ಇಂದು ವಿಶ್ವ ನಿದ್ರಾ ದಿನ: ಉತ್ತಮ ನಿದ್ರೆ ಮಾಡೋದ್ರಿಂದ ಸಿಗೋ ಪ್ರಯೋಜನಗಳಿವು

20-03-21 03:14 pm       source: BOLDSKY   ಡಾಕ್ಟರ್ಸ್ ನೋಟ್

ಉತ್ತಮ ನಿದ್ರೆ ಪಡೆಯಲು ಅಗತ್ಯವಾದ ಸಲಹೆಗಳು ಇಲ್ಲಿವೆ

ಇಂದು ವಿಶ್ವ ನಿದ್ರೆಯ ದಿನ. ನಿದ್ರೆ ನಿಮ್ಮ ಮನಸ್ಸನ್ನು ಶಾಂತಗೊಳಿಸುವ ಮತ್ತು ನಿಮ್ಮ ದೇಹವನ್ನು ಶುದ್ಧೀಕರಿಸುವ ಒಂದು ಪ್ರಮುಖ ಕಾರ್ಯವಾಗಿದ್ದು ಅದು ನಿಮಗೆ ಶಕ್ತಿಯುತ, ಫ್ರೆಶ್ ಹಾಗೂ ಸದಾ ಕಾಲ ಎಚ್ಚರಿಕೆಯಿಂದ ಇರುವಂತೆ ಮಾಡುತ್ತದೆ. ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ 7-9 ಗಂಟೆಗಳ ಕಾಲ ನಿದ್ರೆ ಮಾಡುವುದು ಅತ್ಯಗತ್ಯ. ಪ್ರಸ್ತುತ, ಒತ್ತಡ ಮತ್ತು ಬಿಡುವಿಲ್ಲದ ವೇಳಾಪಟ್ಟಿಗಳ ಕಾರಣದಿಂದಾಗಿ, ಶೇಕಡಾ 35 ರಷ್ಟು ಜನರು ಉತ್ತಮ ನಿದ್ರೆ ಪಡೆಯಲು ವಿಫಲರಾಗಿದ್ದಾರೆ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

World Sleep Day : What Are The Benefits Of Good Sleep In Kannada

ಕಡಿಮೆ ನಿದ್ರೆ ಬುದ್ಡಿಶಕ್ತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ನಿಮ್ಮ ಮೆದುಳಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ; ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಇದಲ್ಲದೆ, ರಕ್ತದೊತ್ತಡದಲ್ಲಿನ ಏರಿಳಿತಗಳು, ಪಾರ್ಶ್ವವಾಯು ಮತ್ತು ಹೃದ್ರೋಗದ ಸಾಧ್ಯತೆಗಳು, ಬೊಜ್ಜು, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳ ಇತ್ಯಾದಿಗಳಿಗೆ ಕಾರಣವಾಗುತ್ತದೆ. ವಿಶ್ವ ನಿದ್ರಾ ದಿನದಂದು ನಿದ್ದೆಯ ಪ್ರಾಮುಖ್ಯತೆ ಹಾಗೂ ಉತ್ತಮ ನಿದ್ರೆ ಪಡೆಯುವ ವಿಧಾನವನ್ನು ತಿಳಿಯೋಣ.

ಉತ್ತಮ ನಿದ್ರೆಯ ಪ್ರಯೋಜನಗಳೇನು?:

* ನಿದ್ರೆ ನಿಮ್ಮ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯುಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

* ನಿಮ್ಮ ದೈಹಿಕ ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯ ಜೊತೆಗೆ ನಿಮ್ಮ ಮಾನಸಿಕ ಸ್ವಾಸ್ಥ್ಯಕ್ಕೂ ಅಗತ್ಯ. ಖಿನ್ನತೆ, ಒತ್ತಡ ಮತ್ತು ಉರಿಯೂತವನ್ನು ನಿಭಾಯಿಸಲು ಉತ್ತಮ ನಿದ್ರೆಯ ದಿನಚರಿ ನಿಮಗೆ ಸಹಾಯ ಮಾಡುತ್ತದೆ. ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

* ಇದು ನಿಮ್ಮನ್ನು ರಿಫ್ರೆಶ್ ಮಾಡುತ್ತದೆ ಮತ್ತು ನಿಮ್ಮ ಮನಸ್ಸನ್ನು ಕೆಲಸದ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಕೆಲಸದಲ್ಲಿ ಉತ್ಪಾದಕತೆ ಹೆಚ್ಚಾಗಲು ಕಾರಣವಾಗಬಹುದು. ಇದು ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೀಗಾಗಿ, ನೀವು ಕೆಲಸಗಳನ್ನು ಉತ್ತಮವಾಗಿ ಮಾಡಲು ಸಾಧ್ಯವಾಗುತ್ತದೆ.

* ಇದು ಕೆಲಸಕ್ಕೆ ಸಂಬಂಧಿಸಿದ ಅಪಘಾತಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

* ನಿಮ್ಮ ಹಸಿವನ್ನು ನಿಯಂತ್ರಿಸುವ ಜವಾಬ್ದಾರಿಯುತವಾದ ಗ್ರೆಲಿನ್ ಮತ್ತು ಲೆಪ್ಟಿನ್ ಎಂಬ ಹಾರ್ಮೋನುಗಳ ಮೇಲೆ ಸಾಕಷ್ಟು ನಿದ್ರೆಯಿಲ್ಲದೇ ಇದ್ದರೆ ಅಡ್ಡ ಪರಿಣಾಮ ಬೀಳಬಹುದು. ಆದ್ದರಿಂದ, 7-9 ಗಂಟೆಗಳ ಉತ್ತಮ ನಿದ್ರೆ ಬೊಜ್ಜಿನ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ.

World Sleep Day : What Are The Benefits Of Good Sleep In Kannada

ಉತ್ತಮ ನಿದ್ರೆ ಪಡೆಯಲು ಅಗತ್ಯವಾದ ಸಲಹೆಗಳು ಇಲ್ಲಿವೆ:

* ಉತ್ತಮ ನಿದ್ರೆಯ ದಿನಚರಿಯನ್ನು ಕಾಪಾಡಿಕೊಳ್ಳಿ . ವಾರಾಂತ್ಯದಲ್ಲಿಯೂ ಸ್ಥಿರ ನಿದ್ರೆ ಮತ್ತು ಎಚ್ಚರಗೊಳ್ಳಬೇಕಾದ ವೇಳಾಪಟ್ಟಿಯನ್ನು ಅನುಸರಿಸಿ.

* ಪ್ರತಿದಿನವೂ ವ್ಯಾಯಾಮ ಮಾಡಿ.

* ಕೆಫೀನ್ ಮತ್ತು ಆಲ್ಕೋಹಾಲ್ ಅನ್ನು ನಿದ್ರೆಯ ಕಳ್ಳರು ಎಂದು ಕರೆಯುವುದರಿಂದ ದಿನದ ಉತ್ತರಾರ್ಧದಲ್ಲಿ ಅಂದರೆ ಮಧ್ಯಾಹ್ನದ ನಂತರ ಅವುಗಳನ್ನು ತಪ್ಪಿಸಿ.

* ನಿದ್ರೆಗೆ 1 ಗಂಟೆ ಮೊದಲು ಟಿವಿ ನೋಡಬೇಡಿ ಅಥವಾ ಮೊಬೈಲ್ (ನೀಲಿ ಪರದೆಗಳು) ಬಳಸಬೇಡಿ.

* ಕೋಣೆಯ ಉಷ್ಣಾಂಶವನ್ನು ಸರಿಯಾಗಿ ಹೊಂದಿಸಿಕೊಳ್ಳಿ ಮತ್ತು ಮಲಗುವ ಕೋಣೆ ಕತ್ತಲೆ ಮತ್ತು ಶಾಂತವಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ನಿಮಗೆ ನಿದ್ರೆಯ ಸಮಸ್ಯೆಗಳಿದ್ದರೆ, ಸ್ಲೀಪ್ ಸ್ಪೆಷಲಿಸ್ಟ್, ಸ್ಲೀಪ್ ಡೆಂಟಿಸ್ಟ್, ಇಎನ್ಟಿ ಸರ್ಜನ್ ಅಥವಾ ಪಲ್ಮನೊಲೊಜಿಸ್ಟ್ ಅನ್ನು ಸಂಪರ್ಕಿಸಿ ಮತ್ತು ನಿಮಗೆ ಸ್ಲೀಪ್ ಅಪ್ನಿಯಾ ಅಥವಾ ಇತರ ನಿದ್ರೆಯ ಉಸಿರಾಟದ ಕಾಯಿಲೆಗಳಿವೆಯೇ ಎಂದು ಅರ್ಥಮಾಡಿಕೊಳ್ಳಲು ಎಚ್‌ಎಸ್‌ಟಿ (ಹೋಮ್ ಸ್ಲೀಪ್ ಟೆಸ್ಟ್) ತೆಗೆದುಕೊಳ್ಳಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

This News Article Is A Copy Of BOLDSKY