ಬಡವರ ಬಾದಾಮಿ ಕಡಲೆಕಾಯಿಯನ್ನು ನೆನೆಸಿ ಸೇವಿಸುವುದರಿಂದ ಅದರ ಪೋಷಕಾಂಶ ದುಪ್ಪಟ್ಟಾಗುವುದು!

14-08-21 01:29 pm       Shreeraksha, Boldsky   ಡಾಕ್ಟರ್ಸ್ ನೋಟ್

ನೆನೆಸಿದ ಬಾದಾಮಿಯ ಪ್ರಯೋಜನಗಳು ನಮಗೆಲ್ಲರಿಗೂ ತಿಳಿದಿದೆ. ಆದರೆ ನೆನೆಸಿದ ಕಡಲೆಕಾಯಿಯು, ಅದರಷ್ಟೇ ಸಮಾನ ಪ್ರಯೋಜನಗಳನ್ನು ಹೊಂದಿದೆ

ನೆನೆಸಿದ ಬಾದಾಮಿಯ ಪ್ರಯೋಜನಗಳು ನಮಗೆಲ್ಲರಿಗೂ ತಿಳಿದಿದೆ. ಆದರೆ ನೆನೆಸಿದ ಕಡಲೆಕಾಯಿಯು, ಅದರಷ್ಟೇ ಸಮಾನ ಪ್ರಯೋಜನಗಳನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ? ಬಡವರ ಬಾದಾಮಿ ಎಂದು ಕರೆಯಲಾಗುವ ಕಡಲೆಕಾಯಿಗಳು ಕಡಿಮೆ ವೆಚ್ಚದ ಪೌಷ್ಟಿಕ ಆಹಾರವಾಗಿದೆ. ಇಂತಹ ಕಡಲೆಕಾಯಿಯಲ್ಲಿ ಇರುವ ಪೋಷಕಾಂಶಗಳಾವುವು? ಇದರಿಂದ ಸಿಗುವ ವಿವಿಧ ಆರೋಗ್ಯ ಪ್ರಯೋಜನಗಳಾವುವು ಎಂಬುದನ್ನು ನೋಡಿಕೊಂಡು ಬರೋಣ.

ನೆನೆಸಿದ ಕಡಲೆಕಾಯಿಯ ಪೌಷ್ಟಿಕಾಂಶಗಳು:

ಆರೋಗ್ಯಕರ ಮೂಳೆಗಳು, ಚರ್ಮ ಮತ್ತು ಕೂದಲಿನ ಆರೋಗ್ಯಕರ ಕಾರ್ಯನಿರ್ವಹಣೆಗೆ ಇವು ಮುಖ್ಯವಾದ ಖನಿಜಾಂಶಗಳಾಗಿವೆ. ಮೆಡಿಕಲ್ ನ್ಯೂಸ್ ಟುಡೇಯಲ್ಲಿ ಪ್ರಕಟವಾದ ಲೇಖನದ ಪ್ರಕಾರ, 25.8 ಗ್ರಾಂ ಪ್ರೋಟೀನ್ ಹೊಂದಿರುವ 100 ಗ್ರಾಂ ಕಡಲೆಕಾಯಿಯನ್ನು ತಿನ್ನುವುದರಿಂದ ನಿಮ್ಮ ದೈನಂದಿನ ಪ್ರೋಟೀನ್ ಅವಶ್ಯಕತೆಯ ಅರ್ಧದಷ್ಟನ್ನು ಪಡೆಯಬಹುದು.



ನೆನೆಸಿದ ಕಡಲೆಕಾಯಿಯ ಪ್ರಯೋಜನಗಳು:

1. ನೆನೆಸಿದ ಕಡಲೆಕಾಯಿಯ ಸಿಪ್ಪೆಯು ರಕ್ತ ಪರಿಚಲನೆಯನ್ನು ನಿಯಂತ್ರಿಸಿ, ನಿಮ್ಮ ಹೃದಯವನ್ನು ರಕ್ಷಿಸುತ್ತದೆ.

2. ನೆನೆಸಿದ ಕಡಲೆಕಾಯಿ ಸ್ನಾಯುವಿನ ಶಕ್ತಿ ಕ್ಷೀಣಿಸುವುದನ್ನು ತಡೆಯುತ್ತದೆ ಜೊತೆಗೆ ನಿಮ್ಮ ಸ್ನಾಯುಗಳನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ.

3. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಡಲೆಕಾಯಿಯನ್ನು ತಿನ್ನುವುದರಿಂದ ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

4. ನೆನೆಸಿದ ಕಡಲೆಕಾಯಿ ಬೆನ್ನು ನೋವು ಮತ್ತು ಕೀಲು ನೋವಿನಿಂದ ಪರಿಹಾರ ನೀಡುತ್ತದೆ. ಚಳಿಗಾಲದಲ್ಲಿ, ಕೀಲುಗಳಲ್ಲಿನ ಬಿಗಿತ ಮತ್ತು ನೋವನ್ನು ಎದುರಿಸಲು ನೆನೆಸಿದ ಕಡಲೆಕಾಯಿಯನ್ನು ಬೆಲ್ಲದೊಂದಿಗೆ ಸೇವಿಸಿ.

5. ಬಾದಾಮಿಯಂತೆಯೇ ನೆನೆಸಿದ ಕಡಲೆಕಾಯಿ ನಿಮ್ಮ ನೆನಪಿನ ಶಕ್ತಿ ಮತ್ತು ದೃಷ್ಟಿಯನ್ನು ಬಲವಾಗಿಡಲು ಸಹಾಯ ಮಾಡುವುದು.

6. ಕಡಲೆಕಾಯಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು, ಸತು, ಕ್ಯಾಲ್ಸಿಯಂ ಮತ್ತು ಕಬ್ಬಿಣವು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಮತ್ತು ಅವುಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.

7. ಕಡಲೆಕಾಯಿಯಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಚರ್ಮಕ್ಕೆ ಒಳ್ಳೆಯದು. ನೆನೆಸಿದ ಕಡಲೆಕಾಯಿಯನ್ನು ನಿಯಮಿತವಾಗಿ ತಿನ್ನುವುದರಿಂದ ನಿಮ್ಮ ಚರ್ಮಕ್ಕೆ ಸುಂದರವಾದ ಹೊಳಪು ಸಿಗುತ್ತದೆ.



ನೆನೆಸಿದ ಕಡಲೆಕಾಯಿ ತಿನ್ನಲು ಉತ್ತಮ ಸಮಯ:

ಆಹಾರ ತಜ್ಞರ ಪ್ರಕಾರ, ನೆನೆಸಿದ ಕಡಲೆಕಾಯಿಯನ್ನು ಸೇವಿಸಲು ಉತ್ತಮ ಸಮಯವೆಂದರೆ ಬೆಳಗಿನ ಉಪಾಹಾರಕ್ಕೆ ಮೊದಲು. ನೆನಪಿಡಿ, ಕಡಲೆಕಾಯಿಯಲ್ಲಿ ಕ್ಯಾಲೋರಿ ತುಂಬಿರುವುದರಿಂದ ಅವುಗಳನ್ನು ಅತಿಯಾಗಿ ಸೇವಿಸಬೇಡಿ. ನೆನೆಸಿದ ಕಡಲೆಕಾಯಿ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಮಿತವಾಗಿ ಸೇವಿಸುವುದು ಮುಖ್ಯವಾಗಿದೆ.



ಕಡಲೆಕಾಯಿ ಇಷ್ಟವಿಲ್ಲದಿದ್ದರೆ ಹೀಗೆ ಬಳಸಿ:

ನಿಮಗೆ ನೆನೆಸಿದ ಕಡಲೆಕಾಯಿ ತಿನ್ನಲು ಇಷ್ಟವಿಲ್ಲದಿದ್ದರೆ, ಕಡಲೆಕಾಯಿ ಇರುವ ಈ ರುಚಿಕರವಾದ ಚಾಟ್ ಅನ್ನು ಪ್ರಯತ್ನಿಸಿ. ಬೇಕಾಗುವ ಪದಾರ್ಥಗಳು:

1 ಕಪ್ ನೆನೆಸಿದ ಕಡಲೆಕಾಯಿ

5 ಕಪ್ ನೀರು ಅರಿಶಿನ, ಮೆಣಸಿನ ಪುಡಿ, ಆಮ್ಚೂರ್ , ಚಾಟ್ ಮಸಾಲಾ, ಉಪ್ಪು ಇತ್ಯಾದಿ ಮಸಾಲೆಗಳು

¼ ಕಪ್ ನುಣ್ಣಗೆ ಕತ್ತರಿಸಿದ ಈರುಳ್ಳಿ

2 ನುಣ್ಣಗೆ ಕತ್ತರಿಸಿದ ಟೊಮ್ಯಾಟೊ

3 ಚಮಚ ದಾಳಿಂಬೆ (ಐಚ್ಛಿಕ)

ಅಲಂಕಾರಕ್ಕಾಗಿ ತಾಜಾ ಕೊತ್ತಂಬರಿ ಸೊಪ್ಪು

ತಯಾರಿಸುವುದು ವಿಧಾನ:

ನೆನಸಿದ ಕಡಲೆಕಾಯಿಯನ್ನು ಅರಿಶಿನ, ಉಪ್ಪು ಸೇರಿಸಿ 2-3 ಬೇಯಿಸಿ. ಅದರ ನೀರನ್ನು ತೆಗದು ಕಡಲೆಕಾಯಿಯನ್ನು ಒಂದು ಬಟ್ಟಲಿಗೆ ಹಾಕಿ. ಅದಕ್ಕೆ ಉಳಿದ ಎಲ್ಲಾ ಪದಾರ್ಥಗಳಾದ ಈರುಳ್ಳಿ ಮತ್ತು ಟೊಮ್ಯಾಟೊ, ಚಾಟ್ ಮಸಾಲಾ ಮತ್ತು ದಾಳಿಂಬೆಯನ್ನು ಹಾಕಿ, ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಸವಿಯಲು ಕೊಡಿ.

(Kannada Copy of Boldsky Kannada)