ಭಾರತಕ್ಕೆ ಎಂಟ್ರಿ ಕೊಟ್ಟ ಹಾನರ್‌ ಪ್ಯಾಡ್‌ X9;..ಫೀಚರ್ಸ್‌ ಹೇಗಿದೆ? ಬೆಲೆ ಎಷ್ಟು?

29-07-23 09:16 pm       Source: Gizbot Kannada   ಡಾಕ್ಟರ್ಸ್ ನೋಟ್

ಹಾನರ್‌ ಕಂಪೆನಿ ಭಾರತದ ಮಾರುಕಟ್ಟೆಗೆ ರಿ ಎಂಟ್ರಿ ನೀಡುವ ಸೂಚನೆ ನೀಡಿದೆ. ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸದಿದ್ದರೂ ಸ್ಮಾರ್ಟ್‌ ಟ್ಯಾಬ್ಲೆಟ್‌ ಹಾಗೂ ಲ್ಯಾಪ್‌ಟಾಪ್‌ಗಳ ಮೂಲಕ ಸಖತ್‌ ಸೌಂಡ್‌ ಮಾಡ್ತಾ ಬಂದಿದೆ.

ಹಾನರ್‌ ಕಂಪೆನಿ ಭಾರತದ ಮಾರುಕಟ್ಟೆಗೆ ರಿ ಎಂಟ್ರಿ ನೀಡುವ ಸೂಚನೆ ನೀಡಿದೆ. ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸದಿದ್ದರೂ ಸ್ಮಾರ್ಟ್‌ ಟ್ಯಾಬ್ಲೆಟ್‌ ಹಾಗೂ ಲ್ಯಾಪ್‌ಟಾಪ್‌ಗಳ ಮೂಲಕ ಸಖತ್‌ ಸೌಂಡ್‌ ಮಾಡ್ತಾ ಬಂದಿದೆ. ಅದರಂತೆ ಇದೀಗ ತನ್ನ ಹೊಸ ಹಾನರ್‌ ಪ್ಯಾಡ್‌ X9 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಹೌದು, ಹಾನರ್‌ ಪ್ಯಾಡ್‌ X8 ಟ್ಯಾಬ್ಲೆಟ್‌ ಭಾರತದಲ್ಲಿ ಅನಾವರಣಗೊಂಡಿದೆ. ಇದು ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ ವೇಗವನ್ನು ಹೊಂದಿದೆ. ಜೊತೆಗೆ 7,250mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಈ ಸ್ಮಾ ರ್ಟ್‌ ಟ್ಯಾಬ್‌ 22.5W ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ ಟ್ಯಾಬ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Honor Pad X9 With 120Hz Display, Snapdragon 695 Launched In India -  Gizmochina

ಹಾನರ್‌ ಪ್ಯಾಡ್‌ X9 ಫೀಚರ್ಸ್‌ ವಿವರ

ಹಾನರ್‌ ಪ್ಯಾಡ್‌ X9 ಟ್ಯಾಬ್ಲೆಟ್‌ 11.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2K ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, 400 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ನೀಡಲಿದೆ. ಇದಲ್ಲದೆ ಆಡಿಯೊಫಿಲ್‌ಗಳಿಗಾಗಿ, ಟ್ಯಾಬ್ಲೆಟ್‌ನಲ್ಲಿ ಹೈ-ರೆಸ್ ಆಡಿಯೊ ಪ್ರಮಾಣೀಕರಣದೊಂದಿಗೆ ಆರು ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ.

ಹಾನರ್‌ ಪ್ಯಾಡ್‌ X9 ಟ್ಯಾಬ್‌ ಸ್ನಾಪ್‌ಡ್ರಾಗನ್‌ 695 ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು MagicUI 7.1 ಆಧಾರಿತ ಆಂಡ್ರಾಯ್ಡ್‌ 13 OS ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 3GB ವರ್ಚುವಲ್ RAM ಅನ್ನು ವಿಸ್ತರಿಸಬಹುದಾಗಿದೆ. ಸ್ಪೋರ್ಟ್ಸ್ ಮೆಟಲ್ ಯುನಿಬಾಡಿ ಮತ್ತು 6.9mm ತೆಳುವಾದ ಮತ್ತು 499 ಗ್ರಾಂ ತೂಗುತ್ತದೆ.

ஸ்னாப்டிராகன் 695 பிராசஸர் கொண்ட ஹானர் பேட் X9 இந்தியாவில் அறிமுகம் | Honor  Pad X9 With 120Hz Display, Snapdragon 695 Launched In India

ಹಾನರ್‌ ಪ್ಯಾಡ್‌ X9 ಟ್ಯಾಬ್‌ ಹಿಂಭಾಗದಲ್ಲಿ 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಮಾತ್ರೆ-ಆಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ನೀಡಲಾಗಿದೆ. ಇನ್ನು ಈ ಹೊಸ ಸ್ಮಾರ್ಟ್‌ ಟ್ಯಾಬ್‌ 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಹಾನರ್‌ ಪ್ಯಾಡ್‌ X9 ಟ್ಯಾಬ್‌ 7,250mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು USB-C ಪೋರ್ಟ್ ಮೂಲಕ 22.5W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಟ್ಯಾಬ್‌ 13 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ ಎಂದು ಹೇಳಲಾಗುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮಲ್ಟಿ-ವಿಂಡೋ, ಮಲ್ಟಿ-ಸ್ಕ್ರೀನ್ ಸಹಯೋಗ ಮತ್ತು ಮೂರು-ಬೆರಳಿನ ಸ್ವೈಪ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.

Honor Pad X9 Confirmed to Launch in India Soon; Tablet Listed on Official  Website | Technology News

ಹಾನರ್‌ ಪ್ಯಾಡ್‌ X9 ಟ್ಯಾಬ್‌ ಏಕೈಕ 4GB + 128GB ರೂಪಾಂತರದ ಆಯ್ಕೆಗೆ 14,499ರೂ.ಬೆಲೆಯನ್ನು ಪಡೆದಿದೆ. ಇದನ್ನು ಸ್ಪೇಸ್ ಗ್ರೇ ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ ಟ್ಯಾಬ್‌ ಇದೇ ಆಗಸ್ಟ್ 2 ರಿಂದ ಸೇಲ್‌ಗೆ ಬರಲಿದೆ. ಇದಲ್ಲದೆ ಇಂದಿನಿಂದಲೇ ಅಮೆಜಾನ್‌ನಲ್ಲಿ ಟ್ಯಾಬ್ಲೆಟ್ ಪ್ರೀ-ಬುಕಿಂಗ್‌ಗೆ ಸಿದ್ಧವಾಗಿದೆ. ಮುಂಗಡ ಬುಕ್ ಮಾಡುವ ಗ್ರಾಹಕರು 500ರೂ. ರಿಯಾಯಿತಿ ಕೂಡ ಪಡೆದುಕೊಳ್ಳಬಹುದಾಗಿದೆ.

Honor pad x9 with snapdragon 695 launched in India.