ಬ್ರೇಕಿಂಗ್ ನ್ಯೂಸ್
15-04-21 03:12 pm source: BOLDSKY ಡಾಕ್ಟರ್ಸ್ ನೋಟ್
ಆರೋಗ್ಯ ಚೆನ್ನಾಗಿರಬೇಕೆಂದರೆ ನಮ್ಮ ದೇಹದಲ್ಲಿ ಎಲ್ಲಾ ಖನಿಜಗಳು ಮತ್ತು ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿ ಇರಬೇಕು ಹಾಗೂ ಈ ಮೂಲಕ ಜೀವ ರಾಸಾಯನಿಕ ಕ್ರಿಯೆಗಳು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ, ಹೊಸ ಅಧ್ಯಯನಗಳು ಸಾಬೀತುಗೊಳಿಸಿದ ವಿಷಯವೆಂದರೆ, ಈ ಪೋಷಕಾಂಶಗಳು ಹಾಗೂ ಖನಿಜಗಳು ಒಳ್ಳೆಯದೇ ಆದರೂ ಸರಿ,
ಅಗತ್ಯಕ್ಕೂ ಹೆಚ್ಚಿದ್ದರೆ ಒಳ್ಳೆಯದಕ್ಕಿಂತ ಹಾನಿಯನ್ನೇ ಮಾಡುತ್ತವೆ. ಇತ್ತೀಚಿನ ಒಂದು ಅಧ್ಯಯನದಲ್ಲಿ ಅತಿ ಹೆಚ್ಚಿನ ಪ್ರಮಾಣದ ಕಬ್ಬಿಣದ ಸೇವನೆಯೂ ಮಾನವರ ಆರೋಗ್ಯಕ್ಕೆ ಹಾನಿಕರ ಎಂದು ತಿಳಿಸಿವೆ. ನೇಚರ್ ಕಮ್ಯೂನಿಕೇಶನ್ಸ್ ಎಂಬ ಮಾಧ್ಯಮದಲ್ಲಿ ಪ್ರಕಟಗೊಂಡಿರುವ ವರದಿಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚಿನ ಮಾನವ ವಂಶವಾಹಿನಿಯ ಕುರಿತು ನಡೆಸಲಾದ ಸಂಶೋಧನೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಎಡಿನ್ಬರ್ಗ್ ವಿಶ್ವವಿದ್ಯಾಲಯದ ಪೌಲ್ ಟಿಮ್ಮರ್ಸ್ ರವರೇ ಈ ಸಂಶೋಧನೆಯ ಪ್ರಮುಖರೂ ವರದಿಯ ಲೇಖಕರೂ ಆಗಿದ್ದಾರೆ.
ಹೇಗೆ? "ಈ ಸ್ಥಾನಗಳಲ್ಲಿ ಯಾವುದೇ ಏರುಪೇರು ಆಗುವುದು ಆರೋಗ್ಯಕರ ಕಬ್ಬಿಣದ ಜೀವರಾಸಾಯನಿಕ ಕ್ರಿಯೆಗೆ ಮುಖ್ಯವಾಗಿದೆ. ಉಳಿದಂತೆ ಇತರ ಎಂಟು ಸ್ಥಾನಗಳಲ್ಲಿರುವ ವಂಶವಾಹಿನಿಯ ಏರುಪೇರು ಕಬ್ಬಿಣದ ಜೀವರಾಸಾಯನಿಕ ಕ್ರಿಯೆಯೊಂದಿಗೆ ನೇರವಾಗಿ ಸಂಬಂಧ ಹೊಂದಿಲ್ಲ" ಎಂದು ಈ ಜರ್ಮನಿಯ ಪ್ಲಾಂಕ್ ಇನ್ಸ್ಟಿಟ್ಯೂಟ್ ಆಫ್ ಬಯೋಲಾಜಿ ಆಫ್ ಏಜಿಂಗ್ ವಿಭಾಗದಲ್ಲಿ ಜೀವಶಾಸ್ತ್ರ ಮತ್ತು ಆಯಸ್ಸಿನ ವಿಷಯದಲ್ಲಿ ಅಧ್ಯಯನ ನಡೆಸುತ್ತಿರುವ ಜೋರಿಸ್ ಡೀಲಾನ್, ಪಿ.ಎಚ್. ಡಿ. ಯವರು ತಿಳಿಸುತ್ತಾರೆ. ಈ ಬಗ್ಗೆ ಅವರು ಇನ್ನಷ್ಟು ವಿಸ್ತ್ರತವಾಗಿ ಹೀಗೆ ವಿವರಿಸುತ್ತಾರೆ:
"ಆಯಸ್ಸಿನ ಮೇಲೆ ಕಬ್ಬಿಣದ ಮಟ್ಟಗಳು ಹೇಗೆ ಪ್ರಭಾವ ಬೀರುತ್ತವೆ, ಕಬ್ಬಿಣದ ಕೊರತೆಯಿಂದ ಆರೋಗ್ಯ ಕುಂದುತ್ತದೆ ಏನೋ ಹೌದು. ಆದರೆ ರಕ್ತದಲ್ಲಿ ಕಬ್ಬಿಣದ ಮಟ್ಟವನ್ನು ಈಗಿನ ಮಟ್ಟಕ್ಕಿಂತ ಕೊಂಚವೇ ಕಡಿಮೆಗೊಳಿಸಿದಾಗ ಇದು ಅವರ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಕಬ್ಬಿಣದ ಜೀವ ರಾಸಾಯನಿಕ ಕ್ರಿಯೆಯನ್ನು ಇದುವರೆಗೂ ಆರೋಗ್ಯಕರ ವಯಸ್ಸಾಗುವಿಕೆಗೆ ಸಂಬಂಧಗೊಳಿಸಿರಲಿಲ್ಲ ಹಾಗೂ ಈಗ ಈ ಅಧ್ಯಯನ ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ" ವಂಶವಾಹಿನಿಯ ಸಂಕೇತಗಳ ಪ್ರಕಾರ ಅಧಿಕ ಮಟ್ಟದ ಕಬ್ಬಿಣದ ಮಟ್ಟಗಳಿದ್ದರೆ ಇದು ವಾಸ್ತವದಲ್ಲಿ ವ್ಯಕ್ತಿಯ ಆಯಸ್ಸನ್ನು ಕಡಿಮೆಗೊಳಿಸಬಹುದು.
ಡಿ ಎನ್ ಎ ಗಳಲ್ಲಿ ನಿಯಂತ್ರಿಸಲಾಗದ ಬದಲಾವಣೆಗಳಿಂದ ಕಬ್ಬಿಣದ ಮಟ್ಟ ಏರಿಕೆಯಾಗುತ್ತಿದ್ದರೆ, ಇದು ಯಾರದೇ ತಪ್ಪಿಲ್ಲದೇ ಈ ತೊಂದರೆಗೆ ಕಾರಣವಾಗಬಹುದು. ವ್ಯಕ್ತಿಯೊಬ್ಬರಿಗೆ ವಂಶವಾಹಿನಿಯ ಗುರುತುಗಳ ರೂಪದಲ್ಲಿ ಈ ಸಂಕೇತಗಳಿದ್ದರೆ ಈ ವ್ಯಕ್ತಿಗಳ ನಿಯಂತ್ರಣದಲ್ಲಿ ಇಲ್ಲದೇ ಈ ಮಟ್ಟಗಳು ಏರಬಹುದು ಹಾಗೂ ತನ್ಮೂಲಕ ವಯಸ್ಸಿಗೆ ಅನುಗುಣವಾದ ಕಾಯಿಲೆಗಳು ಎದುರಾಗುವ ಸಾಧ್ಯತೆ ಹಾಗೂ ಚಿಕ್ಕವಯಸ್ಸಿನಲ್ಲಿಯೇ ಸಾವು ಎದುರಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ.
"ಸಾಮಾನ್ಯವಾಗಿ ವಯಸ್ಸಾಗುತ್ತಾ ಹೋದಂತೆ ಕಬ್ಬಿಣದ ಮಟ್ಟವನ್ನು ನಿರ್ವಹಿಸುವುದೂ ಕಷ್ಟವಾಗುತ್ತಾ ಹೋಗುತ್ತದೆ. ಆದ್ದರಿಂದ ನಿಯಮಿತವಾಗಿ ಕಬ್ಬಿಣದ ಮಟ್ಟಗಳನ್ನು ಪರೀಕ್ಷಿಸಿಕೊಳ್ಳುತ್ತಿರುವುದು ಹಾಗೂ ನಿಯಂತ್ರಿಸುವುದೇ ಆರೋಗ್ಯಕರ ವೃದ್ದಾಪ್ಯ ಪಡೆಯಲು ಮುಖ್ಯವಾಗಿದೆ" ಎಂದು ಟಿಮ್ಮರ್ಸ್ ವಿವರಿಸುತ್ತಾರೆ.
ಕಬ್ಬಿಣದ ಮಟ್ಟಗಳನ್ನು ನಿರ್ವಹಿಸುವುದೇ ಜಾಣತನ ಅಂದರೆ, ನಿಮಗೆ ಈ ವಂಶವಾಹಿನಿಯ ಸಂಕೇತಗಳಿದ್ದರೆ, ನೀವು ನಿಮ್ಮ ಕಬ್ಬಿಣದ ಸೇವನೆಯನ್ನು ಅತಿ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಆದರೆ, ಈ ಸಂಕೇತಗಳು ನಮ್ಮಲ್ಲಿವೆ ಎಂದು ನಮಗೆ ತಿಳಿಯುವುದಾದರೂ ಹೇಗೆ? ಇದಕ್ಕಾಗಿಯೇ ಇರುವ ವಿಶಿಷ್ಟವಾದ ಪರೀಕ್ಷೆಗೆ ಒಳಪಡದೇ ಈ ತೊಂದರೆ ಇರುವ ಬಗ್ಗೆ ಗೊತ್ತಾಗುವುದು ಸಾಧ್ಯವಿಲ್ಲ. ಹಾಗಾಗಿ, ಈ ತೊಂದರೆ ಇದೆಯೋ ಇಲ್ಲವೋ ಎಂದು ತಿಳಿಯದೇ ಇದ್ದರೂ ಸರಿ, ಯಾವುದಕ್ಕೂ ಇದು ಇರಬಹುದು ಎಂದು ತಿಳಿದುಕೊಂಡೇ ನಮ್ಮ ಕಬ್ಬಿಣದ ಮಟ್ಟಗಳನ್ನು ನಿರ್ವಹಿಸುವುದೇ ಜಾಣತನದ ಕ್ರಮವಾಗಿದೆ.
ಈ ಮೂಲಕ ಅತಿ ಹೆಚ್ಚಿನ ಕಬ್ಬಿಣದ ಅಂಶವಿರುವ ಆಹಾರಗಳನ್ನು, ವಿಶೇಷವಾಗಿ ಕೆಂಪು ಮಾಂಸಗಳು, ಮಿತ ಪ್ರಮಾಣದಲ್ಲಿ ಸೇವಿಸುವಂತೆ ಎಚ್ಚರ ವಹಿಸಲು ಸಾಧ್ಯವಾಗುತ್ತದೆ. ಆದರೆ, ಈ ಅಧ್ಯಯನ ಇನ್ನೂ ಪ್ರಾರಂಭಿಕ ಹಂತದಲ್ಲಿದೆ ಹಾಗೂ ಈ ವಿಷಯಗಳನ್ನು ಧೃಢೀಕರಿಸಲು ಇನ್ನಷ್ಟು ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ. ವಯಸ್ಸಾಗುವಿಕೆಗೆ ಸಂಬಂಧಿಸಿದಂತೆ ಕಬ್ಬಿಣದ ಮಟ್ಟ ಎಷ್ಟಿರಬೇಕು ಎಂಬುದನ್ನು ಈ ವರದಿ ಸ್ಪಷ್ಟಪಡಿಸಿಲ್ಲ.
ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯಾವ ಮಟ್ಟಗಳನ್ನು ಕಾಯ್ದುಕೊಳ್ಳಬೇಕು, ಈ ಮಟ್ಟ ದಾಟಿದರೆ ಕಬ್ಬಿಣದ ಜೀವ ರಾಸಾಯನಿಕ ಕ್ರಿಯೆಯ ಮೇಲೆ ಯಾವ ಪರಿಣಾಮ ಬೀರುತ್ತದೆ, ಈ ಏರಿಕೆ ಪ್ರತಿ ವ್ಯಕ್ತಿಗೂ ಭಿನ್ನವಾಗಿರುತ್ತದೆಯೇ ಎಂಬ ವಿಷಯಗಳನ್ನು ಇನ್ನಷ್ಟೇ ಸ್ಪಷ್ಟೀಕರಿಸಬೇಕಾಗಿದೆ. ಹಾಗಾಗಿ ನಿಖರವಾದ ಪರೀಕ್ಷಾ ವರದಿಗಳು ಮತ್ತು ಮಾಹಿತಿಗಳು ಈ ಸಂಶೋಧನೆಗೆ ಅತಿ ಮುಖ್ಯವಾಗಿವೆ.
This News Article Is A Copy Of BOLDSKY
04-02-25 11:32 pm
HK News Desk
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
Two-wheeler rider fined, Bangalore Traffic: ಎ...
04-02-25 03:09 pm
Cow theft, Mankal Vaidya: ಇನ್ಮುಂದೆ ಗೋಹತ್ಯೆ ನಡ...
04-02-25 12:59 pm
Mandya Car Canal Accident, Hassan Drowning: ಮ...
03-02-25 10:38 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
04-02-25 07:47 pm
Mangalore Correspondent
U T Khader, Mangalore: ವಿಧಾನಸೌಧಕ್ಕೆ ನಾಯಿ ಕಾಟ...
03-02-25 07:38 pm
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
Kotekar Bank Robbery, Shashi Tevar, update: ಬ...
02-02-25 05:02 pm
Air India Express, Mangalore Delhi flight: ಮಂ...
01-02-25 07:47 pm
03-02-25 05:46 pm
Mangalore Correspondent
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am