ಬ್ರೇಕಿಂಗ್ ನ್ಯೂಸ್
21-05-21 04:13 pm Reena TK, BoldSky Kannada ಡಾಕ್ಟರ್ಸ್ ನೋಟ್
ಕೆಮ್ಮು, ಶೀತ, ಜ್ವರ ಮುಂತಾದ ಲಕ್ಷಣಗಳು ಕಂಡು ಬಂದಾಗ ಬಂದಿರುವುದು ಸಾಮಾನ್ಯ ಜ್ವರವೇ ಅಥವಾ ಕೋವಿಡ್ 19 ಇರಬಹುದೇ ಎಂಬ ಸಂಶಯ ಎಲ್ಲರಲ್ಲಿ ಇರುತ್ತದೆ, ಆದರೆ ಅದು ತಿಳಿಯಬೇಕಾದರೆ ಕೋವಿಡ್ ಟೆಸ್ಟ್ ಮಾಡಿದರೆ ಮಾತ್ರ ತಿಳಿಯುವುದು.
ಕೋವಿಡ್ ಟೆಸ್ಟ್‌ಗೆ ಹೋದರೆ ಇಷ್ಟು ಉದ್ದ ಕ್ಯೂ, ಇನ್ನು ಅದರ ಫಲಿತಾಂಶ ಬರಲು ಒಂದು ಅಥವಾ ಎರಡು ದಿನ ಕಾಯುವುದು ಇವೆಲ್ಲಾ ಕಿರಿಕಿರಿ ಮಾತ್ರವಲ್ಲ ಸೋಂಕು ಹೆಚ್ಚು ಹರಡುವುದಕ್ಕೂ, ಸಕಾಲಕ್ಕೆ ಚಿಕಿತ್ಸೆ ಸಿಗದೆ ರೋಗ ಉಲ್ಭಣವಾಗುವುದಕ್ಕೂ ಒಂದು ಪ್ರಮುಖ ಕಾರಣ ಎಂಬುವುದನ್ನು ಅಲ್ಲಗಳೆಯುವಂತಿಲ್ಲ.
ಕೋವಿಡ್ ಪರೀಕ್ಷೆಗೆ ಒಳಪಟ್ಟವರು ಫಲಿತಾಂಶ ಬರಲು ತಡವಾದರೆ ನಮಗೆ ನೆಗೆಟಿವ್ ಬಂದಿರಬಹುದು ಅದಕ್ಕೆ ಫಲಿತಾಂಶ ಬಂದಿಲ್ಲ ಎಂದು ಹೊರಗಡೆ ಸುತ್ತಾಡಿ ಸೋಂಕು ಹರಡುತ್ತಾರೆ, ಇನ್ನು ಸೋಂಕಿತರಿಗೆ ಫಲಿತಾಂಶ ಬರುವವರಿಗೆ ಅದಕ್ಕೆ ಸಂಬಂಧಿಸಿದ ಚಿಕಿತ್ಸೆ ಸಿಗಲ್ಲ, ಈ ಕಾರಣ ರೋಗ ಲಕ್ಷಣಗಳು ಅಧಿಕವಾಗಬಹುದು. ಈಗ ಅದಕ್ಕೆಲ್ಲಾ ಒಂದು ಪರ್ಯಾಯ ವ್ಯವಸ್ಥೆ ರೆಡಿಯಾಗಿದೆ. ಇನ್ನು ಕೋವಿಡ್ 19 ಪರೀಕ್ಷೆ ಮನೆಯಲ್ಲಿಯೇ ಮಾಡಿ ಕೋವಿಡ್ 19 ಸೋಂಕು ತಗುಲಿದೆಯೇ, ಇಲ್ಲವೇ ಎಂದು ತಿಳಿಯಬಹುದು. ಇದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್
ಭಾರತದಲ್ಲಿ ಮನೆಯಲ್ಲಿಯೇ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್‌ಗೆ ಅನುಮತಿ ಸಿಕ್ಕಿದೆ. ಐಸಿಎಂಆರ್ (The Indian Council of Medical Research) ಇದನ್ನು ಯಾರು ಬಖಸಬಹುದು, ಹೇಗೆ ಬಳಸಬೇಕು ಎಂಬುವುದರ ಬಗ್ಗೆ ಮಾರ್ಗಸೂಚಿಯನ್ನೂ ಕೂಡ ನೀಡಿದೆ.
ಯಾರು ಬಳಸಬೇಕು?
ಕೋವಿಡ್ 19 ರೋಗ ಲಕ್ಷಣಗಳಿದ್ದರೆ ಅಥವಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇರುವವರು ಈ ಪರೀಕ್ಷೆ ಮಾಡಬಹುದು. ಇನ್ನು ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿ ಪಾಸಿಟಿವ್ ಬಂದವರು ಇದನ್ನು ಮತ್ತೆ ಮಾಡಬೇಕಾಗಿಲ್ಲ, ಒಂದು ವೇಳೆ RTPCRನಲ್ಲಿ ನೆಗೆಟಿವ್ ವರದಿ ಬಂದು ರೋಗ ಲಕ್ಷಣ ಇರುವವರು ಇದನ್ನು ಬಳಸಿ ಸೋಂಕು ಇದೆಯೇ, ಇಲ್ಲವೇ ಎಂದು ತಿಳಿಯಬಹುದು.
ಪರೀಕ್ಷೆ ಮಾಡುವುದು ಹೇಗೆ?
ನಾಸಲ್ ಸ್ವ್ಯಾಬ್ ಬಳಸಿ ಸ್ವ್ಯಾಬ್ ತೆಗೆಯಬೇಕು. 18 ವರ್ಷ ಮೇಲ್ಪಟ್ಟವರು ಸ್ವತಃ ಸ್ವ್ಯಾಬ್ ತೆಗೆದು ಪರೀಕ್ಷೆ ಮಾಡಬಹುದು. 2 ವರ್ಷ ಮೇಲ್ಪಟ್ಟ ಮಕ್ಕಳ ಹಾಗೂ ವಯಸ್ಸಾದವರ ಸ್ವ್ಯಾಬ್ ಅನ್ನು ಬೇರೆಯವರು ತೆಗೆದು ಪರೀಕ್ಷಿಸಬೇಕು.
ತಿಳಿಯುವುದು ಹೇಗೆ?
ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಕಿಟ್‌ನಲ್ಲಿ ನಾಸಲ್ ಸ್ವ್ಯಾಬ್ ಮತ್ತು ಮೊದಲೇ ತುಂಬಿರುವ ಎಕ್ಸಟ್ರಾಕ್ಸನ್ ಟ್ಯೂಬ್ ಮತ್ತು ಒಂದು ಟೆಸ್ಟ್ ಕಾರ್ಡ್ ಇರುತ್ತದೆ.
ಇದನ್ನು ಪರೀಕ್ಷೆ ಮಾಡುವವರು ಮೊಬೈಲ್‌ನಲ್ಲಿ, ಮೈಲ್ಯಾಬ್ ಆ್ಯಪ್ ಡೌನ್‌ಲೋಡ್ ಮಾಡಬೇಕು, ಅಲ್ಲಿ ಅಗ್ಯತ ಮಾಹಿತಿಗಳನ್ನು ತುಂಬ ಬೇಕು.
ನಾಸಲ್ ಸ್ವ್ಯಾಬ್‌ನ ತುದಿ ಮುಟ್ಟದೆ ಅದನ್ನು ಮೂಗಿನ ಒಳಗಡೆ ಹಾಕಿ 5 ಬಾರಿ ಮೆಲ್ಲನೆ ತಿರುಗಿಸಿ. ಮೂಗಿನ ಎರಡೂ ಬದಿಯಲ್ಲಿ ಹೀಗೆ ಮಾಡಿ. ನಂತರ ಆ ಸ್ವ್ಯಾಬ್ ಅನ್ನು ಮೆಲ್ಲನೆ ತೆಗೆದು ಟ್ಯೂಬ್‌ನಲ್ಲಿ ಮುಳುಗಿಸಿ.
ಟ್ಯೂಬ್‌ನ ಒಳಗಡೆ ನಾಸಲ್ ಟ್ಯೂಬ್ ಮುಳುಗಿದೆಯೇ ಎಂಬುವುದನ್ನು ಖಚಿತ ಒಡಿಸಿ.
ಬ್ರೇಕ್ ಪಾಯಿಂಟ್ ನೋಡಿ ಸ್ವ್ಯಾಬ್ ಮುರಿಯಬೇಕು. ಟ್ಯೂಬ್ ಮುಚ್ಚಿ ಎರಡು ಹನಿ ಟೆಸ್ಟ್ ಕಿಟ್‌ಗೆ ಹಾಕಿ.
ನಂತರ 15 ನಿಮಿಷ ಕಾಯಬೇಕು. ಯಾವುದೇ ಫಲಿತಾಂಶ 20 ನಿಮಿಷದ ನಂತರ ಬಂದರೆ ಅದು ಪರಿಗಣಿಸಲು ಸಾಧ್ಯವಾಗುವುದಿಲ್ಲ.
15 ನಿಮಿಷ ಆಗುತ್ತಿದ್ದಂತೆ ಆ್ಯಪ್‌ನಲ್ಲಿ ರಿಂಗ್ ಕೇಳಿಸುವುದು, ಅದರಲ್ಲಿ ಫಲಿತಾಂಶ ಸಿಗುವುದು.
(Kannada Copy of Boldsky Kannada)
ICMR issues advisory for #COVID19 home testing using Rapid Antigen Tests (RATs) pic.twitter.com/3M4kctCpk3
— ANI (@ANI) May 19, 2021
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 07:32 pm
Mangalore Correspondent
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
U T Khader, Mangalore: ವಿಧಾನಸೌಧಕ್ಕೆ ನಾಯಿ ಕಾಟ...
03-02-25 07:38 pm
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
05-02-25 04:29 pm
Bangalore Correspondent
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am