ಬ್ರೇಕಿಂಗ್ ನ್ಯೂಸ್
10-05-21 12:44 pm Reena TK, BoldSky Kannada ಡಾಕ್ಟರ್ಸ್ ನೋಟ್
ಪ್ರಸ್ತುತ ಕೊರೋನಾ ಕಾಲದಲ್ಲಿ ಸೋಂಕಿನ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಅನ್ನೋದು ಎಲ್ಲರಿಗೂ ಬಹಳ ಮುಖ್ಯ. ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಇದನ್ನು ಬೆಳೆಸಿಕೊಳ್ಳುವುದು ಹೇಗೆ ಎಂಬ ಚಿಂತೆ ಮಾಡುತ್ತಿದ್ದಾರೆ. ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ಬದಲು, ಮೊದಲೇ ಎಚ್ಚೆತ್ತುಕೊಂಡರೇ ಒಳಿತಲ್ಲವೇ?
ರೋಗ ನಿರೋಧಕ ಶಕ್ತಿ ಎಲ್ಲಾ ಕಾಲಕ್ಕೂ ಅಗತ್ಯವಾಗಿರುವಂತದ್ದು, ಆದ್ದರಿಂದ ವ್ಯಕ್ತಿ ಹುಟ್ಟಿದಾಗಿನಿಂದಲೇ ಅದನ್ನ ಬೆಳೆಸಿಕೊಳ್ಳುವ ಪ್ರಯತ್ನ ಮಾಡಬೇಕು. ಅದಕ್ಕಾಗಿ ಹುಟ್ಟಿನಿಂದಲೇ ರೋಗ ನಿರೋಧಕ ಶಕ್ತಿಯನ್ನು ಬೆಳೆಸುವುದು ತುಂಬಾ ಒಳ್ಳೆಯದು. ಹಾಗಾದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ಈ ಸ್ಟೋರಿ ನೋಡಿ.
1. ನಿಮ್ಮ ಮಗುವಿಗೆ ಎದೆಹಾಲು ನೀಡಿ:
ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತಾಯಿಯ ಹಾಲು ಪ್ರಮುಖ ಪಾತ್ರಹಿಸುತ್ತದೆ. ಅದರಲ್ಲಿರುವ ಕೊಲೊಸ್ಟ್ರಮ್ ಮಗುವಿಗೆ ಬಹಳ ಸಹಕಾರಿ. ಕನಿಷ್ಠ ಆರು ತಿಂಗಳವರೆಗೆ ಎದೆಹಾಲು ನೀಡಿ. ಆ ಸಂದರ್ಭದಲ್ಲಿ ಉತ್ತಮ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ, ಸೋಂಕುಗಳು ಮತ್ತು ಅಲರ್ಜಿಗಳಿಗೆ ಕಡಿಮೆ ಒಳಗಾಗುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ.
2. ಸರಿಯಾದ ಸಮಯಕ್ಕೆ ಚುಚ್ಚುಮದ್ದು ಕೊಡಿಸಿ:
ಶಿಶುವೈದ್ಯರು ಸಲಹೆ ನೀಡುವ ವ್ಯಾಕ್ಸಿನೇಷನ್ ನ್ನು ಸರಿಯಾದ ಸಮಯಕ್ಕೆ ಹಾಕಿಸಿ. ಎಲ್ಲಾ ಮಕ್ಕಳಿಗೆ, ವಿಶೇಷವಾಗಿ ಆಸ್ತಮಾ ಮತ್ತು ಇತರ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿರುವವರಿಗೆ ಇದು ಅತ್ಯಗತ್ಯ. ಸರಿಯಾದ ಸಮಯಕ್ಕೆ ಚುಚ್ಚುಮದ್ದು ನೀಡುವುದು ಮುಂದಾಗುವ ಅಪಾಯಗಳನ್ನು ಕಡಿಮೆ ಮಾಡುತ್ತದೆ.
3. ಆರೋಗ್ಯಕರ ಆಹಾರ ನೀಡಿ:
ನಿಮ್ಮ ಮಗುವಿಗೆ ತರಕಾರಿ ಹಾಗೂ ಹಣ್ಣುಗಳನ್ನು ಸಮೃದ್ಧವಾಗಿ ನೀಡಿ. ವಿಟಮಿನ್ ಸಿ ಹೆಚ್ಚಿರುವ ಹೆಚ್ಚಿನ ಕಿತ್ತಳೆ ಮತ್ತು ಸಿಟ್ರಸ್ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕುಗಳ ವಿರುದ್ಧ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಪಾಲಕ ನಂತಹ ಹಸಿರು ಎಲೆಗಳ ತರಕಾರಿಗಳು ಕಬ್ಬಿಣಾಂಶದಿಂದ ಕೂಡಿದ್ದು, ಬಿಳಿ ರಕ್ತ ಕಣಗಳು ಮತ್ತು ಪ್ರತಿಕಾಯಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಬೀಜಗಳು, ಧಾನ್ಯಗಳು ಮತ್ತು ಬೀನ್ಸ್ ಪ್ರಮುಖ ಒಮೆಗಾ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ದೈನಂದಿನ ಆಹಾರದಲ್ಲಿ ವಿವಿಧ ರೂಪಗಳಲ್ಲಿ ಸೇರಿಸಬಹುದು.
4. ಆರೋಗ್ಯಕರ ಕರುಳನ್ನು ಕಾಪಾಡಿಕೊಳ್ಳಿ:
ಕರುಳಿನ ಆರೋಗ್ಯವು ಉತ್ತಮ ಜೀರ್ಣಾಂಗ ವ್ಯವಸ್ಥೆಗೆ ಬಹುಮುಖ್ಯವಾಗಿದೆ. ಅಲ್ಲಿ ಎಲ್ಲಾ ಸೋಂಕುಗಳು ಉಂಟಾಗುತ್ತವೆ. ಪ್ರೋಬಯಾಟಿಕ್ ಸಮೃದ್ಧವಾಗಿರುವ ಆಹಾರವು ಕರುಳಿನ ಪ್ರದೇಶವನ್ನು ಬಲಪಡಿಸುತ್ತದೆ ಮತ್ತು ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ದೈನಂದಿನ ಆಹಾರದಲ್ಲಿ ಪ್ರೋಬಯಾಟಿಕ್‌ಗಳನ್ನು ಸೇರಿಸಲು ಮೊಸರು ಉತ್ತಮ ಮಾರ್ಗವಾಗಿದೆ. ಮಕ್ಕಳಿಗೆ ಹಣ್ಣಿ ಜೊತೆ ಮೊಸರು ಸೇರಿಸಿ ಕೊಡಬಹುದು.
5. ಸಾಕಷ್ಟು ನಿದ್ರೆ ಮಾಡಿ:
ಹೆಚ್ಚಿನ ಮಕ್ಕಳಿಗೆ 10 ರಿಂದ 14 ಗಂಟೆಗಳ ನಿರಂತರ ನಿದ್ರೆ ಬೇಕು. ಮಲಗುವ ಮೊದಲು ಬಿಸಿನೀರಿನ ಸ್ನಾನ, ಲಘು ಮಸಾಜ್ ಅಥವಾ ಸ್ವಲ್ಪ ಸಮಯದವರೆಗೆ ಒಟ್ಟಿಗೆ ಓದಬಹುದು. ಶಕ್ತಿಯುತ ಮತ್ತು ಚೆನ್ನಾಗಿ ವಿಶ್ರಾಂತಿ ಪಡೆದ ಮಗು ಸೋಂಕುಗಳನ್ನು ದೂರವಿಡಲು ಉತ್ತಮವಾಗಿ ತಯಾರಾಗಿರುತ್ತದೆ.
6. ಸಕ್ರಿಯವಾಗಿರಿ:
ಫಿಟ್ ನೆಸ್ ಕಾಪಾಡಿಕೊಳ್ಳುವಲ್ಲಿ ವ್ಯಾಯಾಮವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಗಾರ್ಡನ್ ನಲ್ಲಿ ಒಂದು ಗಂಟೆಯ ಚಟುವಟಿಕೆ ಅಥವಾ ಒಳಾಂಗಣ ಆಟದ ಮೈದಾನವು ಮಗುವಿನ ಆರೋಗ್ಯದಲ್ಲಿ ಅದ್ಭುತಗಳನ್ನು ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಟ್ಟಿಗೆ ವ್ಯಾಯಾಮ ಮಾಡುವುದು ಅಥವಾ ಆಡುವುದರಿಂದ ಕುಟುಂಬದಲ್ಲಿ ಬಂಧ ಸದೃಢವಾಗಿರಲು ಕಾರಣವಾಗಿರುತ್ತದೆ.
7. ನೈರ್ಮಲ್ಯದ ಅಭ್ಯಾಸ ಮಾಡಿಸಿ:
ಉತ್ತಮ ನೈರ್ಮಲ್ಯವು ಸೂಕ್ಷ್ಮಜೀವಿಗಳು ಮತ್ತು ಸೋಂಕುಗಳನ್ನು ದೂರವಿರಿಸುತ್ತದೆ. ಆಟದ ನಂತರ, ಊಟಕ್ಕೆ ಮೊದಲು ಮತ್ತು ನಂತರ ಕೈ ತೊಳೆಯುವುದು ಮತ್ತು ಶೌಚಾಲಯವನ್ನು ಬಳಸಿದ ನಂತರ ಸರಳವಾದ ಅಭ್ಯಾಸಗಳನ್ನು ಒತ್ತಿಹೇಳಬೇಕು.
(Kannada Copy of Boldsky Kannada)
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
02-04-25 07:35 pm
HK News Desk
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm