ಗರ್ಭಪಾತಕ್ಕೆ ಕಾರಣವಾಗುವ ಈ 8 ಹಣ್ಣುಗಳನ್ನು ಗರ್ಭಿಣಿಯರು ಸೇವಿಸಲೇಬೇಡಿ..

16-07-21 10:16 am       Shreeraksha, BoldSky Kannada   ಡಾಕ್ಟರ್ಸ್ ನೋಟ್

ಗರ್ಭಾವಸ್ಥೆಯಲ್ಲಿ ಹಣ್ಣುಗಳ ಸೇವನೆ ನಿಮ್ಮ ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ನೀಡುತ್ತವೆ. ಆದರೆ ಮಗುವಿನ ಬೆಳವಣಿಗೆ ವೇಗ ಪಡೆದುಕೊಳ್ಳುವ ಸಮಯದಲ್ಲಿ ಕೆಲವೊಂದು ಹಣ್ಣುಗಳು ನಿಮ್ಮ ಆರೋಗ್ಯಕ್ಕೆ ನಕಾರಾತ್ಮಕ ಪರಿಣಾಮ ಬೀರಬಹುದು.

ಗರ್ಭಾವಸ್ಥೆಯಲ್ಲಿ ಹಣ್ಣುಗಳ ಸೇವನೆ ನಿಮ್ಮ ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ನೀಡುತ್ತವೆ. ಆದರೆ ಮಗುವಿನ ಬೆಳವಣಿಗೆ ವೇಗ ಪಡೆದುಕೊಳ್ಳುವ ಸಮಯದಲ್ಲಿ ಕೆಲವೊಂದು ಹಣ್ಣುಗಳು ನಿಮ್ಮ ಆರೋಗ್ಯಕ್ಕೆ ನಕಾರಾತ್ಮಕ ಪರಿಣಾಮ ಬೀರಬಹುದು. ಇದು ಭ್ರೂಣದ ಮೇಲೆ ಪರಿಣಾಮ ಬೀರಿ, ಗರ್ಭಪಾತಕ್ಕೂ ಕಾರಣವಾಗುವ ಸಾಧ್ಯತೆ ಇದೆ. ಅಂತಹ ಹಣ್ಣುಗಳಾವುವು ಎಂಬುದನ್ನು ಇಲ್ಲಿ ನೀಡಲಾಗಿದೆ.

1. ಅನಾನಸ್:

ಗರ್ಭಧಾರಣೆಯ ಮೊದಲ ಮೂರು ತಿಂಗಳು ದೂರವಿಡಬೇಕಾದ ಹಣ್ಣುಗಳಲ್ಲಿ ಅನಾನಸ್ ಅಗ್ರ ಸ್ತಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಅನಾನಸ್ ತಿನ್ನುವುದು ಗರ್ಭಕೋಶದ ತೀಕ್ಷ್ಣವಾದ ಸಂಕೋಚನಕ್ಕೆ ಕಾರಣವಾಗಬಹುದು, ಇದರಿಂದಾಗಿ ಗರ್ಭಪಾತವಾಗಬಹುದು. ಅನಾನಸ್ ಪ್ರೋಟೀನ್ ಅನ್ನು ಒಡೆಯುವ ಕಿಣ್ವವಾದ ಬ್ರೊಮೆಲೈನ್ ಅನ್ನು ಹೊಂದಿರುತ್ತದೆ. ಇದು ಗರ್ಭಕಂಠವನ್ನು ಮೃದುಗೊಳಿಸಿ, ಹೆರಿಗೆಯ ನೋವನ್ನು ಬೇಗ ಕೊಡುತ್ತದೆ. ಆದ್ದರಿಂದ ಗರ್ಭಧಾರಣೆಯ ಸಮಯದಲ್ಲಿ ಅನಾನಸ್ ಸೇವಿಸುವುದನ್ನು ತಪ್ಪಿಸಬೇಕು.



2. ಹುಣಸೆಹಣ್ಣು:

ಗರ್ಭಿಣಿಯಾಗಿದ್ದಾಗ ಹುಳಿಯನ್ನು ಬಯಸುವುದು ಸಹಜ, ಆಗ ನೆನಪಾಗುವುದು ಹುಣಸೆಹಣ್ಣು. ಆದರೆ ಗರ್ಭಾವಸ್ಥೆಯಲ್ಲಿ ಹುಣಸೆಹಣ್ಣು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಆದ್ದರಿಂದ ಹುಣಸೆಹಣ್ಣನ್ನು ಮಿತವಾಗಿ ಸೇವಿಸುವುದು ಮುಖ್ಯ. ಹುಣಸೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇರುವುದರಿಂದ , ಅಧಿಕ ಪ್ರಮಾಣದಲ್ಲಿ ಸೇವಿಸಿದರೆ, ಅದು ನಿಮ್ಮ ದೇಹದಲ್ಲಿ ಪ್ರೊಜೆಸ್ಟರಾನ್ ಉತ್ಪಾದನೆಯನ್ನು ನಿಗ್ರಹಿಸುತ್ತದೆ. ಈ ಕಡಿಮೆ ಮಟ್ಟದ ಪ್ರೊಜೆಸ್ಟರಾನ್ ಗರ್ಭಪಾತಕ್ಕೆ ಕಾರಣವಾಗಬಹುದು, ಜೊತೆಗೆ ಅವಧಿ ಪೂರ್ವ ಜನನಕ್ಕೆ ಸಹ ಕಾರಣವಾಗುತ್ತದೆ. ಆದ್ದರಿಂದ ಮೊದಲು ಮೂರು ತಿಂಗಳು ಹುಣಸೆ ಹಣ್ಣನ್ನ ಸೇವಿಸಬೇಡಿ.



3. ಪಪ್ಪಾಯಿ:

ಬಹಳ ಹಿಂದಿನಿದಲೂ ಈ ಪಪ್ಪಾಯಿ ಹಣ್ಣಿ ಬಗ್ಗೆ ಕೇಳುತ್ತಾ ಬಂದಿದ್ದೇವೆ. ಪೌಷ್ಟಿಕಾಂಶಗಳು ಮತ್ತು ವಿಟಮಿನ್ ಗಳಿಂದ ಸಮೃದ್ಧವಾಗಿದ್ದರೂ ಸಹ ಗರ್ಭಿಣಿಯರಿಗೆ ಇದು ಒಳ್ಳೆಯದಲ್ಲ. ಏಕೆಂದರೆ ಪಪ್ಪಾಯಿ ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸಲು ಕಾರಣವಾಗಬಹುದು, ಇದು ಗರ್ಭಾವಸ್ಥೆಯಲ್ಲಿ ಒಳ್ಳೆಯದಲ್ಲ. ಇದಲ್ಲದೆ, ಈ ಹಣ್ಣಿನಲ್ಲಿ ಲ್ಯಾಟೆಕ್ಸ್ ಸಮೃದ್ಧವಾಗಿದೆ, ಇದು ಗರ್ಭಾಶಯದ ಸಂಕೋಚನ, ರಕ್ತಸ್ರಾವ ಮತ್ತು ಗರ್ಭಪಾತಕ್ಕೆ ಕಾರಣವಾಗಬಹುದು. ಜೊತೆಗೆ ಭ್ರೂಣದ ಬೆಳವಣಿಗೆಯನ್ನು ಸಹ ಅಡ್ಡಿಪಡಿಸಬಹುದು. ಆದ್ದರಿಂದ ಇದನ್ನು ತಿನ್ನುವುದನ್ನು ತಪ್ಪಿಸಿ .



4. ಬಾಳೆಹಣ್ಣುಗಳು:

ಈ ಹಣ್ಣನ್ನು ಈ ಪಟ್ಟಿಯಲ್ಲಿ ನೋಡಿ ಆಶ್ಚರ್ಯವಾಗಬಹುದು. ಗರ್ಭಾವಸ್ಥೆಯಲ್ಲಿ ಬಾಳೆಹಣ್ಣು ತಿನ್ನುವುದು ಸುರಕ್ಷಿತವೆಂದು ಪರಿಗಣಿಸಲಾಗಿದ್ದರೂ, ಅವುಗಳನ್ನು ಕೆಲವು ಸಂದರ್ಭಗಳಲ್ಲಿ ತಪ್ಪಿಸಬೇಕು. ಅಲರ್ಜಿಯಿಂದ ಬಳಲುತ್ತಿರುವ ಮಹಿಳೆಯರು, ಮಧುಮೇಹ ಅಥವಾ ಗರ್ಭಾವಸ್ಥೆಯ ಮಧುಮೇಹ ಹೊಂದಿರುವ ಮಹಿಳೆಯರು ಈ ಬಾಳೆಹಣ್ಣಿನಿಂದ ದೂರವಿರಬೇಕು. ಬಾಳೆಹಣ್ಣು ಚಿಟಿನೇಸ್ ಅನ್ನು ಹೊಂದಿದ್ದು, ಇದು ಲ್ಯಾಟೆಕ್ಸ್ ತರಹದ ವಸ್ತುವಾಗಿದೆ. ಜೊತೆಗೆ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ಸಕ್ಕರೆಯೂ ಇದೆ, ಆದ್ದರಿಂದ ಮಧುಮೇಹಿಗಳು ಬಾಳೆಹಣ್ಣನ್ನು ತಿನ್ನುವುದನ್ನು ತಪ್ಪಿಸಬೇಕು.



5. ಕಲ್ಲಂಗಡಿ:

ಕಲ್ಲಂಗಡಿ ಸಾಮಾನ್ಯವಾಗಿ ಮಾನವನ ದೇಹಕ್ಕೆ ಒಳ್ಳೆಯದು ಏಕೆಂದರೆ ಇದು ದೇಹದ ಜಲಸಂಚಯನವನ್ನು ನಿಯಂತ್ರಿಸಿ, ದೇಹದಿಂದ ಎಲ್ಲಾ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಕಲ್ಲಂಗಡಿ ತಿನ್ನುವುದರಿಂದ ಮಗುವನ್ನು ವಿವಿಧ ವಿಷಗಳಿಗೆ ತುತ್ತಾಗುವಂತೆ ಮಾಡಬಹುದು. ಸಾಮಾನ್ಯವಾಗಿ ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದಾದರೂ, ಕೆಲವು ಅನಪೇಕ್ಷಿತ ಪರಿಣಾಮಗಳನ್ನು ಬೀರುತ್ತದೆ. ಅಧಿಕ ಪ್ರಮಾಣದಲ್ಲಿ ಸೇವಿಸಿದರೆ, ಅದರಲ್ಲಿರುವ ಸಕ್ಕರೆಯ ಅಂಶವು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ, ಕಲ್ಲಂಗಡಿಗಳ ಮೂತ್ರವರ್ಧಕ ಗುಣಲಕ್ಷಣಗಳು ನಿಮ್ಮ ದೇಹದಿಂದ ಬರುವ ಜೀವಾಣುಗಳ ಜೊತೆಗೆ ಅಗತ್ಯವಾದ ಪೋಷಕಾಂಶಗಳನ್ನು ಸಹ ಹೊರಹಾಕುತ್ತವೆ. ಇದಲ್ಲದೆ, ಇದು ಶೀತವನ್ನು ಉಂಟುಮಾಡುವ ಆಹಾರವಾಗಿದ್ದು, ಅದಕ್ಕಾಗಿಯೇ ಗರ್ಭಿಣಿಯಾಗಿದ್ದಾಗ ಅದನ್ನು ತಿನ್ನದಂತೆ ಸೂಚಿಸಲಾಗಿದೆ.



6. ಖರ್ಜೂರ:

ಖರ್ಜೂರಗಳು ಉತ್ತಮ ಜೀವಸತ್ವಗಳು ಮತ್ತು ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿವೆ, ಆದರೆ ಗರ್ಭಿಣಿಯರು ಇದನ್ನು ಸೇವಿಸುವುದು ಒಳ್ಳೆಯದಲ್ಲ. ಇದಕ್ಕೆ ಒಂದು ಮುಖ್ಯ ಕಾರಣವೆಂದರೆ ಅವು ದೇಹ ಬಿಸಿಯಾಗಲು ಕಾರಣವಾಗುತ್ತದೆ ಮತ್ತು ಗರ್ಭಾಶಯದ ಸಂಕೋಚನಕ್ಕೆ ಕಾರಣವಾಗಬಹುದು.



7. ಫ್ರಿಜ್ ನಲ್ಲಿಟ್ಟ ಹಣ್ಣುಗಳು:

ಗರ್ಭಿಣಿಯರು ಹೆಪ್ಪುಗಟ್ಟಿದ ಹಣ್ಣುಗಳು ಅಥವಾ ದೀರ್ಘಕಾಲದವರೆಗೆ ಫ್ರೀಜ್ನಲ್ಲಿ ಇಟ್ಟಿದ್ದ ಯಾವುದೇ ಹಣ್ಣು ಅಥವಾ ಆಹಾರವನ್ನು ಸೇವಿಸಬಾರದು. ಆ ಹಣ್ಣುಗಳನ್ನು ಆರಿಸುವುದಕ್ಕಿಂತ ಹೆಚ್ಚಾಗಿ ತಾಜಾ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ನೀವು ಅದನ್ನು ಫ್ರೀಜ್ ನಲ್ಲಿಟ್ಟಾಗ ಹಣ್ಣುಗಳಲ್ಲಿನ ಮೂಲ ರುಚಿ ಮತ್ತು ಪೋಷಕಾಂಶಗಳು ಹೋಗಿಬಿಡುತ್ತವೆ. ಅಂತಹ ಹಣ್ಣು ತಿನ್ನುವುದು ನಿಮಗೆ ಮತ್ತು ನಿಮ್ಮ ಮಗುವಿಗೆ ವಿಷಕಾರಿಯಾಗಿದೆ.



8. ಸಂಗ್ರಹಿಸಿಟ್ಟ ಟೊಮ್ಯಾಟೋ:

ರೆಡಿಮೇಡ್ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದ ಸಂರಕ್ಷಕಗಳನ್ನು ಸೇರಿಸುವುದರಿಂದ ಅವುಗಳನ್ನು ತಪ್ಪಿಸುವುದು ಗರ್ಭಿಣಿಯರಿಗೆ ಒಳ್ಳೆಯದು. ಈ ಸಂರಕ್ಷಕಗಳು ನಿಮಗೆ ಮತ್ತು ನಿಮ್ಮ ಮಗುವಿಗೆ ವಿಷಕಾರಿಯಾಗಬಹುದು. ಆದ್ದರಿಂದ ರೆಡಿಮೇಡ್ ಟೊಮ್ಯಾಟೊ ಮತ್ತು ಇತರ ವಸ್ತುಗಳನ್ನು ತಿನ್ನುವುದನ್ನು ತಪ್ಪಿಸಿ.

(Kannada Copy of Boldsky Kannada)