ನೈಸರ್ಗಿಕವಾಗಿ ತೂಕಕಳೆದುಕೊಳ್ಳಲು ಸಹಾಯ ಮಾಡುವುದು ಈ ಗಿಡಮೂಲಿಕೆ

24-06-21 10:46 am       Shreeraksha, BoldSky Kannada   ಡಾಕ್ಟರ್ಸ್ ನೋಟ್

ಪ್ರಾಚೀನ ಕಾಲದಿಂದಲೂ, ಕಹಿ ಬೇವಿನ ಬ್ಯಾಕ್ಟೀರಿಯಾ ವಿರೋಧಿ, ಪರಾವಲಂಬಿ ವಿರೋಧಿ, ಶಿಲೀಂಧ್ರ-ವಿರೋಧಿ, ಉರಿಯೂತದ ಮತ್ತು ನೋವು ನಿವಾರಕ ಗುಣಲಕ್ಷಣಗಳಿಂದಾಗಿ ಆರೋಗ್ಯವನ್ನು ಉತ್ತಮಗೊಳಿಸಲು ಮತ್ತು ತೂಕ ನಷ್ಟ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ.

ಕಹಿಬೇವು... ಈ ಹೆಸರನ್ನ ಕೇಳಿದಾಗಲೇ ಕೆಲವರು ಮುಖ ಸೆಟೆದುಕೊಳ್ಳುವುದು. ಏಕೆಂದರೆ ಅದರ ಕಹಿ ಲಕ್ಷಣದಿಂದ. ಆದರೆ ಇಂತಹ ಕಹಿ ಸಸ್ಯ ನಿಮ್ಮ ಆರೋಗ್ಯಕ್ಕೆ ಎಂತಹ ಸಿಹಿ ಪ್ರಯೋಜನ ನೀಡುವುದು ಗೊತ್ತಾ?

ಪ್ರಾಚೀನ ಕಾಲದಿಂದಲೂ, ಕಹಿ ಬೇವಿನ ಬ್ಯಾಕ್ಟೀರಿಯಾ ವಿರೋಧಿ, ಪರಾವಲಂಬಿ ವಿರೋಧಿ, ಶಿಲೀಂಧ್ರ-ವಿರೋಧಿ, ಉರಿಯೂತದ ಮತ್ತು ನೋವು ನಿವಾರಕ ಗುಣಲಕ್ಷಣಗಳಿಂದಾಗಿ ಆರೋಗ್ಯವನ್ನು ಉತ್ತಮಗೊಳಿಸಲು ಮತ್ತು ತೂಕ ನಷ್ಟ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಆದ್ದರಿಂದ ಇಲ್ಲಿ ನಾವು ಕಹಿ ಬೇವು ತೂಕ ನಷ್ಟಕ್ಕೆ ಹೇಗೆ ಸಹಾಯ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಕಹಿಬೇವಿನ ನಂಬಲಾಗದ ತೂಕ ನಷ್ಟಕ್ಕೆ ಸಂಬಂಧಿಸಿದ ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದೆ:



ಹಸಿವಾಗದೇ ಇರುವಂತೆ ತಡೆಯುವುದು:

ತೂಕ ಹೆಚ್ಚಾಗಲು ಪ್ರಮುಖ ಕಾರಣವೆಂದರೆ ಅಸಮತೋಳಿತ ಆಹಾರ ಸೇವನೆ. ಕಹಿ ಬೇವಿನಲ್ಲಿ ಫೈಬರ್ ಸಮೃದ್ಧವಾಗಿದ್ದು, ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವುದು. ಈ ಮೂಲಕ ನಿಮ್ಮ ಹಸಿವನ್ನು ನಿರ್ಬಂಧಿಸುತ್ತದೆ ಜೊತೆಗೆ ಮುಂದಿನ ಊಟದಲ್ಲಿ ಕಡಿಮೆ ತಿನ್ನುವಂತೆ ಮಾಡುವುದು. ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿರುವಂತೆ ಇಡುವುದು. ಈ ಎಲೆಗಳೊಳಗಿನ ನಾರಿನಂಶವು ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿಡಲು ನೆರವಾಗುವುದಲ್ಲದೇ, ಯಾವುದೇ ಜೀರ್ಣಕಾರಿ ಸಮಸ್ಯೆಗಳನ್ನು ತಪ್ಪಿಸುವುದು.



ಚಯಾಪಚಯ ಶಕ್ತಿ ಹೆಚ್ಚಿಸುವುದು:

ತೂಕ ನಷ್ಟಕ್ಕೆ ಉತ್ತಮ ಚಯಾಪಚಯ ಶಕ್ತಿ ಬಹಳ ಮುಖ್ಯ. ಕಹಿ ಬೇವು ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ನಿಮ್ಮ ತೂಕದಲ್ಲಿ ತೀವ್ರ ಬದಲಾವಣೆಗಳಿಗೆ ಕಾರಣವಾಗುವ ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಈ ಮೂಲಕ ನಿಮ್ಮ ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುವುದು.



ದೇಹದಿಂದ ಕಲ್ಮಶಗಳನ್ನು ತೆಗೆದುಹಾಕುವುದು:

ನಿಮ್ಮ ಆಂತರಿಕ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಮೂಲಕ, ರಕ್ತವನ್ನು ಶುದ್ಧೀಕರಿಸುವುದು. ಈ ಮುಖಾಂತರ ದೇಹದಿಂದ ಹಾನಿಕಾರಕ ರಾಸಾಯನಿಕಗಳನ್ನು ಹೊರಹಾಕಲು ಕಹಿಬೇವು ಸಹಾಯ ಮಾಡುತ್ತದೆ. ಇದಲ್ಲದೆ, ತೂಕ ಹೆಚ್ಚಾಗಲು ಕಾರಣವಾಗುವ ಅಂಶವಾಗಿರುವ ಉರಿಯೂತವನ್ನು ತಡೆಗಟ್ಟುತ್ತದೆ. ದೇಹದಿಂದ ಅನಾರೋಗ್ಯಕರ ಅಥವಾ ಹೆಚ್ಚು ಅಲರ್ಜಿಕ್ ಪದಾರ್ಥಗಳನ್ನು ಹೊರಹಾಕುವ ಮೂಲಕ ಒಟ್ಟಾರೆ ಆರೋಗ್ಯವನ್ನು ಕಾಪಾಡುವುದು. ಆರೋಗ್ಯಕರ ದೇಹವು ಸಕಾರಾತ್ಮಕ ಮತ್ತು ಆರೋಗ್ಯಕರ ತೂಕ ನಷ್ಟವನ್ನು ಮಾತ್ರ ಬೆಂಬಲಿಸುತ್ತದೆ.



ಕೊಬ್ಬನ್ನು ಕಡಿಮೆ ಮಾಡುವುದು:

ಕಹಿಬೇವು ಅಗತ್ಯ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಉತ್ತೇಜಿಸುವುದು. ಹಾಗಾಗಿ ಕೊಬ್ಬನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ದೇಹವು ಯಾವುದೇ ಕೊಬ್ಬಿನ ಹೀರಿಕೊಳ್ಳದಂತೆ ಸ್ವಯಂಚಾಲಿತವಾಗಿ ನಿಯಂತ್ರಿಸುವುದು. ಅಷ್ಟೇ ಅಲ್ಲ, ಉತ್ತಮ ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುವುದು. ನಿಮ್ಮ ದಿನಚರಿಯಲ್ಲಿ ಕಹಿ ಬೇವನ್ನು ಸೇರಿಸುವುದು ತೂಕ ಹೆಚ್ಚಾಗುವುದನ್ನು ತಪ್ಪಿಸಲು ಸುಸ್ಥಿರ ಮತ್ತು ನೈಸರ್ಗಿಕ ವಿಧಾನವಾಗಿದೆ.

ಕೊಬ್ಬನ್ನು ಸುಡುವುದು:

ಕಹಿಬೇವು ಚಯಾಪಚಯ ಸಾಮರ್ಥ್ಯವನ್ನು ಹೆಚ್ಚಿಸಿದಂತೆ, ಕೊಬ್ಬಿನ ಚಯಾಪಚಯ ಕ್ರಿಯೆಗೆ ಕಾರಣವಾದ ಹಾರ್ಮೋನ್ ಅನ್ನು ಒಡೆಯುವ ಕಿಣ್ವವನ್ನು ತಡೆಯಲು ಇದು ಗಮನಾರ್ಹವಾಗಿ ಸಹಾಯ ಮಾಡುತ್ತದೆ. ಜೊತೆಗೆ ವ್ಯಾಯಾಮ ಮಾಡುವಾಗ ಕೊಬ್ಬನ್ನು ಕಡಿಮೆ ಮಾಡಲು ಬೇವು ಸೇವನೆ ಉತ್ತಮ ಎಂಬುದು ಅನೇಕ ಸಂಶೋಧನೆಗಳು ತಿಳಿಸಿವೆ. ಆದ್ದರಿಂದ ತೂಕ ನಷ್ಟಕ್ಕೆ ಕಹಿಬೇವು ಉತ್ತಮ ಆಯ್ಕೆಯಾಗಿದೆ.

(Kannada Copy of Boldsky Kannada)