ಬ್ರೇಕಿಂಗ್ ನ್ಯೂಸ್
14-06-21 03:23 pm Meghashree Devaraju, BoldSky Kannada ಡಾಕ್ಟರ್ಸ್ ನೋಟ್
ಹಿಂದೆಲ್ಲಾ ಶುಧ್ಧವಾದ ನೀರು, ಗಾಳಿ, ಆರೋಗ್ಯಯುತ ಹಸಿ ಗೊಬ್ಬರಗಳಿಂದ ಶುದ್ಧವಾದ ಪರಿಸರದಲ್ಲಿ ತರಕಾರಿಗಳು ಬೆಳೆಯುತ್ತಿದ್ದೆವು. ಈಗ ಬೆಳೆಗಳಿಗೆ ಹಾಕುವ ನೀರಿನಿಂದ ಹಿಡಿದು ಎಲ್ಲವೂ ಕಲುಷಿತವಾಗಿದೆ, ಇನ್ನು ಗೊಬ್ಬರಗಳು ಬರೀ ರಾಸಾಯನಿಕಗಳಿಂದಲೇ ತುಂಬಿದೆ. ಇಂಥ ತರಕಾರಿಗಳನ್ನು ನಾವು ಹಸಿಯಾಗಿ ಸೇವಿಸುವುದು ಎಷ್ಟು ಸರಿ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡದಿರದು.
ಆದರೆ, ದೇಹದ ತೂಕ ಕಡಿಮೆಮಾಡಿಕೊಳ್ಳಲು ಬಯಸುವವರು, ಡಯಟ್ ಮಾಡುವವರು, ಆರೋಗ್ಯಕರ ಪೌಷ್ಠಿಕ ಆಹಾರ ತಿನ್ನಲು ಬಯಸುವವರು ಮೊದಲಿಗೆ ಮಾಡುವ ಕೆಲಸ ಹಸಿ ತರಕಾರಿಗಳ ಸೇವನೆ.
ಆದರೆ ನಿಮಗೆ ಗೊತ್ತೆ, ಹಲವು ಸಂಶೋಧನೆಗಳ ಪ್ರಕಾರ ಹಸಿ ತರಕಾರಿಗಳ ಸೇವನೆ ಹಲವು ಸೋಂಕಿಗೆ ಪ್ರಮುಖ ಕಾರಣವಂತೆ. ಅದರಲ್ಲೂ ಕೆಲವು ಹಸಿತರಕಾರಿಗಳು ಮಾರಣಾಂತಿಕವೂ ಹೌದು ಎನ್ನುತ್ತಾರೆ ಸಂಶೋಧಕರು.
ಯಾವೆಲ್ಲಾ ತರಕಾರಿಗಳನ್ನು ಹಸಿಯಾಗಿ ಸೇವಿಸಬಾರದು, ಇದು ಹೇಗೆ ಜೀವಕ್ಕೆ ಹಾನಿಯನ್ನುಂಟು ಮಾಡುತ್ತದೆ ಇನ್ನಷ್ಟು ಮಾಹಿತಿಯನ್ನು ಮುಂದೆ ತಿಳಿಯೋಣ:
ಸಂಶೋಧನೆ ಏನು ಹೇಳುತ್ತದೆ
ಹಲವಾರು ಸಂಶೋಧನೆಗಳ ಪ್ರಕಾರ ಹಸಿ ತರಕಾರಿಗಳನ್ನು ತಿನ್ನುವುದು ಸೋಂಕಿನ ದೊಡ್ಡ ಕಾರಣಗಳಲ್ಲಿ ಒಂದಾಗಿದೆ. ಹೆಚ್ಚಿನ ತರಕಾರಿಗಳು ಅದರಲ್ಲೂ ಎಲೆಕೋಸು ಮತ್ತು ಹೂಕೋಸುಗಳಂಥ ತರಕಾರಿಗಳಲ್ಲಿ ಇಂಥಾ ಗಂಭೀರ ಸೋಂಕಿಗೆ ಕಾರಣವಾಗುವ ಹುಳುಗಳಿಗೆ ಕುಖ್ಯಾತಿ ಪಡೆದಿವೆ. ಈ ಹುಳುಗಳು ತುಂಬಾ ಚಿಕ್ಕದಾಗಿದ್ದು ಎಲೆಕೋಸು ಅಥವಾ ಹೂಕೋಸಿನ ಪದರಗಳೊಳಗೆ ಮರೆಯಾಗಿರುವುದರಿಂದ ಅವುಗಳು ಕಣ್ಣಿಗೆ ಕಾಣುವುದಿಲ್ಲ. ಈ ಹುಳುಗಳ ಮೊಟ್ಟೆಗಳು ಗಟ್ಟಿಯಾದ ಚಿಪ್ಪಿನಿಂದ ಕೂಡಿರುವುದರಿಂದ ಅವು ಹೆಚ್ಚಿನ ತಾಪಮಾನದಲ್ಲೂ ಬದುಕುಳಿಯುತ್ತವೆ.
ಈ ಹುಳುಗಳಿಗೆ ಮೆದುಳೇ ಬೇಕು!
ನಿಜವಾಗಿಯೂ ಇನ್ನೂ ಭಯಾನಕ ಸಂಗತಿಯೆಂದರೆ, ಅವು ಕರುಳಿನಲ್ಲಿ ಹೋಗುತ್ತಿದ್ದಂತೆ ತನ್ನ ಸಂತತಿಯನ್ನು ಹೆಚ್ಚಿಕೊಳ್ಳುತ್ತದೆ, ಮಾತ್ರವಲ್ಲ, ಆದರ ಒಂದು ಸಣ್ಣ ಬೀಜಕವು ರಕ್ತದ ಹರಿವಿನ ಮೂಲಕ ಮೆದುಳಿಗೆ ಹೋಗಬಹುದು. ಮೆದುಳನ್ನು ತಲುಪಬಲ್ಲ ಲಾಡಿಹುಳುಗಳ ಸಾಮಾನ್ಯ ರೂಪವೆಂದರೆ ಟೇನಿ ಸೋಲಿಯಂ ಎಂದು ಕರೆಯಲ್ಪಡುವ ಹಂದಿಮಾಂಸ ಲಾಡಿಹುಳು. ಎಲೆಕೋಸು, ಕೇಲ್ ಸೊಪ್ಪು, ಹೂಕೋಸು ಮತ್ತು ಕೋಸುಗಡ್ಡೆ ಮುಂತಾದ ತರಕಾರಿಗಳಲ್ಲಿ ಸಾಮಾನ್ಯ ಈ ಕೀಟ ಕಂಡುಬರುತ್ತದೆ. ಇದು ರಿಬ್ಬನ್ ತರಹದ ಹುಳು, ಇದನ್ನು ಸೇವಿಸಿದಾಗ ಕರುಳಿನ ಗೋಡೆಗಳಿಗೆ ಅಂಟಿಕೊಳ್ಳುತ್ತದೆ ಮತ್ತು ಮೊಟ್ಟೆಯೊಡೆದು ಲಾರ್ವಾ ಆಗುತ್ತದೆ. ಈ ಹುಳು ಕರುಳಿನಲ್ಲಿ ಮೊಟ್ಟೆಗಳನ್ನು ಹೊರಹಾಕಿದ ನಂತರ, ಇದು ರಕ್ತದ ಹರಿವನ್ನು ಪ್ರವೇಶಿಸುತ್ತದೆ ನಂತರ ಸಿಸ್ಟಿಸರ್ಕೊಸಿಸ್ಗೆ ಕಾರಣವಾಗುವ ಮೆದುಳಿಗೆ ಪ್ರಯಾಣಿಸುತ್ತದೆ. ಅಂತಿಮವಾಗಿ ಇದು ಯಕೃತ್ತು ಮತ್ತು ಸ್ನಾಯುಗಳು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಹರಡುತ್ತದೆ.
