ಬ್ರೇಕಿಂಗ್ ನ್ಯೂಸ್
09-07-21 04:24 pm Reena TK, BoldSky Kannada ಡಾಕ್ಟರ್ಸ್ ನೋಟ್
ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ಕೋವಿಡ್ 19 ಲಸಿಕೆಗಳು ಪರಿಣಾಮಕಾರಿ ಎಂಬುವುದು ಈಗಾಗಲೇ ಸಾಬೀತಾಗಿದೆ. ವಿಶ್ವದ ಪ್ರತಿಯೊಂದು ದೇಶದಲ್ಲೂ ವ್ಯಾಕ್ಸಿನ್ ಡ್ರೈವ್ ಪ್ರಾರಂಭಿಸಿದೆ.
ಭಾರತದಲ್ಲಿ ಕೊವಾಕ್ಸಿನ್ ಹಾಗೂ ಕೊವಿಶೀಲ್ಡ್ ಲಸಿಕೆಗಳನ್ನು ಎರಡು ಡೋಸ್‌ನಂತೆ ನೀಡಲಾಗುತ್ತಿದೆ. ಇನ್ನು ಕೆಲವು ದಿನಗಳಲ್ಲಿ ಸ್ಪುಟ್ನಿಕ್ ಕೂಡ ಲಭ್ಯವಾಗುವುದು.
ಭಾರತದ ಜನಸಂಖ್ಯೆಯಲ್ಲಿ ಶೇ.50ಕ್ಕೂ ಅಧಿಕ ಜನರಿಗೆ ಲಸಿಕೆ ಸಿಕ್ಕಾಗಿದೆ. 45 ವರ್ಷ ಮೇಲ್ಪಟ್ಟ ಶೇ.90ಕ್ಕೂ ಅಧಿಕ ಜನರು ಲಸಿಕೆಯನ್ನು ಪಡೆದುಕೊಂಡಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಸಿಕ್ಕ ಜನರಿಗೆ ಕೊರೊನಾ ವಿರುದ್ಧ ಹೋರಾಡುವ ಸಾಮರ್ಥ್ಯವಿದೆ ಎಂಬ ಧೈರ್ಯ ಇದೆ.
ಲಸಿಕೆ ಪಡೆದ 2-3 ವಾರಗಳಲ್ಲಿ ಆ್ಯಂಟಿಬಾಡಿಗಳು ಉತ್ಪತ್ತಿಯಾಗುವುದು
ಕೊರೊನಾ ಲಸಿಕೆ ಪಡೆದು 2-3 ವಾರಗಳಾಗುವಷ್ಟರಲ್ಲಿ ದೇಹದಲ್ಲಿ ಕೊರೊನಾವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚುವುದು, ಮೊದಲನೇ ಡೋಸ್ ಪಡೆದಾಗಲೇ ಆ್ಯಂಟಿಬಾಡಿಗಳು ಉತ್ಪತ್ತಿಯಾಗುವುದು. ಕೊರೊನಾ ಲಸಿಕೆ 2ನೇ ಡೋಸ್ ಪಡೆದ ಬಳಿಕ ಆ್ಯಂಟಿಬಾಡಿಗಳ ಸಾಮರ್ಥ್ಯ ಮತ್ತಷ್ಟು ಹೆಚ್ಚುವುದು.
ರೋಗ ನಿರೋಧಕ ಸಾಮರ್ಥ್ಯ ಎಷ್ಟಯ ಸಮಯವಿರುತ್ತದೆ?
ಕೋವಿಡ್ 19 ವಿರುದ್ಧ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿದಾಗ ಅದು ಎಷ್ಟು ಸಮಯ ಉಳಿಯುತ್ತದೆ ಎಂಬುವುದರ ಬಗ್ಗೆ ನಿಖರ ಮಾಹಿತಿ ತಜ್ಞರಲ್ಲಿ ಇಲ್ಲ. ಏಕೆಂದರೆ ಕೊರೊನಾಗೆ ಲಸಿಕೆ ಬಂದು ಇನ್ನೂ ಒಂದು ವರ್ಷ ಆಗಿಲ್ಲ. ಇನ್ನು ಕೋವಿಡ್ 19 ಸೋಂಕು ತಗುಲಿ ಚೇತರಿಸಿಕೊಂಡವರಲ್ಲಿಯೂ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು. ಆದರೆ ಕೆಲವರಿಲ್ಲಿ ಈ ರೋಗ ನಿರೋಧಕ ಸಾಮರ್ಥ್ಯ 6 ತಿಂಗಳವರೆಗೆ ಕಂಡು ಬಂದರೆ ಕೆಲವರಲ್ಲಿ 3 ತಿಂಗಳು ಕಳೆಯುವಷ್ಟರಲ್ಲಿಯೇ ಕಡಿಮೆಯಾಗಿದೆ. ಆದ್ದರಿಂದ ಲಸಿಕೆ ಪಡೆದವರಲ್ಲಿ ಹಾಗೂ ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ರೋಗ ನಿರೋಧಕ ಸಾಮರ್ಥ್ಯ ಇರುತ್ತದೆ ಎಂಬುವುದು ನಿಖರವಾಗಿ ಹೇಳಲು ಸಾಧ್ಯವಿಲ್ಲ.
ಕೊರೊನಾ ಲಸಿಕೆ ಪಡೆದವರಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚು ಸಮಯವಿರುತ್ತದೆ
ಮೇ ತಿಂಗಳಿನಲ್ಲಿ ನಡೆಸಿದ ಅಧ್ಯಯನದಲ್ಲಿ ಕೊರೊನಾ ಲಸಿಕೆ ಪಡೆದವರಲ್ಲಿ ಕೊರೊನಾ ಚೇತರಿಸಿಕೊಮಡವರಿಗಿಂತ ಅಧಿಕ ಸಮಯ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿರುತ್ತದೆ ಎಂಬುವುದು ತಿಳಿದು ಬಂದಿದೆ. ಕೊರೊನಾದಿಂದ ಚೇತರಿಸಿಕೊಂಡವರು ಲಸಿಕೆಯನ್ನೂ ಪಡೆದರೆ ಯಾವುದೇ ಬೂಸ್ಟರ್ ಪಡೆಯಬೇಕಾದ ಅಗ್ಯತವಿಲ್ಲ ಎಂಬುವುದಾಗಿ ಮತ್ತೆರಡು ಅಧ್ಯಯನಗಳು ಹೇಳಿವೆ
ವರ್ಷದ ಬಳಿಕ ಕೂಡ ಕೊರೊನಾ ವೈರಸ್ ವಿರುದ್ಧ ಹೋರಾಡುವುದೇ?
ನೇಚರ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನ ವರದಿಯೂ ಲಸಿಕೆ ಪಡೆದಾಗ ದೇಹದಲ್ಲಿ ಉತ್ಪತ್ತಿಯಾದ ರೋಗ ನಿರೋಧಕ ಸಾಮರ್ಥ್ಯ ವರ್ಷದ ಬಳಿಕ ಕೂಡ ಇರುವುದು ಎಂದು ಹೇಳಿದೆ. ಜನರು ಲಸಿಕೆ ಪಡೆದಾಗ ದೇಹದಲ್ಲಿ ಆ್ಯಂಟಿಬಾಡಿಗಳು ಹಾಗೂ ಮೆಮೋರಿ ಬಿ ಉತ್ಪತ್ತಿಯಾಗುತ್ತವೆ, ಇವು ವರ್ಷದ ಬಳಿಕ ಕೂಡ SARS-CoV-2 ರೂಪಾಂತರ ವೈರಸ್ ದೇಹವನ್ನು ಹೊಕ್ಕಾಗ ತಕ್ಷಣ ಗುರುತಿಸಿ ದಾಳಿ ಮಾಡುತ್ತವೆ ಎಂದು ಲೇಖಕರು ಹೇಳಿದ್ದಾರೆ.
ಕೊನೆಯದಾಗಿ:
ಕೊರೊನಾ ಲಸಿಕೆಯಿಂದ ಉತ್ಪತ್ತಿಯಾದ ಆ್ಯಂಟಿಬಾಡಿಗಳು ಕೊರೊನಾವೈರಸ್ ವಿರುದ್ಧ ಎಷ್ಟು ಸಮಯ ಹೋರಾಡುತ್ತದೆ ಎಂಬುವುದರ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕಾಗಿದೆ. ಲಸಿಕೆ ಕೆಲವು ತಿಂಗಳುಗಳ ಹಿಂದೆಷ್ಟೇ ಅಂದ್ರೆ ಭಾರತದಲ್ಲಿ ಜನವರಿಯಿಂದ ನೀಡಲಾರಂಭಿಸಿದೆ... ಲಸಿಕೆ ಪಡೆದವರಲ್ಲಿ ರೋಗ ನಿರೋಧಕ ಸಾಮರ್ಥ್ಯ ವರ್ಷದವರೆಗೆ ಇರುತ್ತದೋ ಅಥವಾ ಇನ್ನೂ ಅಧಿಕ ಇರುತ್ತದೋ ಅಥವಾ ಕೆಲವು ವರ್ಷಗಳ ಬಳಿಕ ಬೂಸ್ಟರ್ ಅಗ್ಯತವಿದೆಯೋ ಎಂಬುವುದೆಲ್ಲಾ ಇನ್ನಷ್ಟೇ ಅಧ್ಯಯನಗಳಿಂದ ತಿಳಿಯಬೇಕಾಗಿದೆ, ಇದಕ್ಕೆ ಕೆಲವು ವರ್ಷಗಳು ಬೇಕಾಗಬಹುದು. ಕೊರೊನಾ ಲಸಿಕೆ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವುದು ಎಂಬುವುದು ಸಾಬೀತಾಗಿದೆ. ಕೊರೊನಾ ಲಸಿಕೆ ಪಡೆದವರಿಗೆ ಕೊರೊನಾವೈರಸ್ ತಗುಲುವುದೇ ಎಂದಲ್ಲ, ಒಂದು ವೇಳೆ ತಗುಲಿದರೂ ಬೇಗನೆ ಚೇತರಿಸಿಕೊಳ್ಳುತ್ತಾರೆ ಎಂಬುವುದು ಈಗಾಗಲೇ ಹಲವಾರು ಕೇಸ್‌ಗಳಿಂದ ಸಾಬೀತಾಗಿದೆ.
(Kannada Copy of Boldsky Kannada)
07-09-25 10:17 am
Bangalore Correspondent
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
07-09-25 02:25 pm
Mangalore Correspondent
Ullal, Mangalore Police: ಮೊದಲ ಪತ್ನಿಗೆ ಜೀವನಾಂಶ...
06-09-25 10:59 pm
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm