ತುಳಸಿ ದಳಗಳನ್ನು ಕೀಳುವ ಮುನ್ನ ಈ ನಿಯಮಗಳು ನಿಮಗೆ ತಿಳಿದಿರಲಿ

12-07-21 04:34 pm       Shreeraksha, BoldSky Kannada   ಡಾಕ್ಟರ್ಸ್ ನೋಟ್

ಪ್ರತಿ ಮನೆಯಲ್ಲಿ ತುಳಸಿ ಗಿಡ ಇರಬೇಕು ಎಂದು ಹೇಳುತ್ತದೆ. ತುಳಸಿ ಎಲೆಗಳನ್ನು ಪ್ರತಿ ಪೂಜೆ ಅಥವಾ ಆಚರಣೆಗಳಲ್ಲಿ ಬಳಸಲಾಗುವುದು.

ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದ್ದು, ಪ್ರತಿ ಮನೆಯಲ್ಲಿ ತುಳಸಿ ಗಿಡ ಇರಬೇಕು ಎಂದು ಹೇಳುತ್ತದೆ. ತುಳಸಿ ಎಲೆಗಳನ್ನು ಪ್ರತಿ ಪೂಜೆ ಅಥವಾ ಆಚರಣೆಗಳಲ್ಲಿ ಬಳಸಲಾಗುವುದು, ಅಷ್ಟು ದೈವಿಕ ಮಹತ್ವವಿದೆ ಈ ತುಳಸಿ ಗಿಡಕ್ಕೆ.

ಜಗತ್ತಿನ ಸೃಷ್ಠಿಕರ್ತನಾದ ವಿಷ್ಣುವಿಗೆ ತುಳಸಿ ತುಂಬಾ ಪ್ರಿಯವಾದ ಸಸ್ಯ. ತುಳಸಿ ಇಲ್ಲದೆ ಯಾವುದೇ ಧಾರ್ಮಿಕ ಆಚರಣೆಯೂ ಸಂಫೂರ್ಣವಾಗದು. ಧಾರ್ಮಿಕ ದೃಷ್ಟಿಕೋನದಿಂದ ಮಾತ್ರವಲ್ಲ, ಅದರ ಔಷಧೀಯ ಗುಣಗಳಿಂದಾಗಿ ಈ ಸಸ್ಯಕ್ಕೆ ವಿಶೇಷ ಸ್ಥಾನಮಾನ ಇದೆ. ಇಂತಹ ತುಳಸಿ ಎಲೆಗಳನ್ನು ಕೊಯ್ಯಲು ಕೆಲವೊಂದು ನಿಮಯಮಗಳಿವೆ. ಅವುಗಳಾವುವು ಇಲ್ಲಿ ನೋಡೋಣ.



ತುಳಸಿ ಗಿಡದ ಧಾರ್ಮಿಕ ಮಹತ್ವ:

ತುಳಸಿ ದಳವಿಲ್ಲದೆ ವಿಷ್ಣು ಮತ್ತು ಶ್ರೀ ಕೃಷ್ಣನ ಯಾವುದೇ ಪೂಜೆ ಪೂರ್ಣವೆಂದು ಪರಿಗಣಿಸಲಾಗುವುದಿಲ್ಲ. ಜೊತೆಗೆ ತುಳಸಿ ದಳವು ಹನುಮಂತನಿಗೂ ತುಂಬಾ ಪ್ರಿಯವಾಗಿದೆ. ಸಾಯುವ ವೇಳೆ ತುಳಸಿ ದಳದಿಂದ ಗಂಗಾಜಲ ನೀಡುವುದರಿಂದ ಅವರ ಆತ್ಮಕ್ಕೆ ಶಾಂತಿ ಮತ್ತು ಸ್ವರ್ಗ ಸಿಗುವುದು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ತುಳಸಿ ಎಲೆಗಳು ಮತ್ತು ಗಂಗಾಜಲ ಈ ಎರಡೂ ವಿಷಯಗಳನ್ನು ಯಾವುದೇ ಸಂದರ್ಭದಲ್ಲೂ ಹಳೆಯ ಮತ್ತು ಅಶುದ್ಧವೆಂದು ಹೇಳುವುದಿಲ್ಲ. ತುಳಸಿಯನ್ನು ಪ್ರತಿದಿನ ಪೂಜಿಸುವ ಮನೆಗಳಿಗೆ ದುಷ್ಟ ಶಕ್ತಿಗಳು ಪ್ರವೇಶಿಸುವುದಿಲ್ಲ ಎಂದು ನಂಬಿಕೆಯಿದೆ. ಇದರೊಂದಿಗೆ ಮನೆಯ ಸಂತೋಷ ಮತ್ತು ಸಮೃದ್ಧಿಯೂ ಹೆಚ್ಚಾಗುವುದು.



ತುಳಸಿಯ ವೈಜ್ಞಾನಿಕ ಪ್ರಾಮುಖ್ಯತೆ:

ತುಳಸಿಯು ಪ್ರತಿಜೀವಕ ಗುಣಗಳನ್ನು ಹೊಂದಿದ್ದು, ಅದು ದೇಹಕ್ಕೆ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈ ಸಸ್ಯವನ್ನು ಎಲ್ಲಿ ನೆಡಲಾಗುತ್ತದೆಯೋ, ಅದರ ಸುತ್ತಲಿನ ಗಾಳಿಯು ಶುದ್ಧವಾಗುತ್ತದೆ. ತುಳಸಿಯನ್ನು ನಿಯಮಿತವಾಗಿ ಸೇವಿಸುವುದರಿಂದ, ದೇಹದಲ್ಲಿ ಶಕ್ತಿ ಹೆಚ್ಚಾಗುವುದರ ಜೊತೆಗೆ ವ್ಯಕ್ತಿಯ ಆಯಸ್ಸು ವೃದ್ಧಿಸುವುದು. ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ತುಳಸಿ ಬಹಳ ಪರಿಣಾಮಕಾರಿ ಪರಿಹಾರವಾಗಿದೆ.



ತುಳಸಿ ಎಲೆಗಳನ್ನು ಕೊಯ್ಯುವ ನಿಯಮಗಳು:

  • ವಾಸ್ತು ಪ್ರಕಾರ, ತುಳಸಿಯನ್ನು ಯಾವಾಗಲೂ ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ನೆಡಬೇಕು. ತುಳಸಿ ಸಸ್ಯವನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಮತ್ತು ಅಡುಗೆಮನೆಯ ಬಳಿ ನೆಡಬಾರದು.
  • ತುಳಸಿ ವಿಷ್ಣುವಿಗೆ ತುಂಬಾ ಪ್ರಿಯ, ಆದರೆ ತುಳಸಿ ಎಲೆಗಳನ್ನು ಶಿವ ಮತ್ತು ಅವನ ಮಗ ಗಣೇಶನಿಗೆ ಎಂದಿಗೂ ಅರ್ಪಿಸಬಾರದು.
  • ತುಳಸಿ ಸಸ್ಯ ಮತ್ತು ಅದರ ಎಲೆಗಳನ್ನು ಸ್ನಾನ ಮಾಡದೇ ಎಂದಿಗೂ ಮುಟ್ಟಬಾರದು ಅಥವಾ ಮುರಿಯಬಾರದು.
  • ತುಳಸಿ ಎಲೆಗಳನ್ನು ಉಗುರುಗಳ ಬದಲಾಗಿ ಬೆರಳುಗಳ ಸಹಾಯಗಳಿಂದ ಮುರಿದು ತೆಗೆಯಬೇಕು. ಏಕೆಂದರೆ ತುಳಸಿ ಎಲೆಯನ್ನು ಉಗುರಿನಿಂದ ಮುರಿಯುವುದು ದೋಷಕ್ಕೆ ಕಾರಣವಾಗುವುದು.
  • ಕಾರಣಾಂತರಗಳಿಂದ ಮನೆಯಲ್ಲಿ ತುಳಸಿ ಒಣಗಿ ಹೋದರೆ ಅದನ್ನು ನದಿಗೆ ಎಸೆಯಬೇಕು ಅಥವಾ ನೆಲದಲ್ಲಿ ಹೂಳಬೇಕು. ತುಳಸಿ ಸಸ್ಯವನ್ನು ಎಂದಿಗೂ ಇಲ್ಲಿ ಮತ್ತು ಅಲ್ಲಿ ಎಸೆಯಬಾರದು.
  • ತುಳಸಿ ಎಲೆಗಳನ್ನು ಭಾನುವಾರದಂದು ಹರಿದುಹಾಕಬಾರದು ಅಥವಾ ಮುರಿಯಬಾರದು ಏಕೆಂದರೆ ಭಾನುವಾರ ವಿಷ್ಣುವಿನ ಅತ್ಯಂತ ನೆಚ್ಚಿನ ದಿನವೆಂದು ಪರಿಗಣಿಸಲಾಗಿದೆ.
  • ಏಕಾದಶಿ, ಸಂಕ್ರಾಂತಿ, ಸೂರ್ಯಗ್ರಹಣ, ಚಂದ್ರ ಗ್ರಹಣ ಮತ್ತು ಸಂಜೆಯ ಸಮಯದಲ್ಲಿ ತುಳಸಿ ಎಲೆಗಳನ್ನು ಕೊಯ್ದು ತರಬಾರದು.