ಕೊರೊನಾದಿಂದ ಚೇತರಿಸಿದವರು 6 ತಿಂಗಳ ಬಳಿಕವಷ್ಟೇ ಲಸಿಕೆ ಪಡೆಯಬೇಕು, ಏಕೆ?

14-05-21 02:36 pm       Reena TK, BoldSky Kannada   ಡಾಕ್ಟರ್ಸ್ ನೋಟ್

ಕೊರೊನಾ ಲಸಿಕೆ ಪಡೆದವರಿಗೆ ಕೊರೊನಾ ಸೋಂಕು ತಗುಲಿದರೂ ರೋಗ ಲಕ್ಷಣಗಳು ಗಂಭೀರವಾಗದೆ ಬೇಗನೆ ಚೇತರಿಸಿಕೊಳ್ಳುತ್ತಿರುವುದರಿಂದ ಜನರಿಗೆ ಲಸಿಕೆ ಮೇಲೆ ವಿಶ್ವಾಸ ಮೂಡಿ ಲಸಿಕೆ ಪಡೆಯಲು ಉತ್ಸಾಹ ತೋರಿಸುತ್ತಿದ್ದಾರೆ.

ಕೊರೊನಾ ಲಸಿಕೆ ಬಂದಾಗ ಲಸಿಕೆ ಹಾಕಿಕೊಳ್ಳಿ ಎಂದು ಸರ್ಕಾರ ಹೇಳಿದಾಗ ಹಿಂದೇಟು ಹಾಕಿದ್ದ ಜನರು ಇದೀಗ ಕೊರೊನಾ 2ನೇ ಅಲೆಯಲ್ಲಿ ಲಸಿಕೆಯ ಮಹತ್ವ ಅರಿತು ಲಸಿಕೆ ಪಡೆಯಲು ಮುಗಿ ಬೀಳುತ್ತಿದ್ದಾರೆ.

ಕೊರೊನಾ ಲಸಿಕೆ ಪಡೆದವರಿಗೆ ಕೊರೊನಾ ಸೋಂಕು ತಗುಲಿದರೂ ರೋಗ ಲಕ್ಷಣಗಳು ಗಂಭೀರವಾಗದೆ ಬೇಗನೆ ಚೇತರಿಸಿಕೊಳ್ಳುತ್ತಿರುವುದರಿಂದ ಜನರಿಗೆ ಲಸಿಕೆ ಮೇಲೆ ವಿಶ್ವಾಸ ಮೂಡಿ ಲಸಿಕೆ ಪಡೆಯಲು ಉತ್ಸಾಹ ತೋರಿಸುತ್ತಿದ್ದಾರೆ.



ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದರೆ 6 ತಿಂಗಳ ಬಳಿಕ ಲಸಿಕೆ ಪಡೆಯಬೇಕು, ಏಕೆ?

ಕೊರೊನಾ ಪಾಸಿಟಿವ್ ಬಂದ ಚೇರಿಸಿಕೊಂಡವರು 6 ತಿಂಗಳವರೆಗೆ ಲಸಿಕೆ ಪಡೆಯಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಒಮ್ಮೆ ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿದ ಬಳಿಕ 6 ತಿಂಗಳ ಒಳಗೆ ಲಸಿಕೆ ಪಡೆದರೆ ಆ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ. ಅದೇ ಆರು ತಿಂಗಳ ಬಳಿಕ ಲಸಿಕೆ ಪಡೆದರೆ ಆ ಲಸಿಕೆ ತುಂಬಾ ಉತ್ತಮ ಪ್ರಭಾವ ಬೀರುವುದಾಗಿ ಸಂಶೋಧನೆಯಿಂದ ದೃಢಪಟ್ಟಿದೆ.

ಮೊದಲ ಡೋಸ್‌ ಪಡೆದ ಬಳಿಕ ಕೋವಿಡ್‌ 19 ಬಂದಿದ್ದರೆ ಕೊರೊನಾ ಲಸಿಕೆ ಮೊದಲ ಡೋಸ್‌ ಪಡೆದ ಬಳಿಕ ಕೊರೊನಾ ಬಂದಿದ್ದರೆ ಅಂಥವರು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ 8 ವಾರಗಳ ಬಳಿಕ ಎರಡನೇ ಡೋಸ್‌ ಪಡೆಯಬಹುದಾಗಿದೆ.



ಕೋವಿಶೀಲ್ಡ್ ಮೊದಲನೇ ಹಾಗೂ 2ನೇ ಡೋಸ್‌ ನಡುವೆ ಅಂತರ ಹೆಚ್ಚಾಗಿದೆ

ಕೋವಿಶೀಲ್ಡ್ ಮೊದಲ ಡೋಸ್‌ ಪಡೆದ ಬಳಿಕ ಎರಡನೇ ಡೋಸ್ ಅಂತರವನ್ನು 12-16 ವಾರಕ್ಕೆ ಏರಿಸಬೇಕೆಂದೂ ಕೂಡ ಹೇಳಿದ್ದಾರೆ. ಈಗ ಕೋವಿಶೀಲ್ಡ್ ಲಸಿಕೆಯನ್ನು 4-8 ವಾರಗಳ ಅಂತರದಲ್ಲಿ ನೀಡಲಾಗುತ್ತಿತ್ತು. ಕೊವಾಕ್ಸಿನ್ ಡೋಸ್‌ ತೆಗೆದುಕೊಳ್ಳುವ ಅಂತರದಲ್ಲಿ ಯಾವುದೇ ವ್ಯತ್ಯಾಸವಿಲ್ಲ.



ಕಡಿಮೆ ಅಂತರಕ್ಕಿಂತ ಅದಕ್ಕೆ ಅಂತರವಿದ್ದರೆ ಲಸಿಕೆ ಹೆಚ್ಚು ಪರಿಣಾಮಕಾರಿಯಾಗುವುದು

ಕೋವಿಡ್ 19 ಲಸಿಕೆ ಮೊದಲ ಡೋಸ್ ಪಡೆದು 3 ತಿಂಗಳ ಬಳಿಕ ಎರಡನೇ ಡೋಸ್‌ ಪಡೆಯುವುದರಿಂದ ಕೊರೊನಾ ಲಸಿಕೆ ಹೆಚ್ಚು ಪ್ರಯೋಜಕಾರಿಯಾಗುವುದು ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚು ಸಮಯ ಉಳಿಯುತ್ತದೆ.



ಗರ್ಭೀಣಿಯರು ಲಸಿಕೆ ಪಡೆಯಬಹುದೇ?

NTAGI (The National Technical Advisory Group on Immunisation) ಗರ್ಭಿಣಿಯರು ಕೂಡ ಕೊರೊನಾ ಲಸಿಕೆ ಪಡೆಯಬಹುದೆಂದು ಸಲಹೆ ನೀಡಿದೆ. ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್‌ನಲ್ಲಿ ಯಾವ ಲಸಿಕೆಯನ್ನಾದರೂ ಎರಡು ಡೋಸ್‌ನಂತೆ ತೆಗೆದುಕೊಳ್ಳಬಹುದಾಗಿದೆ. ಅಲ್ಲದೆ ಎದೆಹಾಲುಣಿಸುವ ತಾಯಂದಿರು ಕೂಡ ಲಸಿಕೆ ಪಡೆಯಬಹುದು ಎಂದು ಸೂಚಿಸಿದೆ.

(Kannada Copy of Boldsky Kannada)