ಗರ್ಭಿಣಿಯರು ಆಲ್ಕೋಹಾಲ್ ಸೇವಿಸುವುದು ಸರಿಯೇ? ತಜ್ಞರು ಏನೆನ್ನುತ್ತಾರೆ?

14-07-21 10:54 am       Shreeraksha, BoldSky Kannada   ಡಾಕ್ಟರ್ಸ್ ನೋಟ್

ಗರ್ಭಾವಸ್ಥೆಯು ಅತ್ಯಂತ ಮಹತ್ವದ ಹಂತವಾಗಿರುವುದರಿಂದ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಅಗತ್ಯವಿರುತ್ತದೆ.

ಗರ್ಭಾವಸ್ಥೆಯು ಅತ್ಯಂತ ಮಹತ್ವದ ಹಂತವಾಗಿರುವುದರಿಂದ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಅಗತ್ಯವಿರುತ್ತದೆ.ಆ ಒಂಬತ್ತು ತಿಂಗಳುಗಳಲ್ಲಿ ನೀವು ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಸರಿಯಾಗಿ ತಿಳಿದಿರುವುದು ಉತ್ತಮ.

ನಿಮಗಾಗಿ ಮತ್ತು ನಿಮ್ಮ ಮಗುವಿಗೆ ಪೌಷ್ಠಿಕಾಂಶಗಳನ್ನು ನೀಡುವಾಗ, ಆ ಪಟ್ಟಿಯಲ್ಲಿ ಆಲ್ಕೋಹಾಲ್ ಸೇರಿಸಿಕೊಳ್ಳಬಹುದೇ ಎಂಬ ಪ್ರಶ್ನೆ ಬಹಳ ಜನರನ್ನು ಕಾಡುವುದು. ಮೊದಲ ತ್ರೈಮಾಸಿಕದಲ್ಲಿ ಆಲ್ಕೊಹಾಲ್ ತೆಗೆದುಕೊಳ್ಳುವುದು ಸರಿಯೆಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಗರ್ಭಿಣಿಯರು ಆಲ್ಕೋಹಾಲ್ ನ್ನು ನಿಷೇಧಿಸುವುದು ಉತ್ತಮ ಎನ್ನುತ್ತಾರೆ. ಹಾಗಾದರೆ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಇಲ್ಲಿ ನೋಡೋಣ.

ಗರ್ಭಿಣಿಯರು ಆಲ್ಕೋಹಾಲ್ ಸೇವನೆ ಮಾಡುವಾಗ ನೆನಪಿಡಬೇಕಾದ ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ :



ಗರ್ಭಪಾತದ ಅಪಾಯ:

ಗರ್ಭಾವಸ್ಥೆಯಲ್ಲಿ ನೀವು ಮಿತಿಯಿಲ್ಲದೇ ಆಲ್ಕೊಹಾಲ್ ಸೇವಿಸುತ್ತೀರಾ ಎಂದಾದರೆ ಎಲ್ಲಾ ರೀತಿಯ ಅಪಾಯಗಳನ್ನು ಆಹ್ವಾನಿಸುತ್ತಿದ್ದೀರಿ ಎಂದರ್ಥ. ವಿಶೇಷವಾಗಿ ನಿಮ್ಮ ಗರ್ಭಧಾರಣೆಯ ಮೊದಲ ಮೂರು ತಿಂಗಳಲ್ಲಿ ಆಲ್ಕೋಹಾಲ್ ಹೆಚ್ಚು ಸೇವಿಸಿದರೆ ಗರ್ಭಪಾತದ ಅಪಾಯ ಹೆಚ್ಚಾಗಬಹುದು ಎಂದು ತಜ್ಞರು ಹೇಳುತ್ತಾರೆ. ಮಗುವಿನ ಅಕಾಲಿಕ ಜನನ ಮತ್ತು ಕಡಿಮೆ ಜನನ ತೂಕವು ಗರ್ಭಾವಸ್ಥೆಯಲ್ಲಿ ಆಲ್ಕೊಹಾಲ್ಗೆ ಒಳಗಾದ ಶಿಶುವಿನ ಕೆಲವು ಗುಣಲಕ್ಷಣಗಳಾಗಿವೆ.



ಭಾವನೆಗಳಲ್ಲಿ ಏರಿಳಿತ (ಮೂಡ್ ಸ್ವಿಂಗ್):

ತಜ್ಞರು ಗರ್ಭಾವಸ್ಥೆಯಲ್ಲಿ ಅನಿಯಂತ್ರಿತ ಆಲ್ಕೊಹಾಲ್ ಸೇವನೆಯು ನಿರ್ಜಲೀಕರಣದ ಜೊತೆಗೆ ಭಾವನೆಗಳ ಏರಿಳಿತಕ್ಕೆ ಕಾರಣವಾಗಬಹುದು. ಆದ್ದರಿಂದ, ನೀವು ಆಲ್ಕೋಹಾಲ್ ಅನ್ನು ಸಂಪೂರ್ಣವಾಗಿ ನಿಲ್ಲಿಸುವುದು ಉತ್ತಮ. ಒಂದು ವೇಳೆ ನಿರ್ಜಲೀಕರಣ ಸಮಸ್ಯೆ ಇದ್ದರೆ, ಸಾಕಷ್ಟು ನೀರು ಕುಡಿಯಿರಿ - ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರು ಕುಡಿಯಿರಿ. ಮನೆಯಲ್ಲಿ ತಯಾರಿಸಿದ ಸೂಪ್, ಜ್ಯೂಸ್ ಮತ್ತು ಹಣ್ಣುಗಳನ್ನು ಸೇವಿಸಿ. ಇವೆಲ್ಲವೂ ಉತ್ಕರ್ಷಣ ನಿರೋಧಕಗಳು ಮತ್ತು ಪೋಷಣೆಯಿಂದ ತುಂಬಿರುತ್ತದೆ.



ಮಧುಮೇಹ ಅಪಾಯ:

ತಜ್ಞರು ಹೇಳುವಂತೆ ಆಲ್ಕೊಹಾಲ್ ಕುಡಿಯುವುದರಿಂದ ಇನ್ಸುಲಿನ್ ಮಟ್ಟಗಳ ವ್ಯತ್ಯಾಸಕ್ಕೆ ಕಾರಣವಾಗುವುದು. ಆಲ್ಕೊಹಾಲ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಜೊತೆಗೆ ಮೇದೋಜ್ಜೀರಕ ಗ್ರಂಥಿಯ ಮೇಲೆ ಒತ್ತಡ ಹೇರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ, ಹೆಚ್ಚು ಇನ್ಸುಲಿನ್ ಅನ್ನು ಬಿಡುಗಡೆ ಮಾಡಲು ಕಾರಣವಾಗುವುದು. ಇದು ದೇಹ ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಅಡ್ಡಿಯಾಗುವುದು. ಆದ್ದರಿಂದ, ಗರ್ಭಾವಸ್ಥೆಯಲ್ಲಿ ನೀವು ಆಲ್ಕೊಹಾಲ್ ಅನ್ನು ದೂರವಿಡುವುದು ಉತ್ತಮ.



ಆಲ್ಕೋಹಾಲ್ ಕನಿಷ್ಠ ಮಟ್ಟದಲ್ಲಿದ್ದರೆ ಉತ್ತಮ :

ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಬ್ಲಾಗ್‌ನಲ್ಲಿ, ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್‌ನ ಮುಖ್ಯ ವೈದ್ಯಕೀಯ ಸಂಪಾದಕ ಡಾ. ಹೊವಾರ್ಡ್ ಲೆವೈನ್, ಹೇಳುವಂತೆ ಗರ್ಭಧಾರಣೆಯ ಆರಂಭದಲ್ಲಿ ಸಣ್ಣ ಪ್ರಮಾಣದ ಆಲ್ಕೋಹಾಲ್ ನಿಂದ ತಾಯಿಯ ಆರೋಗ್ಯಕ್ಕೆ ಹಾಗೂ ಶಿಶುಗಳ ಆರೋಗ್ಯಕ್ಕೆ ದೊಡ್ಡ ಅಪಾಯ ಆಗುವುದಿಲ್ಲ. ಜೊತೆಗೆ ಮೊದಲ ತ್ರೈಮಾಸಿಕದಲ್ಲಿ ಆಲ್ಕೊಹಾಲ್ ಸೇವನೆಯನ್ನು ಕಡಿಮೆ ಇದ್ದರೆ ಅಧಿಕ ರಕ್ತದೊತ್ತಡದ ತೊಂದರೆಗಳು ಅಥವಾ ಅಕಾಲಿಕ ಜನನ ಅಥವಾ ಕಡಿಮೆ ಜನನ ತೂಕದ ಅಪಾಯ ಹೆಚ್ಚಾಗಿ ಬರುವುದಿಲ್ಲ. ಆದರೆ ಹೆಚ್ಚು ಆಲ್ಕೋಹಾಲ್ ಸೇವನೆಯಿಂದ ಅಪಾಯ ಹೆಚ್ಚು ಎನ್ನುತ್ತಾರೆ.

(Kannada Copy of Boldsky Kannada)