ಬ್ರೇಕಿಂಗ್ ನ್ಯೂಸ್
12-06-21 10:49 am Meghashree Devaraju, BoldSky Kannada ಡಾಕ್ಟರ್ಸ್ ನೋಟ್
ಇತ್ತೀಚಿನ ದಿನಗಳಲ್ಲಿ ಒತ್ತಡ ಎಂಬ ಪದ ಎಲ್ಲರ ಜೀವನದಲ್ಲೂ ಸಾಮಾನ್ಯವಾಗಿದೆ. ಹಿರಿಯರೇ ಒತ್ತಡ ನಿಭಾಯಿಸುವಲ್ಲಿ ಕಷ್ಟಪಡುತ್ತಾರೆ, ಒತ್ತಡ ನಿರ್ವಹಣೆ ಮಾಡಲಾಗದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದೂ ಉಂಟು. ಇನ್ನು ಮಕ್ಕಳಿಗೆ ಒತ್ತಡವಾದರೆ ಹೇಗೆ ಸಹಿಸಿಯಾರು?.
ಹೌದು ನಮ್ಮಂತೆಯೇ ಮಕ್ಕಳಿಗೂ ಒತ್ತಡ ಆಗುತ್ತದೆಯಂತೆ. ಆದರೆ ಅವರಿಗೆ ಇದು ಒತ್ತಡವೇ ಎಂದು ಹೇಳಲು ಬಾರದಿರಬಹುದು ಅಥವಾ ಪೋಷಕರ ಬಳಿ ತಮ್ಮ ಒತ್ತಡವನ್ನು ಹೇಳಲು ಭಯಪಡಲೂಬಹುದು.
ಮಕ್ಕಳಲ್ಲಿನ ಒತ್ತಡ ಅವರು ನಿಭಾಯಿಸುವ ಮಟ್ಟಿಗೆ ಇದ್ದರೆ ಏನು ಸಮಸ್ಯೆ ಆಗಲಾರದು, ಆದರೆ ಇದು ಹೆಚ್ಚಾದರೆ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಒಟ್ಟಾರೆ ಒತ್ತಡ ಎಂಬ ಪದ ಈ ಕಾಲದಲ್ಲಿ ಮಕ್ಕಳಿಗೂ ವಕ್ಕರಿಸಿದೆ ಎಂಬುದು ಮಾತ್ರ ವಿಷಾದನೀಯ. ಮಕ್ಕಳಲ್ಲಿ ಕಂಡುಬರುವ ಒತ್ತಡ ಪೋಷಕರಿಗೆ ಅರ್ಥ ಆಗುವುದಾದರೂ ಹೇಗೆ?, ಮಕ್ಕಳಲ್ಲಿ ಒತ್ತಡ ಉಂಟಾದಾಗ ಅವರ ವರ್ತನೆ ಹಾಗೂ ದೈಹಿಕವಾಗಿ ಆಗುವ ಬದಲಾವಣೆಗಳೇನು ಮುಂದೆ ತಿಳಿಯೋಣ:
ದುಃಸ್ವಪ್ನಗಳು
ಮಕ್ಕಳಲ್ಲಿ ಉಂಟಾಗುವ ಒತ್ತಡ ಮತ್ತು ಆತಂಕದಿಂದ ಅವರಿಗೆ ದುಃಸ್ವಪ್ನಗಳು ಬಂದು ಕಾಡುತ್ತದೆ. ನಿಮ್ಮ ಮಗುವಿಗೆ ಶಾಲೆಯಲ್ಲಿ ನೀಡಲಾಗುವ ಓದಿನ ಅಥವಾ ಬರೆಯುವ ಹೊರೆ, ಇತರೆ ಕೆಲವು ಕೆಲಸದ ಬಗ್ಗೆ ಚಿಂತೆ ಇದ್ದರೆ ಅಥವಾ ಮನೆಯಲ್ಲಿ ತೊಂದರೆಯಾಗಿದ್ದರೆ, ಕೌಟುಂಬಿಕ ಸಮಸ್ಯೆಗಳಿಂದ ಅವರಿಗೆ ಆಗಾಗ್ಗೆ ದುಃಸ್ವಪ್ನಗಳು ಬರಬಹುದು ಎಂದು ಮಕ್ಕಳ ತಜ್ಞರು ಹೇಳುತ್ತಾರೆ. ಕೆಲವು ಮಕ್ಕಳಿಗೆ ನಂತರದ ದಿನಗಳಲ್ಲಿ ಬರಲಿರುವ ಪರೀಕ್ಷೆ ಅಥವಾ ಇತರೆ ಯಾವುದೇ ಪ್ರಮುಖ ಘಟನೆಗಳಿಂದ ಕೆಟ್ಟ ಕನಸುಗಳನ್ನು ಕಾಣುತ್ತಾರೆ. ನಿಮ್ಮ ಮಗುವಿಗೆ ಆಗಾಗ್ಗೆ ದುಃಸ್ವಪ್ನಗಳು ಕಾಡುತ್ತಿದೆ ಎಂದಾದರೆ ಅವರ ಜೊತೆ ಮುಕ್ತವಾಗಿ ಮಾತನಾಡಿ, ನಿಮ್ಮ ಮಗುವಿಗೆ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಮತ್ತು ಅವರ ಭಾವನೆಗಳನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ಅವರಿಗೆ ಭರವಸೆ ನೀಡಿ.
ತಿನ್ನಲು ಆಸಕ್ತಿಯೇ ಇಲ್ಲ
ಮಕ್ಕಳಲ್ಲಿ ಒತ್ತಡ ಇದೆ ಎಂದಾದರೆ ಅವರಿಗೆ ಹೆಚ್ಚು ಹಸಿವು ಆಗದೇ ಇರಬಹುದು, ತಿನ್ನಲು ಆಸಕ್ತಿಯೇ ಇರದಿರಬಹುದು. ನಿಮ್ಮ ಮಗುವಿಗೆ ಇಷ್ಟವಾದ ತಿಂಡಿಯೇ ನೀಡಿದರೂ ಅವರು ಇಷ್ಟಪಟ್ಟು ತಿನ್ನಲು ಬಯಸುವುದಿಲ್ಲ. ಇದು ಅವರ ವರ್ತನೆಯಲ್ಲಿ ಕಂಡುಬರುವ ದಿಡೀರ್ ಬದಲಾವಣೆಯಾಗಿರುತ್ತದೆ. ಆದರೆ ಕೆಲವು ಬಾರಿ ಮಕ್ಕಳು ಸರಿಯಾಗಿ ಊಟ ಮಾಡದೇ ಇರಲು ಇತರೆ ಕಾರಣಗಳು ಇರಬಹುದು. ಮಕ್ಕಳಲ್ಲಿನ ಈ ವರ್ತನೆಯನ್ನು ಗಮನಿಸಿ ಪೋಷಕರು ಅವರೊಂದಿಗೆ ಮಾತನಾಡಿ ಅವರ ಸಮಸ್ಯೆಯನ್ನು ಪರಿಹರಿಸಲೇಬೇಕು, ಇಲ್ಲವಾದಲ್ಲಿ ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಆಕ್ರಮಣಶೀಲತೆ ಅಥವ ಮೊಂಡುತನ
ಹಿರಿಯರಾದ ನಾವುಗಳೇ ಒತ್ತಡಕ್ಕೊಳಗಾದಾಗ ಇತರರ ಮೇಲೆ ಕೋಪವನ್ನು ತೋರಿಸುತ್ತೇವೆ ಅಥವಾ ಸಿಟ್ಟಿನಿಂದ ವರ್ತಿಸುತ್ತೇವೆ, ಇನ್ನು ಮಕ್ಕಳು ಹೇಗೆ ತಾನೆ ವರ್ತಿಸಿಯಾರೂ ಹೇಳಿ. ಮಕ್ಕಳು ಸಹ ಒತ್ತಡಕ್ಕೊಳಗಾದರೆ ಹೀಗೆಯೇ ವರ್ತಿಸುತ್ತಾರೆ. ಮಕ್ಕಳಿಗೆ ಒತ್ತಡವನ್ನು ನಿರ್ವಹಿಸಲು ಅಥವಾ ಅದರಿಂದ ಹೊರಬರಲು ತಿಳಿಯದ ಕಾರಣ ಮಾನಸಿಕವಾಗಿ ಬಹಳ ಕಷ್ಟಪಡುತ್ತಾರೆ, ಇದರ ಪರಿಣಾಮವಾಗಿ ಅವರು ಹೆಚ್ಚು ಆಕ್ರಮಣಕಾರಿ ಆಗುತ್ತಾರೆ. ಅವರು ಯಾರೊಂದಿಗೂ ಮಾತನಾಡುವುದನ್ನು ಇಷ್ಟಪಡುವುದಿಲ್ಲ, ಎಲ್ಲರ ಜತೆಗಿನ ಸಂಭಾಷಣೆಯನ್ನು ತಪ್ಪಿಸಲು ಪ್ರಾರಂಭಿಸಬಹುದು ಅಥವಾ ಕಿರುಚುವುದು, ವಸ್ತುಗಳನ್ನು ಬಿಸಾಡುವುದು, ಯಾವುದೂ ಬೇಡ ಎಂದು ವರ್ತಿಸಬಹುದು. ಇವೆಲ್ಲವೂ ಒತ್ತಡ ಮತ್ತು ಆತಂಕದ ಲಕ್ಷಣಗಳಾಗಿವೆ, ಅದನ್ನು ಸರಿಯಾಗಿ ಮತ್ತು ಸಮಯಕ್ಕೆ ಸರಿಯಾಗಿ ನಿರ್ವಹಿಸಬೇಕಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ನಿಮಗೆ ಕಷ್ಟವಾಗಿದ್ದರೆ, ತಜ್ಞರನ್ನು ಸಂಪರ್ಕಿಸಿ.
ಗಮನ ಕೊರತೆ
ಶಾಲೆಯಲ್ಲಿ ನೀಡಿದ ಕೆಲಸವನ್ನು ಪೂರ್ಣಗೊಳಿಸಲು ಮನಸ್ಸಿಲ್ಲದಿರುವುದು ಅಥವಾ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸದಿರುವುದು ಮಕ್ಕಳಲ್ಲಿ ಒತ್ತಡದ ಸಂಕೇತವಾಗಿದೆ. ಶೈಕ್ಷಣಿಕ ಅಥವಾ ಶಾಲಾ ಕ್ರೀಡಾಕೂಟಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಒತ್ತಡವು ಅವರ ಏಕಾಗ್ರತೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಇಂತಹ ಯಾವುದೇ ವರ್ತನೆಗಳು ನಿಮ್ಮ ಮಗುವಿನಲ್ಲಿ ಕಂಡುಬಂದರೆ ಮಗುವಿನೊಂದಿಗೆ ಮಾತನಾಡಿ ಮತ್ತು ಅವರ ಚಟುವಟಿಕೆಗಳಿಗೆ ಆದ್ಯತೆ ನೀಡಲು ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿ.
ಬೆಡ್ ವೆಟ್ಟಿಂಗ್
ಒತ್ತಡ ಅಥವಾ ಅಸುರಕ್ಷಿತ ಭಾವನೆ ಇದ್ದಾಗ ಮಕ್ಕಳು ಬೆಡ್ ವೆಟ್ ಮಾಡುವ ಸಾಧ್ಯತೆ ಇರುತ್ತದೆ. ಸಣ್ಣ ಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಮಕ್ಕಳು ಬೆಡ್ ವೆಟ್ ಮಾಡಿದರೆ ಕೋಪಗೊಳ್ಳಬೇಡಿ, ಬದಲಾಗಿ ಅದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಒತ್ತಡದ ಹೊರತಾಗಿ ಇತರ ವೈದ್ಯಕೀಯ ಪರಿಸ್ಥಿತಿಗಳು ಸಹ ಬೆಡ್ ವೆಟ್‌ಗೆ ಕಾರಣವಾಗಬಹುದು. ಯಾವುದೇ ಆದರೂ ನಿಖರ ಕಾರಣ ತಿಳಿಯಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
(Kannada Copy of Boldsky Kannada)
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm