ಬ್ರೇಕಿಂಗ್ ನ್ಯೂಸ್
11-05-21 02:18 pm Reena TK, BoldSky Kannada ಡಾಕ್ಟರ್ಸ್ ನೋಟ್
ಕೊರೊನಾವೈರಸ್ ಎರಡನೇ ಅಲೆಗೆ ಬ್ರೇಕ್ ಹಾಕಲು ಪ್ರತೀ ರಾಜ್ಯದ ಸರ್ಕಾರಗಳು ಪ್ರಯತ್ನಿಸುತ್ತಿವೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಬಂದಿದೆಯಾದರೂ ಇನ್ನೂ ಬಹಳಷ್ಟು ಜನರು ಕೊರೊನಾ ಲಸಿಕೆ ಪಡೆಯಬೇಕಾಗಿದೆ. ಈಗ ಬಂದಿರುವ ಕೊರೊನಾವೈರಸ್ ವೇಗವಾಗಿ ಹಬ್ಬುತ್ತಿರುವುದರಿಂದ ಇದನ್ನು ತಡೆಗಟ್ಟಲು ಗೋವಾ ಸರ್ಕಾರ ಕೈಗೊಂಡ ಯೋಜನೆ ಇದೀಗ ದೇಶದ ಗಮನ ಸೆಳೆದಿದೆ.
ಈಗ ಐವರ್ಮೆಕ್ಟಿನ್ ಎಂಬ ಮಾತ್ರೆ ಸಕತ್ ಟ್ರೆಂಡ್‌ನಲ್ಲಿದೆ. ಗೋವಾ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಈ ಮಾತ್ರೆ ನೀಡುತ್ತಿದ್ದು ಇದು ಕೊರೊನಾವೈರಸ್ ಸೋಂಕು ವ್ಯಕ್ತಿಗೆ ತಗುಲಿದಾಗ ರೋಗ ಲಕ್ಷಣಗಳು ಗಂಭೀರವಾಗುವುದನ್ನು ತಡೆಗಟ್ಟಲು ಸಹಕಾರಿ ಎಂಬುವುದು ತಿಳಿದು ಬಂದಿದೆ. ಗೋವಾದ ಆರೋಗ್ಯ ಮಂತ್ರಿ ವಿಶ್ವಜಿತ್ ರಾಣೆ ' ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಈ ಮಾತ್ರೆ ನೀಡಲಾಗುವುದು' ಎಂದು ಹೇಳಿದ್ದಾರೆ. ಏನಿದು ಐವರ್ಮೆಕ್ಟಿನ್, ಇದು ಕೋವಿಡ್ 19ನಿಂದ ಪಾರಾಗುವಲ್ಲಿ ಹೇಗೆ ಸಹಕಾರಿ ಎಂಬುವುದನ್ನು ನೋಡೋಣ ಬನ್ನಿ:
ಐವರ್ಮೆಕ್ಟಿನ್ ಎಂದರೇನು?
ಐವರ್ಮೆಕ್ಟಿನ್ ಎಫ್‌ಡಿಎ (Food and Drug Administration)ನಿಂದ ಅನುಮತಿ ಪಡೆದ ಮಾತ್ರೆಯಾಗಿದೆ. ಇದನ್ನು ಚರ್ಮದ ಸೋಂಕು, ಹೊಟ್ಟೆ ಹುಳ, ಕರುಳು, ಶ್ವಾಸಕೋಶದ ಸೋಂಕು( intestinal strongyloidiasis), ರಿವರ್ ಬ್ಲೈಂಡ್‌ನೆಸ್ ( onchocerciasis) ಮುಂತಾದ ಸಮಸ್ಯೆ ಇರುವವರಿಗೆ ನೀಡುವ ಮಾತ್ರೆಯಾಗಿದೆ
ಐವರ್ಮೆಕ್ಟಿನ್ ಕೋವಿಡ್ 19 ಸೋಂಕಿರು ಚೇರಿಸಿಕೊಳ್ಳುವಲ್ಲಿ ಹೇಗೆ ಸಹಕಾರಿ?
ಅಧ್ಯಯನ ಪ್ರಕಾರ ಇದನ್ನು ಸೋಂಕಿತರು ದಿನಾ ತೆಗೆದುಕೊಳ್ಳುವುದರಿಂದ ಕೊರೊನಾವೈರಸ್ ರೋಗ ಲಕ್ಷಣಗಳು ಗಂಭೀರವಾಗುವುದನ್ನು ತಡೆಗಟ್ಟಬಹುದು ಎಂದು Therapeutics ಎಂಬ ಅಮೆರಿಕ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋದನೆ ವರದಿ ಹೇಳಿದೆ. ಐವರ್ಮೆಕ್ಟಿನ್ ಮಾತ್ರೆ ಎಷ್ಟು ಪರಿಣಾಮಕಾರಿ ಎಮದು ತಿಳಿಯಲು 2500 ಕೊರೊನಾ ಸೋಂಕಿತರಿಗೆ ಈ ಮಾತ್ರೆಗಳನ್ನು ನೀಡಲಾಗಿತ್ತು. ಇದರ ಕುರಿತು ನಡೆಸಿದ ಎಲ್ಲಾ ಸಂಶೋಧನೆಗಳು ಈ ಮಾತ್ರೆ ತೆಗೆದುಕೊಂಡವರಲ್ಲಿ ಕೊರೊನಾ ಲಕ್ಷಣಗಳು ಗಂಭೀರವಾಗಿಲ್ಲ ಎಂದಿವೆ. ಯುಕೆ, ಲಂಡನ್, ಇಟಲಿ, ಸ್ಪೇನ್ , ಜಪಾನ್ ಮುಂತಾದ ರಾಷ್ಟ್ರಗಳ ತಜ್ಞರು ಐವರ್ಮೆಕ್ಟಿನ್ ಮಾತ್ರೆ ಕೊರೊನಾ ಸೋಂಕಿತರ ಮೇಲೆ ಬೀರುವ ಪ್ರಭಾವದ ಬಗ್ಗೆ ಅಧ್ಯಯನ ನಡೆಸಿವೆ. ಈ ಎಲ್ಲಾ ಅಧ್ಯಯನ ವರದಿಗಳು ಐವರ್ಮೆಕ್ಟಿನ್ ಮಾತ್ರೆ ಕೊರೊನಾ ಸೋಂಕಿತರಿಗೆ ನೀಡುವುದರಿಂದ ಅವರು ಬೇಗನೆ ಚೇತರಿಸಿಕೊಳ್ಳಲು ಸಹಕಾರಿ ಎಂಬುವುದಾಗಿ ತಿಳಿಸಿವೆ.
ಐವರ್ಮೆಕ್ಟಿನ್ ಮಾತ್ರೆ ಬಳಸುವುದರಿಂದ ಅಡ್ಡಪರಿಣಾಮವಿದೆಯೇ?
ಐವರ್ಮೆಕ್ಟಿನ್ ಮಾತ್ರೆಯನ್ನು ಕೋವಿಡ್ 19ನಿಂದ ಸುರಕ್ಷಿತರಾಗಲು ನೀಡುತ್ತಿದೆಯಾದರೂ, ಇದರ ಕುರಿತು ಇನ್ನೂ ಸಂಶೋಧನೆ ನಡೆಯುತ್ತಿರುವುದರಿಂದ ಕೊರೊನಾ ಸೋಂಕಿತರಿಗೆ ಈ ಮಾತ್ರೆ ನೀಡಲು FDA ಇನ್ನೂ ಅನುಮತಿ ನೀಡಿಲ್ಲ. ಆದರೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿತರಿಗೆ ಈ ಮಾತ್ರೆ ನೀಡಲಾಗಿದೆ. ಅಲ್ಲದೆ ಐವರ್ಮೆಕ್ಟಿನ್ ಮಾತ್ರೆ ಕುರಿತು ಕೆಲವೊಂದು ತಪ್ಪಾದ ಮಾಹಿತಿಗಳೂ ಹರಿದಾಡುತ್ತಿವೆ. ಹೆಚ್ಚು ಡೋಸೇಜ್ ತೆಗೆದುಕೊಳ್ಳಬಹುದು ಎಂಬುವುದು ತಪ್ಪಾದ ಮಾಹಿತಿ ಎಂದು FDA ಹೇಳಿದೆ.
18 ವರ್ಷ ಮೇಲ್ಪಟ್ಟವರಿಗೆ ಐವರ್ಮೆಕ್ಟಿನ್ ಮಾತ್ರೆ ನೀಡಲು ಮುಂದಾದ ಗೋವಾ
ಗೋವಾ ಸರ್ಕಾರವು 18 ವರ್ಷ ಮೇಲ್ಪಟ್ಟ ಕೊರೊನಾ ಸೋಂಕಿತರಿಗೆ ಈ ಮಾತ್ರೆ ನೀಡುವಂತೆ ಹೇಳಿದೆ. ಈ ಮಾತ್ರೆ ಗೋವಾದ ಪ್ರತೀ ಜಿಲ್ಲೆಯಲ್ಲಿ ದೊರೆಯಲಿದ್ದು12mgನಷ್ಟು ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಸಾವಿನ ಸಂಖ್ಯೆ ಕಡಿಮೆ ಮಾಡಲು ಸರಕಾರ ಈ ಮಾತ್ರೆ ನೀಡಲು ಮುಂದಾಗಿದೆ. ಆದರೆ ಈ ಮಾತ್ರೆ ತೆಗೆದುಕೊಂಡ ಮಾತ್ರಕ್ಕೆ ಬೇರೆ ಎಲ್ಲಾ ಸುರಕ್ಷಿತಾ ಕ್ರಮಗಳನ್ನು ನಿರ್ಲಕ್ಷ್ಯ ಮಾಡಬಾರದು, ವೈದ್ಯರ ಸಲಹೆ-ಸೂಚನೆಗಳನ್ನು ತಪ್ಪದ ಪಾಲಿಸಬೇಕೆಂದು ಗೋವಾದ ಆರೋಗ್ಯ ಇಲಾಖೆ ಸೂಚಿಸಿದೆ.
(Kannada Copy of Boldsky Kannada)
22-11-24 05:16 pm
HK News Desk
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
Dinesh Gundu Rao, Bangalore: ಸರ್ಕಾರಿ ಆಸ್ಪತ್ರೆ...
21-11-24 09:32 pm
Bangalore Fire showroom: ಇಲೆಕ್ಟ್ರಿಕ್ ವಾಹನ ಶೋರ...
20-11-24 09:57 pm
Liquor Bandh, Mangalore: ನ.20ರ ಮದ್ಯ ವ್ಯಾಪಾರ ಬ...
19-11-24 11:05 pm
18-11-24 03:54 pm
HK News Desk
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
ಅಮೆರಿಕದ ಗುಪ್ತಚರ ಸಂಸ್ಥೆ ಮುಖ್ಯಸ್ಥರಾಗಿ ಹಿಂದು ಮಹಿ...
14-11-24 05:58 pm
ಸುದೀರ್ಘ 18 ವರ್ಷಗಳ ಹಿಂದೆ ಕೊಲೆಯಾದ ಕೊಡಗಿನ ಸಫಿಯಾಗ...
12-11-24 09:00 pm
22-11-24 11:55 am
Mangalore Correspondent
Kundapura Accident, Udupi: ಕುಂಭಾಶಿ ; ಹೆದ್ದಾರಿ...
21-11-24 11:08 pm
Mangalore, Rev Hannibal Cabral, Rachitha Cabr...
21-11-24 09:57 pm
Mangalore, Belthangady, Elephant attack: ಬೆಳ್...
21-11-24 09:22 pm
Saket Rajan encounter, Vikram Gowda e counter...
21-11-24 06:19 pm
22-11-24 04:14 pm
Bangalore Correspondent
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm
Mangalore court, crime, Rape: ಅಜ್ಜಿ ಮನೆಯಲ್ಲಿ...
22-11-24 01:33 pm
Naxal leader Vikram Gowda Encounter, Ground R...
19-11-24 07:40 pm
Hassan Murder, Dowry; ಹಾಸನ ; ಗರ್ಭಿಣಿ ಪತ್ನಿಗೆ...
19-11-24 05:56 pm