ಬ್ರೇಕಿಂಗ್ ನ್ಯೂಸ್
08-06-21 10:35 am Reena TK, BoldSky Kannada ಡಾಕ್ಟರ್ಸ್ ನೋಟ್
ಕೊರೊನಾ ಲಸಿಕೆ ಎನ್ನುವುದು ಜೀವ ರಕ್ಷಕವಾಗಿದೆ. ಕೊರೊನಾ ಲಸಿಕೆ ಪಡೆದರೆ ಕೋವಿಡ್ 19 ಬರುವುದಿಲ್ಲ ಅಂತಲ್ಲ, ಕೊರೊನಾ ಲಸಿಕೆ ಬಳಿಕ ಕೆಲವರಿಗೆ ಕೊರೊನಾ ಸೋಂಕು ಬಂದಿದೆ. ಅಂಕಿ ಅಂಶದ ಪ್ರಕಾರ ಕೊರೊನಾ ಲಸಿಕೆ ಎರಡು ಡೋಸ್ ಪಡೆದವರಲ್ಲಿ ಕೊವಾಕ್ಸಿನ್ ಲಸಿಕೆ ಪಡೆದವರಲ್ಲಿ ಶೇ.0.4ರಷ್ಟು, ಕೊವಿಶೀಲ್ಡ್ ಲಸಿಕೆ ಪಡೆದವರಲ್ಲಿ ಶೇ0.03 ಜನರಿಗೆ ಸೋಂಕು ಕಂಡು ಬಂದಿದೆ. ಆದರೆ ಕೊರೊನಾ ಲಸಿಕೆ ಪಡೆದವರು ಕೊರೊನಾ ಸೋಂಕಿನಿಂದ ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುವುದು ಸಾಬೀತಾಗಿದೆ. ಈ ಕಾರಣದಿಂದಾಗಿ ಕೊರೊನಾ ಲಸಿಕೆ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಾಗಿದೆ.
ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ಅನುಮತಿ ಸಿಕ್ಕಿದೆ. ಆರೋಗ್ಯದ ದೃಷ್ಟಿಯಿಂದ ಲಸಿಕೆಯನ್ನು ಪಡೆಯುವುದು ಸುರಕ್ಷಿತವಾಗಿದೆ, ಆದರೆ ಕೊರೊನಾ ಸೋಂಕಿನಿಂದ ಗುಣಮುಖರಾದವರು ಲಸಿಕೆಯನ್ನು ಯಾವಾಗ ಪಡೆಯಬೇಕು ಎಂಬ ಸಂಶಯ ಅನೇಕರಲ್ಲಿದೆ. ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:
ಕೊರೊನಾದಿಂದ ಗುಣಮುಖರಾದವರು ಏನು ಮಾಡಬೇಕು?
ಸಿಡಿಸಿ (Centers for Disease Control and Prevention)ಯು ಕೊರೊನಾ ಸೋಂಕಿನಿಂದ ಗುಣಮುಖರಾದವರು ತಮ್ಮ ಮೊದಲ ಡೋಸ್ ಪಡೆಯಲು 90 ದಿನಗಳ ಕಾಲ ಕಾಯುವಂತೆ ಸೂಚಿಸಲಾಗಿದೆ. ಬೆಂಗಳೂರಿನ ಪ್ರಸಿದ್ಧ ವೈರಲಾಜಿಸ್ಟ್ ಡಾ. ವಿ. ರವಿಯವರು "ಕೊರೊನಾದಿಂದ ಚೇತರಿಸಿದವರಲ್ಲಿ ನೈಸರ್ಗಿಕವಾಗಿ ರೋಗ ನಿರೋಧಕಶಕ್ತಿ ಹೆಚ್ಚಾಗಿರುತ್ತದೆ, ಈ ರೋಗ ನಿರೋಧಕ ಶಕ್ತಿ ಕೆಲವು ತಿಂಗಳುಗಳವರೆಗೆ ಇರುವುದು, ಈ ಸಮಯದಲ್ಲಿ ಲಸಿಕೆ ಪಡೆದರೆ ಲಸಿಕೆಯ ಪ್ರಯೋಜನ ಸಿಗುವುದಿಲ್ಲ, ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಈ ಸಮಯದಲ್ಲಿ ಲಸಿಕೆ ಪಡೆಯುವ ಅಗ್ಯತವೂ ಇರುವುದಿಲ್ಲ" ಎಂದಿದ್ದಾರೆ. ಕೊರೊನಾದಿಂದ ಗುಣಮುಖರಾದವರಲ್ಲಿ ಕೆಲವು ತಿಂಗಳು ರೋಗ ನಿರೋಧಕ ಶಕ್ತಿ ಇರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಕೊರೊನಾದಿಂದ ಗುಣಮುಖರಾದವರು 6 ತಿಂಗಳ ಬಳಿಕ ಲಸಿಕೆ ಪಡೆದರೆ ಸಾಕು ಎಂದಿದೆ. ಅಲ್ಲಿಯವರೆಗೆ ದೇಹವು ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿರುತ್ತದೆ.
ಕೋವಿಡ್ 19ನಿಂದ ಚೇತರಿಸಿದ ಬಳಿಕ 2ನೇ ಡೋಸ್ ಪಡೆಯುವವರಾದರೆ?
ಕೆಲವರಲ್ಲಿ ಕೋವಿಡ್ 19 ಮೊದಲ ಡೋಸ್ ಪಡೆದ ಬಳಿಕ ಕೊರೊನಾ ಸೋಂಕು ತಗುಲಿ ಗುಣಮುಖರಾಗಿದ್ದಾರೆ. ಅಂಥವರಿಗೆ ಎರಡನೇ ಡೋಸ್ ಯಾವಾಗ ಪಡೆಯಬೇಕು? ನಿಗದಿತ ಸಮಯದಲ್ಲೇ ಪಡೆಯಬಹುದೇ ಎಂಬ ಗೊಂದಲವಿರುತ್ತದೆ. ಏಕೆಂದರೆ ಮೊದಲ ಡೋಸ್ ಪಡೆದ ಬಳಿಕ 2ನೇ ಡೋಸ್‌ಗೆ 12 ವಾರಗಳ ಅಂತರವಿರುತ್ತದೆ, ಆ ಸಮಯದೊಳಗೆ ಕೊರೊನಾ ಸೋಂಕು ತಗುಲಿ ಚೇತರಿಸಿಕೊಂಡಿದ್ದರೆ ನಿಗದಿತ ಸಮಯದಲ್ಲೇ ತೆಗೆಯಬಹುದೇ ಎಂಬ ಗೊಂದಲವಿರುತ್ತದೆ. ಇದಕ್ಕೆ ಡಾ. ವಿ ರವಿಯವರು ಕೊರೊನಾದಿಂದ ಗುಣಮುಖರಾಗಿ 8 ವಾರಗಳ ನಂತರ 2ನೇ ಡೋಸ್ ಪಡೆಯಬಹುದು ಎಂದು ತಿಳಿಸಿದ್ದಾರೆ.
ಎರಡನೇ ಡೋಸ್ ಸಮಯಕ್ಕೆ ಸಿಗದೇ ಹೋದರೆ?
ಇದೀಗ ಕೆಲವು ಕಡೆ ಲಸಿಕೆಯ ಅಭಾವ ಉಂಟಾಗಿದೆ. ಮೊದಲ ಡೋಸ್ ಪಡೆದು ಎರಡನೇ ಡೋಸ್ ನಿಗದಿತ ಸಮಯಕ್ಕೆ ಸಿಗದಿದ್ದರೆ ನೀವೇನು ಆತಂಕ ಪಡಬೇಕಾಗಿಲ್ಲ. ಕೊವಾಕ್ಸಿನ್ ಲಸಿಕೆ ಪಡೆದಿದ್ದರೆ 45 ದಿನಗಳ ಬಳಿಕ ಎರಡನೇ ಡೋಸ್ ಪಡೆಯಬಹುದು, ಕೋವಿಶೀಲ್ಡ್ ಪಡೆದಿದ್ದರೆ 12 ವಾರಗಳ ಅಂತರದಲ್ಲಿ ಅಥವಾ 3 ತಿಂಗಳ ನಂತರ ತೆಗೆದುಕೊಳ್ಳಬಹುದು. ಭಾರತದಲ್ಲಿ ಕೋವಿಶೀಲ್ಡ್ ಅಂತರ ಮತ್ತಷ್ಟು ವಿಸ್ತರಿಸಲಾಗಿದೆ, ಕೋವಿಶೀಲ್ಡ್ ಎರಡನೇ ಡೋಸ್ 6 ತಿಂಗಳ ಒಳಗೆ ಪಡೆದರೂ ಅದರ ಪರಿಣಾಮವಿರುತ್ತದೆ, ಆದ್ದರಿಂದ ಆತಂಕ ಬೇಡ ಎಂದು ತಜ್ಞರು ಹೇಳುತ್ತಿದ್ದಾರೆ.
ಲಸಿಕೆ ಎರಡು ಡೋಸ್‌ನಲ್ಲಿ ತೆಗೆಯಲೇಬೇಕಾ?
ಕೆಲವೊಂದು ತಪ್ಪು ಮಾಹಿತಿ ಕೂಡ ಹರಿದಾಡುತ್ತಿದೆ. ಒಂದು ಡೋಸ್ ಲಸಿಕೆ ಪಡೆದರೆ ಸಾಕು ಎಂದು ಕೆಲವರು ನಂಬಿದ್ದಾರೆ, ಆದರೆ ಅದು ಸರಿಯಲ್ಲ. ಸಂಶೋಧನೆ ಪ್ರಕಾರ ಮೊದಲ ಡೋಸ್ ಪಡೆದಾಗ ರೋಗ ನಿರೋಧಕ ಶಕ್ತಿ ಹೆಚ್ಚಿಸಿದರೆ, ಅದು ಬಲವಾಗಲು ಎರಡನೇ ಡೋಸ್ ಅಗ್ಯವಾಗಿದೆ.
(Kannada Copy of Boldsky Kannada)
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
04-09-25 11:07 pm
Mangalore Correspondent
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm