18 ವರ್ಷ ಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆಯಲು ಹೇಗೆ ನೋಂದಾಣಿ ಮಾಡಬೇಕು

22-04-21 09:22 pm       source: BOLDSKY   ಡಾಕ್ಟರ್ಸ್ ನೋಟ್

ಕೊರೋನಾ ಎಲ್ಲೆಡೆ ವೇಗವಾಗಿ ಹಬ್ಬುತ್ತಿದ್ದು, ಕೇಂದ್ರ ಸರ್ಕಾರ ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಘೋಷಣೆ ಮಾಡಿದೆ.

ಕೊರೋನಾ ಎಲ್ಲೆಡೆ ವೇಗವಾಗಿ ಹಬ್ಬುತ್ತಿದ್ದು, ಕೇಂದ್ರ ಸರ್ಕಾರ ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಘೋಷಣೆ ಮಾಡಿದೆ.

ಈ ಕೋವಿಡ್ ಲಸಿಕೆ ಪಡೆಯಲು ಶನಿವಾರದಿಂದ ಅಂದರೆ ಏಪ್ರಿಲ್ 28ರಿಂದ ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ನಾಗರಿಕರು ಹೆಸರು ನೋಂದಾವಣೆ ಮಾಡಿಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ. ಹಾಗಾದರೆ ಕೋವಿಡ್ ಲಸಿಕೆ ಪಡೆಯಲು ನಾವು ಮಾಡಬೇಕಾಗಿರುವುದು ಏನು ಎಂಬುದನ್ನು ಈ ಲೇಖನದಲ್ಲಿ ಹೇಳಿದ್ದೇವೆ.

ಕೋವಿಡ್ -19 ವ್ಯಾಕ್ಸಿನೇಷನ್ ಗೆ ಕೋ-ವಿನ್ ಅಪ್ಲಿಕೇಶನ್‌ನಲ್ಲಿ ಹೇಗೆ ನೋಂದಾಯಿಸಿಕೊಳ್ಳುವುದು ಎಂಬುದು ಇಲ್ಲಿದೆ:

1. CoWIN ನ cowin.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

2. 'ರಿಜಿಸ್ಟರ್ / ಸೈನ್ ಇನ್ ಯೂವರ್ ಸೆಲ್ಫ್' ಮೇಲೆ ಕ್ಲಿಕ್ ಮಾಡಿ.

3. ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಿ.

4. ನಂತರ, ನಿಮ್ಮ ಮೊಬೈಲ್ಗೆ ಒಂದು ಒಟಿಪಿಯನ್ನು ಪಡೆಯುತ್ತೀರಿ. ಆ ಒಟಿಪಿಯನ್ನು ನಮೂದಿಸಿ.

5. ನೋಂದಾಯಿಸಿದ ನಂತರ, ನಿಮಗೆ ಬೇಕಾಗಿರುವ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ.

ಕೋವಿಡ್ -19 ವ್ಯಾಕ್ಸಿನೇಷನ್ ಪೂರ್ಣಗೊಂಡ ನಂತರ, ನೀವು ರೆಫರೆನ್ಸ್ ಐಡಿಯನ್ನು ಪಡೆಯುತ್ತೀರಿ, ಅದರ ಮೂಲಕ ನಿಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಪಡೆಯಬಹುದು.

ನೋಂದಣಿಗೆ ಅಗತ್ಯವಿರುವ ದಾಖಲೆಗಳು:

ನೀವು ಈ ಕೆಳಗಿನ ಯಾವುದೇ ಗುರುತಿನ ಚೀಟಿಯನ್ನು ಹೊಂದಿರಬಹುದು.

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಮತದಾರರ ID
  • ಡ್ರೈವಿಂಗ್ ಲೈಸೆನ್ಸ್
  • ಕಾರ್ಮಿಕ ಸಚಿವಾಲಯದ ಅಡಿಯಲ್ಲಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್
  • ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್ಆರ್ಇಜಿಎ) ಜಾಬ್ ಕಾರ್ಡ್
  • ಸಂಸದರು / ಶಾಸಕರು / ಎಂಎಲ್ ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ
  • ಪಾಸ್ಪೋರ್ಟ್
  • ಬ್ಯಾಂಕ್ / ಅಂಚೆ ಕಚೇರಿ ನೀಡುವ ಪಾಸ್‌ಬುಕ್‌ಗಳು
  • ಪಿಂಚಣಿ ದಾಖಲೆ
  • ಕೇಂದ್ರ / ರಾಜ್ಯ ಸರ್ಕಾರ / ಸಾರ್ವಜನಿಕ ಸೀಮಿತ ಕಂಪನಿಗಳಿಂದ ನೌಕರರಿಗೆ ನೀಡಲಾಗುವ ಸೇವಾ ಗುರುತಿನ ಚೀಟಿ

ಆರೋಗ್ಯ ಸೇತು ಆಯಪ್ ಮೂಲಕ ನೋಂದಣಿ ಪ್ರಕ್ರಿಯೆ ಹೇಗೆ ಮಾಡುವುದು?:

ಆರೋಗ್ಯ ಸೇತು ಆಯಪ್ ಮೂಲಕ ನೋಂದಣಿ ಪ್ರಕ್ರಿಯೆ ಹೇಗೆ ಮಾಡುವುದು?:

  1. ಆರೋಗ್ಯ ಸೇತು ಅಪ್ಲಿಕೇಶನ್‌ಗೆ ಹೋಗಿ> ಹೋಮ್ ಸ್ಕ್ರೀನ್ ನಲ್ಲಿರುವ ಕೋವಿನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  2. ವ್ಯಾಕ್ಸಿನೇಷನ್ ನೋಂದಣಿ ಆಯ್ಕೆಮಾಡಿ > ಫೋನ್ ಸಂಖ್ಯೆಯನ್ನು ನಮೂದಿಸಿ> ಒಟಿಪಿ ನಮೂದಿಸಿ
  3. ಪರಿಶೀಲನೆ ಅಥವಾ ವೆರಿಫೈ ಮೇಲೆ ಕ್ಲಿಕ್ ಮಾಡಿ> ನಿಮ್ಮನ್ನು ವ್ಯಾಕ್ಸಿನೇಷನ್ ಪುಟಕ್ಕೆ ಕರೆದೊಯ್ಯುತ್ತದೆ.
  4. 'ಕೋವಿನ್ ಪೋರ್ಟಲ್ ಮೂಲಕ ಮಾಡಿದ ಪ್ರಕ್ರಿಯೆಯಲ್ಲಿರುವ ಅದೇ ಹಂತಗಳನ್ನು ಇಲ್ಲೂ ಅನುಸರಿಸಿ.

ಪ್ರತಿ ನಾಗರಿಕನು ಲಸಿಕೆಯ ಎರಡು ಶಾಟ್ ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೋವಾಕ್ಸಿನ್ ಎರಡನೇ ಡೋಸ್ ಅನ್ನು ಮೊದಲ ಡೋಸ್ ನಂತರ 28 ದಿನಗಳಿಂದ 42 ದಿನಗಳ ನಡುವೆ ತೆಗೆದುಕೊಳ್ಳಬೇಕು ಎಂದು ಕೋವಿನ್ ಪೋರ್ಟಲ್ ಹೇಳುತ್ತದೆ. ಕೋವಿಶೀಲ್ಡ್ನ ಎರಡನೇ ಡೋಸ್ ಅನ್ನು ಮೊದಲ ಡೋಸ್ ನಂತರ 28 ದಿನಗಳಿಂದ 56 ದಿನಗಳವರೆಗೆ ತೆಗೆದುಕೊಳ್ಳಬೇಕು.

This News Article Is A Copy Of BOLDSKY