ಬ್ರೇಕಿಂಗ್ ನ್ಯೂಸ್
08-06-21 12:34 pm Shreeraksha, BoldSky Kannada ಡಾಕ್ಟರ್ಸ್ ನೋಟ್
ಕೊರೊನಾ ಎರಡನೇ ಅಲೆ ಇದೀಗ ಸ್ವಲ್ಪ ಹತೋಟಿಗೆ ಬರುತ್ತಿದ್ದರೂ, ಸಾಕಷ್ಟು ಸಾವು-ನೋವುಗಳಿಗೆ ಕಾರಣವಾಗಿರುವುದಂತೂ ಸುಳ್ಳಲ್ಲ. ಇದರ ಬೆನ್ನಲ್ಲೇ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಾಗಂತ ಮಕ್ಕಳ ವಿಚಾರಕ್ಕೆ ಸಂಬಂಧಿಸಿದ ಊಹಾಪೋಹಗಳನ್ನು ನಂಬುವುದು ಸರಿಯಲ್ಲ. ಈ ಕುರಿತು ಇರುವ ಅದರ ಸತ್ಯಾಸತ್ಯತೆ ಅರಿಯುವುದು ಮುಖ್ಯ. ಅದನ್ನು ಈ ಲೇಖನದಲ್ಲಿ ನೀಡಲಾಗಿದೆ.
ಕೊರೊನಾ ವೈರಸ್ ಮೂರನೇ ಅಲೆ ಮಕ್ಕಳಿಗೆ ಅಪಾಯಕಾರಿಯೇ?:
ಮಕ್ಕಳಲ್ಲಿ ಕೊರೊನಾ ಸೋಂಕಿನ ಹೆಚ್ಚಳ ಮತ್ತು ಲಸಿಕೆಗಳ ಅಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಆದರೆ ಮಕ್ಕಳ ತಜ್ಞರು, ಕೊರೊನಾ ಮಕ್ಕಳ ಮೇಲೆ ಯಾವುದೇ ಗಂಭೀರ ಪರಿಣಾಮ ಬೀರದ ಕಾರಣ ವೈರಸ್‌ಗೆ ಹೆದರಬೇಡಿ ಎಂದು ಪೋಷಕರಿಗೆ ಸಲಹೆ ನೀಡಿದ್ದಾರೆ. ಜೊತೆಗೆ ಇತ್ತೀಚೆಗೆ, ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಅವರು ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಸೋಂಕಿಗೆ ತಗುಲುತ್ತಾರೆ ಎಂದು ಹೇಳಲಾಗಿದ್ದರೂ, ಅದನ್ನು ಸಾಬೀತುಪಡಿಸಲು ಯಾವುದೇ ಬಲವಾದ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ. ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ಪ್ರಕಾರ, ಈಗ ಮಕ್ಕಳು ಸೋಂಕಿಗೆ ಗುರಿಯಾಗಿದ್ದರೂ, ಮೂರನೆಯ ಅಲೆಯು ಮುಖ್ಯವಾಗಿ ಅಥವಾ ಪ್ರತ್ಯೇಕವಾಗಿ ಮಕ್ಕಳ ಮೇಲೆ ಪರಿಣಾಮ ಬೀರುವುದು ಹೆಚ್ಚು ಅಸಂಭವ ಎಂದು ಹೇಳಿದೆ.
ಇಷ್ಟೆಲ್ಲಾ ಇದ್ದರೂ, ಮಕ್ಕಳಿಗೆ ಕೊರೊನಾ ತಗಲುವ ಬಗ್ಗೆ ಹಲವಾರು ಕಟ್ಟು ಕಥೆಗಳಿವೆ. ಅವುಗಳನ್ನು ಇಲ್ಲಿ ನೀಡಲಾಗಿದೆ:
ಕಟ್ಟುಕಥೆ 1. ಮಕ್ಕಳ ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದು, ಅವರಿಗೆ ಕೊರೊನಾ ವಿರುದ್ಧ ಹೋರಾಡಲು ಆಗುವುದಿಲ್ಲ: ಐಎಪಿ ಒದಗಿಸಿದ ಮಾಹಿತಿಯ ಪ್ರಕಾರ, ಇದುವರೆಗೆ ಮಕ್ಕಳಲ್ಲಿ ಕಂಡುಬಂದಿರುವ ಕೊರೊನಾ ಪ್ರಕರಣದಲ್ಲಿ ಸುಮಾರು 90 ಪ್ರತಿಶತದಷ್ಟು ಮಕ್ಕಳಿಗೆ ಸಣ್ಣ ಪ್ರಮಾಣದ ಲಕ್ಷಣಗಳು ಅಥವಾ ಕೆಲವರಲ್ಲಿ ಲಕ್ಷಣಗಳೇ ಇರಲಿಲ್ಲ. ಆದ್ದರಿಂದ ಮೂರನೆಯು ಅಲೆಯೂ ಸಹ ಮಕ್ಕಳ ಮೇಲೆ ಪರಿಣಾಮ ಬೀರಬಹದು ಆದರೆ ಯಾವುದೇ ಭೀಕರ ಪ್ರಭಾವಗಳಿರುವುದಿಲ್ಲ. ಸೋಂಕಿತ ಮಕ್ಕಳಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಮಧ್ಯಮ ಪ್ರಮಾಣದ ರೋಗವನ್ನು ಬೆಳೆಸಿಕೊಳ್ಳಬಹುದು. ಮಕ್ಕಳು ವಯಸ್ಕರು ಮತ್ತು ವಯಸ್ಸಾದ ವ್ಯಕ್ತಿಗಳಂತೆ ಸೋಂಕಿಗೆ ತುತ್ತಾಗು ಸಾಧ್ಯತೆಯಿದೆ, ಆದರೆ ತೀವ್ರ ರೂಪದ ಅಪಾಯ ಉಂಟಾಗುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ.
ಕಟ್ಟುಕಥೆ 2. ಹೊಸ ರೂಪಾಂತರಿ ವೈರಸ್ ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ: ರೂಪಾಂತರಿ ಕೊರೊನಾ ವೈರಸ್ ಮಕ್ಕಳು, ವಯೋವೃದ್ಧರ ನಡುವೆ ಯಾವುದೇ ವ್ಯತ್ಯಾಸವನ್ನು ತೋರಿಸುವುದಿಲ್ಲ. ಇದು ಯಾರ ಮೇಲೂ ಪರಿಣಾಮ ಬೀರಬಹುದು. ಕೊರೊನಾದ ಎರಡನೇ ಅಲೆಯಲ್ಲೂ ಮಕ್ಕಳು ತುತ್ತಾಗಿದ್ದು, ಅವರ ಆಸ್ಪತ್ರೆಗೆ ದಾಖಲಾದ ಪ್ರಕರಣ ತೀರಾ ಕಡಿಮೆ. ಇದೇ ಮೂರನೇ ಅಲೆ ಹೆಚ್ಚು ಪರಿಣಾಮ ಬೀರಿ ಆಸ್ಪತ್ರೆ ದಾಖಲಾಗುವುದರ ಕುರಿತು ಇದುವರೆಗೆ ಯಾವುದೇ ಸಾಕ್ಷಿಗಳು ಲಭ್ಯವಿಲ್ಲ.
ಕಟ್ಟುಕಥೆ 3. ಕೊರೊನಾ ಮಕ್ಕಳ ಮಾನಸಿಕ ಮತ್ತು ಭಾವನಾತ್ಮಕತೆಯ ಮೇಲೆ ಪರಿಣಾಮ ಬೀರುವುದಿಲ್ಲ:
ಮೊದಲಿನಿಂದಲೂ ಮಕ್ಕಳ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿದೆ. ಇದೀಗ ಕೋವಿಡ್ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನೀವು ಭಾವಿಸಿದರೆ, ಅದು ಸುಳ್ಳು. ವಯಸ್ಕರಂತೆ ಅವರಿಗೂ ಮಾನಸಿಕ ಸಮಸ್ಯೆಗಳಿರುತ್ತವೆ, ಆದರೆ ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ, ಅವರು ಸಾಂಕ್ರಾಮಿಕದ ಮಾನಸಿಕ ತೊಂದರೆಗಳನ್ನು ಒಳಗೆ ಇಟ್ಟುಕೊಂಡು ಬಳಲುತ್ತಿರುತ್ತಾರೆ.
ಮಕ್ಕಳನ್ನು ಹೇಗೆ ರಕ್ಷಿಸುವುದು?:
ಈ ಸಾಂಕ್ರಾಮಿಕ ರೋಗದ ಬಗ್ಗೆ ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಹೇಳಿ. ಮನೆಯೊಳಗೆ ಇರುವಂತೆ ನೋಡಿಕೊಳ್ಳಿ. ವೈರಸ್ ಯಾರನ್ನೂ ಬಿಡುವುದಿಲ್ಲವಾದ್ದರಿಂದ, ನಿಮ್ಮ ಮಕ್ಕಳನ್ನು ಆಟವಾಡಲು ಹೊರಗೆ ಕಳುಹಿಸಬೇಡಿ. ಬದಲಿಗೆ ಮೋಜಿನ ಒಳಾಂಗಣ ಆಟಗಳನ್ನು ಆಯೋಜಿಸಿ. ಹೊರಗೆ ಹೋದಾಗ ಮಾಸ್ಕ್ ಧರಿಸುವುದನ್ನು ಮರೆಯಬೇಡಿ. ನಿಮ್ಮ ಕಣ್ಣುಗಳು, ಮೂಗು ಮತ್ತು ಬಾಯಿಯನ್ನು ಮುಟ್ಟುವ ಮೊದಲು ಆಗಾಗ್ಗೆ ಕೈ ತೊಳೆಯರಿ.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm