ಬ್ರೇಕಿಂಗ್ ನ್ಯೂಸ್
23-08-21 11:15 am Shreeraksha, Boldsky ಡಾಕ್ಟರ್ಸ್ ನೋಟ್
ಕೊರೊನಾ ಸಾಂಕ್ರಾಮಿಕದ ವಿರುದ್ಧ ಲಸಿಕಾಕರಣ ಮೂಲಕ ಹೋರಾಟ ನಡೆಸುತ್ತಿರುವ ದೇಶಕ್ಕೆ ಮತ್ತೊಂದು ಲಸಿಕೆ ಸಿಕ್ಕಿದೆ. ಅಹಮದಾಬಾದ್ ಮೂಲದ ಜೈಡಸ್ ಕ್ಯಾಡಿಲಾ ಕಂಪನಿಯ ಅಭಿವೃದ್ಧಿಪಡಿಸಿದ 'ಝೈಕೊವ್-ಡಿ' ಲಸಿಕೆಯ ತುರ್ತು ಬಳಕೆಗೆ ಔಷಧಗಳ ಗುಣಮಟ್ಟ ನಿಯಂತ್ರಣ ಪ್ರಾಧಿಕಾರದ ವಿಷಯ ತಜ್ಞರ ಸಮಿತಿ (ಎಸ್ಇಸಿ) ಒಪ್ಪಿಗೆ ಸೂಚಿಸಿದೆ. ದೇಶಿಯವಾಗಿ ತಯಾರಾದ ಎರಡನೇ ಲಸಿಕೆ ಇದಾಗಿದ್ದು, 12-18 ವರ್ಷ ವಯೋಮಾನದ ಮಕ್ಕಳಿಗೂ ಈ ಲಸಿಕೆ ನೀಡಬಹುದಾಗಿದೆ. ಈ ಲಸಿಕೆಯ ಕುರಿತು ಮತ್ತಷ್ಟು ಮಾಹಿತಿಗಳು ನಿಮಗಾಗಿ. 'ಝೈಕೊವ್-ಡಿ' ಕೊರೊನಾ ವಿರುದ್ಧ ಲಸಿಕೆಯ ಕುರಿತು ನೀವು ತಿಳಿದುಕೊಳ್ಳ
ಮೂರು ಡೋಸ್ ನ ಲಸಿಕೆ:
ZyCoV-D 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ತೆಗೆದುಕೊಳ್ಳಬಹುದಾದ ಭಾರತದ ಮೊದಲ ಮೂರು ಡೋಸಿನ ಲಸಿಕೆಯಾಗಿದೆ. ಇದನ್ನು ಸರ್ಕಾರ ಜೈವಿಕ ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಒಂದು ಡೋಸ್ ಪಡೆದ ೨೮ದಿನಗಳ ನಂತರ ಮತ್ತೊಂದು ಡೋಸ್ ಪಡೆಯಬೇಕು.
ಸೂಜಿ ಬಳಕೆ ಇಲ್ಲ:
ಈ ಲಸಿಕೆಯನ್ನು ನೀಡಲು ಸೂಜಿ ಬಳಸುವುದಿಲ್ಲ. ಬದಲಾಗಿ ವಿಶೇಷ ಉಪಕರಣ ಬಳಸಲಾಗುವುದು. ಒತ್ತಡದ ಮೂಲಕವೇ ಅದು ಚರ್ಮದೊಳಗೆ ಪ್ರವೇಶಿಸುವ ಕಾರಣ ಯಾವುದೇ ನೋವು ಇರುವುದಿಲ್ಲ. ವಿಶೇಷವಾದ ಸೂಚಿ ರಹಿತ ಇಂಜೆಕ್ಟರ್ ಬಳಸಿ ಲಸಿಕೆ ನೀಡಲಾಗುವುದು.
ವಿಶ್ವದ ಮೊದಲ ಡಿಎನ್ಎ ಆಧಾರಿತ ಲಸಿಕೆ:
ಇದು ಕೊರೊನಾವೈರಸ್ ವಿರುದ್ಧ ವಿಶ್ವದ ಮೊದಲ ಡಿಎನ್ಎ ಆಧಾರಿತ ಲಸಿಕೆಯಾಗಿದೆ. ಈ ಚುಚ್ಚುಮದ್ದು ಮಾಡಿದಾಗ, SARS-CoV-2 ವೈರಸ್ನ ಸ್ಪೈಕ್ ಪ್ರೋಟೀನ್ ಉತ್ಪಾದನೆಯಾಗಿ, ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ಇದು ರೋಗದಿಂದ ರಕ್ಷಣೆ ಹಾಗೂ ಸೋಂಕು ಗುಣವಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೆ ಬಳಕೆಯಾದ ಪ್ಲಾಸ್ಮಿಡ್ ಡಿಎನ್ಎ ಪ್ಲಾಟ್ಫಾರ್ಮ್ ಅನ್ನು ಆಧರಿಸಿದ "ಪ್ಲಗ್-ಅಂಡ್-ಪ್ಲೇ" ತಂತ್ರಜ್ಞಾನವು ವೈರಸ್ನ ರೂಪಾಂತರಗಳನ್ನು ಎದುರಿಸುವಲ್ಲಿ ಸಹಕಾರಿಯಾಗಿವೆ.
ಶೇ. 66.6ರಷ್ಟು ಪರಿಣಾಮಕಾರತ್ವ:
ಜು.1ರಂದು ಝೈಡಸ್ ಕ್ಯಾಡಿಲಾ ಕಂಪನಿಯು ತನ್ನ ಲಸಿಕೆಯ ಅಧಿಕೃತ ಬಳಕೆಗೆ ಸಮ್ಮತಿ ನೀಡುವಂತೆ ಅರ್ಜಿ ಸಲ್ಲಿಸಿತ್ತು. ದೇಶಾದ್ಯಂತ ಸುಮಾರು 28 ಸಾವಿರ ಜನರ ಮೇಲೆ ಲಸಿಕೆಯ ಪ್ರಯೋಗ ನಡೆಸಲಾಗಿದ್ದು, ಕೊರೊನಾ ವಿರುದ್ಧ ಈ ಲಸಿಕೆಯು ಶೇ. 66.6ರಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ. ಅಲ್ಲದೆ, 12 ರಿಂದ 18 ವರ್ಷದ ಮಕ್ಕಳಿಗೂ ಈ ಲಸಿಕೆ ಸುರಕ್ಷಿತ ಎಂದು ಕಂಪನಿ ಹೇಳಿಕೊಂಡಿದೆ. ಪ್ರಯೋಗದ ಮಾಹಿತಿಯ ಪ್ರಕಾರ, ಶೇಕಡಾ 67 ರಷ್ಟು ಜನರು ಲಸಿಕೆ ತೆಗೆದುಕೊಂಡ ನಂತರ ಪಾಸಿಟಿವ್ ಪಡೆದಿಲ್ಲ.
ಭಾರತಕ್ಕೆ ಸಿಕ್ಕ ಆರನೇ ಲಸಿಕೆ:
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್, ಭಾರತ್ ಬಯೋಟೆಕ್ ನ ಕೊವಾಕ್ಸಿನ್, ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ, ಮಾಡರ್ನಾ ಮತ್ತು ಜಾನ್ಸನ್ ಮತ್ತು ಜಾನ್ಸನ್ ಲಸಿಕೆಗಳ ನಂತರ ದೇಶದಲ್ಲಿ ತುರ್ತು ಬಳಕೆಯ ಅನುಮತಿಯನ್ನು ಪಡೆದ ಆರನೇ ಲಸಿಕೆಯಾಗಿದೆ. ಇವುಗಳಲ್ಲಿ, ಕೋವಿಶೀಲ್ಡ್, ಕೋವಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಸದ್ಯ ಲಭ್ಯವಿದ್ದು, ಬಳಕೆಯಲ್ಲಿವೆ.
216 ಕೋಟಿ ಲಸಿಕೆಗಳು ಲಭ್ಯ:
ಆಗಸ್ಟ್ ನಿಂದ ಡಿಸೆಂಬರ್ ನಡುವೆ ದೇಶದ ಜನರಿಗೆ 216 ಕೋಟಿ ಡೋಸ್ ಲಭ್ಯವಿರುತ್ತವೆ. ವಾರ್ಷಿಕವಾಗಿ 10-12 ಕೋಟಿ ಡೋಸ್ ZyCoV-D ತಯಾರಿಸಲು ಕಂಪನಿ ಯೋಜಿಸಿದೆ.
(Kannada Copy of Boldsky Kannada)
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm