ಬ್ರೇಕಿಂಗ್ ನ್ಯೂಸ್
26-07-21 01:18 pm Reena TK, BoldSky Kannada ಡಾಕ್ಟರ್ಸ್ ನೋಟ್
ಮಳೆಗಾಲ ಬಂತೆಂದರೆ ಹೆಚ್ಚಿನವರು ಒಂದೆರಡು ಕೆಜಿ ತೂಕ ಹೆಚ್ಚಾಗುತ್ತಾರೆ, ಅದಕ್ಕೆ ಕಾರಣ ಮಳೆಗಾಲದಲ್ಲಿ ನಾವು ಸೇವಿಸುವ ಆಹಾರ ಹಾಗೂ ನಮ್ಮ ಜೀವನಶೈಲಿಯಾಗಿರುತ್ತದೆ. ಹೊರಗಡೆ ಧೋ... ಅಂತ ಮಳೆ ಸುರಿಯುವಾಗ ಯಾರೂ ಹೊರಗಡೆ ಓಡಾಡಲು ಬಯಸುವುದಿಲ್ಲ, ಅವಶ್ಯಕತೆ ಇದ್ದಾಗ ಮಾತ್ರ ಹೊರಗಡೆ ಹೋಗುತ್ತಾರೆ. ಇನ್ನು ವಾಕಿಂಗ್, ಜಾಗಿಂಗ್ ಇವೆಲ್ಲಾ ಸ್ಟಾಪ್ ಆಗುವುದು.
ಮನೆಯಲ್ಲೇ ಥ್ರೆಡ್ ಮಿಲ್ ಇದ್ದವರಲ್ಲಿ ಕೆಲವರಷ್ಟೇ ವ್ಯಾಯಾಮ ಮಾಡುತ್ತಾರೆ, ಏಕೆಂದರೆ ಮಳೆಗಾಲದಲ್ಲಿ ಬೆಚ್ಚಗೆ ಮಲಗುವುದು ಅಥವಾ ಒಂದು ಕಡೆ ಕೂತು ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತೇವೆ. ಇನ್ನು ಆಹಾರ ವಿಷಯಕ್ಕೆ ಬರುವುದಾದರೆ ಎಣ್ಣೆಯಲ್ಲಿ ಕರಿದ ಬಜ್ಜಿ, ವಡೆ ಈ ರೀತಿಯ ಆಹಾರಗಳೇ ಹೆಚ್ಚು ಇಷ್ಟವಾಗುವುದು. ಅಲ್ಲದೆ ಆಷಾಢ ಮಾಸದಲ್ಲಿ ಅನೇಕ ವಿಶೇಷ ತಿನಿಸುಗಳನ್ನು ತಯಾರಿಸಲಾಗುವುದು. ಈ ಸಮಯದಲ್ಲಿ ನಾನ್‌ವೆಜ್ ತಿನ್ನುವವರಾದರೆ ತುಸು ಅಧಿಕವೇ ಬಳಸುತ್ತಾರೆ, ಇವೆಲ್ಲದರ ಪರಿಣಾಮ ಮೈ ತೂಕ ಹೆಚ್ಚಾಗುವುದು.
ಮಳೆಗಾಲದಲ್ಲಿಯೂ ನಿಮ್ಮ ಫಿಟ್ನೆಸ್ ಕಾಪಾಡಲು ಬಯಸುವುದಾದರೆ ಈ ಕೆಲವೊಂದು ಟಿಪ್ಸ್ ಪಾಲಿಸಿ:
* ಜೀರ್ಣಕ್ರಿಯೆಗೆ ಸುಲಭವಾಗುವ ಆಹಾರ ಸೇವಿಸಿ ಅಲ್ಲದೆ ಸ್ವಲ್ಪ-ಸ್ವಲ್ಪ ಸೇವಿಸಿಮಳೆಗಾಲದಲ್ಲಿ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗುವುದು, ಆದ್ದರಿಂದ ಜೀರ್ಣಕ್ರಿಯೆಗೆ ಸುಲಭವಾಗುವ ಆಹಾರ ತಯಾರಿಸಿ ಸೇವಿಸಬೇಕು. ಈ ಸಮಯದಲ್ಲಿ ಹಸಿ ತರಕಾರಿಗಳನ್ನು ಸೇವಿಸಬೇಡಿ. ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಿ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಕಡಿಮೆ ತಿನ್ನಿ. ಅಲ್ಲದೆ ಸ್ವಲ್ಪ ದೈಹಿಕ ಚಟುವಟಿಕೆ ಇರಲಿ. ಒಂದೇ ಕಡೆ ಕೂರುವುದಕ್ಕಿಂತ ಮೆಯೊಳಗೇ ಸ್ವಲ್ಪ ಓಡಾಡಿ. ಆಹಾರ ಸೇವಿಸಿದ ಬಳಿಕ ಒಂದು 10 ನಿಮಿಷ ಮನೆಯಲ್ಲಿ ಅಥವಾ ವರಾಂಡದಲ್ಲಿ ನಡೆಯಿರಿ.
ಇನ್ನು ಆಹಾರವನ್ನು 3 ಹೊತ್ತು ತಿನ್ನುವ ಬದಲಿಗೆ ಅದೇ ಆಹಾರವನ್ನು 6-7 ಬಾರಿ ಸೇವಿಸಿ, ಅಂದ್ರೆ ನೀವು 3 ದೋಸೆ ತಿನ್ನುವುದಾದರೆ ಬೆಳಗ್ಗೆ 2 ತಿಂದು 10 ಗಂಟೆ 1 ತಿನ್ನಿ.. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ, ಮೈ ತೂಕವೂ ಹೆಚ್ಚುವುದಿಲ್ಲ.
ಸಾಕಷ್ಟು ನೀರು ಕುಡಿಯಿರಿ
ಮಳೆಗಾಲದಲ್ಲಿ ಬೇಸಿಗೆಯಷ್ಟು ದಾಹವಾಗುವುದಿಲ್ಲ, ಹಾಗಂತ ನೀರು ಕುಡಿಯುವುದನ್ನು ಕಡಿಮೆ ಮಾಡಬೇಡಿ. ದಿನಕ್ಕೆ 8 ಲೋಟ ಬಿಸಿ ನೀರು ಕುಡಿಯಿರಿ, ಊಟಕ್ಕೆ ಮುನ್ನ ಹಾಗೂ ಊಟವಾದ ಬಳಿಕ ಒಮದು ಲೋಟ ಬಿಸಿ ನೀರು ಕುಡಿಯುವ ಅಭ್ಯಾಸ ತೂಕ ಇಳಿಕೆಗೆ ಸಹಾಯ ಮಾಡುವುದು.
ಸೂಪ್ ಮಾಡಿ ಕುಡಿಯಿರಿ
ತಣ್ಣನೆಯ ಆಹಾರಗಳು ಹಾಗೂ ಪಾನೀಯಗಳನ್ನು ಈ ಸಮಯದಲ್ಲಿ ಸೇವಿಸಬೇಡಿ. ಸೂಪ್ ಮಾಡಿ ಕುಡಿಯಿರಿ. ಇದು ಜೀರ್ಣಕ್ರಿಯೆಗೂ ಒಳ್ಳೆಯದು ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುವುದು.
ಶುಂಠಿ ಟೀ ಕುಡಿಯಿರಿ
ಮಳೆಗಾಲದಲ್ಲಿ ಶುಂಠಿ ಟೀ ಕುಡಿಯುವುದರಿಂದ ಶೀತ, ಕೆಮ್ಮು ಮುಂತಾದ ಸಮಸ್ಯೆ ಕಾಡುವುದಿಲ್ಲ ಅಲ್ಲದೆ ತೂಕ ಇಳಿಕೆಗೆ ಕೂಡ ಸಹಕಾರಿಯಾಗಿದೆ. ಟೀಗೆ ಹೆಚ್ಚು ಸಕ್ಕರೆ ಬಳಸಬೇಡಿ.
ಮನೆಯೊಳಗೇ ಮಾಡಬಹುದಾದ ವ್ಯಾಯಾಮ ಮಾಡಿ
ಯೋಗ ಮಾಡಲು ನಿಮಗೆ ಹೆಚ್ಚು ಸ್ಥಳ ಬೇಕಾಗಿಲ್ಲ, ಇದರ ಜೊತೆಗೆ ಫುಶ್ ಅಪ್, ಸ್ಕ್ವ್ಯಾಟ್ , ಬಸ್ಕಿ, ಸೈಕ್ಲಿಂಗ್ ಮುಂತಾದ ವ್ಯಾಯಾಮ ಮಾಡಬಹುದು ಇವೆಲ್ಲಾ ನಿಮ್ಮ ಮೈಯನ್ನು ಫಿಟ್ ಆಗಿಡಲು ಸಹಕಾರಿಯಾಗಿದೆ.
ಸರಿಯಾದ ಸಮಯಕ್ಕೆ ನಿದ್ದೆ
ಮಾಡಿ ನಿದ್ದೆ ಅಧಿಕ ಮಾಡಿದರೂ ಕಷ್ಟ, ಕಡಿಮೆ ನಿದ್ದೆ ಮಾಡಿದರೂ ಕಷ್ಟ. ದಿನದಲ್ಲಿ 8 ಗಂಟೆ ನಿದ್ದೆ ಮಾಡಿ. ಇನ್ನು ಮಧ್ಯಾಹ್ನ ಹೊತ್ತು ಮಲಗುವ ಅಭ್ಯಾಸವಿದ್ದರೆ ಅದನ್ನು ಬಿಡಲು ಪ್ರಯತ್ನಿಸಿ. ಮಧ್ಯಾಹ್ನ 10 ನಿಮಿಷ ಚಿಕ್ಕ ನಿದ್ದೆ ಮಾಡುವುದರಿಂದ ತೊಂದರೆಯಿಲ್ಲ, ಆದರೆ ಗಂಟೆಗಟ್ಟಲೆ ನಿದ್ದೆ ಮಾಡುವ ಅಭ್ಯಾಸವಿದ್ದರೆ ಮೈ ತೂಕ ಹೆಚ್ಚುವುದು.
(Kannada Copy of Boldsky Kannada)
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm