ಬ್ರೇಕಿಂಗ್ ನ್ಯೂಸ್
18-08-21 01:29 pm Shreeraksha, Boldsky ಡಾಕ್ಟರ್ಸ್ ನೋಟ್
ಹೊಟ್ಟೆ ಉಬ್ಬಿಕೊಳ್ಳುವಿಕೆ, ಹೊಟ್ಟೆ ನೋವು, ಅಜೀರ್ಣದಂತಹ ಅನೇಕ ಹೊಟ್ಟೆಯ ಸಮಸ್ಯೆಗಳು ನಮ್ಮನ್ನು ಸಾಕಷ್ಟು ನರಳುವಂತೆ ಮಾಡುತ್ತದೆ. ಈ ಸಮಯದಲ್ಲಿ ಏನೂ ತಿನ್ನಲು ಮನಸ್ಸಾಗುವುದಿಲ್ಲ, ಹಾಗಂತ ಖಾಲಿ ಹೊಟ್ಟೆಯಲ್ಲಿ ಕುಳಿತರೆ, ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಆದ್ದರಿಂದ ಹೊಟ್ಟೆಗೆ ಸರಿಹೊಂದುವಂತಹ ಲಘು ಆಹಾರಗಳನ್ನು ಸೇವಿಸಬೇಕು. ಇದು ನಿಮ್ಮ ಹೊಟ್ಟೆಯ ಸಮಸ್ಯೆಯನ್ನು ಕೆಲಸಮಯದಲ್ಲಿ ಗುಣಪಡಿಸುತ್ತವೆ. ಅಂತಹ ಆಹಾರಗಳಾವುವು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಮೊಸರನ್ನ:
ಮೊಸರನ್ನವು ಹೊಟ್ಟೆಯ ನೋವಿಗೆ ಸೂಕ್ತವಾದ ಆಹಾರವಾಗಿದೆ, ಏಕೆಂದರೆ ಇದನ್ನು ಜೀರ್ಣಿಸಿಕೊಳ್ಳಲು ತುಂಬಾ ಸುಲಭ. ಇದರಲ್ಲಿನ ಫೈಬರ್ ಅಂಶವು ಲೂಸ್ ಮೋಷನ್ ನಂತಹ ಸಮಸ್ಯೆಯನ್ನು ಅಂದರೆ ಸಡಿಲವಾದ ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. ಇದಕ್ಕಾಗಿ ನೀವು ಸ್ವಲ್ಪ ಅನ್ನವನ್ನು ಮೊಸರಿನೊಂದಿಗೆ ಬೆರೆಸಿ. ಅದಕ್ಕೆ ಸ್ವಲ್ಪ ಕಪ್ಪು ಉಪ್ಪು ಮತ್ತು ಹುರಿದ ಜೀರಿಗೆ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ, ಸೇವಿಸಿ. ಮೊಸರನ್ನ ಟೇಸ್ಟಿ ಮಾತ್ರವಲ್ಲ ಖಾಲಿ ಹೊಟ್ಟೆಯಲ್ಲಿ ತಿನ್ನಲು ಸೂಕ್ತವಾದ ಆಹಾರವಾಗಿದೆ. ಮೊಸರು ಪ್ರೋಬಯಾಟಿಕ್‌ಗಳ ಸಮೃದ್ಧ ಮೂಲವಾಗಿದ್ದು, ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾದ ಸಮತೋಲನವನ್ನು ಪುನಃಸ್ಥಾಪಿಸುವುದು.
ಶುಂಠಿ ಚಹಾ:
ಹೊಟ್ಟೆಯ ಕಿರಿಕಿರಿಯು ಹೊಟ್ಟೆ ನೋವು, ವಾಕರಿಕೆ, ಸೆಳೆತ ಮತ್ತು ತಲೆನೋವುಗಳನ್ನು ತರಬಹುದು. ಆದ್ದರಿಂದ ಶುಂಠಿ ಚಹಾವನ್ನು ಸೇವಿಸುವುದರಿಂದ ಇಡೀ ದೇಹಕ್ಕೆ ಪರಿಹಾರ ನೀಡಬಹುದು. ಒಂದು ಲೋಟ ನೀರಿನ ಜೊತೆಗೆ, ತುರಿದ ಶುಂಠಿಯನ್ನು ಕುದಿಸಿ. ನಿಮ್ಮ ರುಚಿಗೆ ತಕ್ಕಂತೆ ನಿಂಬೆ ಅಥವಾ ಜೇನುತುಪ್ಪ ಸೇರಿಸಿ, ಸೋಸಿಕೊಳ್ಳಿ. ಶುಂಠಿ ಚಹಾವು ವಾಕರಿಕೆಯನ್ನು ತಕ್ಷಣವೇ ಕಡಿಮೆ ಮಾಡಿ, ಕಿರಿಕಿರಿಯುಂಟುಮಾಡುವ ಕರುಳನ್ನು ಸಹ ಗುಣಪಡಿಸಬಹುದು. ಶುಂಠಿಯು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಅದು ಹೊಟ್ಟೆಗೆ ಉತ್ತಮವಾಗಿದೆ.
ಬಾಳೆಹಣ್ಣು:
ಬಾಳೆಹಣ್ಣು ನೈಸರ್ಗಿಕ ಆಂಟಾಸಿಡ್ ಪರಿಣಾಮವನ್ನು ಹೊಂದಿದ್ದು, ಲೂಸ್ ಮೋಷನ್ ನ್ನು ಶಮನಗೊಳಿಸುತ್ತದೆ. ಬಾಳೆಹಣ್ಣು ಪೊಟ್ಯಾಸಿಯಮ್ ಭರಿತವಾಗಿರುವುದರಿಂದ, ಹೊಟ್ಟೆಯಲ್ಲಿ ಲೋಳೆಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹೊಟ್ಟೆ ಕಿರಿಕಿರಿಗೆ ಕಾರಣವಾಗುವ ಹೊಟ್ಟೆಯ ಒಳಪದರವನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಬಾಳೆಹಣ್ಣು ಕೂಡ ಒಂದು ತ್ವರಿತ ಶಕ್ತಿ ವರ್ಧಕವಾಗಿದ್ದು, ಲೂಸ್ ಮೋಷನ್ ನಿಂದ ಶಕ್ತಿಯು ಕಡಿಮೆಯಾಗಿದ್ದರೆ ಅದನ್ನು ಮರಳಿ ನೀಡುತ್ತದೆ.
ಕೊಂಬುಚ:
ನಿಮ್ಮ ಹೊಟ್ಟೆ ಸರಿಯಿಲ್ಲದಿದ್ದಾಗ ತಲೆತಿರುಗುವಿಕೆ ಅಥವಾ ವಾಕರಿಕೆ ಉಂಟಾದರೆ, ಕೊಂಬುಚವನ್ನು ಸೇವಿಸುವುದು ಉತ್ತಮ. ಇದು ಹೊಟ್ಟೆಯ ನೋವನ್ನು ಕಡಿಮೆಮಾಡುವುದಲ್ಲದೇ, ಉಬ್ಬುವಿಕೆಯನ್ನು ಕೂಡ ಶಮನಗೊಳಿಸುತ್ತದೆ. ಆದರೆ ಒಂದೇ ಬಾರಿಗೆ ಒಂದು ಲೋಟ ಕೊಂಬುಚವನ್ನು ಕುಡಿಯಬೇಡಿ, ಉತ್ತಮ ಫಲಿತಾಂಶಗಳಿಗಾಗಿ ನಿಧಾನವಾಗಿ ಒಂದೊಂದೇ ಸಿಪ್ ಕುಡಿಯಿರಿ. ಕೊಂಬುಚ ಒಂದು ಅದ್ಭುತ ಪ್ರೋಬಯಾಟಿಕ್ ಆಗಿ ಕಾರ್ಯನಿರ್ವಹಿಸಿ. ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಪುನಃಸ್ಥಾಪಿಸಬಹುದು.
ಓಟ್ಸ್:
ಓಟ್ಸ್ ಖಾಲಿ ಹೊಟ್ಟೆಗೆ ತಿನ್ನಲು ರುಚಿಯಾದ ಹಗುರವಾದ ಊಟವಾಗಿದೆ. ನೀವು ಉಪ್ಪು ಓಟ್ಸ್ ಅಥವಾ ಸಿಹಿ ಓಟ್ಸ್ ಸೇವಿಸಬಹುದು. ಉಪ್ಪು ಓಟ್ಸ್ ಗೆ ಯಾವುದೇ ಮಸಾಲಾ ಸೇರಿಸದಂತೆ ನೋಡಿಕೊಳ್ಳಿ, ಏಕೆಂದರೆ ಇದು ಹೊಟ್ಟೆಯನ್ನು ಮತ್ತಷ್ಟು ಹಾಳುಮಾಡಬಹುದು. ಹಾಲಿನಲ್ಲಿ ಕುದಿಸಿದ ಸಿಹಿ ಓಟ್ಸ್ ಅನ್ನು ಆಯ್ಕೆ ಮಾಡುವುದು ಉತ್ತಮ. ಓಟ್ಸ್ ಅನ್ನು ನೀರಿನಲ್ಲಿ ಕೂಡ ಬೇಯಿಸಬಹುದು. ಇದಕ್ಕೆ ಬೀಜಗಳು ಅಥವಾ ಹಣ್ಣುಗಳನ್ನು ಸೇರಿಸುವುದನ್ನು ತಪ್ಪಿಸಿ. ಬೇಕಾದರೆ, ಅರ್ಧ ಬಾಳೆಹಣ್ಣನ್ನು ಮಾತ್ರ ಸೇರಿಸಬಹುದು. ಓಟ್ಸ್ ನಾರಿನಿಂದ ತುಂಬಿದ್ದು, ವಾಶ್‌ರೂಮ್‌ಗೆ ಆಗಾಗ ಭೇಟಿ ನೀಡುವುದನ್ನು ತಕ್ಷಣವೇ ಕಡಿಮೆ ಮಾಡಬಹುದು.
(Kannada Copy of Boldsky Kannada)
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm