ಭಾರತದಲ್ಲಿ ಕೊರೊನಾವೈರಸ್ 2ನೇ ಅಲೆ: ಸುರಕ್ಷತೆಗಾಗಿ ಏನು ಮಾಡಬೇಕು, ಏನು ಮಾಡಬಾರದು?

22-03-21 12:16 pm       source: BOLDSKY   ಡಾಕ್ಟರ್ಸ್ ನೋಟ್

ಕೊರೊನಾವೈರಸ್ ಅಲೆ ಕಡಿಮೆಯಾಗುತ್ತಾ ಬಂದು ಜನ ಜೀವನ ಸಹಜ ಸ್ಥಿತಿಗೆ ಮರುಳುತ್ತಿತ್ತು, ಅಷ್ಟರಲ್ಲೇ ಕೊರೊನಾವೈರಸ್ ಎರಡನೇ ಅಲೆ ಶುರುವಾಗಿದೆ.

ಕೊರೊನಾವೈರಸ್ ಅಲೆ ಕಡಿಮೆಯಾಗುತ್ತಾ ಬಂದು ಜನ ಜೀವನ ಸಹಜ ಸ್ಥಿತಿಗೆ ಮರುಳುತ್ತಿತ್ತು, ಅಷ್ಟರಲ್ಲೇ ಕೊರೊನಾವೈರಸ್ ಎರಡನೇ ಅಲೆ ಶುರುವಾಗಿದೆ. ಹೊಸ ಕೊರೊನಾವೈರಸ್‌ 24 ಗಂಟೆಗಳಲ್ಲಿ 43,846 ಜನರಿಗೆ ತಗುಲುವ ಮೂಲಕ ಹೊಸ ದಾಖಲೆ ಬರೆದಿದೆ. ಪಂಜಾಬ್, ಮಹಾರಾಷ್ಟ್ರ,ಮಧ್ಯ ಪ್ರದೇಶ, ತಮಿಳು ನಾಡು, ಕೇರಳ ಈ ರಾಜ್ಯಗಳಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು,

ಬೆಂಗಳೂರಿನಲ್ಲಿ ಕೂಡ ಕೇಸ್‌ಗಳು ಹೆಚ್ಚಾಗುತ್ತಿರುವುದರಿಂದ ಜನರು ಮುನ್ನಚ್ಚರಿಕೆ ಕ್ರಮವಹಿಸಬೇಕು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಕೊರೊನಾ ಎರಡನೇ ಅಲೆಯ ಬಗ್ಗೆ ಹೇಳುತ್ತಾ ಪ್ರಧಾನಿ ಮೋದಿ' ' ಈ ಸಾಂಕ್ರಾಮಿಕ ರೋಗವನ್ನು ಈಗಲೇ ತಡೆಗಟ್ಟಬೇಕಾಗಿದೆ. ಇಲ್ಲದಿದ್ದರೆ ದೇಶದಾದ್ಯಂತ ಹರಡಬಹುದು. ಇದು ಹರಡುವುದನ್ನು ತಡೆಗಟ್ಟಲು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು' ಎಂದು ಹೇಳಿದ್ದಾರೆ.

ಏನು ಮಾಡಬಾರದು?

  • ಆಗಾಗ ಮುಖ ಮುಟ್ಟುವುದು ಅದರಲ್ಲೂ ಕಣ್ಣು, ಮೂಗು, ಬಾಯಿ ಆಗಾಗ ಮುಟ್ಟಬಾರದು.
  • ಜನಸಂದಣಿ ಅಧಿಕ ಇರುವ ಕಡೆ ಹೋಗಬೇಡಿ.
  • ಮಾಲ್‌, ಜಿಮ್, ರೆಸ್ಟೋರೆಂಟ್‌ ಈ ಸ್ಥಳಗಳಿಗೆ ಭೇಟಿ ಕೊಡದಿರುವುದು ಸುರಕ್ಷಿತ. ಏಕೆಂದರೆ ಈ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗಬಹುದು.
  • ಅನಗ್ಯತವಾಗಿ ಪ್ರಯಾಣಿಸಬೇಡಿ.
  • ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ.


ಸರ್ಕಾರದ ಮಾರ್ಗಸೂಚಿ The Ministry of Personnel, Public Grievances and Pensions guide line)

ಸರ್ಕಾರದ ಮಾರ್ಗಸೂಚಿ The Ministry of Personnel, Public Grievances and Pensions guide line)

ಸರ್ಕಾರ ಕಚೇರಿಗಳಿಗೆ ಪ್ರವೇಶ ಮಾಡುವ ಕಡೆ ಥರ್ಮಲ್ ಸ್ಕ್ಯಾನರ್‌ ಅಳವಡಿಸಬೇಕು. ಜ್ವರದ ಲಕ್ಷಣಗಳು ಕಂಡು ಬಂದರೆ ಅವರಿಗೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವಂತೆ ಸೂಚಿಸಲಾಗುವುದು. ಕೊರೊನಾ ಲಕ್ಷಣ ಕಂಡು ಬಂದರೆ ಕ್ವಾರೆಂಟೈನ್‌ಗೆ ಸೂಚಿಸಬಹುದು.

  • ಆಫೀಸ್‌ ಆವರಣದೊಳಗೆ-ಹೊರಗೆ ಜನರು ಓಡಾಡುವುದನ್ನು ನಿರ್ಬಂಧಿಸಬೇಕು. ಜನರಿಗೆ ಭೇಟಿಗೆ ತಾತ್ಕಾಲಿಕ ಪಾಸ್ ನೀಡಬೇಕು. ಯಾರು ಅಧಿಕಾರಿಗಳ ಭೇಟಿಗೆ ಬರುತ್ತಾರೋ ಅವರನ್ನು ಸರಿಯಾಗಿ ಸ್ಕ್ರೀನಿಂಗ್‌ ಮಾಡಿದ ಬಳಿಕವಷ್ಟೇ ಒಳಗೆ ಬಿಡಲಾಗುವುದು.
  • ಮೀಟಿಂಗ್‌ಗಳನ್ನು ವೀಡಿಯೋ ಕಾನ್ಫೆರೆನ್ಸ್ ಮೂಲಕ ಮಾಡುವುದು ಒಳ್ಳೆಯದು. * ಅನಗ್ಯತ ಪ್ರಯಾಣ ತಪ್ಪಿಸಿ.
  • ಇನ್ನು ದಾಖಲೆಗಳನ್ನು ನಡುವುದು ಇವೆಲ್ಲವನ್ನೂ ಪ್ರವೇಶ ದ್ವಾರದಲ್ಲಿಯೇ ನೀಡುವಂತೆ ಸೂಚಿಸಲಾಗಿದೆ. ಇದರಿಂದ ಜನರು ಆಫೀಸ್ ಒಳಗಡೆ ಪ್ರವೇಶಿಸುವುದನ್ನು ತಪ್ಪಿಸಬಹುದು.
  • ಇನ್ನು ಸರ್ಕಾರಿ ಕಟ್ಟಡದಲ್ಲಿರುವ ಜಿಮ್, ಮನರಂಜನಾ ಕೇಂದ್ರಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.
  • ಇನ್ನು ಹ್ಯಾಂಡ್‌ ಸ್ಯಾನಿಟೈಸರ್, ಸೋಪ್, ವಾಶ್‌ರೂಂನಲ್ಲಿ ನೀರು ಇರುವಂತೆ ನೋಡಿಕೊಳ್ಳಲು ಸರ್ಕಾರಿ ಕೇಂದ್ರಗಳಿಗೆ ಸೂಚಿಸಲಾಗಿದೆ.
  • ಇನ್ನು ನೌಕರರು ತಮ್ಮ ಆರೋಗ್ಯದ ಬಗ್ಗೆ ಮುನ್ನಚ್ಚರಿಕೆವಹಿಸುಂತೆ ಸೂಚಿಸಲಾಗಿದೆ. ಒಂದು ವೇಳೆ ಅನಾರೋಗ್ಯ ಕಾಣಿಸಿಕೊಂಡರೆ ತಕ್ಷಣವೇ ರಿಪೋರ್ಟಿಂಗ್‌ ಆಫೀಸರ್‌ಗೆ ತಿಳಿಸಿ ಆಫೀಸ್‌ನಿಂದ ಹೊರಟು ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.
  • ಇನ್ನು ಮೇಲಾಧಿಕಾರಿಗಳಿಗೆ ನೌಕರರು ಹುಷಾರು ಇಲ್ಲದೆ ರಜೆ ಕೋರಿದರೆ ಕೂಡಲೇ ಮಂಜೂರು ಮಾಡುವಂತೆ ಸೂಚಿಸಲಾಗಿದೆ.
  • ಇನ್ನು ಇತರ ಆರೋಗ್ಯ ಸಮಸ್ಯೆ ಇರುವವರು ಹಾಗೂ ಹಿರಿಯ ನೌಕರರು ಸಾಕಷ್ಟು ಮುನ್ನಚ್ಚರಿಕೆ ವಹಿಸಿಬೇಕು. ಅಲ್ಲದೆ ಅಂಥ ನೌಕರರು ಜನರ ನೇರ ಸಂಪರ್ಕಕ್ಕೆ ಬರದಂತೆ ಕೆಲಸ ಮಾಡಲು ಸೂಚಿಸಲಾಗಿದೆ.


ಸಾಮಾಜಿಕ ಅಂತರ ಕಾಪಾಡುವುದು ಅವಶ್ಯಕ

ಸಾಮಾಜಿಕ ಅಂತರ ಕಾಪಾಡುವುದು ಅವಶ್ಯಕ

  • ನೀವು ಬಸ್‌ನಲ್ಲಿ ಪ್ರಯಾಣಿಸುವುದಾದರೆ ತುಂಬಾನೆ ಎಚ್ಚರಿಕೆವಹಿಸಿ. ಜನ ತುಂಬಾ ಇರುವ ಬಸ್‌ನಲ್ಲಿ ಅಥವಾ ಇತರ ಸಾರಿಗೆ ವಾಹನಗಳಲ್ಲಿ ಓಡಾಡಬೇಡಿ.
  • ಇನ್ನು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಆಗಾಗ ಕೈಗೆ ಹಾಕಿಕೊಳ್ಳಿ.


 ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್‌ ಇಲಾಖೆ ನೀಡಿದ ಮಾರ್ಗಸೂಚಿಗಳು

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್‌ ಇಲಾಖೆ ನೀಡಿದ ಮಾರ್ಗಸೂಚಿಗಳು

  • ಬಿಸಿ-ಬಿಸಿಯಾದ ನೀರು ಕುಡಿಯಿರಿ. * ದಿನಾ ಯೋಗಾಸನ, ಪ್ರಾಣಯಾಮ ಅಭ್ಯಾಸ ಮಾಡಿ.
  • ಅರಿಶಿಣ, ಜೀರಿಗೆ, ಕೊತ್ತಂಬರಿ ಬೀಜ, ಬೆಳ್ಳುಳ್ಳಿ ಇವುಗಳನ್ನು ಅಡುಗೆಗೆ ಬಳಸಿ.
  • ದಿನಾ ಬೆಳಗ್ಗೆ 10ಗ್ರಾಂ ಚವ್ಯನಪ್ರಾಶ ತೆಗೆದುಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.
  • ಕಷಾಯ ಮಾಡಿ ಕುಡಿಯಿರಿ. * ಹಾಲಿಗೆ ಅರಿಶಿಣ ಹಾಕಿ ಕುಡಿಯಿರಿ.

This News Article Is A Copy Of BOLDSKY