ಬ್ರೇಕಿಂಗ್ ನ್ಯೂಸ್
23-07-21 03:18 pm Shreeraksha, BoldSky Kannada ಡಾಕ್ಟರ್ಸ್ ನೋಟ್
ಹೆಣ್ಣಾದವಳಿಗೆ ತಾಯಿಯಾಗುವುದು ಅತ್ಯಂತ ಸುಂದರ ಭಾವನೆ. ತಿಂಗಳ ಋತುಸ್ರಾವ ಆಗದೇ ಇರುವುದು ಗರ್ಭಧಾರಣೆಯನ್ನು ಸೂಚಿಸುವ ಮೊದಲ ಚಿಹ್ನೆಯಾದರೂ, ಗರ್ಭಧಾರಣೆಯ ಖಚಿತತೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರಗ್ನೆನ್ಸಿ ಟೆಸ್ಟಿಂಗ್ ಕಿಟ್ ಬಳಸಿ ಸಹ ಮನೆಯಲ್ಲಿಯೇ ಅರಿತುಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದಿದೆ. ಇವುಗಳ ಹೊರತಾಗಿಯೂ ಕೆಲವೊಂದು ಜಾನಪದ ಅಥವಾ ಸಾಂಪ್ರದಾಯಿಕ ಪರೀಕ್ಷೆಗಳು ಸಹ ನೀವು ಗರ್ಭಿಣಿಯಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.
ಮನೆಯಲ್ಲಿಯೇ ಗರ್ಭಧಾರಣೆ ಪರೀಕ್ಷೆಯನ್ನು ಸರಳ ವಿಧಾನ ಅಥವಾ ಜಾನಪದ ವಿಧಾನಗಳಿಂದ ಹೇಗೆ ತಿಳಿದುಕೊಳ್ಳಬಹುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ
ಬ್ಲೀಚ್ ಗರ್ಭಧಾರಣೆಯ ಪರೀಕ್ಷೆ:
ಈ ವಿಧಾನವು ಇತರ ವಿಧಾನಗಳಿಗಿಂತ ಹೆಚ್ಚು ನಿಖರ ಮತ್ತು ತ್ವರಿತ ಫಲಿತಾಂಶವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಸ್ವಚ್ಛವಾದ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಮೂತ್ರವನ್ನು ಸಂಗ್ರಹಿಸಿ. ಈಗ ಅದಕ್ಕೆ ಸ್ವಲ್ಪ ಬ್ಲೀಚಿಂಗ್ ಪೌಡರ್ ಸೇರಿಸಿ ಮತ್ತು ಉಂಡೆಗಳನ್ನು ತಪ್ಪಿಸಲು ಸರಿಯಾಗಿ ಮಿಶ್ರಣ ಮಾಡಿ. ಮಿಶ್ರಣವು ಗುಳ್ಳೆಗಳನ್ನು ಉಂಟುಮಾಡಿದರೆ ನೀವು ಗರ್ಭಿಣಿಯಾಗಿದ್ದೀರಿ ಎಂದರ್ಥ. ಇಲ್ಲದಿದ್ದರೆ, ನೀವು ಗರ್ಭಿಣಿಯಲ್ಲ.
ಸಕ್ಕರೆ ಗರ್ಭಧಾರಣೆಯ ಪರೀಕ್ಷೆ:
ಜ್ಞಾನಿಕ ಗರ್ಭಧಾರಣೆಯ ಕಿಟ್‌ಗಳು ಲಭ್ಯವಿಲ್ಲದಿದ್ದಾಗ ಈ ವಿಧಾನವನ್ನು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಒಂದು ಪಾತ್ರೆಯಲ್ಲಿ ಒಂದು ಚಮಚ ಸಕ್ಕರೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಮೂತ್ರ ಸೇರಿಸಿ. ಮೂತ್ರವನ್ನು ಸುರಿದ ನಂತರ ಸಕ್ಕರೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಗಮನಿಸಿ. ಸಕ್ಕರೆ ಗಟ್ಟಿಯಾಗಲು ಪ್ರಾರಂಭಿಸಿದರೆ, ಇದರರ್ಥ ನೀವು ಗರ್ಭಿಣಿಯಾಗಿದ್ದೀರಿ ಮತ್ತು ಸಕ್ಕರೆ ಬೇಗ ಕರಗಿದರೆ, ನೀವು ಗರ್ಭಿಣಿಯಲ್ಲ ಎಂದರ್ಥ. ಮೂತ್ರದಿಂದ ಬಿಡುಗಡೆಯಾಗುವ ಎಚ್‌ಸಿಜಿ ಹಾರ್ಮೋನ್ ಸಕ್ಕರೆಯನ್ನು ಸರಿಯಾಗಿ ಕರಗಲು ಬಿಡುವುದಿಲ್ಲ.
ಟೂತ್ ಪೇಸ್ಟ್ ಗರ್ಭಧಾರಣೆಯ ಪರೀಕ್ಷೆ:
ನೀವು ಯಾವುದೇ ಟೂತ್‌ಪೇಸ್ಟ್ ಅನ್ನು ಬಳಸಬಹುದು ಆದರೆ ಅದು ಬಿಳಿ ಬಣ್ಣದಲ್ಲಿರಬೇಕು ಅಷ್ಟೇ. ಒಂದು ಕಂಟೇನರ್‌ನಲ್ಲಿ ಎರಡು ಚಮಚ ಬಿಳಿ ಟೂತ್ ಪೇಸ್ಟ್ ತೆಗೆದುಕೊಂಡು ಅದಕ್ಕೆ ಮೂತ್ರ ಸೇರಿಸಿ. ಟೂತ್‌ಪೇಸ್ಟ್ ಅದರ ಬಣ್ಣವನ್ನು ಬದಲಾಯಿಸಿ, ನೊರೆ ಉಂಟುಮಾಡಿದರೆ ನೀವು ಗರ್ಭಿಣಿಯಾಗಿದ್ದೀರಿ ಎಂದರ್ಥ.
ವಿನೆಗರ್ ಗರ್ಭಧಾರಣೆಯ ಪರೀಕ್ಷೆ:
ಹೌದು, ವಿನೆಗರ್ ಸಹ ನಿಮ್ಮ ಗರ್ಭಧಾರಣೆಯನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ನೆನಪಿಡಿ, ಈ ನಿರ್ದಿಷ್ಟ ಪರೀಕ್ಷೆಗೆ ನಿಮಗೆ ಬಿಳಿ ವಿನೆಗರ್ ಅಗತ್ಯವಿದೆ. ಪ್ಲಾಸ್ಟಿಕ್ ಪಾತ್ರೆಯಲ್ಲಿ ಎರಡು ಚಮಚ ಬಿಳಿಯ ವಿನೆಗರ್ ತೆಗೆದುಕೊಳ್ಳಿ. ಇದಕ್ಕೆ ನಿಮ್ಮ ಮೂತ್ರವನ್ನು ಸೇರಿಸಿ ಮತ್ತು ಸರಿಯಾಗಿ ಮಿಶ್ರಣ ಮಾಡಿ. ವಿನೆಗರ್ ಅದರ ಬಣ್ಣವನ್ನು ಬದಲಾಯಿಸಿ ಗುಳ್ಳೆಗಳನ್ನು ರೂಪಿಸಿದರೆ, ನೀವು ಗರ್ಭಿಣಿಯಾಗಿದ್ದೀರಿ ಎಂದರ್ಥ. ಯಾವುದೇ ಬದಲಾವಣೆಯಿಲ್ಲದಿದ್ದರೆ ನೀವು ಗರ್ಭಿಣಿಯಲ್ಲ ಎಂದರ್ಥ.
ಉಪ್ಪು ಗರ್ಭಧಾರಣೆಯ ಪರೀಕ್ಷೆ:
ಇದು ಮೇಲಿನ ಸಕ್ಕರೆ ಪರೀಕ್ಷೆಯಂತೆಯೇ ಕಾರ್ಯನಿರ್ವಹಿಸುತ್ತದೆ. ಸಕ್ಕರೆಗೆ ಬದಲಾಗಿ ಉಪ್ಪನ್ನು ಬಳಸಲಾಗುತ್ತದೆ. ಅದೇ ಹಂತಗಳನ್ನು ಅನುಸರಿಸಬೇಕು. ಮೂತ್ರ ಮತ್ತು ಉಪ್ಪನ್ನು ಸಮಾನ ಭಾಗಗಳಲ್ಲಿ ಬೆರೆಸಬೇಕು. ಒಂದು ನಿಮಿಷ ಕಾಯಿರಿ. ಉಪ್ಪು ಒಂದು ಕೆನೆಯ ರೀತಿಯ ಬಿಳಿ ಪದರವನ್ನು ರೂಪಿಸಿದರೆ, ಇದರರ್ಥ ಪಾಸಿಟಿವ್ ಎಂದು. ಅಂತಹ ಯಾವುದೇ ಪರಿಣಾಮಗಳು ಕಂಡುಬರದಿದ್ದರೆ, ನೀವು ಗರ್ಭಿಣಿಯಲ್ಲ ಎಂದರ್ಥ. ನೆನಪಿಡಿ ಇದು ಸಾಂಪ್ರದಾಯಿಕ ವಿಧಾನವಾಗಿದ್ದು, ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.
ಸೋಪ್ ಗರ್ಭಧಾರಣೆಯ ಪರೀಕ್ಷೆ:
ಈ ಪರೀಕ್ಷೆಯನ್ನು ಮಾಡಲು ನೀವು ಯಾವುದೇ ರೀತಿಯ ಸ್ನಾನದ ಸಾಬೂನು ಬಳಸಬಹುದು. ಒಂದು ಸಣ್ಣ ತುಂಡು ಸೋಪ್ ತೆಗೆದುಕೊಂಡು ಅದರ ಮೇಲೆ ನಿಮ್ಮ ಮೂತ್ರವನ್ನು ಹಾಕಿ. ಅದು ಗುಳ್ಳೆಗಳನ್ನು ರೂಪಿಸಿದರೆ, ಇದರರ್ಥ ನೀವು ಗರ್ಭಿಣಿಯಾಗಿದ್ದೀರಿ ಮತ್ತು ಇಲ್ಲದಿದ್ದರೆ, ನೀವು ಗರ್ಭಿಣಿಯಲ್ಲ.
ಅಡುಗೆ ಸೋಡಾ ಗರ್ಭಧಾರಣೆಯ ಪರೀಕ್ಷೆ:
ಎರಡು ಚಮಚ ಅಡುಗೆ ಸೋಡಾ ತೆಗೆದುಕೊಂಡು ಅದಕ್ಕೆ ಎರಡು ಚಮಚ ಮೂತ್ರ ಸೇರಿಸಿ. ಈಗ ಪ್ರತಿಕ್ರಿಯೆಯನ್ನು ಗಮನಿಸಿ. ಸೋಡಾ ಬಾಟಲಿಯನ್ನು ತೆಗೆದಾಗ ನೀವು ನೋಡುವಂತಹ ಗುಳ್ಳೆಗಳನ್ನು ನೋಡಿದರೆ, ನೀವು ಗರ್ಭಿಣಿಯಾಗಿದ್ದೀರಿ ಎಂದರ್ಥ.
ವೈನ್ ಗರ್ಭಧಾರಣೆಯ ಪರೀಕ್ಷೆ:
ಇದು ಸ್ವಲ್ಪ ದುಬಾರಿ ಮತ್ತು ಸಮಯ ತೆಗೆದುಕೊಳ್ಳುತ್ತದೆ ಆದರೆ ಮನೆಯಲ್ಲಿ ಗರ್ಭಧಾರಣೆಯನ್ನು ಪರೀಕ್ಷಿಸಲು ವೈನ್ ಪರೀಕ್ಷೆಯು ಮತ್ತೊಂದು ವಿಶ್ವಾಸಾರ್ಹ ವಿಧಾನವಾಗಿದೆ. ಅರ್ಧ ಕಪ್ ವೈನ್ ತೆಗೆದುಕೊಂಡು ಅದಕ್ಕೆ ಸಮಾನ ಪ್ರಮಾಣದ ಮೂತ್ರವನ್ನು ಸೇರಿಸಿ. ಇದನ್ನು ಚೆನ್ನಾಗಿ ಬೆರೆಸಿ ಮತ್ತು ಪ್ರತಿಕ್ರಿಯೆಯನ್ನು ವೀಕ್ಷಿಸಲು 10 ನಿಮಿಷಗಳ ಕಾಲ ಕಾಯಿರಿ. ವೈನ್‌ನ ಮೂಲ ಬಣ್ಣ ಬದಲಾದರೆ, ನೀವು ಗರ್ಭಿಣಿಯಾಗಿದ್ದೀರಿ ಎಂದರ್ಥ.
ಸಲಹೆ:
ಮನೆಯಲ್ಲಿ ತಯಾರಿಸಿದ ಪರೀಕ್ಷೆಗಳನ್ನು ತಲೆಮಾರುಗಳಿಂದ ಬಳಸಲಾಗಿದ್ದರೂ ಮತ್ತು ಅವುಗಳ ಬಳಕೆಯ ಹಿಂದೆ ಸಾಕಷ್ಟು ಇತಿಹಾಸವಿದ್ದರೂ, ಈ ಯಾವುದೇ ಪರೀಕ್ಷೆಗಳು 100% ಸಕಾರಾತ್ಮಕ ಫಲಿತಾಂಶವನ್ನು ನೀಡಲು ಕೆಲಸ ಮಾಡುತ್ತವೆ ಎಂಬುದಕ್ಕೆ ಯಾವುದೇ ನಿರ್ಣಾಯಕ ಪುರಾವೆ ಅಥವಾ ವೈಜ್ಞಾನಿಕ ಪುರಾವೆಗಳಿಲ್ಲ. ಮೇಲಿನ ಪರೀಕ್ಷೆಗಳಲ್ಲಿ ಒಂದನ್ನು ನೀವು ಪ್ರಯತ್ನಿಸಿದರೆ ಮತ್ತು ಅದು ಪಾಸಿಟಿವ್ ತೋರಿಸಿದ್ದರೆ, ಖಚಿತ ಮಾಡಿಕೊಳ್ಳಲು ಇನ್ನೊಂದು ವಿಧಾನವನ್ನು ಪ್ರಯತ್ನಿಸಿ. ಎರಡನೆಯ ವಿಧಾನವು ಸಕಾರಾತ್ಮಕ ಫಲಿತಾಂಶವನ್ನು ನೀಡಿದರೆ, ಸಾಧ್ಯವಾದಷ್ಟು ಬೇಗ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
(Kannada Copy of Boldsky Kannada)
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm