ಶೀತವಿದ್ದಾಗ ಕೊರೊನಾ ಲಸಿಕೆ ಪಡೆಯಬಹುದೇ?

05-06-21 11:45 am       Reena TK, BoldSky Kannada   ಡಾಕ್ಟರ್ಸ್ ನೋಟ್

ಕೊರೊನಾದಿಂದ ಚೇತರಿಸಿದವರು ಮೂರು ತಿಂಗಳ ಬಳಿಕ ಲಸಿಕೆ ಪಡೆಯುವಂತೆ ಸಿಡಿಸಿ ಹೇಳಿದೆ.

ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಗರ್ಭಿಣಿಯರು ಹಾಗೂ ಎದೆ ಹಾಲುಣಿಸುವ ತಾಯಂದಿರುವ ಅವರು ಇಚ್ಛಿಸಿದರೆ ಈ ಲಸಿಕೆ ಪಡೆಯಬಹುದಾಗಿದೆ, ಅಲ್ಲದೆ ಕೊರೊನಾದಿಂದ ಚೇತರಿಸಿದವರು ಮೂರು ತಿಂಗಳ ಬಳಿಕ ಲಸಿಕೆ ಪಡೆಯುವಂತೆ ಸಿಡಿಸಿ ಹೇಳಿದೆ.

ಕೊರೊನಾದಿಂದ ಚೇತರಿಸಿದವರಲ್ಲಿ ನೈಸರ್ಗಿಕವಾಗಿ ಕೊರೊನಾ ವಿರುದ್ಧ ರೋಗ ನಿರೋಧಕ ಶಕ್ತಿ ಇರುತ್ತದೆ, ಇದು 6 ತಿಂಗಳವರೆಗೆ ಇರುವುದು, ಆದ್ದರಿಂದ ಅದರ ಬಳಿಕ ಲಸಿಕೆ ಪಡೆದರೂ ಸಾಕು ಎಂದು ತಜ್ಞರು ಸಲಹೆ ನೀಡಿದ್ದಾರೆ.



ಇನ್ನು ಅಲರ್ಜಿ ಸಮಸ್ಯೆ ಇರುವವರು ಹಾಗೂ ಇತರ ಆರೋಗ್ಯ ಸಂಬಂಧಿತ ಸಮಸ್ಯೆ ಇರುವವರು ವೈದ್ಯರು ಸೂಚಿಸಿದರಷ್ಟೇ ತೆಗೆದುಕೊಳ್ಳಬಹುದು, ಲಸಿಕೆ ಪಡೆಯಲು ಬಂದವರಿಗೆ ಜ್ವರ ಮತ್ತಿತರ ಆರೋಗ್ಯ ಸಮಸ್ಯೆ ಲಸಿಕೆ ನೀಡುವುದಿಲ್ಲ. ಆದರೆ ಕೆಲವರು ಆರೋಗ್ಯವಾಗಿರುತ್ತದೆ, ಲಸಿಕೆ ಪಡೆಯುವ ಸಂದರ್ಭದಲ್ಲಿ ಶೀತದ ಸಮಸ್ಯೆ ಇರುತ್ತದೆ, ಅಂಥವರು ಲಸಿಕೆ ಪಡೆಯಬಹುದೇ, ಶೀತವಿದ್ದವರು ಲಸಿಕೆ ಪಡೆದರು ಅದರ ಪರಿಣಾಮ ಕುಗ್ಗುವುದೇ ಎಂಬೆಲ್ಲಾ ಮಾಹಿತಿ ಇಲ್ಲಿದೆ:



ಕಾಯಿಲೆ ಇದ್ದಾಗ ಲಸಿಕೆ ಪಡೆದರೆ ಏನಾಗುತ್ತೆ?

ಯಾವಾಗ ವ್ಯಕ್ತಿಗೆ ಕಾಯಿಲೆ ಬರುತ್ತದೋ ಆಗ ದೇಹಕ್ಕೆ ಯಾವುದಾದರೂ ಸೋಂಕಾಣು ಅಥವಾ ಬ್ಯಾಕ್ಟಿರಿಯಾ ದಾಳಿಯಿಂದ ಉಂಟಾಗಿರುತ್ತೆ, ರೋಗ ನಿರೋಧಕ ವ್ಯವಸ್ಥೆ ಆ ಸೋಂಕಾಣು ವಿರುದ್ಧ ಹೋರಾಡುತ್ತಿರುತ್ತಿದೆ. ಮನುಷ್ಯ ಆರೋಗ್ಯವಾಗಿರುವಾಗ ಲಸಿಕೆ ಉತ್ತಮ ಪ್ರಯೋಜನ ಬೀರುತ್ತದೆ ಎಂಬುವುದು ಸಾಮಾನ್ಯ ಜ್ಞಾನ. ರೋಗ ನಿರೋಧಕ ವ್ಯವಸ್ಥೆ ಈಗಾಗಲೇ ದೇಹದೊಳಗಿರುವ ಅಪರಿಚಿತ ಸೊಂಕು ಅಥವಾ ಬ್ಯಾಕ್ಟಿರಿಯಾ ಜೊತೆ ಹೋರಾಡುತ್ತಿರುವಾಗ ಕೋವಿಡ್ 19 ಲಸಿಕೆ ನೀಡುವುದು ಸುರಕ್ಷಿತವಲ್ಲ.



ಶೀತ ಅಥವಾ ಜ್ವರ ಲಸಿಕೆಯ ಪ್ರಯೋಜನ ಕುಗ್ಗಿಸುವುದೇ?

ಸಣ್ಣ ಜ್ವರ ಅಥವಾ ಶೀತವಿದ್ದರೆ ಅದು ಲಸಿಕೆಯ ಪ್ರಯೋಜನ ಕುಗ್ಗಿಸುತ್ತೆ ಎಂಬುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಆದರೆ ನಿಮಗೆ ಯಾವ ಬಗೆಯ ಸೋಂಕು ತಗುಲಿದೆ ಅದರ ಮೇಲೆ ಲಸಿಕೆ ದೇಹದ ಮೇಲೆ ಪ್ರಭಾವ ಬೀರುತ್ತದೆ. ಉದಾಹರಣೆಗೆ ಸಾಮಾನ್ಯ ಶೀತದ ಸಮಸ್ಯೆಯಿದ್ದರೆ ಅವರು ಲಸಿಕೆ ಪಡೆದರೆ ಆ ಚಿಕ್ಕ ಸೋಂಕು ಲಸಿಕೆಗೆ ಹಾನಿಯೇನು ಉಂಟು ಮಾಡುವುದಿಲ್ಲ, ಆದರೆ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದರೆ ಅಡ್ಡಪರಿಣಾಮ ಬೀರಬಹುದು.

ಅನಾರೋಗ್ಯವಿದ್ದಾಗ ಲಸಿಕೆ ಪಡೆದರೆ ಏನಾಗುತ್ತೆ?

ಮುಖ್ಯವಾದ ಅಪಾಯವೆಂದರೆ ಅನಾರೋಗ್ಯವಿದ್ದಾಗ ಲಸಿಕೆ ಪಡೆದರೆ ರೋಗ ಲಕ್ಷಣಗಳು ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಈ ಲಸಿಕೆಯ ರಿಯಾಕ್ಷನ್‌ನಿಂದ ಗಂಭೀರವಾದ ಅಡ್ಡಪರಿಣಾಮವೂ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಲಸಿಕೆ ಪಡೆಯಬಹುದೇ, ಇಲ್ಲವೇ ಎಂಬುವುದನ್ನು ನಿಮ್ಮ ವೈದ್ಯರ ಬಳಿ ಚರ್ಚಿಸಿದ ಬಳಿಕವಷ್ಟೇ ತೆಗೆಯಿರಿ.

(Kannada Copy of Boldsky Kannada)