್ಲಿ ಯಥೇಚ್ಛವಾಗಿ ವಿಟಮಿನ್ ಬಿ 12 ಅಂಶಗಳು ಕಂಡು ಬರುತ್ತದೆ. ಹೀಗಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಾಕಷ್ಟು ಪ್ರಮಾಣದಲ್ಲಿ, ಪ್ರತಿದಿನ ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳುವುದು ಒಳ್ಳೆಯದು.

ದಿನಕ್ಕೊಂದು ಮೊಟ್ಟೆ

Here's why vitamin D3 and B12 deficiencies are called silent epidemics

ಪ್ರೋಟೀನ್ ಅಂಶ ಹೆಚ್ಚಿರುವ ಮೊಟ್ಟೆಯಲ್ಲಿ ವಿಟಮಿನ್ ಬಿ2 ಹಾಗೂ ವಿಟಮಿನ್ ಬಿ12 ಎರಡೂ ಪೋಷಕಾಂಶಗಳು ಯಥೇ ಚ್ಛವಾಗಿ ಕಂಡು ಬರುತ್ತದೆ. ಹೀಗಾಗಿ ಪ್ರತಿದಿನ ಬೇಯಿಸಿದ ಒಂದು ಮೊಟ್ಟೆಯನ್ನು ಸೇವನೆ ಮಾಡಿದರೆ ಒಳ್ಳೆಯದು.

foods you must include in your diet if you have a vitamin b12 deficiency.