ಬೇಸಿಗೆಯಲ್ಲಿ ನಿಮ್ಮ ಕೋಮಲವಾದ ತುಟಿಗಳನ್ನು ಕಾಪಾಡಲು ಹೀಗೆ ಮಾಡಿ

13-05-21 02:51 pm       Shreeraksha, BoldSky Kannada   ಡಾಕ್ಟರ್ಸ್ ನೋಟ್

ಹೀಗಾಗಿ ನಿಮ್ಮ ಕೋಮಲವಾದ ತುಟಿಗಳನ್ನು ಬೇಸಿಗೆಯಲ್ಲಿ ಹೇಗೆ ರಕ್ಷಿಸುವುದು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ

ಮುಖದ ಆರೈಕೆಯಷ್ಟೇ ತುಟಿ ಆರೈಕೆಯೂ ಮುಖ್ಯ. ತುಟಿಗಳು ಬೆವರು ಉಂಟುಮಾಡುವುದಿಲ್ಲ. ಆದರೆ ರಕ್ಷಣಾತ್ಮಕ ಎಣ್ಣೆಯನ್ನು ಸ್ರವಿಸುವ ಸೆಬಾಸಿಯಸ್ ಗ್ರಂಥಿಗಳನ್ನು ಹೊಂದಿರುವುದರಿಂದ, ತೇವಾಂಶ ಮತ್ತು ಆರೋಗ್ಯಕರವಾಗಿರಲು ಅವುಗಳನ್ನು ನಿಯಮಿತವಾಗಿ ತೇವಗೊಳಿಸುವುದು ಅಗತ್ಯವಾಗಿದೆ. ಇದನ್ನು ಮಾಡದಿದ್ದಾಗ ನಿಮ್ಮ ತುಟಿ ಒಣಗಲು, ಕಪ್ಪಾಗಲು ಕಾರಣವಾಗುತ್ತದೆ. ಹೀಗಾಗಿ ನಿಮ್ಮ ಕೋಮಲವಾದ ತುಟಿಗಳನ್ನು ಬೇಸಿಗೆಯಲ್ಲಿ ಹೇಗೆ ರಕ್ಷಿಸುವುದು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.



1. ಎಸ್ ಪಿ ಎಫ್ ಇರುವ ಲಿಪ್ ಬಾಮ್ ಹಚ್ಚುವುದನ್ನು ಮರೆಯಬೇಡಿ ಮತ್ತು ಪ್ರತಿ ಎರಡು ಗಂಟೆಗಳಿಗೊಮ್ಮೆ ಹಚ್ಚುತ್ತಿರಿ:

ನಮ್ಮ ತುಟಿಗಳು ನಿರಂತರವಾಗಿ ಸೂರ್ಯನ ಬಿಸಿಲಿಗೆ ತೆರೆದುಕೊಂಡಿದ್ದರೂ ಸಹ, ಸನ್‌ಸ್ಕ್ರೀನ್ ಬಳಸುವಾಗ ತುಟಿಯನ್ನು ಕಡೆಗಣಿಸಲಾಗುತ್ತದೆ. ಇದರಿಂದ ನಿಮ್ಮ ತುಟಿಗಳು ಹಾನಿಗೊಳಗಾಗುವುದಲ್ಲದೇ, ಚರ್ಮದ ಕ್ಯಾನ್ಸರ್ ಗೆ ಕಾರಣವಾಗಬಹುದು. ಸೂರ್ಯನ ಶಾಖದಿಂದ ನಿಮ್ಮ ತುಟಿಗಳನ್ನು ಸುರಕ್ಷಿತವಾಗಿಡಲು ಎಸ್‌ಪಿಎಫ್ 15 ಅಥವಾ ಹೆಚ್ಚಿರುವ ಲಿಪ್ ಬಾಮ್ ಹಚ್ಚುವುದು ಉತ್ತಮ ಮಾರ್ಗವಾಗಿದೆ. ಇದು ನಿಮ್ಮ ತುಟಿಗಳನ್ನು ಮೃದುವಾಗಿರಿಸುತ್ತದೆ. ಇದನ್ನು ಆಗಾಗ ಹಚ್ಚುತ್ತಿರಿ, ಏಕೆಂದರೆ ತಿನ್ನುವಾಗ, ಕುಡಿಯುವಾಗ ಮತ್ತು ಮಾತನಾಡುವಾಗ ಸುಲಭವಾಗಿ ಅಳಿಸಿಹೋಗಬಹುದು. ಆದ್ದರಿಂದ ಪ್ರತಿ ಎರಡು ಗಂಟೆಗಳಿಗೊಮ್ಮೆ ಲಿಪ್ ಬಾಮ್ ಹಚ್ಚಿ. ಇದರ ಜೊತೆಗೆ ತೇವಾಂಶವಿರುವ ತುಟಿಯ ಸನ್ ಸ್ಕ್ರೀನ್ ಸಹ ಬಳಸಬಹುದು.



2. ಡೆಡ್ ಸೆಲ್ ಗಳನ್ನು ತೊಡೆದುಹಾಕಲು ನಿಮ್ಮ ತುಟಿಗಳನ್ನು ಸ್ಕ್ರಬ್ ನಿಂದ ವಾರಕ್ಕೆ ಒಂದು ಅಥವಾ ಎರಡು ಬಾರಿ ಎಕ್ಸ್‌ಫೋಲಿಯೇಟ್ ಮಾಡಿ. ನಂತರ ನಿಮ್ಮ ಪೋಷಿಸುವ ಲಿಪ್ ಕೇರ್ ಹಚ್ಚಿ. ಇದು ನಿಮ್ಮ ತುಟಿಗಳು ಮೃದು ಮತ್ತು ಗುಲಾಬಿ ಬಣ್ಣವನ್ನು ಕಾಣುವಂತೆ ಮಾಡುತ್ತದೆ.



3. ತೇವಾಂಶವನ್ನು ಖಚಿತಪಡಿಸಿಕೊಳ್ಳಲು ಮತ್ತು ನಿಮ್ಮ ಲಿಪ್ಸ್ಟಿಕ್ ಹೆಚ್ಚು ಕಾಲ ಉಳಿಯುವಂತೆ ಮಾಡಲು ಲಿಪ್ಸ್ಟಿಕ್ ಹಚ್ಚುವ ಮೊದಲು ಮಾಯಿಶ್ಚರೈಸರ್ ಮತ್ತು ಸನ್ಸ್ಕ್ರೀನ್ ಅನ್ನು ಅನ್ವಯಿಸಿ. ನಿಮ್ಮ ಮೇಕ್ಅಪ್ ತೆಗೆದ ನಂತರ ನಿಮ್ಮ ತುಟಿಗಳನ್ನು ಪೋಷಿಸಿ ಏಕೆಂದರೆ ಲಿಪ್ಸ್ಟಿಕ್ ನಿಮ್ಮ ತುಟಿಗಳನ್ನು ಒಣಗಿಸುತ್ತದೆ.


4. ದೀರ್ಘಕಾಲ ಉಳಿಯುವ ಲಿಪ್ ಸ್ಟಿಕ್‌ಗಳನ್ನು ಧರಿಸುವುದನ್ನು ತಪ್ಪಿಸಿ, ಏಕೆಂದರೆ ಅವುಗಳು ಸೀಸ ಮತ್ತು ಬಿಸ್ಮತ್ ಅನ್ನು ಒಳಗೊಂಡಿರುತ್ತದೆ. ಅದು ಅಲರ್ಜಿ, ಕಾರ್ಸಿನೋಜೆನೆಸಿಸ್ಗೆ ಕಾರಣವಾಗಬಹುದು. ಬದಲಿಗೆ ಎಸ್‌ಪಿಎಫ್ ಅಥವಾ ವಿಟಮಿನ್ ಇ ಇರುವ ಲಿಪ್ ಸ್ಟಿಕ್‌ಗಳನ್ನು ಆಯ್ಕೆ ಮಾಡಿ.

(Kannada Copy of Boldsky Kannada)