ಬ್ರೇಕಿಂಗ್ ನ್ಯೂಸ್
06-07-21 03:12 pm Meghashree Devaraju, BoldSky Kannada ಡಾಕ್ಟರ್ಸ್ ನೋಟ್
ದಿನನಿತ್ಯ ಅಗತ್ಯ ಪ್ರಮಾಣದಲ್ಲಿ ಅಥವಾ ನಿಯಮಿತವಾಗಿ ಮೂತ್ರ ವಿಸರ್ಜಿಸುವುದು ಮನುಷ್ಯದ ದೇಹಕ್ಕೆ ಎಷ್ಟು ಅಗತ್ಯ ಎಂದರೆ, ಮೂತ್ರವನ್ನು ಅನಗತ್ಯವಾಗಿ ತಡೆಯುವುದು, ನಿಗದಿತವಾಗಿ ಮಾಡದೇ ಇರುವುದು ಜೀವಕ್ಕೆ ಕುತ್ತು ತರುತ್ತದೆ. ಮೂತ್ರವನ್ನು ಸರಿಯಾಗಿ ವಿಸರ್ಜಿಸದೇ ಇದ್ದಾಗ ಕಾಡುವ ಅನಾರೋಗ್ಯ ಹೈಪರ್ಯುರಿಸೆಮಿಯಾ ಕಡೆಗಣಿಸದಂಥ ಅನಾರೋಗ್ಯ ಸಮಸ್ಯೆಯಾಗಿದೆ.
ನಮ್ಮ ದೇಹದಲ್ಲಿ ಆಹಾರ ಮತ್ತು ಅಗತ್ಯ ಪೋಷಾಂಶಗಳ ಪೂರೈಕೆ ಸರಿಯಾಗಿ, ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯೂರಿಕ್ ಆಮ್ಲ ಇದ್ದಾಗ ಹೈಪರ್ಯುರಿಸೆಮಿಯಾ ಸಮಸ್ಯೆ ಕಾಡುತ್ತದೆ. ಇದಕ್ಕೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ ಬಿಟ್ಟರೆ, ಮುಂದೆ ಮೂತ್ರಪಿಂಡದ ವೈಫಲ್ಯ, ಮೂತ್ರಪಿಂಡದ ಕಲ್ಲು, ಅಧಿಕ ರಕ್ತದೊತ್ತಡ, ಸಂಧಿವಾತ, ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳಿಗೂ ಕಾರಣವಾಗಬಹುದು.
ಮುಖ್ಯವಾಗಿ ಹೈಪರ್ಯುರಿಸೆಮಿಯಾಗೆ ಕಾರಣ, ಮೂತ್ರವನ್ನು ತಡೆಯುವುದು, ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದರೆ, ಮೂತ್ರಪಿಂಡ ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಾಗ, ರಕ್ತ ಪರಿಚಲನೆಯಲ್ಲಿ ವ್ಯತ್ಯಾಸವಾದಾಗ ಸಹ ಈ ಸಮಸ್ಯೆ ಕಾಡುತ್ತದೆ. ನಮಗೆ ಗಂಭೀರ ಸಮಸ್ಯೆಯನ್ನು ತಂದೊಡ್ಡುವ ಇಂಥಾ ವಿಚಾರಗಳನ್ನು ನಿರ್ಲಕ್ಷಿಸುವುದು ಸಲ್ಲದು. ಆದ್ದರಿಂದ ನಾವಿಂದು ಮನೆಯಲ್ಲೇ ಮನೆಮದ್ದುಗಳ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು, ಚಯಾಪಚಯವನ್ನು ವೇಗಗೊಳಿಸಲು, ಮೂತ್ರಪಿಂಡದ ಕಾರ್ಯಗಳನ್ನು ಸುಧಾರಿಸಲು, ರಕ್ತದ ಹರಿವನ್ನು ಹೆಚ್ಚಿಸಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಕೆಲವು ಸಲಹೆಗಳನ್ನು ನೀಡಲಿದ್ದೇವೆ. ಸಮಸ್ಯೆ ಬರುವ ಮುನ್ನವೇ ಇಂಥಾ ಮನೆಮದ್ದುಗಳು ಅನಾರೋಗ್ಯದಿಂದ ದೂರವಿಡಲು ಸಹಕಾರಿ
ನೀರು
ನಿಮ್ಮ ದೇಹದಿಂದ ವಿಷವನ್ನು ಹೊರಹಾಕಲು ಸುಲಭವಾದ ಮಾರ್ಗವೆಂದರೆ ಸಾಧ್ಯವಾದಷ್ಟು ನೀರು ಕುಡಿಯುವುದು. ಜೀರ್ಣಕ್ರಿಯೆಗೆ ನೀರು ಅತ್ಯುತ್ತಮವಾಗಿದೆ ಮತ್ತು ಅಗತ್ಯವಾದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ನಿಮ್ಮ ದೇಹದಲ್ಲಿ ರಕ್ತಪರಿಚಲನಾ ಚಟುವಟಿಕೆಗಳನ್ನು ಚುರುಕುಗೊಳಿಸುತ್ತದೆ. ದಿನಕ್ಕೆ ಕನಿಷ್ಠ ಎಂಟು ಲೋಟ ನೀರು ಕುಡಿಯಲು ಪ್ರಯತ್ನಿಸಿ.
ಜೇನುತುಪ್ಪ
ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಸಕಾರಾತ್ಮಕ ಪ್ರಭಾವ ಬೀರುವ ಜೇನುತುಪ್ಪವನ್ನು ನಿಸ್ಸಂದೇಹವಾಗಿ ಅನೇಕ ರೀತಿಯಲ್ಲಿ ಬಳಸಬಹುದು. ನಿಮ್ಮ ದೇಹದಲ್ಲಿ ಅನಗತ್ಯ ವಸ್ತುಗಳು ಹಾಗೂ ವಿಷವನ್ನು ಸುಲಭವಾಗಿ ಹೊರತೆಗೆಯುವ ಅತ್ಯುತ್ತಮ ಶುದ್ಧೀಕರಣ ಪರಿಣಾಮವನ್ನು ಇದು ಒಳಗೊಂಡಿವೆ. ಜೇನುತುಪ್ಪವು ಉರಿಯೂತಕ್ಕೆ ರಾಮಬಾಣ ಮತ್ತು ಪ್ರತಿಜೀವಕಗಳನ್ನು ಅಭಿವೃದ್ಧಿಪಡಿಸುತ್ತದೆ.
ಸಿಹಿ ಗೆಣಸು
ಮಲಬದ್ಧತೆ ನಿವಾರಣೆಗೆ ಸಿಹಿ ಆಲೂಗಡ್ಡೆ ಅತ್ಯುತ್ತಮ ಮನೆಮದ್ದಾಗಿ ಪ್ರಚಲಿತದಲ್ಲಿದೆ. ಕರುಳಿನ ಕ್ರಿಯೆಯನ್ನು ಸುಲಭಗೊಳಿಸಲು, ನಿಮ್ಮ ಜೀರ್ಣಾಂಗಗಳನ್ನು ಶುದ್ಧೀಕರಿಸುತ್ತವೆ, ಆರೋಗ್ಯವನ್ನು ಉತ್ತಮಗೊಳಿಸಲು ಮತ್ತು ನಿಮ್ಮ ದೇಹದಿಂದ ವಿಷವನ್ನು ತೆಗೆದುಹಾಕಲು ಇದು ಪರಿಣಾಮಕಾರಿ. ಸಿಹಿಗೆಣಸಿನ ಮತ್ತೊಂದು ಪ್ರಯೋಜನವೆಂದರೆ ಇದರಲ್ಲಿ ಕರಗಬಲ್ಲ ಹಾಗೂ ಕರಗದಂಥ ಎರಡೂ ಅಂಶಗಳಿವೆ. ಸುಲಭವಾಗಿ ಕರಗದ ಫೈಬರ್ ಹಾಗೂ ಅತಿ ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಸಹ ದೇಹಕ್ಕೆ ಒದಗಿಸುತ್ತವೆ. ಅಲ್ಲದೇ ಇದು ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.
ಆಪಲ್
ಆಪಲ್‌ನಲ್ಲಿ ಥಯಾಮಿನ್, ಪಿರಿಡಾಕ್ಸಿನ್ ಮತ್ತು ರಿಬೋಫ್ಲಾವಿನ್ ಎಂಬ ಅಂಶಗಳಿದ್ದು, ಇದು ಬಿ-ಕಾಂಪ್ಲೆಕ್ಸ್ ಸಂಯುಕ್ತಗಳ ಮಿಶ್ರಣವಾಗಿದೆ. ಇದರಿಂದ ನಮ್ಮ ಚಯಾಪಚಯ ಚಟುವಟಿಕೆಗಳಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಆಪಲ್ ಅಂಗಗಳ ಕ್ರಿಯಾತ್ಮಕತೆಗೆ ಆರೋಗ್ಯಕರ ಬೆಂಬಲ ನೀಡುವ, ರಕ್ತದ ಹರಿವನ್ನು ನಿರ್ವಿಷಗೊಳಿಸಲು ಪರಿಣಾಮಕಾರಿ ಹಣ್ಣುಗಳಾಗಿವೆ. ಆಪಲ್‌ಗಳಲ್ಲಿ ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಎ ಮತ್ತು ಇತರ ಖನಿಜಗಳನ್ನು ಸಹ ಹೇರಳವಾಗಿದೆ. ಕಡಿಮೆ ಕ್ಯಾಲೊರಿಗಳಿಗೆ ಹೆಸರುವಾಸಿಯಾದ ಇದು ರಕ್ತ ಶುದ್ಧೀಕರಣಕ್ಕೆ ಉತ್ತಮ ಮನೆಮದ್ದಾಗಿದೆ.
ಶುಂಠಿ
ಶುಂಠಿಯಲ್ಲಿ ಉರಿಯೂತ ನಿವಾರಕ, ಆಂಟಿವೈರಲ್ ಮತ್ತು ಆಂಟಿಆಕ್ಸಿಡೆಂಟ್‌ಗಳಿವೆ. ಇದು ಯಕೃತ್ತನ್ನು ಶುದ್ಧೀಕರಿಸುವ ಗುಣಲಕ್ಷಣಗಳಿಂದ ಕೂಡಿದೆ ಮತ್ತು ಇವುಗಳು ಈ ಅಂಗದ ಕ್ರಿಯಾತ್ಮಕತೆಯನ್ನು ಉತ್ತೇಜಿಸುತ್ತದೆ. ವಾಕರಿಕೆ, ನೋವು ಮತ್ತು ಹಸಿವಿಗೆ ಚಿಕಿತ್ಸೆ ನೀಡಲು ಶುಂಠಿಯನ್ನು ಬಳಸಲಾಗುತ್ತದೆ. ಶುಂಠಿಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಮ್ಯಾಂಗನೀಸ್, ತಾಮ್ರ ಮತ್ತು ವಿಟಮಿನ್ ಸಿ ಯಂತಹ ಪೋಷಕಾಂಶಗಳಿರುವ ಉತ್ತಮ ಮನೆಯಾಗಿದ್ದು.
ದ್ರಾಕ್ಷಿಗಳು
ಸರಿಯಾದ ಸಮಯಕ್ಕೆ ಆಹಾರ ಸೇವಿಸದೇ ಇದ್ದಾಗ ದೇಹದಲ್ಲಿ ಉಂಟಾಗುವ ವಿಷಕಾರಿ ಅಂಶವನ್ನು ದ್ರಾಕ್ಷಿ ತಡೆಯುತ್ತದೆ. ಅಂದರೆ ದೇಹಕ್ಕೆ ಸೂಕ್ತ ಆಹಾರ ಇಲ್ಲದಿದ್ದಾಗ ರಕ್ತದ ಹರಿವನ್ನು ನಿರ್ವಿಷಗೊಳಿಸುತ್ತದೆ. ಇದು ನಿಮ್ಮ ಜೀರ್ಣಾಂಗವ್ಯೂಹದ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಹೊರಹಾಕುತ್ತದೆ ಮತ್ತು ವಿಷವನ್ನು ತೆಗೆದುಹಾಕುತ್ತದೆ. ಆರೋಗ್ಯಕರ ಮೂತ್ರಪಿಂಡಕ್ಕೆ ಇದು ಸಹ ಪೂರಕ ಪರಿಹಾರವಾಗಿದೆ.
ಕೆಂಪುಮೆಣಸು
ರಕ್ತವನ್ನು ಶುದ್ಧೀಕರಿಸುವ ದ್ರಾವಣವನ್ನು ಉತ್ಪಾದಿಸಲು ಕೆಂಪು ಮೆಣಸು ಸಹ ಪರಿಣಾಮಕಾರಿ. ಕೆಂಪು ಮೆಣಸನ್ನು ನಿಂಬೆ ರಸಕ್ಕೆ ಸೇರಿಸಿ ಕುಡಿಯುವುದು ಸೂಕ್ತ ಕ್ರಮ. ಕೆಂಪುಮೆಣಸು ನಿಮ್ಮ ಕರುಳಿನಲ್ಲಿನ ಲೋಳೆಯ ಒಡೆಯುವಿಕೆಗೆ ಹೆಸರುವಾಸಿಯಾಗಿದೆ, ಇದರಿಂದ ಅವುಗಳನ್ನು ವೇಗವಾಗಿ ಹೊರಹಾಕಬಹುದು. ಮತ್ತೊಂದೆಡೆ ನಿಂಬೆ ರಸವು ನಿಮ್ಮ ಜೀರ್ಣಾಂಗಗಳಲ್ಲಿ ಕಾಲಹರಣ ಮಾಡುವ ವಿಷವನ್ನು ಹೊರಹಾಕಲು ಸಾಧ್ಯವಾಗುತ್ತದೆ.
ಆಹಾರದಲ್ಲಿ ಬದಲಾವಣೆ
ಸಾಧ್ಯವಾದಷ್ಟು ಬೇಗ ಚೇತರಿಕೆ ಕಾಣಲು ಸಮತೋಲಿತ ಆಹಾರವನ್ನು ಸೇವಿಸುವುದು ಮುಖ್ಯ. ಸಾಕಷ್ಟು ಪ್ರಮಾಣದ ಪೊಟ್ಯಾಸಿಯಮ್ ಮತ್ತು ಪ್ರೋಟೀನ್ ಅನ್ನು ಸೇವಿಸಿ. ಪೊಟ್ಯಾಸಿಯಮ್ಗಾಗಿ ತರಕಾರಿ ಸೂಪ್ ಮತ್ತು ಬೇಯಿಸಿದ ತರಕಾರಿಗಳನ್ನು ಸೇವಿಸಿ, ತಾಜಾ ಮೀನುಗಳು ಪ್ರೋಟೀನ್ಗೆ ಉತ್ತಮವಾಗಿದೆ, ಅಲ್ಲದೇ ವಿಶೇಷವಾಗಿ ಕೋಳಿ ಮತ್ತು ತರಕಾರಿ ಸೂಪ್ ಸಹ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
(Kannada Copy of Boldsky Kannada)
07-09-25 10:17 am
Bangalore Correspondent
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
07-09-25 02:25 pm
Mangalore Correspondent
Ullal, Mangalore Police: ಮೊದಲ ಪತ್ನಿಗೆ ಜೀವನಾಂಶ...
06-09-25 10:59 pm
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm