ಡಬಲ್ ಮಾಸ್ಕ್ ಧರಿಸುತ್ತಿದ್ದೀರಾ? ಏನು ಮಾಡಬೇಕು, ಏನು ಮಾಡಬಾರದು ನೋಡಿ

12-05-21 10:53 am       Reena TK, BoldSky Kannada   ಡಾಕ್ಟರ್ಸ್ ನೋಟ್

ಕೊರೊನಾ ಸೋಂಕಿತರನ್ನು ಆರೈಕೆ ಮಾಡುವವರು ಸರ್ಜಿಕಲ್ ಮಾಸ್ಕ್ ಧರಿಸಿ ಆರೈಕೆ ಮಾಡುವಂತೆ ಆರೋಗ್ಯ ಇಲಾಖೆ ಮಾರ್ಗದರ್ಶನ ನೀಡಿತ್ತು.

ಕೊರೊನಾವೈರಸ್ ಮೊದಲನೇ ಅಲೆಯಲ್ಲಿ ಮಾಸ್ಕ್ ಧರಿಸಿ ಕೊರೊನಾ ವೈರಸ್ ತಡೆಗಟ್ಟಿ ಎಂಬ ಸಂದೇಶ ನೀಡಲಾಗುತ್ತು. ಆ ಸಮಯದಲ್ಲಿ ಕೆಲವರು N95, ಸರ್ಜಿಕಲ್ ಮಾಸ್ಕ್‌ ಧರಿಸಲಾರಂಭಿಸಿದಾಗ ಇದರಿಂದಾಗಿ ಆರೋಗ್ಯ ಸಿಬ್ಬಂದಿಗೆ ಮಾಸ್ಕ್‌ ಕೊರತೆ ಉಂಟಾಗುವುದೆಮದು ಅರಿತು ಜನರಿಗೆ ಬಟ್ಟೆ ಮಾಸ್ಕ್ ಬಳಸುವಂತೆ ಸಲಹೆ ನೀಡಿತ್ತು. ಕೊರೊನಾ ಸೋಂಕಿತರನ್ನು ಆರೈಕೆ ಮಾಡುವವರು ಸರ್ಜಿಕಲ್ ಮಾಸ್ಕ್ ಧರಿಸಿ ಆರೈಕೆ ಮಾಡುವಂತೆ ಆರೋಗ್ಯ ಇಲಾಖೆ ಮಾರ್ಗದರ್ಶನ ನೀಡಿತ್ತು.

ಕೊರೊನಾವೈರಸ್ ಎರಡನೇ ಅಲೆ ವೇಗವಾಗಿ ಹಬ್ಬುತ್ತಿರುವುದರಿಂದ ಇದಕ್ಕೆ ಕಡಿವಾಣ ಹಾಕಲು ಜನರು ಮೊದಲಿಗಿಂತ ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗಿದೆ. ಮಾಸ್ಕ್‌ ಧರಿಸುವುದು, ಕೈಗಳಿಗೆ ಸ್ಯಾನಿಟೈಸರ್ ಹಾಕುವುದು ಹಾಗೂ ಹೊರಗಡೆ ಹೋದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೊರೊನಾವೈರಸ್‌ ತಡೆಗಟ್ಟುವ ಪ್ರಮುಖ ಮಾರ್ಗಗಳಾಗಿವೆ. ಮಾಸ್ಕ್‌ ಅನ್ನು ಧರಿಸುವಾಗ ಡಬಲ್ ಮಾಸ್ಕ್ ಧರಿಸಿದರೆ ಮತ್ತಷ್ಟು ಒಳ್ಳೆಯದು. ಡಬಲ್ ಮಾಸ್ಕ್ ಧರಿಸುವವರು ಕೆಲವೊಂದು ಅಂಶಗಳನ್ನು ತಿಳಿದಿರಬೇಕು. ಯಾವ ಬಗೆಯ ಮಾಸ್ಕ್‌ಗಳನ್ನು ಡಬಲ್ ಮಾಸ್ಕ್‌ ಆಗಿ ಬಳಸಬಾರದು? ಡಬಲ್ ಮಾಸ್ಕ್ ಹೇಗೆ ಧರಿಸಬೇಕು ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ. ಅಲ್ಲದೆ ಡಬಲ್ ಮಾಸ್ಕ್‌ ಧರಿಸುವವರು ಏನು ಮಾಡಬೇಕು, ಏನು ಮಾಡಬಾರದು ಎಂದು ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಹೇಳಿದೆ, ಬನ್ನಿ ಅವು ಏನೆಂದು ತಿಳಿಯೋಣ:



ಡಬಲ್ ಮಾಸ್ಕ್ ಧರಿಸುವುದರ ಪ್ರಯೋಜನಗಳು

  • ಸಿಡಿಸಿ ಪ್ರಕಾರ ಗಂಟು ಹಾಕದ ಸರ್ಜಿಕಲ್ ಮಾಸ್ಕ್‌ ಕೆಮ್ಮಿದಾಗ, ಶೀನಿದಾಗ ಶೇ. 56.1ರಷ್ಟು ಸೋಂಕಿನ ಕಣಗಳು ಹೊರಗಡೆ ಹೋಗದಂತೆ ತಡೆಯುತ್ತದೆ ಹಾಗೂ ಬೇರೆಯವರು ಕೆಮ್ಮಿದಾಗ, ಸೀನಿದಾಗ ಸೋಂಕಾಣುಗಳು ನಿಮ್ಮ ದೇಹವನ್ನು ಪ್ರವೇಶಿಸುವುದನ್ನು ತಡೆಗಟ್ಟುತ್ತದೆ. ಬಟ್ಟೆ ಮಾಸ್ಕ್‌ ಶೇ.51.4ರಷ್ಟು ತಡೆಯುತ್ತದೆ. 
  • ಅದೇ ಗಂಟು ಹಾಕಿರುವ ಮಾಸ್ಕ್ ಶೇ.77ರಷ್ಟು ಕಣಗಳು ಕಣಗಳನ್ನ ತಡೆಗಟ್ಟುತ್ತದೆ. 
  • ಅದೇ ಡಬಲ್ ಮಾಸ್ಕ್ ಧರಿಸಿದರೆ ಶೇ.85.4ರಷ್ಟು ಸುರಕ್ಷತೆ ನೀಡುತ್ತದೆ.

ಏನು ಮಾಡಬೇಕು?

  • ಎರಡು ಅಥವಾ ಮೂರು ಪದರದ ಬಟ್ಟೆ ಮಾಸ್ಕ್ ಧರಿಸಬೇಕು.
  • ಮಾಸ್ಕ್‌ ಮೂಗಿನ ಮೇಲೆ ಸರಿಯಾಗಿರಬೇಕು, ಬಿಗಿಯಾಗಿರಬೇಕು.
  • ಉಸಿರಾಟ ಸರಿಯಾಗಿ ಆಗುವಂತಿರಬೇಕು.
  • ಮಾಸ್ಕ್‌ ಅನ್ನು ಮನೆಯಿಂದ ಹೊರಗಡೆ ಹೊರಡುವ ಮೊದಲೇ ಬಳಸಿ, ಕಂಫರ್ಟ್ ಇದೆಯೇ ಎಂದು ಚೆಕ್‌ ಮಾಡಿ ನಂತರ ಮನೆಯಿಂದ ಹೊರಗಡೆ ಹೋಗಬೇಕು.
  • ಬಟ್ಟೆ ಮಾಸ್ಕ್ ಅನ್ನು ಪ್ರತಿದಿನ ತೊಳೆಯಬೇಕು.

ಮಾಸ್ಕ್‌ ಮುಖಕ್ಕೆ ಸರಿಯಾಗಿ ಫಿಕ್ಸ್ ಆಗಿದೆ ಎಂದು ತಿಳಿಯುವುದು ಹೇಗೆ?

  • ನೀವು ಉಸಿರಾಡುವಾಗ ಗಾಳಿ ಮಾಸ್ಕ್ ಮುಖಾಂತರವೇ ಹೊರಗೆ ಹೋಗುವಂತಿರಬೇಕು.
  • ನೀವು ಕನ್ನಡಕ ಧರಿಸುವುದಾದರೆ ಮಾಸ್ಕ್ ಧರಿಸಿ ಉಸಿರಾಡಿದಾಗ ಕನ್ನಡಕ ಮಂಜಾದರೆ ನಿಮ್ಮ ಉಸಿರು ಎಸ್ಕೇಪ್ ಆಗುತ್ತಿದೆ ಎಂದರ್ಥ. ಈ ರೀತಿಯಾದರೆ ನಿಮ್ಮ ಮಾಸ್ಕ್ ಫಿಟ್ ಆಗಿಲ್ಲ ಎಂದರ್ಥ.
  • ನೀವು ಮಾಸ್ಕ್ ಧರಿಸಿ ಕನ್ನಡಿ ಮುಂದೆ ನಿಂತು ಊದಿ, ಹೀಗೆ ಊದುವಾಗ ಗಾಳಿ ಬಡಿದಂತಾಗಿ ಕಣ್ಣು ಮುಚ್ಚಿದರೆ ಗಾಳಿ ಫಿಲ್ಟರ್ ಆಗದೆ ಹೊರಗಡೆ ಹೋಗುತ್ತಿದೆ ಎಂದರ್ಥ. ಮಾಸ್ಕ್‌ ಮೂಗಿಗೆ ಫಿಟ್ ಆಗಿರುವಂತೆ ಧರಿಸಿ.

ಏನು ಮಾಡಬಾರದು?

  • ಒಂದೇ ಬಗೆಯ ಮಾಸ್ಕ್ ಅನ್ನು ಡಬಲ್ ಮಾಸ್ಕ್ ಆಗಿ ಬಳಸಬೇಡಿ. ಅಂದ್ರೆ ನೀವು ಸರ್ಜಿಕಲ್ ಮಾಸ್ಕ್ ಬಳಸುವುದಾದರೆ ಅದೇ ಎರಡು ಮಾಸ್ಕ್ ಬಳಸಬಾರದು.
  • ಒಮ್ಮೆ ಬಳಸಿದ ಮಾಸ್ಕ್ ತೊಳೆದ ಬಳಿಕವಷ್ಟೇ ಬಳಸಬೇಕು.
  • N95 ಮಾಸ್ಕ್‌ ಧರಿಸಿದರೆ ಅದರ ಜೊತೆಗೆ ಇತರ ಮಾಸ್ಕ್ ಧರಿಸಬೇಡಿ.

(Kannada Copy of Boldsky Kannada)