ಹುಳುಗಳು ದೇಹ ಹೊಕ್ಕರೆ ಏನಾಗುತ್ತದೆ?
ಇದು ಮೆದುಳಿನೊಳಗೆ ಬಂದಾಗ ಹುಳುಗಳ ಲಾರ್ವಾಗಳು ಸುತ್ತಮುತ್ತಲಿನ ಪ್ರದೇಶವನ್ನು ಕಿರಿಕಿರಿಗೊಳಿಸಲು ಪ್ರಾರಂಭಿಸುತ್ತದೆ ಮತ್ತು ತಲೆನೋವು, ಪಾರ್ಶ್ವವಾಯು ಮತ್ತು ಇತರೆ ಅನಾರೋಗ್ಯದ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಸೆರೆಬ್ರಲ್ ಸಿಸ್ಟಿಸರ್ಕೊಸಿಸ್ ಅನ್ನು ಪರಾವಲಂಬಿ ಸೋಂಕು ಎಂದೂ ಕರೆಯುತ್ತಾರೆ.
ಮೂರು ಹಂತಗಳಲ್ಲಿ ಕಾಡುವ ಸಮಸ್ಯೆ
ಈ ಪರಾವಲಂಬಿ ಸೋಂಕು ಸೆರೆಬ್ರಲ್ ಸಿಸ್ಟಿಸರ್ಕೊಸಿಸ್ ದೇಹವನ್ನು ಪ್ರವೇಶಿಸಿ ಮೆದುಳು ಹೊಕ್ಕರೆ ಮೂರು ಹಂತದಲಲ್ಲಿ ಆನಾರೋಗ್ಯ ಭಾಧಿಸುತ್ತದೆ.
ಮೊದಲ ಹಂತದಲ್ಲಿ, ಇದು ಮೆದುಳಿನ ಊತಕ್ಕೆ ಕಾರಣವಾಗಬಹುದು ಮತ್ತು ನಂತರ ತೀವ್ರ ತಲೆನೋವು ಉಂಟಾಗುತ್ತದೆ. ಎರಡನೇ ಹಂತದಲ್ಲಿ, ರೋಗಿಯು ಅಪಸ್ಮಾರದ ದಾಳಿಗೆ ಒಳಗಾಗುತ್ತಾನೆ. ಮೂರನೆಯ ಹಂತದಲ್ಲಿ, ಮೊಟ್ಟೆಗಳು ದೇಹದ ವಿವಿಧ ಅಂಗಾಂಶಗಳಲ್ಲಿ ಸಿಸ್ಟ್‌ಗಳನ್ನು ರೂಪಿಸುತ್ತವೆ ಮತ್ತು ನ್ಯೂರೋಸಿಸ್ಟಿಕೋರೋಸಿಸ್ ಎಂಬ ಕಾಯಿಲೆಗೆ ಕಾರಣವಾಗುತ್ತವೆ.
ರೋಗಿಯು ಪ್ರಜ್ಞಾಹೀನತೆಗೆ ಹೋಗುತ್ತಾನೆ ಮತ್ತು ಈ ಹಂತದಲ್ಲಿ ತೀವ್ರ ಚಿಕಿತ್ಸೆಯ ಅಗತ್ಯವಿದೆ. ಇಂಥಾ ಕೆಲವು ಸಂದರ್ಭಗಳು ಸಾವಿಗೂ ಸಹ ಕಾರಣವಾಗಬಹುದು. ಈ ಹಂತವನ್ನು ಸಿಸ್ಟಿಕ್ ಸರ್ಕಲ್ ಗ್ರ್ಯಾನುಲೋಮಾ ಎಂದು ಕರೆಯಲಾಗುತ್ತದೆ. ನ್ಯೂರೋಸಿಸ್ಟಿಕೋರೋಸಿಸ್ ವಿರುದ್ಧ ಹೋರಾಡಲು ಹಲವಾರು ಔಷಧಗಳು ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳಿವೆ. ಆದರೆ ಸರಿಯಾದ ಸಮಯಕ್ಕೆ ಇದರ ಬಗ್ಗೆ ವೈದ್ಯಕೀಯ ಮಾಹಿತಿ ಇದ್ದರೆ, ಪ್ರಾರಂಭಿಕ ಹಂತದಲ್ಲೇ ಪತ್ತೆಯಾದರೆ ಇದು ಗುಣಪಡಿಸಬಹುದಾದ ರೋಗವಾಗಿದೆ.
ಇಂಥಾ ತರಕಾರಿಗಳನ್ನು ಹೇಗೆ ತೊಳೆಯುವುದು
ಎಲೆಕೋಸಿ, ಕೇಲ್‌ಸೊಪ್ಪು ಅಥವಾ ಹೂಕೋಸು ಸೇರಿದಂತೆ ಇತರೆ ತರಕಾರಿಗಳಲ್ಲಿ ಇರುವ ಈ ಹುಳುಗಳನ್ನು ಮತ್ತು ಅವುಗಳ ಬೀಜಕಗಳನ್ನು ಸಸ್ಯಾಹಾರಿಗಳಿಂದ ತೊಳೆಯುವುದು ಅಥವಾ ಹೋಗಲಾಡಿಸುವುದು ತುಂಬಾ ಕಷ್ಟ. ಕೆಲವು ತರಕಾರಿಗಳಲ್ಲಿರುವ ಕೆಲವು ಕೀಟ, ಹುಳುಗಳು ಚೆನ್ನಾಗಿ ಕುದಿಸಿದ ನಂತರ ಸತ್ತುಹೋಗುತ್ತದೆ, ಆದರೆ ನಿಜ ಹೇಳಬೇಕೆಂದರೆ ಈ ಹುಳುಗಳು ಕುದಿಸಿದ ನಂತರವೂ ಹೋಗುವುದಿಲ್ಲ.
ಇದಕ್ಕೆ ಪರಿಹಾರವೇನು?
ಎಲೆಕೋಸಿನ ಹುಳುಗಳನ್ನು ನಿವಾರಿಸಲು ಪೊಟ್ಯಾಸಿಯಮ್ ಪರ್ಮಾಂಗನೇಟ್ ಅತ್ಯುತ್ತಮ ನೈಸರ್ಗಿಕ ಮಾರ್ಗವಾಗಿದೆ. ನೀರಿನಿಂದ ತುಂಬಿದ ಬಟ್ಟಲಿಗೆ ಸ್ವಲ್ಪ ಪೊಟ್ಯಾಸಿಯಮ್ ಪರ್ಮಾಂಗನೇಟ್ ಅನ್ನು ಸೇರಿಸಿ ತರಕಾರಿಗಳನ್ನು ಈ ದ್ರಾವಣದಲ್ಲಿ ನೆನೆಸಿ. 3-5 ನಿಮಿಷಗಳ ನಂತರ, ನಲ್ಲಿ ನೀರಿನಲ್ಲಿ ಅಥವಾ ಹರಿಯುವ ನೀರಿನಲ್ಲಿ ಅವುಗಳನ್ನು ಚೆನ್ನಾಗಿ ತೊಳೆಯಿರಿ. ಬ್ಯಾಕ್ಟೀರಿಯಾ, ಪರಾವಲಂಬಿಗಳು ಮತ್ತು ರಾಸಾಯನಿಕ ಕೀಟನಾಶಕಗಳನ್ನು ತೆಗೆದುಹಾಕಲು ಪೊಟ್ಯಾಸಿಯಮ್ ಪರ್ಮಾಂಗನೇಟ್ ಅತ್ಯಂತ ಪರಿಣಾಮಕಾರಿಯಾಗಿದೆ.
(Kannada Copy of Boldsky Kannada)
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm