ಬ್ರೇಕಿಂಗ್ ನ್ಯೂಸ್
17-08-21 02:30 pm Shreeraksha, Boldsky ಡಾಕ್ಟರ್ಸ್ ನೋಟ್
ನಾವು ದಿನನಿತ್ಯ ಜೀವನದಲ್ಲಿ ಸೇವಿಸುವ ಅನೇಕ ಆಹಾರಗಳ ಬಗ್ಗೆ ನಮಗೆ ಗೊತ್ತೇ ಇರುವುದಿಲ್ಲ. ಆದರೂ ಅವುಗಳನ್ನು ಇಷ್ಟಪಟ್ಟು ಸೇವಿಸುತ್ತೇವೆ, ನಮಗೇ ತಿಳಿಯದಂತೆ ಅವುಗಳಿಂದ ಆರೋಗ್ಯ ಪ್ರಯೋಜನ ಪಡೆದಿರುತ್ತೇವೆ. ಇದೇ ಆಹಾರಗಳ ಸಾಲಿನಲ್ಲಿ ನಿಲ್ಲುತ್ತೆ ಕಬ್ಬಿನ ರಸ ಅಥವಾ ಜ್ಯೂಸ್.
ಬ್ರೆಜಿಲ್ ನಂತರ ಇಡೀ ವಿಶ್ವದಲ್ಲೇ ಅತೀ ಹೆಚ್ಚು ಕಬ್ಬು ಬೆಳೆಯುವ ರಾಷ್ಟ್ರವಾಗಿರುವ ಭಾರತದಲ್ಲಿ, ಕಬ್ಬು ಜ್ಯೂಸ್ ಕುಡಿಯದವರು ಬಹುಶಃ ಯಾರೂ ಇರಲಿಕ್ಕಿಲ್ಲ. ಏಕೆಂದರೆ, ಕಬ್ಬಿನ ಜಲ್ಲೆಯಿಂದ ಬಂದ ಕಬ್ಬಿನ ರಸ ನೋಡಿದಾಗ ಕುಡಿಯದೇ ಇರಲು ಯಾರಿಗೂ ಮನಸ್ಸಾಗುವುದಿಲ್ಲ. ತನ್ನ ರುಚಿಯಿಂದಲೇ ಎಲ್ಲರನ್ನು ಸೆಳೆಯುವ ಈ ಕಬ್ಬಿನ ರಸ ಅಥವಾ ಕಬ್ಬಿನ ಜ್ಯೂಸ್ ನಿಂದ ಕ್ಯಾನ್ಸರ್ ನಿಂದ ಹಿಡಿದು, ಮೊಡವೆ ನಿವಾರಿಸುವಂತ ಶಕ್ತಿಯಿದೆ ಎಂದು ತಿಳಿದಿದೆಯಾ? ಹೌದು, ಕಬ್ಬಿನ ರಸದಿಂದ ಇಂತಹ ಅಗಾಧ ಆರೋಗ್ಯ ಲಾಭಗಳಿವೆ.
ಕಬ್ಬಿನ ರಸದ ಪ್ರಯೋಜನಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಕಬ್ಬಿನ ರಸದಲ್ಲಿರುವ ಪೋಷಕಾಂಶಗಳು:
ಕಬ್ಬಿನ ರಸದಲ್ಲಿ ಫೈಬರ್ ಮತ್ತು ಪ್ರೋಟೀನ್ ಅಗಾಧ ಪ್ರಮಾಣದಲ್ಲಿದ್ದು, ಸ್ವಲ್ಪ ಪ್ರಮಾಣದ ಕೊಲೆಸ್ಟ್ರಾಲ್ ಇದೆ. ಹೆಲ್ತಿಫೈ ನಡೆಸಿದ ಅಧ್ಯಯನದ ಪ್ರಕಾರ, ಯಾವುದೇ ಸೇರ್ಪಡೆಗಳಿಲ್ಲದ 240ml ಕಬ್ಬಿನ ರಸದಲ್ಲಿ 250 ಕ್ಯಾಲೋರಿಗಳು ಮತ್ತು 30ಗ್ರಾ ನೈಸರ್ಗಿಕ ಸಕ್ಕರೆ ಇರುತ್ತದೆ. ಇದು ಯಾವುದೇ ಭಯವಿಲ್ಲದೇ ಸೇವಿಸಬಹುದಾದ ಆರೋಗ್ಯಕರ ಮತ್ತು ಅತ್ಯಂತ ಪೌಷ್ಟಿಕ ಪಾನೀಯವಾಗಿದೆ.
ತಕ್ಷಣದ ಶಕ್ತಿಯ ಮೂಲ:
ಕಬ್ಬು ತಕ್ಷಣದ ಶಕ್ತಿಯ ಮೂಲವಾಗಿದೆ. ನೀವು ತುಂಬಾ ಸುಸ್ತಾಗಿದ್ದರೆ, ಒಂದು ಲೋಟ ಕಬ್ಬಿನ ಜ್ಯೂಸ್ ಕುಡಿದರೆ ಸಾಖು, ನಿಮ್ಮ ಶಕ್ತಿ ಪುನಃವರ್ಧಿಸುತ್ತದೆ, ಸಾಕಷ್ಟು ಉತ್ಸಾಹ ಬರುತ್ತದೆ. ನಿಮ್ಮ ದೇಹಕ್ಕೆ ಚೈತನ್ಯ ನೀಡುವುದು ಮಾತ್ರವಲ್ಲದೇ, ಬಿಸಿಲಿನ ದಿನಗಳಲ್ಲಿ ಆಗಾಗ ಬರುವ ನಿರ್ಜಲೀಕರಣದಿಂದ ನಿಮ್ಮನ್ನು ರಕ್ಷಿಸುತ್ತದೆ. ದೇಹದಿಂದ ಸುಲಭವಾಗಿ ಹೀರಲ್ಪಡುವ ಇದು, ಯಕೃತ್ತಿನ ಕಾರ್ಯವನ್ನು ಹೆಚ್ಚಿಸುತ್ತದೆ ಜೊತೆಗೆ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಬ್ಬಿನ ರಸವು ಪೌಷ್ಟಿಕಾಂಶಗಳನ್ನು ಪಡೆಯಲು ಇರುವ ಅತ್ಯಂತ ಆರೋಗ್ಯಕರ ಮತ್ತು ನೈಸರ್ಗಿಕ ವಿಧಾನವಾಗಿದೆ. ಕಾಮಾಲೆಯಂತಹ ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಅತ್ಯುತ್ತಮ ಪರಿಹಾರವಾಗಿದ್ದು, ಕಬ್ಬಿನ ರಸವು ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಕಡಿಮೆ ಕೊಲೆಸ್ಟ್ರಾಲ್ ಇದ್ದು, ಹೃದಯದ ಆರೋಗ್ಯಕ್ಕೂ ಒಳ್ಳೆಯದು.
ಕ್ಯಾನ್ಸರ್ ವಿರೋಧಿ:
ಕಬ್ಬಿನ ರಸವು ಕ್ಯಾನ್ಸರ್ ವಿರುದ್ಧ ಕಠಿಣ ಹೋರಾಟವನ್ನು ಮಾಡಲು ಸಹಾಯ ಮಾಡುತ್ತದೆ. ಇದು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಮ್ಯಾಂಗನೀಸ್ ನ ಸಮೃದ್ಧ ಮೂಲವಾಗಿದೆ. ಇವುಗಳ ಸಹಾಯದಿಂದ, ದೇಹವು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಬಹುದು. ವ್ಯಕ್ತಿಯು ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೆ ಕಬ್ಬಿನ ರಸ ಅವರಿಗೆ ವರದಾನವಾಗಬಹುದು. ಜೊತೆಗೆ ಇತರರಿಗೆ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ಈ ರಸ ಕಾಪಾಡುವುದು.
ಉತ್ತಮ ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ:
ಕಬ್ಬಿನ ರಸದಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ಹೊಟ್ಟೆಯ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಕಬ್ಬಿನ ರಸವನ್ನು ಸೇವಿಸಬಹುದು ಏಕೆಂದರೆ ಇದು ಜೀರ್ಣಕಾರಿ ರಸಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಹಲವಾರು ವಿಟಮಿನ್ ಮತ್ತು ಖನಿಜಗಳಿರುವುದರಿಂದ, ಕಬ್ಬಿನ ರಸವು ಹೊಟ್ಟೆಯ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಕಬ್ಬಿನ ರಸವನ್ನು ದುರ್ಬಲಗೊಳಿಸಿದ ರೂಪದಲ್ಲಿ ಸೇವಿಸಿದರೆ, ಲೈಂಗಿಕವಾಗಿ ಹರಡುವ ರೋಗಗಳು, ಮೂತ್ರಪಿಂಡದ ಕಲ್ಲುಗಳು, ಮೂತ್ರನಾಳದ ಸೋಂಕುಗಳು, ಪ್ರೊಸ್ಟಟೈಟಿಸ್ ಸೇರಿದಂತೆ ಇತರ ರೋಗಗಳಿಂದ ಉಂಟಾಗುವ ಸುಡುವ ಸಂವೇದನೆಯನ್ನು ನಿವಾರಿಸುವುದು.
ಬಾಯಿಯ ವಾಸನೆ ನಿವಾರಕ:
ಕಬ್ಬಿನ ರಸದಲ್ಲಿ ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಗಳು ತುಂಬಿವೆ. ತಾಜಾ ಕಬ್ಬನ್ನು ಜಗಿದು, ತಿನ್ನುವುದರಿಂದ ನಿಮ್ಮ ಹಲ್ಲಿನ ದಂತಕವಚ ಮತ್ತು ಹಲ್ಲುಗಳು ಬಲಗೊಳ್ಳುತ್ತವೆ., ಜೊತೆಗೆ ಹಲ್ಲು ಹುಳ ಹಿಡಿಯುವಿಕೆತ ಪ್ರಕ್ರಿಯೆ ನಿಧಾನವಾಗುವುದು. ಸಾಮಾನ್ಯವಾಗಿ, ಬಾಯಿಯ ದುರ್ವಾಸನೆಯು ಪೋಷಕಾಂಶಗಳ ಕೊರತೆಯಿಂದ ಉಂಟಾಗುತ್ತದೆ. ಆದ್ದರಿಂದ ಕಬ್ಬಿನ ರಸದಲ್ಲಿರುವ ಪೋಷಕಾಂಶಗಳು ಕೊರತೆಯನ್ನು ನಿವಾರಿಸಿ, ವಾಸನೆ ತಡೆಯುತ್ತವೆ.
ತ್ವಚೆಗೂ ಒಳ್ಳೆಯದು:
ಕಬ್ಬಿನ ರಸವು ಎಲ್ಲಾ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುವ ಅತ್ಯುತ್ತಮ ಮೂಲವಾಗಿದೆ. ಇದು ಗ್ಲೈಕೋಲಿಕ್, ಆಲ್ಫಾ-ಹೈಡ್ರಾಕ್ಸಿ (AHA) ನಂತಹ ಆಮ್ಲಗಳಲ್ಲಿ ಅಧಿಕವಾಗಿದ್ದು ಇದು ಕೋಶಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಕಬ್ಬಿನ ರಸ ಚರ್ಮವನ್ನು ಎಫ್ಫೋಲಿಯೇಟ್ ಮಾಡಲು ಮತ್ತು ಮೊಡವೆಗಳನ್ನು ಉಂಟುಮಾಡುವ ಸಾಧ್ಯತೆಗಳನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
(Kannada Copy of Boldsky Kannada)
15-04-25 12:51 pm
HK News Desk
Hubballi encounter, PSI Annapurna: ಹುಬ್ಬಳ್ಳಿ...
14-04-25 09:48 pm
Bangalore Suicide: ಅಪಾರ್ಟ್ಮೆಂಟ್ನ ನಾಲ್ಕನೇ ಮಹ...
14-04-25 07:51 pm
Kannada comedy actor Bank Janardhan, Death: ಕ...
14-04-25 03:09 pm
SIT, Probe, Dysp Kanakalakshmi: ಸಿಐಡಿ ಡಿವೈಎಸ್...
14-04-25 02:06 pm
14-04-25 11:25 pm
HK News Desk
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
Waqf clashes: ವಕ್ಫ್ ವಿರುದ್ಧ ಬೀದಿಗಿಳಿದ ಜನರು ;...
12-04-25 09:01 pm
Indian Mujahideen, Yasin Bhatkal: ಹೈದರಾಬಾದ್ ಬ...
10-04-25 09:10 pm
14-04-25 09:20 pm
Mangalore Correspondent
Drowning Ullal, Mangalore: ಉಳ್ಳಾಲದಲ್ಲಿ ಸಮುದ್ರ...
13-04-25 05:20 pm
ಮಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು ; ಪ್ರತ್ಯೇಕ...
13-04-25 01:27 pm
Siddaramaiah, caste census, Somanna: ಜಾತಿಗಣತಿ...
12-04-25 10:13 pm
Mangalore Kambala, Dk Shivakumar: ಮುಂದಿನ ವರ್ಷ...
12-04-25 09:43 pm
12-04-25 10:52 pm
Mangalore Correspondent
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm
Cyber Command Centre, Bangalore: ದೇಶದ ಮೊದಲ ಸೈ...
11-04-25 04:38 pm
Davanagere Murder, Suicide, Crime: ಪ್ರೀತಿಸಿ ಮ...
11-04-25 01:52 pm
Mangalore Auto Driver, Kunjathbail, Body, Cri...
11-04-25 11:42 am